Blog Archive

ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆ

Tuesday, February 25th, 2014
S.R.Hiremath

ಬೆಂಗಳೂರು: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಹಿರೇಮಠ ಅವರು ಪ್ರಚಾರಕ್ಕಾಗಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ರಮೇಶ್ ಕುಮಾರ್, ಈ ಸಂಬಂಧ ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಕೋರ್ಟ್ ರಮೇಶ್ ಕುಮಾರ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು, ನಾಳೆ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಮೂಲಕ ಹಿರೇಮಠ ಹಾಗೂ ರಮೇಶ್ […]

ಅಂಬಿ ಆರೋಗ್ಯ ಮತ್ತಷ್ಟು ಚೇತರಿಕೆ ಇಂದು ವೆಂಟಿಲೇಟರ್ ತೆಗೆಯುವ ಸಾಧ್ಯತೆ

Tuesday, February 25th, 2014
Ambarish

ಬೆಂಗಳೂರು: ಅನಾರೋಗ್ಯಕ್ಕೀಡಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ನಟ ಮತ್ತು ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ವೆಂಟಿಲೇಟರ್ ತೆಗೆಯುವ ಸಾಧ್ಯತೆ ಇದೆ. ಪ್ರಸ್ತುತ ಅಂಬರೀಶ್ ಅವರಿಗೆ ಕೃತಕ ಉಸಿರಾಟವನ್ನು ಮುಂದುವರೆಸಲಾಗಿದ್ದು, ದೇಶದಲ್ಲಿ ಶೇಖರಣೆಯಾಗಿದ್ದ ನೀರಿನ ಅಂಶವನ್ನು ಹೊರತೆಗೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರತಿ ಗಂಟೆಗೊಮ್ಮೆ ವೈದ್ಯರು ಅಂಬರೀಶ್ ಅವರ ಆರೋಗ್ಯ ವಿಚಾರಣೆ ಮಾಡುತ್ತಿದ್ದು, ಅಂಬಿ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸಿದ್ದಾರೆ. ಅಂಬರೀಶ್ ಅವರ ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ […]

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಹೈಕೋರ್ಟ್ ಒಪ್ಪಿಗೆ

Tuesday, February 25th, 2014
High-Court

ಬೆಂಗಳೂರು: ಕಾನೂನು ತೊಡಕಿನಿಂದ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಚುನಾವಣೆಗೆ ಹೈಕೋರ್ಟ್ ಕೊನೆಗೂ ಹಸಿರು ನಿಶಾನೆ ತೋರಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲು ಪಟ್ಟಿಯನ್ನು ಮರು ತಯಾರಿಸುವಂತೆ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಿದೆ. ಮಾ.25ಕ್ಕೆ ಮುಂದೂಡಿಕೆ: ವಿವಾದಿತ ಮಂಗಳೂರು ನಗರಪಾಲಿಕೆ ಮೇಯರ್ ಹುದ್ದೆಯನ್ನು ಸಾಮಾನ್ಯ ಹಾಗೂ […]

ರಾಷ್ಟ್ರದಾದ್ಯಂತ ಶಿವಾಜಿ ಜಯಂತಿ ಆಚರಿಸಲಿ: ಸಿಂಧ್ಯ

Monday, February 24th, 2014
PGR. Sindhya

ಬೆಂಗಳೂರು: ದೇಶದ ರಕ್ಷಣೆಗೆ ಶ್ರಮಿಸಿದ ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ರಾಷ್ಟ್ರಾದ್ಯಂತ ಆಚರಿಸಬೇಕೆಂದು ಜೆಡಿಎಸ್ ನಾಯಕ ಪಿ.ಜಿ.ಆರ್.ಸಿಂಧ್ಯ ಒತ್ತಾಯಿಸಿದ್ದಾರೆ. ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಜನರ ರಕ್ಷಣೆ ವಿಚಾರದಲ್ಲಿ ಶಿವಾಜಿ ದೇಶಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ ವಿಯೆಟ್ನಾಂನಂತಹ ಸಣ್ಣ ರಾಜ್ಯ ಪ್ರತಿ ವರ್ಷ ತಪ್ಪದೇ ಶಿವಾಜಿ ಜಯಂತಿ ಆಚರಿಸುತ್ತಿದೆ. ಅಂದ ಮೇಲೆ ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ವಾಲ್ಮೀಕಿ […]

