Blog Archive

ಹತಾಶೆಯಲ್ಲಿ ಕಾಂಗ್ರೆಸ್ಸಿಗರು… ಬಿಜೆಪಿಗೆ ಬಹುಮತ ಸಿಗುವುದು ಖಚಿತ: ಶ್ರೀರಾಮುಲು

Saturday, May 19th, 2018
shri-ramulu

ಬೆಂಗಳೂರು: ಸೋಲುವ ಹತಾಶೆಯಲ್ಲಿ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂದು ಸಂಜೆ ಸ್ಪಷ್ಟ ಬಹುಮತ ಸಾಬೀತುಪಡಿಸಿ, ಸರ್ಕಾರವನ್ನು ರಚಿಸಲಿದ್ದೇವೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಕ್ಷಣಗಣನೆ ಆರಂಭವಾಗಿರುವ ಮಧ್ಯೆ ಟ್ವೀಟ್ ಮಾಡಿರುವ ಶ್ರೀರಾಮುಲು, ಬಹುಮತ ಸಾಬೀತು ಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೋಲುವ ಹತಾಶೆಯಲ್ಲಿ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಇಂದು ಸಂಜೆ ಬಿಜೆಪಿಗೆ ಸ್ಪಷ್ಟ ಬಹುಮತ ಸಾಬೀತು ಆಗಲಿದೆ ಮತ್ತು ಸರ್ಕಾರವನ್ನು ರಚಿಸಲಿದ್ದೇವೆ ಆ ಮೂಲಕ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಒಯ್ಯಲಿದ್ದೇವೆ. […]

ಬಿಜೆಪಿ ಸರ್ಕಾರ ಉಳಿಯುತ್ತಾ? ಉರುಳುತ್ತಾ?.. ಗುಟ್ಟು ಬಿಟ್ಟುಕೊಡದ ನಾಯಕರು!

Friday, May 18th, 2018
kumarswamy

ಬೆಂಗಳೂರು: ರಾಜ್ಯದಲ್ಲಿ ನಾಳೆ ಸಂಜೆ ಏನಾಗಲಿದೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ. ಹೀಗೆಯೇ ಆಗಬಹುದು ಎಂದು ಊಹಿಸುವ ಅವಕಾಶ ಕೂಡ ಸಿಗದ ರೀತಿ ರಾಜ್ಯದ ಮೂರೂ ಪಕ್ಷದ ನಾಯಕರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಹೈದರಾಬಾದ್‍ನಲ್ಲಿರುವ ತಮ್ಮ ಶಾಸಕರ ಭೇಟಿಗೆ ಆಪ್ತ ಶಾಸಕರ ಜತೆ ತೆರಳಿದ್ದಾರೆ. ಇನ್ನೊಂದೆಡೆ ದೇವೇಗೌಡರು ಕುಟುಂಬ ಸಮೇತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಹಿರಿಯ ನಾಯಕರೆಲ್ಲಾ ಸೇರಿ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸುತ್ತಿದ್ದಾರೆ. ಎಲ್ಲಿಯೂ […]

ಕಾಂಗ್ರೆಸ್ ಗೆ ನಾಳೆ ಸದನವನ್ನು ಎದುರಿಸುವ ಧೈರ್ಯವಿಲ್ಲ: ಶೋಭಾ ಕರಂದ್ಲಾಜೆ

Friday, May 18th, 2018
shobha-karandlaje

ಬೆಂಗಳೂರು: ಕಾಂಗ್ರೆಸ್ ಗೆ ಸದನ ಎದುರಿಸುವ ಧೈರ್ಯವಿಲ್ಲ. ಕಾಂಗ್ರೆಸ್ ನ ಶಾಸಕರು ಹತಾಶರಾಗಿದ್ದಾರೆ. ಭಯಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರ ನೇಮಕವನ್ನು ವಿರೋಧಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಪಯ್ಯ ಅವರು 4ನೇ ಬಾರಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಆಗಿ ಕೆಲಸ ಮಾಡಿದ ಅನುಭವವಿದೆ. ಹಿಂದೆ ವಿಧಾನಸಭೆಯ […]

