Blog Archive

ಎಸ್ ಅಂಗಾರ ರವರಿಗೆ ಈ ಬಾರಿಯೂ ತಪ್ಪಿದ ಸಚಿವ ಸ್ಥಾನ

Tuesday, August 20th, 2019
S-angaara

ಮಂಗಳೂರು : ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂತ್ರಿಗಿರಿ ಪಟ್ಟ ದಕ್ಕದಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 7 ಶಾಸಕರನ್ನು ಕೊಟ್ಟರೂ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ನೂತನ ಸಚಿವ ಸಂಪುಟ ಪಟ್ಟಿಯಲ್ಲಿ ಕೊನೆ ಕ್ಷಣದವರೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಹೆಸರು ಕಾಣಿಸಿಕೊಂಡಿತ್ತು. ಸಚಿವ ಸ್ಥಾನ ದೊರಕುವ ನಿರೀಕ್ಷೆಯಲ್ಲಿ ಅಂಗಾರ ನಿನ್ನೆ ರಾತ್ರಿಯೇ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದರು. […]

ಜೋಗ್‌ ಫಾಲ್ಸ್‌ ತೋರಿಸಿ ಸಾಗರದ ಲಾಡ್ಜ್ನಲ್ಲಿ ಅತ್ಯಾಚಾರ ಮಾಡಿದ ಕುಂದಾಪುರದ ಯುವಕ

Saturday, January 5th, 2019
Vigneshwara

ಕುಂದಾಪುರ: ಯುವತಿಯೊಬ್ಬಳನ್ನು ದೈಹಿಕವಾಗಿ ಬಳಸಿ ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಪಾರು ಗ್ರಾಮದ ಮೂಡುಬಗೆ ನಿವಾಸಿ ವಿಜ್ಞೇಶ್ವರ್ (32) ಎಂಬವನನ್ನು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಆತ ದೋಷಿಯೆಂದು ಘೋಷಿಸಿದ್ದು, ಜ.8ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ. ಸುಮಾರು 22 ವರ್ಷದ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಪುಸಲಾಯಿಸಿದ ವಿಜ್ಞೇಶ್ವರ್ 2011ರ ಜೂ. 2ರಂದು ಆಕೆಯ ಮನೆಗೆ ಬಂದು, “ನಿನ್ನನ್ನು ನನ್ನ ಪೋಷಕರು ನೋಡಬೇಕಿದ್ದು, ಅದಕ್ಕಾಗಿ […]

ಸೌದಿಯಲ್ಲಿ ಡಿ.ಎಲ್. ಪಡೆದ ಮೊದಲ ಕನ್ನಡತಿ ಕುಂದಾಪುರ ಮೂಲದ ಡಾ. ವಾಣಿಶ್ರೀ ಶೆಟ್ಟಿ

Tuesday, December 25th, 2018
vanishri-shetty

ಕುಂದಾಪುರ: ಮಹಿಳೆಯರಿಗೆ ವಾಹನ ಚಾಲನೆ ನಿಷೇಧ ತೆರವಿನ ಬಳಿಕ ಗಲ್ಫ್‌ ರಾಷ್ಟ್ರದಲ್ಲಿ ಕುಂದಾಪುರ ಮೂಲದ ಮಹಿಳೆಯೊಬ್ಬರು ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಗಲ್ಫ್‌ನಲ್ಲಿ ಚಾಲನಾ ಪರವಾನಗಿ ಪಡೆದ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಳಿಯಂಗಡಿ ಸಮೀಪದ ಅಲ್ಬಾಡಿ ಗ್ರಾಮದ ಕೊಂಜಾಡಿ ನಿವಾಸಿ ಡಾ. ವಾಣಿಶ್ರೀ ಸಂತೋಷ್‌ ಶೆಟ್ಟಿ ಈ ಸಾಧನೆ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಡ್ರೈವಿಂಗ್‌ ಲೈಸನ್ಸ್‌ ಪಡೆದ ಮೊದಲ ಭಾರತೀಯ ಮಹಿಳೆ ಕೇರಳದ ಸಾರಮ್ಮ ಥಾಮಸ್‌ ಆಗಿದ್ದರೆ, […]