ಲೋಕಾಯುಕ್ತ ತಿದ್ದುಪಡಿಗೆ ಸಹಿ ಹಾಕಬೇಡಿ: ರಾಜ್ಯಪಾಲರಿಗೆ ನ್ಯಾ.ಭಾಸ್ಕರ್‌ರಾವ್ ಮನವಿ

Monday, February 24th, 2014
Bhaskar-Rav

ಬೆಂಗಳೂರು: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಲೋಕಪಾಲ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಲೋಕಾಯುಕ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಲೋಕಾಯುಕ್ತ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾಗಿದ್ದು, ಇದರಲ್ಲಿ ಸಾಕಷ್ಟು ಲೋಪಗಳಿವೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಮೂಲ ಸಂರಚನೆಗೆ ಧಕ್ಕೆ ತರುತ್ತದೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಉದ್ದೇಶಕ್ಕೆ ಅಡ್ಡಿಯಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭಾನುವಾರ ಭೇಟಿ ಮಾಡಿದ ಲೋಕಾಯುಕ್ತ ನ್ಯಾ. ವೈ. […]

ಅಂಬಿಗೆ ಇನ್ನೂ 2 ದಿನ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ

Monday, February 24th, 2014
Ambarish

ಬೆಂಗಳೂರು: ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ವಿಶೇಷ ಪೂಜೆ ಹಾಗೂ ಮೋಮ ನಡೆಸುತ್ತಿದ್ದಾರೆ. ನಗರದ ವಿಕ್ರಂ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಅಂಬಿಗೆ ಚಿಕಿತ್ಸೆ ಮುಂದುವರೆದಿದ್ದು, ಆಸ್ಪತ್ರೆಯ ಮುಂದೆ ಅವರ ಅಭಿಮಾನಿಗಳು ಇಂದು ಬೆಳಗ್ಗೆಯಿಂದ ಮೃತ್ಯುಂಜಯ ಹಾಗೂ ಧನ್ವಂತರಿ, ಮಹಾಗಣಪತಿ ಮತ್ತು ನವಗ್ರಹ ಹೋಮ ನಡೆಸುತ್ತಿದ್ದಾರೆ. ಅಂಬಿಗೆ ಇನ್ನೂ 2 ದಿನ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ, ಅಂಬರೀಷ್ ಅವರಿಗೆ ಇನ್ನು […]

Brand ಮೋದಿ ಹಿಂದೆ 5 ಮಹಿಳೆಯರು

Monday, February 24th, 2014
Narendra-Modi

ಬೆಂಗಳೂರುಃ ರಾಜಕೀಯ ನನಗೆ ಒಂಚೂರೂ ಗೊತ್ತಿಲ್ಲ ಎಂದು ಹೇಳುವವರಿಗೂ ಇಂದು ನರೇಂದ್ರ ಮೋದಿ ಹೆಸರು ಗೊತ್ತು. ದೇಶದ ಯಾವುದೇ ರಾಜಕಾರಣಿಗಿಂತ ಮೋದಿ ಇಂದು ಪ್ರಸಿದ್ಧ. ಅವರನ್ನು ದ್ವೇಷಿಸುವವರು ಕೋಟ್ಯಂತರ ಮಂದಿ ಇರಬಹುದು, ಆದರೆ ಅವರ ಬಗ್ಗೆ ಸದಾ ಒಂದಲ್ಲಾ ಒಂದು ವೇದಿಕೆಯಲ್ಲಿ ಚರ್ಚೆಯಂತೂ ನಡೆಯುತ್ತಿರುತ್ತದೆ. ಮೋದಿಗೆ ಬೇಕಿರುವುದೂ ಇದೇ. ರಾಹುಲ್ ಗಾಂಧಿಯೂ ಸೇರಿದಂತೆ ದೇಶದ ಯಾವುದೇ ರಾಜಕಾರಣಿಗೆ ಈ ಭಾಗ್ಯವಿಲ್ಲ. ಹಾಗಾದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಳಿ ಪ್ರಚಾರದಮಂತ್ರದಂಡವಿದೆಯೇ? ಇಲ್ಲ. ಅವರಿಗೆ ಪ್ರಚಾರ ನೀಡುತ್ತಿದ್ದೇವೆ ಎಂಬುದು […]