ಸುಪ್ರೀಂಕೋರ್ಟ್‌ ಆದೇಶ ಪಾಲಿಸುತ್ತೇವೆ: ಸಿಎಂ ಬಿಎಸ್‌ವೈ

Friday, May 18th, 2018
b-s-yedeyurappa

ಬೆಂಗಳೂರು: ಸುಪ್ರಿಂ ಕೋರ್ಟ್ ಆದೇಶ ಪಾಲಿಸಲು ನಾವು ಬದ್ಧವಾಗಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನಾಳೆ ವಿಧಾನಸಭೆ ಅಧಿವೇಶನ ಕರೆಯಲಾಗುವುದು. ಅಧಿವೇಶನ ಕರೆಯುವ ಸಲುವಾಗಿ ಸಚಿವ ಸಂಪುಟ ಸಭೆ ನಡೆಸುತ್ತೇನೆ ಎಂದಿದ್ದಾರೆ. ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸಂಖ್ಯೆಯ ಶಾಸಕರ ಬಲ ಹೊಂದಿದ್ದೇವೆ. ನಾವು ವಿಶ್ವಾಸಮತ ಸಾಧಿಸುತ್ತೇವೆ. ಯಾವುದೇ ಅನುಮಾನವಿಲ್ಲ. ಇಷ್ಟೊಂದು ರಾಜಕೀಯ ಹೈಡ್ರಾಮಾ ನಡುವೆಯೂ ನಾವು ವಿಶ್ವಾಸಮತ ಸಾಬೀತುಪಡಿಸುತ್ತೇವೆ ಎಂದಿದ್ದಾರೆ. ಸುಪ್ರಿಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸುಪ್ರಿಂ ಕೋರ್ಟ್ ನೀಡಿದ […]

ಕಾಂಗ್ರೆಸ್ ಮುಕ್ತ ಭಾರತ ಮಾಡುವ ಗುರಿ ನಮ್ಮದು, ನಿಮ್ಮ ಯಾವ ಮಾತಿಗೂ ಉತ್ತರಿಸಬೇಕಿಲ್ಲ: ಬಿಎಸ್ ಯಡಿಯೂರಪ್ಪ

Thursday, May 17th, 2018
bsy-bjp

ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ ಮಾಡುವ ಗುರಿ ನಮ್ಮದು. ಹೀಗಾಗಿ ನಿಮ್ಮ ಯಾವ ಮಾತಿಗೂ ಉತ್ತರಿಸಬೇಕಿಲ್ಲ. ಎಲ್ಲದಕ್ಕೂ ಮತದಾರರು ಸಮರ್ಪಕ ಉತ್ತರ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಗುರುವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಹಿರಿಯರ ಆಶೀರ್ವಾದ ನನಗೆ ಸಿಕ್ಕಿದೆ. ಸರ್ಕಾರ ನಿಮ್ಮ ಜೊತೆಗಿದೆ, ನಿಮ್ಮನ್ನು ಕಾಪಾಡುತ್ತದೆ ಎಂದರು. ಈ ಸಂದರ್ಭದಲ್ಲಿ ರಾಜ್ಯದ ಜನತೆಗೆ, ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬರುತ್ತಾ ಇದೆ, […]

ಸರ್ಕಾರ ರಚನೆಗೆ ರೆಸಾರ್ಟ್‌ ಮ್ಯಾನೇಜರ್‌ ರೆಡಿ: ಪ್ರಕಾಶ್‌ ರೈ ವ್ಯಂಗ್ಯ

Thursday, May 17th, 2018
prakash-rai

ಬೆಂಗಳೂರು: ನಿನ್ನೆಯಿಂದ ರಾಜ್ಯ ರಾಜಕಾರಣ ದೇಶದ ಗಮನ ಸೆಳೆಯುತ್ತಿದೆ. ರಾಜಕೀಯ ಚಟುವಟಿಕೆಗಳು ಕ್ಷಣ ಕ್ಷಣಕ್ಕೂ ರೋಚಕತೆ ಪಡೆಯುತ್ತಿವೆ. ಬಹುಮತಕ್ಕೆ ಸಂಖ್ಯಾಬಲದ ಕೊರತೆಯ ನಡುವೆಯೂ ಬಿಜೆಪಿಯ ಯಡಿಯೂರಪ್ಪ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ಕಾಂಗ್ರೆಸ್‌ ಹಾಗೂ ಜೆಡಿಎಸ್‌‌ ಪಕ್ಷಗಳು ಬಿಜೆಪಿಯ ನಡೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ನಟ ಪ್ರಕಾಶ್‌‌ ರೈ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆಯಿಂದ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ. ಇದೀಗ ಮತ್ತೊಂದು […]

38 ಸ್ಥಾನ ಗೆದ್ದವರಿಗೇ ಆಸೆ ಇದ್ದಾಗ ಇನ್ನು 104 ಸ್ಥಾನ ಗೆದ್ದ ನಮಗೆ ಆಸೆ ಇರಲ್ವಾ: ಆರ್.ಅಶೋಕ್

Thursday, May 17th, 2018
R-Ashok

ಬೆಂಗಳೂರು: ಕರ್ನಾಟಕದ ಜನತೆ ನಮಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಸಂವಿಧಾನಬದ್ಧ ಸ್ಥಾನ ನೀಡಿದ್ದಾರೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಅಧಿಕಾರದ ದುರಾಸೆ ಇದೆ. ಈ ದುರಾಸೆಯಿಂದ ಆಡಳಿತ ಮಾಡಲು ಹೊರಟಿದ್ದಾರೆ. ಡಿಪಾಸಿಟ್ ಕಳೆದುಕೊಂಡ ಸಚಿವರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಲೇವಡಿ ಮಾಡಿದರು. 38 ಸ್ಥಾನ ಗೆದ್ದವರಿಗೇ ಆಸೆ ಇದ್ದಾಗ ಇನ್ನು 104 ಸ್ಥಾನ ಗೆದ್ದ ನಮಗೆ ಆಸೆ ಇರಲ್ವಾ ಎಂದು ಪ್ರಶ್ನಿಸಿದರು. ಈ ಮೊದಲು ಅವರು ನಾಯಿ, ನರಿಗಳ ತರಹ ಕಿತ್ತಾಡ್ತಿದ್ರು. […]

ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿ.ಎಸ್‌.ಯಡಿಯೂರಪ್ಪ ಅವರು ರೈತರ ಸಾಲಮನ್ನಾ ಮಾಡುವ ಕಡತಕ್ಕೆ ಸಹಿ..!

Thursday, May 17th, 2018
bs-yedeyurappa

ಬೆಂಗಳೂರು: ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿ.ಎಸ್‌.ಯಡಿಯೂರಪ್ಪ ಅವರು ರೈತರ ಸಾಲಮನ್ನಾ ಮಾಡುವ ಕಡತಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ರಾಜ್ಯದ ನೂತನ ಸಿಎಂ ಆಗಿ ಪದಗ್ರಹಣದ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಬಿಎಸ್‌ವೈ, ಅಧಿಕಾರಗಳ ಜೊತೆ ಸಭೆ ನಡೆಸಿದರು. ಬಳಿಕ ರೈತರ ಒಂದು ಲಕ್ಷ ರೂ. ಕೃಷಿ ಸಾಲಮನ್ನಾ ಮಾಡುವ ಕಡತಕ್ಕೆ ಸಹಿ ಹಾಕಿದರು. ಚುನಾವಣೆಗೂ ಮುನ್ನ ಹಲವು ಬಾರಿ ಸಿಎಂ ಆದ ದಿನವೇ ರೈತರ ಸಾಲ ಮನ್ನಾ ಮಾಡುವುದಾಗಿ ರಾಜ್ಯದ […]

ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಕೋಳಿವಾಡ ವಾಗ್ಧಾಳಿ !

Wednesday, May 16th, 2018
kodivala

ಬೆಂಗಳೂರು: ರಾಣಿ ಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿರುವ ಮಾಜಿ ಸ್ಪೀಕರ್‌, ಕಾಂಗ್ರೆಸ್‌ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಅವರು ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬುಧವಾರ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೋಳಿವಾಡ ಅವರು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ‘ಪಕ್ಷ ಈ ಸ್ಥಿತಿಗೆ ಬರಲು ಇವನೇ ಸಿದ್ದರಾಮಯ್ಯ ಕಾರಣ. ಸರ್ವಾಧಿಕಾರಿ ಧೋರಣೆ ಅವನದ್ದು’ ಎಂದರು. ‘ಹಿಂದೇ ಪರಮೇಶ್ವರ್‌ ಸೋಲಿಗೂ ಇವನೇ ಕಾರಣ , ಕಳೆದ ಬಾರಿ ನನ್ನನ್ನು ,ಇನಾಮ್‌ದಾರ್‌ನನ್ನು ಸೋಲಿಸಲು ಬಹಳ […]

ಸರ್ಕಾರ ರಚಿಸಿಯೇ ಸಿದ್ಧ… ರಾಜ್ಯಪಾಲರಿಂದ ಆಹ್ವಾನದ ನಿರೀಕ್ಷೆ: ಹೆಚ್‌ಡಿಕೆ ಭರವಸೆ

Wednesday, May 16th, 2018
kumaraswamy-party

ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ಕಸರತ್ತು ಚುರುಕು ಪಡೆಯುತ್ತಿದ್ದಂತೆ ಎಚ್ಚೆತ್ತ ಜೆಡಿಎಸ್‌-ಕಾಂಗ್ರೆಸ್‌‌ ಶಾಸಕಾಂಗ ಪಕ್ಷಗಳ ಸಭೆ ನಡೆಸಿತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನ ಆಯ್ಕೆ ಮಾಡಿಕೊಂಡ ಎರಡು ಪಕ್ಷಗಳು 118 ಶಾಸಕರ ಸಹಿ ಪಡೆದು ರಾಜ್ಯಪಾಲರಿಗೆ ಪತ್ರ ಸಿದ್ಧಪಡಿಸಿದವು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್‌ನ 78 ಹಾಗೂ ಇಬ್ಬರು ಪಕ್ಷೇತರರು ಮತ್ತು ಜೆಡಿಎಸ್‌ನ 38 ಶಾಸಕರು ರಾಜಭವನಕ್ಕೆ ತೆರಳಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 7 ಶಾಸಕರು ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ […]