Blog Archive

ಸಾವಿರ ಬೀಡಿಗೆ ಮಜೂರಿ ಎಷ್ಟೆಂದು ಗೊತ್ತಿಲ್ಲದವರು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು: ಮುನೀರ್ ಕಾಟಿಪಳ್ಳ

Wednesday, May 2nd, 2018
muneer-katipall

ಮಂಗಳೂರು: ತುಳುನಾಡಿನ ಬಹುತೇಕ ಮನೆಗಳಲ್ಲಿ ಇಂದು ಒಂದಿಷ್ಟು ಬೆಳಕು ಕಾಣುತ್ತಿದ್ದರೆ, ಅದರ ಹಿಂದೆ ಬೀಡಿ ಕಟ್ಟುವ ತಾಯಂದಿರ ಪರಿಶ್ರಮವಿದೆ. ಕಷ್ಟಪಟ್ಟು ಮನೆ ಕೆಲಸ ಮಾಡುತ್ತಲೇ ಬೀಡಿಯನ್ನೂ ಕಟ್ಟಿ ಕುಟುಂಬಗಳನ್ನು ನಡೆಸಿದ್ದಾರೆ, ಅನ್ನ, ಬಟ್ಟೆಗಳನ್ನು ಹೊಂದಿಸಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದರು. ಇಂದು ಕುಳಾಯಿ ಜಂಕ್ಷನ್ ನಲ್ಲಿ ಸಿಪಿಐಎಂ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದು ಬೀಡಿ […]

ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಣಾಳಿಕೆ ಬಿಡುಗಡೆ

Friday, April 27th, 2018
mangaluru

ಮಂಗಳೂರು: ಮಂಬರುವ ವಿಧಾನಸಭಾ ಚುನಾವಣೆಗೆ ಒಂದೆಡೆ ಕಾಂಗ್ರೆಸ್, ಬಿಜೆಪಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿವೆ. ಈ ನಡುವೆ ಚುನಾವಣಾ ಕಣಕ್ಕೆ ಧುಮುಕಿರುವ ಸಿಪಿಐಎಂ ಕೂಡ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಜನಪರ ಪ್ರಣಾಳಿಕೆಯನ್ನು ಸಿದ್ದ ಪಡಿಸಿದ್ದು, ಗುರುವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ, “ಮಂಗಳೂರು ಉತ್ತರ ಕ್ಷೇತ್ರದ ಜನಸಾಮಾನ್ಯರು ಹಲವು ರೀತಿಯ ಗಂಭೀರ […]

ದ.ಕ. ಜಿಲ್ಲೆಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ದಿನಾಂಕ ಫಿಕ್ಸ್‌‌‌

Wednesday, April 18th, 2018
u-t-kader

ಮಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭಗೊಂಡಿದೆ. ರಾಜಕೀಯ ಪಕ್ಷದ ಬಹುತೇಕ ಪ್ರಮುಖ ಅಭ್ಯರ್ಥಿಗಳು ಏ. 19 ರಿಂದ ನಾಮಪತ್ರ ಸಲ್ಲಿಸಲು ತಿರ್ಮಾನಿಸಿದ್ದಾರೆ. ಏ.1 9 ರಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಬಿ.ರಮಾನಾಥ ರೈ, ಮೂಡಬಿದ್ರೆ ಕಾಂಗ್ರೆಸ್ ಆಭ್ಯರ್ಥಿ ಕೆ.ಅಭಯಚಂದ್ರ ಜೈನ್, ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಸಲಿದ್ದಾರೆ. ಏ. 20ರಂದು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ, […]

ದ.ಕನ್ನಡದಲ್ಲಿ 2013ರಲ್ಲಿ ನೆಲ ಕಚ್ಚಿದ್ದ ಬಿಜೆಪಿ… ಈ ಬಾರಿ ಮತ್ತೆ ಅರಳಲು ಹರಸಾಹಸ!