ಅಂಬಿ ಚನ್ನಾಗಿದ್ದಾರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ: ಸುಮಲತ

Monday, February 24th, 2014
ಅಂಬಿ ಚನ್ನಾಗಿದ್ದಾರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ: ಸುಮಲತ

ಬೆಂಗಳೂರು: ಅಂಬರೀಶ್ ಅವರು ಚನ್ನಾಗಿದ್ದಾರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಬಿ ಧರ್ಮಪತ್ನಿ ಸುಮಲತ ಅಂಬರೀಶ್ ಅವರು ಭಾನುವಾರ ತಿಳಿಸಿದ್ದಾರೆ. ಅಂಬರೀಶ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಅಂಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಅಂಬಿ ಅವರ ಆರೋಗ್ಯ  ಕುರಿತಾಗಿ ನಿಖರ ಮಾಹಿತಿ ಸಿಗದೇ ಅಭಿಮಾನಿಗಳು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಸುಮಲತ ಅವರು ಸುದ್ದಿಗೋಷ್ಠಿ ನಡೆಸಿ, ಅಂಬರೀಶ್ ಅವರು ಚನ್ನಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಇಲ್ಲ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. […]

ಲೋಕಾ ವ್ಯಾಪ್ತಿಗೆ ಮುಖ್ಯಮಂತ್ರಿ ಸಂಪುಟ ಸದಸ್ಯರು

Saturday, February 22nd, 2014
Siddaramaiah

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲೋಕಪಾಲ ಕಾಯಿದೆ ಹಿನ್ನೆಲೆಯಲ್ಲಿ ರಾಜ್ಯದ ಲೋಕಾಯುಕ್ತ ಕಾಯ್ದೆಯನ್ನು ಬಲಪಡಿಸುವ ವಿಧೇಯಕವನ್ನು ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಮಹತ್ವದ ನಿರ್ಧಾರಕ್ಕೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಹೊಸ ಕಾನೂನಿನ ಪ್ರಕಾರ ಮುಖ್ಯಮಂತ್ರಿ ಕಚೇರಿಯನ್ನೂ ಲೋಕಾಯುಕ್ತ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ, ಸಂಪುಟದ ಇತರೆ ಎಲ್ಲ ಸದಸ್ಯರು, ಮುಖ್ಯ ಕಾರ್ಯದರ್ಶಿಯನ್ನು […]

ಫೆ.25ಕ್ಕೆ ವಾರ್ಷಕ ಕಲಾ ಪ್ರದರ್ಶನ-2014

Saturday, February 22nd, 2014
Karnataka-painting

ಬೆಂಗಳೂರು: ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‌ನ ಸಹಯೋಗದಲ್ಲಿ ಇದೇ ಫೆಬ್ರುವರಿ 25ರಿಂದ ಮಾರ್ಚ್ 1ರವರೆಗೆ ಒಂದು ವಾರಗಳ ಕಾಲ ವಾರ್ಷಿಕ ಕಲಾ ಪ್ರದರ್ಶನ-2014 ನಡೆಯಲಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೆ.25ರಂದು ನಡೆಯುವ ವಾರ್ಷಿಕ ಕಲಾಪ್ರದರ್ಶನಕ್ಕೆ ಕಲಾ ವಿಮರ್ಶಕ ಸುರೇಶ್ ಜಯರಾಮ್ ಅವರು ಚಾಲನೆ ನೀಡಲಿದ್ದಾರೆ. ಡಾ.ಬಿ.ಎಲ್.ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾ ಪ್ರದರ್ಶನದಲ್ಲಿ ಬಿವಿಎ, ಎಂವಿಎ ಮತ್ತು ಪಿಜಿಡಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ ಕಲೆ ಮತ್ತು ಅನ್ವಯ […]