Blog Archive

ಬ್ಲೂವೇಲ್ ಆಟ: ಅಸ್ವಸ್ಥಗೊಂಡಿದ್ದ ಯುವಕ ಹೆತ್ತವರ ಮಡಿಲಿಗೆ

Monday, October 30th, 2017
blue whale

ಮಂಗಳೂರು: ಮಂಜೇಶ್ವರ ಪಾವೂರಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರ ಪ್ರಯತ್ನದಿಂದ ಬ್ಲೂವೇಲ್ ಆಟದ ಹಿಂದೆ ಬಿದ್ದು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ  ಹೆತ್ತವರ ಮಡಿಲು ಸೇರುವಂತಾಗಿದೆ. ಅಸ್ಸಾಮಿನ ನಾಗೌನ್ ಜಿಲ್ಲೆಯ ಚೋಕ್ಟಾಪ್ ಗ್ರಾಮದ ನೂರುಲ್ ಹಕ್- ಹಲೀಮಾ ಬೇಗಮ್ ದಂಪತಿಯ ಪುತ್ರ ವಾಸಿಂ ಅಕ್ರಂ (22) ರಕ್ಷಿಸಲ್ಪಟ್ಟ ಯುವಕ. ಸುಮಾರು 5 ತಿಂಗಳ ಹಿಂದೆ ಕೇರಳಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವಾಸಿಂ ಅಕ್ರಂ ಕೊಚ್ಚಿಯ ವಿಮಾನ ನಿಲ್ದಾಣ ಸಮೀಪದ ಕ್ಯಾಂಟೀನ್‌ನಲ್ಲಿ ಕೆಲಸ […]

ಗಾಂಜಾ ಸಾಗಾಟದ ಆರೋಪ, ವ್ಯಕ್ತಿಯ ಬಂಧನ

Saturday, October 21st, 2017
ganja

ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟದ ಆರೋಪದಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರದ ಅಭಿಲಾಷ್ ಪ್ರದೀಪ್ ಸುವರ್ಣ (20) ಎಂದು ಗುರುತಿಸಲಾಗಿದೆ. ತಪಾಸಣೆ ವೇಳೆ ಸುಮಾರು ಲಕ್ಷ ರೂ. ಮೌಲ್ಯದ 4 ಕೆ. ಜಿ. ಗಾಂಜಾ ಪತ್ತೆಯಾಗಿದೆ. ಈತ ಮಂಗಳೂರಿನಿಂದ ದುಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದ. ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದ್ದರಿಂದ ದುಬೈಗೆ ಹೋಗುವ ಬದಲು ಜೈಲಿಗೆ ಹೋಗುವಂತಾಗಿದೆ. ಪ್ರಕರಣವನ್ನು ಬಜ್ಪೆ ಪೊಲೀಸರಿಗ […]

ಮೂರು ತಿಂಗಳ ಹಿಂದಿನ ಮನೆ ಕಳವು ಪ್ರಕರಣ, ಆರೋಪಿಗಳ ಬಂಧನ

Thursday, October 12th, 2017
parladka

ಮಂಗಳೂರು: ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿನ ಮನೆಯೊಂದರಿಂದ ಕಳೆದ ಮೂರು ತಿಂಗಳ ಹಿಂದೆ ಮನೆ ಕಳವು ಪ್ರಕರಣವನ್ನು ಪತ್ತೆಹಚ್ಚಿದ ಪುತ್ತೂರು ನಗರ ಪೊಲೀಸರು ಮೂವರು ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ಮತ್ತು ರೂ.60 ಸಾವಿರ ಮೌಲ್ಯದ ಕೈಗಡಿಯಾರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಮಹಮ್ಮದ್ ಆಶೀಕ್(26) ಈ ಹಿಂದೆಯೇ ಬಂಧನ ಕ್ಕೊಳಗಾಗಿದ್ದು, ಇದೀಗ ಪೊಲೀಸರು ಮಂಜೇಶ್ವರ ಉಪ್ಪಳದ ಹಿರೋಗಲ್ಲಿ ನಿವಾಸಿ ಜಂಷೀದ್ (22ವ) ಮತ್ತು ಬಾಯಾರುಪದವು […]

ಮಂಜೇಶ್ವರದಲ್ಲಿಯೂ ಸಿಎಂ ಸಿದ್ದರಾಮಯ್ಯನನ್ನು ಕಾಡಿದ ಕಾಗೆ

Thursday, January 19th, 2017
cm crow

ಮಂಜೇಶ್ವರ : ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಗೌರವಾರ್ಥ ಅವರ ಹುಟ್ಟೂರು ಮಂಜೇಶ್ವರದಲ್ಲಿ ಕೇರಳ ಸರಕಾರದ ಸಹಾಯದೊಂದಿಗೆ ನಿರ್ಮಿಸಲಾಗಿರುವ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಂದು ಭಾಗವಹಿದ್ದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಅವರಿಗೆ ಕಾಗೆಯೊಂದು ಅಡ್ಡಿಪಡಿಸಿತು. ವೇದಿಕೆಯ ಮೇಲೆ ಕುಳಿತಿದ್ದ ಸಿಎಂ ಮೇಲೆ ಪಕ್ಕದ ಮರದಲ್ಲಿ ಕುಳಿತಿದ್ದ ಕಾಗೆಯೊಂದು ಹಿಕ್ಕೆ ಹಾಕಿತು. ಇದರಿಂದ ಸಿಎಂ ಮುಜುಗರಕ್ಕೊಳಗಾದರು. ತಕ್ಷಣ ಶಾಸಕ ಮೊಯ್ದೀನ್ ಬಾವಾ ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಕೊಟ್ಟರು.ಮೂಡಾದ ಮಾಜಿ ಅಧ್ಯಕ್ಷ ತೇಜೋಮಯ ಅವರು ಸಿಎಂ ಪಂಚೆ […]

ಆಟ ಆಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ಬಾವಿಗೆ ಬಿದ್ದು ಸಾವು

Wednesday, November 30th, 2016
Child death

ಮಂಗಳೂರು: ಆಟ ಆಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮಂಜೇಶ್ವರದ ಪಿಲಾಂಕಟ್ಟೆಯಲ್ಲಿ ನಡೆದಿದೆ. ಇದರಿಂದ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಪಿಲಾಂಕಟ್ಟೆ-ಉಬ್ರಂಗಳ ರಸ್ತೆ ನಿವಾಸಿ ಹಮೀದ್ ಎಂಬವರ ಪುತ್ರ ರಂಸಾನ್(4) ಹಾಗೂ ಹಮೀದ್‌ ಸಹೋದರ ಶಬೀರ್ ಎಂಬವರ ಪುತ್ರ ನಸ್ವಾನ್(2) ಮೃತಪಟ್ಟ ಪುಟ್ಟ ಬಾಲಕರು. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ದಿಢೀರ್ ನಾಪತ್ತೆಯಾಗಿದ್ದರು. ಇದರಿಂದ ಹುಡುಕಾಟ ನಡೆಸುತ್ತಿದ್ದಾಗ ಅಂಗಳದಲ್ಲಿದ್ದ ಬಾವಿಯಲ್ಲಿ ನೀರು ಕದಡುವುದು ಕಂಡು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪರಿಸರ […]

ಬಿಜೆಪಿ ಕಾರ್ಯಾಲಯಕ್ಕೆ ಬಾಂಬ್ ಎಸೆತ ಮಂಜೇಶ್ವರದಲ್ಲಿ ಕಾರ್ಯಕರ್ತರ ಪ್ರತಿಭಟನೆ

Friday, September 9th, 2016
manjeshwara-panchayath

ಮಂಜೇಶ್ವರ: ತಿರುವನಂತಪುರದಲ್ಲಿ ಬಿಜೆಪಿಯ ಕಾರ್ಯಾಲಯಕ್ಕೆ ಬಾಂಬೆಸೆದು ಹಾನಿಗೊಳಿಸಿದ ಘಟನೆಯನ್ನು ಪ್ರತಿಭಟಿಸಿ ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಿಜೆಪಿಯ ರಾಜ್ಯ ಘಟಕ ಕಾರ್ಯಾಲಯಕ್ಕೆ ಬಾಂಬ್ ಎಸೆದು ಧ್ವಂಸಗೊಳಿಸಿ ಕೇರಳ ರಾಜ್ಯದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ವಿರುದ್ಧ ಮಂಜೇಶ್ವರ ಹೊಸಂಗಡಿಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಪ್ರತಿಭಟನಾ ಮೆರವಣಿಗೆ ಹಾಗೂ ಖಂಡನಾ ಸಭೆ ಬುಧವಾರ ನಡೆಸಿತು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಬಾಂಬ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರೆ ದೇಶದಾದ್ಯಂತ ಸಿಪಿಎಂ […]

ಮಂಜೇಶ್ವರದ ಹಲವೆಡೆ ಸಂಭ್ರಮದ ನಾಗರ ಪಂಚಮಿ ಆಚರಣೆ

Monday, August 8th, 2016
Manjeshwara-Nagarapanchamy

ಕಾಸರಗೋಡು/ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಹಲವೆಡೆ ಭಾನುವಾರ ನಾಗರಪಂಚಮಿ ಆಚರಣೆಯ ಸಂಭ್ರಮ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ಬೆಳಗ್ಗಿನಿಂದಲೇ ವಿವಿಧ ನಾಗ ದೇವಾಲಯಗಳಲ್ಲಿ ಭಕ್ತರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಹದಿನೆಂಟು ಪೇಟೆಗೊಳಪಟ್ಟ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ, ಬಂಗ್ರ ಮಂಜೆಶ್ವರದ ಶ್ರೀ ಕಾಳಿಕಾ ಪರಮೆಶ್ವರಿ ದೇವಸ್ಥಾನ, ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನ, ಉಪ್ಪಳದ ಕೋಡಿಬೈಲು ತರವಾಡು ಮನೆ, ಕುಂಬಳೆಯ ಕಳತ್ತೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಾಸರಗೋಡು ನಗರದ ಮಲ್ಲಿಕಾರ್ಜುನ ಕ್ಷೇತ್ರ ಮುಂಬಾಗವಿರುವ ನಾಗನ ಕಟ್ಟೆ, ರಾಜ್ಯ ಸಾರಿಗೆ […]

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

Tuesday, February 16th, 2016
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ. ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- […]

ನೈಜ ಶಿಕ್ಷಣ ನೀಡುವಲ್ಲಿ ವಿದ್ಯಾಲಯಗಳು ಸೋತಿರುವುದು ಗಂಭೀರ ವಿಷಯ : ಸಜೀವ್ ಮರೋಳಿ

Saturday, February 6th, 2016
STA

ಮಂಜೇಶ್ವರ: ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಹಿರಿಯ ತಲೆಮಾರಿನವರು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿದ ವಿದ್ಯಾಲಯಗಳು ದಾಖಲೆ ವರ್ಷಗಳಷ್ಟು ಕಾಲ ಸೇವಾ ತತ್ಪರವಾಗಿರುವುದು ವಿಧ್ಯೆಯ ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡು ನೈಜ ಶಿಕ್ಷಣ ನೀಡುವಲ್ಲಿ ಸೋತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಶಿಕ್ಷಣ ಎಲ್ಲೆಡೆ ವ್ಯಾಪಿಸುವಲ್ಲಿ ಅಹರ್ನಿಶಿ ಕಾರ್ಯವೆಸಗುತ್ತಿರುವ ವಿದ್ಯಾಲಯಗಳು ನೈಜ ಅರ್ಥದ ದೇಗುಲಗಳೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಸಜೀವ್ ಮರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಜೇಶ್ವರದ ಪ್ರಸಿದ್ದ ಎಸ್ ಎ ಟಿ ಶಾಲಾ […]

ಮಂಜೇಶ್ವರದಲ್ಲಿ ಜೈವ ಕೃಷಿ ಯೋಜನೆ : ಜಿ.ಪಂ.ತಂಡ ಭಟಿ

Friday, February 5th, 2016
Javika

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿನ ಪಾವೂರು ಬಾಚಳಿಕೆ ಬಂಗಳೆ ಪ್ರದೇಶದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ವಿನೂತನ ಜೈವಕೃಷಿ ಯೋಜನೆಯನ್ನು ಜ್ಯಾರಿಗೊಳಿಸಲು ನಿಧರಿಸಿದ್ದು ಪ್ರಸ್ತುತ ಸ್ಥಳಕ್ಕೆ ಜಿಲ್ಲಾ ಪಂಚಾಯತು ಹಾಗೂ ಕಂದಾಯ ಅಧಿಕಾರಿಗಳ ನಿಯೋಗ ಭಟಿ ನೀಡಿತು. ಕಾಸರಗೋಡು ಜಿಲ್ಲಾ ಪಂಚಾಯತಿನ ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಸಂಪೂರ್ಣವಾದ ಜೈವಕೃಷಿ ಯನ್ನೊಳಗೊಂಡ ಭತ್ತದ ಕೃಷಿ, ತರಕಾರಿ ಕೃಷಿಯನ್ನು ಅಳವಡಿಸಿ ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಸುಮಾರು 11.6 ಎಕರೆ ವಿಸ್ತಿರ್ಣದ ಸ್ಥಳವನ್ನು ಇದಕ್ಕಾಗಿ ಬಳಸಲಾಗುವುದು. ಕೃಷಿ ಸಂಘಗಳು, ಪಾಡಶೇಕರ […]