Monday, April 16th, 2018
BJP

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಮು ದ್ವೇಷದ ರಾಜಕಾರಣದೊಂದಿಗೆ ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದ್ದು, ಮತ ಸೆಳೆಯುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ರಾಜಕಾರಣ ಇಲ್ಲದೇ ರಾಜಕಾರಣ ನಡೆಯುವುದಿಲ್ಲವೇನೋ ಎಂಬ ಪರಿಸ್ಥಿತಿ ಇದೆ. ಇದು ಪ್ರತಿ ಚುನಾವಣೆಯಲ್ಲೂ ಸಾಮಾನ್ಯವಾಗಿದ್ದು, ಆದ್ದರಿಂದ ಈ ಚುನಾವಣೆಯಲ್ಲೂ ಅದು ಮುಂದುವರಿದಿದೆ. ಬಿಜೆಪಿಯ ಪ್ರಬಲ ಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ […]

ರಾಜೇಶ್ ಪೂಜಾರಿ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ

Saturday, March 31st, 2018
rajesh-poojary

ಮಂಗಳೂರು: ಬೆಂಜನಪದವಿನಲ್ಲಿ ಮಾ. 21, 2014ರಂದು ನಡೆದ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ನೈಜ ಆರೋಪಿಗಳು ಯಾರು ಎಂಬುದು ನಿಗೂಢವಾಗಿದೆ. ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಡಿವೈಎಫ್‌‌‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಜರಂಗದಳದ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ. ಪೊಲೀಸರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅಮಾಯಕರನ್ನು ವಿನಾ ಕಾರಣ ಬಂಧಿಸಿರುವುದು ಇದರಿಂದ […]

ಸಿಐಟಿಯು ನೇತೃತ್ವದಲ್ಲಿ ಭವಿಷ್ಯನಿಧಿ ಕಚೇರಿಗೆ ಕಾರ್ಮಿಕರಿಂದ ಬೃಹತ್ ಮುತ್ತಿಗೆ

Tuesday, March 13th, 2018
CPF-office

ಮಂಗಳೂರು: ದಿನಾಂಕ 13-03-2018 ರಂದು ಮಂಗಳೂರು ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆಗೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮುತ್ತಿಗೆ ಕಾರ್ಯಕ್ರಮವು ನಡೆಯಿತು. ಸಂಸ್ಥೆಯಲ್ಲಿರುವ ಸದಸ್ಯರಿಗೆ ಆಧಾರ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪ್ರೊವಿಡೆಂಟ್ ಪಂಡ್ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು, ಪಿಂಚಣಿದಾರರಿಗೆ ಅವರ ಸೌಲಭ್ಯವನ್ನು ಪಡೆಯುವರೇ ಕ್ರಮ ನಿಯಮವನ್ನು ಸರಳೀಕರಣಗೊಳಿಸಬೇಕು, ಪಿಂಚಣಿದಾರರ ಜೀವಿತ ಪ್ರಮಾಣ ಪತ್ರಕ್ಕಾಗಿ ಪ್ರತಿ ಬ್ಯಾಂಕಿನಲ್ಲಿಯೇ ಹೆಬ್ಬೆಟ್ಟು ಗುರುತು ಪಡೆಯುವ ವ್ಯವಸ್ಥೆ ಮಾಡಬೇಕು, ಎಲ್ಲಾ ಪ್ರೊವಿಟೆಂಟ್ ಪಂಡ್ ಖಾತೆದಾರರ ಹಣ ಅವರಿಗೆ ಲಭ್ಯವಿರುವಂತೆ ವ್ಯವಸ್ಥೆ […]