ಕುಂದಾಪುರದಲ್ಲಿ ಮತ್ತೊಂದು ಚಿರತೆ ಸೆರೆ

Saturday, November 17th, 2018
chetah

ಉಡುಪಿ: ಆಹಾರವರಸಿ ಜನವಸತಿಯತ್ತ ಬಂದು ಆತಂಕ ಮೂಡಿಸಿದ್ದ ಮತ್ತೊಂದು ಚಿರತೆ ಇಂದು ಮುಂಜಾನೆ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ. ಕಳೆದ ಶುಕ್ರವಾರ ತಡರಾತ್ರಿ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿತ್ತು. ಕುಂದಾಪುರ ತಾಲೂಕು ಕಾಳಾವರ ಕಕ್ಕೇರಿ ಸಮೀಪದ ವರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ ಹಲವಾರು ಸಮಯಗಳಿಂದ ಚಿರತೆಗಳ ಓಡಾಟವನ್ನು ಜನರು ಪ್ರತ್ಯಕ್ಷವಾಗಿ ಕಂಡಿದ್ದರು. ಮನೆಯ ನಾಯಿಗಳನ್ನು ಹಿಡಿಯಲು ಚಿರತೆಗಳು ಜನನಿಬಿಡ ಪ್ರದೇಶದತ್ತವೂ ಸುಳಿದಾಡುತ್ತಿತ್ತು. ಜನರು ನೀಡಿದ ಮಾಹಿತಿಯಂತೆ ಸೂಕ್ತ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು. […]

ಕುಂದಾಪುರ ಗಾಂಧಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ..!

Thursday, November 1st, 2018
kundapura

ಕುಂದಾಪುರ: ಮಹನೀಯರ ಕೊಡುಗೆ ಪ್ರತಿಫಲ ಕರ್ನಾಟಕ ಏಕೀರಣಕ್ಕೆ ನಾಂದಿಯಾದರೂ, ಭಾಷಾವಾರು ಪ್ರಾಂತ ಉದಯವಾದರೂ ಸಮಗ್ರ ಕನ್ನಡಿಗರು ಒಂದಾಗಲು ಸಾಧ್ಯವಾಗಿಲ್ಲ. 1973ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು, ಕನ್ನಡ ರಾಜ್ಯೋತ್ಸವ ಕನ್ನಡಿಗರ ಭಾವಾಭಿಮಾನ ಮೆರೆಯುವ ದಿನವಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಅಪಾರ ಎಂದು ಕುಂದಾಪುರ ಉಪವಿಭಾಗಧಿಕಾರಿ ಟಿ.ಭೂಬಾಲನ್ ಬಣ್ಣಿಸಿದ್ದಾರೆ. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಕುಂದಾಪುರ ಗಾಂಧಿ […]

‘ಯಾವನ್ರೀ ಅವನು ಶ್ರೀನಿವಾಸ ಶೆಟ್ಟಿ..ಅವನ ಮುಖಾನೇ ನಾನು ನೋಡಿಲ್ಲ’: ಏಕವಚನದಲ್ಲಿ ಠೀಕಿಸಿದ ಮಾಜಿ ಸಿಎಂ

Friday, October 26th, 2018
siddaramaih

ಕುಂದಾಪುರ: ಕುಂದಾಪುರದ ಶಾಸಕ, ಕುಂದಾಪುರದ ವಾಜಪೇಯಿ ಎಂದೆ ಖ್ಯಾತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಏಕವಚನದಲ್ಲಿ ಟೀಕಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೈಂದೂರು ಮಾಜಿ ಶಾಸಕರನ್ನು ಹೊಗಳುತ್ತಾ, ‘ಪೂಜಾರಿಯವರು ಬಹಳಷ್ಟು ಅನುದಾನ ತಂದಿದ್ದಾರೆ. ಆದರೆ ಮತದಾರ ಅವರನ್ನು ಮತ್ತೆ ಗೆಲ್ಲಿಸಲಿಲ್ಲ. ಕೋಟಿಗಟ್ಟಲೇ ಕ್ಷೇತ್ರಕ್ಕೆ ಅನುದಾನ ತಂದಿದ್ದು ಪಕ್ಕದ ಕಷೇತ್ರದ ಯಾವ ಶಾಸಕರು ಇಷ್ಟು ಅನುದಾನ ತಂದಿದ್ದಾರೆಯೇ? ಯಾವನ್ರೀ ಅವನು ಶ್ರೀನಿವಾಸ ಶೆಟ್ಟಿ….ಅವನ ಮುಖಾನೇ ನಾನು ನೋಡಿಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ […]

ಶಂಕರನಾರಾಯಣದ ಯುವತಿ ನಾಪತ್ತೆ: ತಂದೆಯಿಂದ ಪೊಲೀಸರಿಗೆ ದೂರು

Friday, October 5th, 2018
escaped

ಕುಂದಾಪುರ: ಯುವತಿಯೋರ್ವಳು ಯಾರಿಗೂ ತಿಳಿಸದೇ ಮನೆ ಬಿಟ್ಟು ತೆರಳಿದ ಬಗ್ಗೆ ವರದಿಯಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ವಂಡಾರು ಗ್ರಾಮದ ಗರ್ನಕೋಡಿ ನಿವಾಸಿ ಪವಿತ್ರ (20) ಕಾಣೆಯಾದ ಯುವತಿ. ಅ.3ರಂದು ಸಂಜೆ ವೇಳೆ ತನ್ನ ಮನೆಯಿಂದ ಯಾರಿಗೂ ಹೇಳದೇ ಹೋದಾಕೆ ಮರಳಿರಲಿಲ್ಲ. ಕುಟುಂಬಿಕರು ಎಲ್ಲೆಡೆ ಹುಡುಕಾಡಿದರೂ ಕೂಡ ಆಕೆಯ ಪತ್ತೆಯೂ ಆಗಿಲ್ಲ. ಸದ್ಯ ಯುವತಿ ತಂದೆ ಶಂಕರನಾರಾಯಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಗಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಆಕೆ ಹುಬ್ಬಳ್ಳಿ ಮೂಲದ ಯುವಕನೊಂದಿಗೆ ಹೋಗಿರುವ […]

ತಾಯಿಯ ಸಾವಿನ ನೋವು: ಮರುದಿನವೇ ಪುತ್ರ ಆತ್ಮಹತ್ಯೆ

Tuesday, September 18th, 2018
kundapura

ಕುಂದಾಪುರ: ಅಸೌಖ್ಯದಿಂದ ತಾಯಿ ಮೃತಪಟ್ಟ ಮರುದಿನವೇ ಆಕೆಯ ಪುತ್ರ ಆತ್ಮಹತ್ಯೆಗೆ ಶರಣಾದ ಘಟನೆ ಕೋಟ ವ್ಯಾಪ್ತಿಯ ಆವರ್ಸೆ ಎಂಬಲ್ಲಿ ಸೋಮವಾರ ನಡೆದಿದೆ. ಇಲ್ಲಿನ ಹೆದ್ದಾರಿ ಮಕ್ಕಿ ನಿವಾಸಿ ಬೆಳಕು ಪೂಜಾರ್ತಿ ಅನಾರೋಗ್ಯದ ನಿಮಿತ್ತ ಭಾನುವಾರ ಮೃತಪಟ್ಟಿದ್ದರು. ಇದರಿಂದ ತೀವ್ರ ಮನನೊಂದಿದ್ದ ಪುತ್ರ ಚಂದ್ರ ಪೂಜಾರಿ(38) ಅನ್ನ ಆಹಾರ ಸೇವಿಸದೆ ಮನೆಯ ತನ್ನ ಕೋಣೆ ಸೇರಿದ್ದರು. ಸೋಮವಾರ ಬೆಳಗ್ಗೆ ಬಾಗಿಲು ತೆರೆಯಲು ಮುಂದಾದ ವೇಳೆ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಕಿಟಕಿಯಿಂದ ಮನೆಯವರು ನೋಡುವಾಗ ಅವರು ನೇಣಿಗೆ ಶರಣಾಗಿದ್ದರು. […]

ತುಳು ಎಂದರೆ ಭಾಷೆಯಲ್ಲ ಅದು ದೇಶ: ಅಪ್ಪಣ್ಣ ಹೆಗ್ಡೆ

Monday, September 17th, 2018
appanna-hegde

ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ ಅದು ಒಂದು ದೇಶ. ಅದರಲ್ಲಿ ಸಂಸ್ಕøತಿ ಅಡಗಿದೆ ಆ ಸಂಸ್ಕøತಿಯನ್ನು ಗಟ್ಟಿಗೊಳಿಸುವುದು ತುಳುನಾಡೋಚ್ಚಯ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ನಡೆದ ತುಳುನಾಡೋಚ್ಚಯದ ಸ್ವಾಗತ ಸಮಿತಿ ರೂಪೀಕರಣದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳು ಎಂದರೆ ದ್ರಾವಿಡ ಸಂಸ್ಕøತಿ, ಕನ್ನಡ, […]

ಜಿಲ್ಲೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು..ಪಟ್ಟಣ ಪಂಚಾಯತ್​ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿ!

Monday, September 3rd, 2018
udupi

ಉಡುಪಿ: ಜಿಲ್ಲೆಯಲ್ಲಿ ನಡೆದ ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಉಡುಪಿ ನಗರಸಭೆ, ಕಾರ್ಕಳ ಮತ್ತು ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಉಡುಪಿ ನಗರಸಭೆಯ 35 ವಾರ್ಡ್ಗಳ ಪೈಕಿ 31 ವಾರ್ಡ್ಗಳನ್ನು ಬಿಜೆಪಿ ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಕೈಯಿಂದ ನಗರಸಭೆಯನ್ನು ವಶಕ್ಕೆ ಪಡೆದಿದೆ. ಈ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಇದು ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ. […]