ಯುವತಿ ಬಗ್ಗೆ ಅವಹೇಳನಕಾರಿ ಪೋಸ್ಟ್‌: ಆರೋಪಿಯ ಬಂಧನಕ್ಕೆ ಒತ್ತಾಯ

Friday, February 23rd, 2018
shruthi-kotian

ಮಂಗಳೂರು: ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌‌ ಕಾಟಿಪಳ್ಳ ಅವರು ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಅದೇ ಸಂಘಟನೆಯಲ್ಲಿ ಸಕ್ರಿಯವಾಗಿರುವ ಶ್ರುತಿ ಕೋಟ್ಯಾನ್ ಎಂಬ ಯುವತಿ ಮುನೀರ್‌‌ ಅವರನ್ನು ಬೆಂಬಲಿಸಿ ಪೋಸ್ಟ್‌ ಮಾಡಿರುವ ಸಂದೇಶಕ್ಕೆ ಕಿಡಿಗೇಡಿಯೊಬ್ಬ ಆಕೆಯ ಬಗ್ಗೆ ಹೀನಾಯವಾಗಿ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಜಾತಿ ನಿಂದನೆ ಮಾಡುವ ಮೂಲಕ ಕೀಳು ಭಾಷೆಯಲ್ಲಿ ಆಕೆಯನ್ನು ಜರಿದು ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಹರೀಶ್‌‌ ರಾಜ್ ಎಂಬಾತ ಶ್ರುತಿಯ ಬಗ್ಗೆ ಅವಾಚ್ಯವಾಗಿ […]

ಒಳಚರಂಡಿ ಕಾಮಗಾರಿ ಅವ್ಯವಹಾರ: ಮೊಯಿದ್ದೀನ್ ಬಾವ ಶಾಮೀಲು

Saturday, February 17th, 2018
mohuiddin-bava

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಎಡಿಬಿ ಕಾಮಗಾರಿಯ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಎಡಿಬಿ ನೆರವಿನೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕುರಿತು ಸಭೆಯಲ್ಲಿ ಈ ಆರೋಪ ಕೇಳಿ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಎಡಿಬಿ ಯ 2 ನೇ ಹಂತದ ಒಳಚರಂಡಿ ಯೋಜನೆಯ ಕಾಮಗಾರಿ ಸಾಧಕ ಭಾಧಕಗಳ ವಿಚಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಮೊಯಿದ್ದಿನ್ ಬಾವ ಅವರ ವಿರುದ್ಧವೇ ಎಡ […]

ಪಲ್ಗುಣಿ ನದಿ ಮಾಲಿನ್ಯದ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನಾ ಜಾಥಾ

Wednesday, January 24th, 2018
palguni

ಮಂಗಳೂರು:`ಜೀವನದಿ ಪಲ್ಗುಣಿ ಉಳಿಸಿ’ ಘೋಷಣೆಯೊಂದಿಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಜಾಥಾದ ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಲ್ಗುಣಿ ನದಿಯ ನೀರಿನ ಮೂಲವಾಗಿರುವ ತೋಕೂರು ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು. ತೋಕೂರು ಹಳ್ಳದ ದಡದಲ್ಲಿರುವ ರುಚಿಗೋಲ್ಡ್, ಅದಾನಿ ವಿಲ್ಮ, ಅನುಗ್ರಹ, ಯು.ಬಿ.ಬಿಯರ್ ಮುಂತಾದ ಕೈಗಾರಿಕಾ ಘಟಕಗಳು ನಿಯಮ ಮೀರಿ ನದಿಯ ನೀರಿನ ಮೂಲಗಳಿಗೆ ತಮ್ಮ ವಿಷಯುಕ್ತ […]

ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಹಿಂದೆ ಸಂಘಪರಿವಾರದ ಪಾತ್ರವಿದೆ : ಮುನೀರ್ ಕಾಟಿಪಳ್ಳ

Wednesday, January 17th, 2018
munir-katipalla

ಮಂಗಳೂರು: ಜಿಲ್ಲೆಯಲ್ಲಿ ನಡೆಯುವ ಪ್ರತೀಕಾರದ ಕೊಲೆಯ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದೆ. ಧರ್ಮದ ಆಧಾರದಲ್ಲಿ ಜನರನ್ನು ಧ್ರುವೀಕರಿಸುವ ಕೆಲಸವಾಗುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಅವರು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಎಡ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ಸಂಘಗಳಿಂದ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಇದನ್ನು ಸಮಾಜ ಸಂಘಟಿತವಾಗಿ ಪ್ರತಿರೋಧಯೊಡ್ಡಬೇಕಾಗಿದೆ. ಸಾಂಕೇತಿಕ ಸೌಹಾರ್ದದಿಂದ ಶಾಂತಿ ಸ್ಥಾಪಿಸುವುದಕ್ಕಿಂತ ಮುಖ್ಯವಾಗಿ ಜಾತ್ಯತೀತ ಸೌಹಾರ್ದ ನಂಬಿಕೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎದು […]