Blog Archive

ಮಲೇರಿಯಾ ಉತ್ಪತ್ತಿ ತಾಣಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ದಾಳಿ

Wednesday, July 5th, 2017
Malaria

ಮಂಗಳೂರು : ಮಹಾನಗರ ಪಾಲಿಕೆಯ ವತಿಯಿಂದ ಈಗಾಗಲೇ ಗುರುತಿಸಲಾಗಿರುವ ಮಲೇರಿಯಾ ಉತ್ಪತ್ತಿ ತಾಣಗಳಿಗೆ ದಾಳಿ ನಡೆಸಿ ದಂಡ ವಿಧಿಸುವುದು ಹಾಗೂ ಕಟ್ಟಡ ಪರವಾನಿಗೆ ರದ್ದು ಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಸಿದ್ದಾರೆ. ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಮೇಯರ್ ಮಲೇರಿಯಾ ಹಾಗೂ ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ . ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಲೇರಿಯಾ ರೋಗ ಪ್ರಕರಣಗಳಲ್ಲಿ ಇಳಿಕೆ […]

ಮಹಾನಗರ ಪಾಲಿಕೆಯ ವತಿಯಿಂದ ಫೆ. 3-4ರಂದು ಸ್ಮಾರ್ಟ್ ಸಿಟಿಯ ರಾಜ್ಯ ಮಟ್ಟದ ಕಾರ್ಯಾಗಾರ

Friday, February 3rd, 2017
MCC

ಮಂಗಳೂರು: ಮಹಾನಗರ ಪಾಲಿಕೆಯ ವತಿಯಿಂದ ಫೆ. 3-4ರಂದು ಎರಡು ದಿನಗಳ ಕಾಲ ನಡೆಯುವ ಸ್ಮಾರ್ಟ್ ಸಿಟಿಯ ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಉದ್ಘಾಟಿಸಲಿದ್ದಾರೆ ಎಂದು ಮನಪಾ ಮೇಯರ್ ಹರಿನಾಥ್ ಹೇಳಿದರು. ಮನಪಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಯು.ಐ.ಡಿ.ಎಫ್.ಸಿ, ಕರ್ನಾಟಕ ಸರಕಾರ, ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಾಗಾರದಲ್ಲಿ ಮಂಗಳೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ತುಮಕೂರು ಸೇರಿದಂತೆ 6 ಮಹಾನಗರ ಪಾಲಿಕೆಯ ಅಧಿಕಾರಿಗಳಲ್ಲದೆ ವಿಶ್ವ ಬ್ಯಾಂಕ್ ಕ್ಷೇತ್ರ ಪರಿಣಿತರು, ರಾಜ್ಯ […]

ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ ಕಾರ್ಯವೈಖರಿಯನ್ನು ವಿರೋಧಿಸಿ ಪ್ರತಿಭಟನೆ

Thursday, December 29th, 2016
BJP

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ ಕಾರ್ಯವೈಖರಿಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರು ನಗರ ಉತ್ತರ ಹಾಗೂ ದಕ್ಷಿಣ ಸಮಿತಿಯ ನೇತೃತ್ವದಲ್ಲಿ ಇಂದು ಮನಪಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮನಪಾ ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಮನಪಾ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಅಭಿವೃದ್ಧಿ ಕುಂಠಿತಗೊಳ್ಳುತ್ತಿವೆ. ದಿನಕ್ಕೊಂದು ಹೊಸ ಘೋಷಣೆ, ಭರವಸೆ ನೀಡಿ ಪ್ರಚಾರ ಗಿಟ್ಟಿಸುತ್ತಿದೆಯೇ ವಿನಃ ಸೂಕ್ತ ಆಡಳಿತ ನೀಡುತ್ತಿಲ್ಲ. ಆಸ್ತಿ ತೆರಿಗೆಯನ್ನು ಶೇ. 15ರಷ್ಟು ಹೆಚ್ಚಿಸಿ ವಿಶ್ವಾಸದ್ರೋಹ ಮಾಡಿದೆ […]

ನ್ಯಾಯಾಲಯದಲ್ಲಿ ಕೊಳೆಯುತ್ತಿರುವ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು: ಜನಾರ್ದನ ಪೂಜಾರಿ

Monday, December 26th, 2016
poojary

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಗೆದ್ದು ಬಂದಾಗ ಐದು ವರ್ಷಗಳವರೆಗೆ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಜನತೆಗೆ ವಾಗ್ದಾನ ಮಾಡಿತ್ತು. ಆದರೆ, ತನ್ನ ವಾಗ್ದಾನವನ್ನು ತಾನೇ ಮರೆತಿದೆ. ಪಾಲಿಕೆ ಸದಸ್ಯರ ಈ ತಪ್ಪಿನಿಂದಾಗಿ ಅಂದು ಪ್ರತಿಜ್ಞೆ ವಿಧಿ ಬೋಧಿಸಿದ ನಾನೇ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಜನರಿಗೆ ಮಾಡುವ ಅತ್ಯಂತ ದೊಡ್ಡ ಮೋಸ. ಜನತೆಯ ವಿಶ್ವಾಸವನ್ನೇ ಧೂಳಿಪಟ ಮಾಡಲಾಗಿದೆ. ತಮ್ಮ […]

ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ನೂತನ ಏಳು ಒಣಕಸ ಸಂಗ್ರಹಣಾ ವಾಹನಗಳಿಗೆ ಚಾಲನೆ

Thursday, October 27th, 2016
harinath

ಮಂಗಳೂರು: ನಗರ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ನೂತನ ಏಳು ಒಣಕಸ ಸಂಗ್ರಹಣಾ ವಾಹನಗಳಿಗೆ ಮಹಾನಗರ ಪಾಲಿಕೆ ಕಚೇರಿ ಎದುರು ಮೇಯರ್ ಹರಿನಾಥ್ ಇಂದು ಚಾಲನೆ ನೀಡಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ಕಸಗಳ ಸಂಗ್ರಹ ಹಿಂದಿನಂತೆ ವಾರದ ಏಳೂ ದಿನಗಳೂ ನಡೆಯಲಿದ್ದು, ಒಣಕಸ ಸಂಗ್ರಹ ಆಯಾ ವಾರ್ಡ್‍ಗಳಿಗೆ ನಿಗದಿಪಡಿಸಲಾದಂತೆ ವಾರಕ್ಕೊಮ್ಮೆ ನೂತನ ವಾಹನಗಳು ಸಂಚರಿಸಿ ಸಂಗ್ರಹ ಮಾಡಲಿವೆ ಎಂದರು. ಪ್ರಸ್ತುತ ಹಸಿಕಸವನ್ನು ಸಂಗ್ರಹಿಸಿಕೊಂಡು […]

ಪಾರ್ಕಿಂಗ್ ಸ್ಥಳದಲ್ಲಿ ಮಳಿಗೆ ನಿರ್ಮಿಸಿ ಕಾನೂನು ಉಲ್ಲಂಘನೆ: ಚಂದ್ರಶೇಖರ್

Wednesday, October 5th, 2016
chandra-sekhar

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯ 194 ವಾಣಿಜ್ಯ ಕಟ್ಟಡಗಳು ಪಾರ್ಕಿಂಗ್ ಸ್ಥಳದಲ್ಲಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪೈಕಿ ನಿಯಮ ಉಲ್ಲಂಘಿಸಿರುವ 69 ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಪತ್ರದ ಮೂಲಕ ಸೂಚಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳಾವಕಾಶವಿದ್ದರೂ ಅಲ್ಲಿ ಮಳಿಗೆ ನಿರ್ಮಿಸಿ ಕಾನೂನು ಉಲ್ಲಂಘಿಸಿರುವುದು ದೃಢಪಟ್ಟಿದೆ ಎಂದರು. 69 […]

ಶಾಸಕ ಮೊಹಿಯುದ್ದೀನ್ ಬಾವ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಬಗ್ಗೆ ಆಕ್ಷೇಪ

Friday, September 30th, 2016
MCC

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಎಂಬಲ್ಲಿ ಶಾಸಕ ಮೊಹಿಯುದ್ದೀನ್ ಬಾವ ಅವರು ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮಧುಕಿರಣ್, ಶಾಸಕ ಬಾವ ಕಾನೂನು ಉಲ್ಲಂಘಿಸಿ ನಾಲ್ಕು ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಕಟ್ಟಡಕ್ಕೆ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ ಎನ್ನುವುದನ್ನು ಪಾಲಿಕೆಯ ಜಂಟಿ ಆಯುಕ್ತರೂ ಒಪ್ಪಿಕೊಂಡಿದ್ದಾರೆ. ಕಟ್ಟಡ ಕಟ್ಟುವವರೆಗೆ ಪಾಲಿಕೆ ಅಧಿಕಾರಿಗಳು […]

ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ: ಮೇಯರ್ ಹರಿನಾಥ್

Wednesday, August 31st, 2016
MCC

ಮಂಗಳೂರು: ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ ನಡೆಸಲು ಪಾಲಿಕೆ ತೀರ್ಮಾನಿಸಿದೆ. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ಸ್ಟೇಟ್‍ ಬ್ಯಾಂಕ್, ಮಣ್ಣಗುಡ್ಡೆ, ಕೇಂದ್ರ ಮಾರುಕಟ್ಟೆ ಪರಿಸರಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಫುಟ್‍ಪಾತ್‍ಗಳಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಫುಟ್‍ಪಾತ್‍ನಿಂದ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವುದಾಗಿ ಮೇಯರ್ ನೀಡಿದ ಭರವಸೆ ಈಡೇರಿಲ್ಲ. ಈ ಹಿಂದೆ ಅವರ ಅನಧಿಕೃತ ವ್ಯಾಪಾರ ವಿರುದ್ಧ ಕಾರ್ಯಾಚರಣೆ ನಡೆಸಿದರೂ ಬಳಿಕ ಪಾಲಿಕೆ ತಟಸ್ಥ ಧೋರಣೆ […]

ಮಂಗಳೂರಿನ ಪುರಭವನಕ್ಕೆ ‘ಕುದ್ಮುಲ್ ರಂಗರಾವ್ ಸ್ಮಾರಕ’ ಹೆಸರಿಡಲು ಒಪ್ಪಿಗೆ ಸೂಚನೆ

Saturday, July 30th, 2016
MCC

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ತಾಣ ಪುರಭವನಕ್ಕೆ ದಲಿತೋದ್ಧಾರಕ ‘ಕುದ್ಮುಲ್ ರಂಗರಾವ್ ಸ್ಮಾರಕ’ ಎಂದು ಹೆಸರಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದು, ಒಪ್ಪಿಗೆ ಸೂಚಿಸಲಾಯಿತು. ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವ ಕುರಿತು ಸಭೆಯ ಕಾರ್ಯಸೂಚಿಯಲ್ಲಿ ವಿಷಯ […]

ಮಂಗಳೂರು : ಮೇಯರ್‌ ಆಗಿ ಜೆಸಿಂತಾ ವಿಜಯಾ ಆಲ್ಫ್ರೆಡ್ ಉಪಮೇಯರ್‌ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆ

Friday, March 13th, 2015
Mcc Mayor

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಕಾಂಗ್ರೆಸ್‌ನ ಜೆಸಿಂತಾ ವಿಜಯಾ ಆಲ್ಫ್ರೆಡ್ ಹಾಗೂ ಉಪಮೇಯರ್‌ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಗೆ ಪಾಲಿಕೆ ಪರಿಷತ್‌ನಲ್ಲಿ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ರೂಪಾ ಡಿ. ಬಂಗೇರಾ ಹಾಗೂ ಕಾಂಗ್ರೆಸ್‌ನಿಂದ ಜೆಸಿಂತಾ ವಿಜಯಾ ಆಲ್ಫ್ರೆಡ್ ಸ್ಪರ್ಧಿಸಿದ್ದರು. ರೂಪಾ ಡಿ. ಬಂಗೇರ ಪರವಾಗಿ 20, ಜೆಸಿಂತಾ ಪರವಾಗಿ 37 ಮಂದಿ ಮತ ಚಲಾವಣೆಯಾಯಿತು. ಈ ಮೂಲಕ ಜೆಸಿಂತಾ ಮೇಯರ್‌ ಆಗಿ ಆಯ್ಕೆ ಆದರು. ಮೈಸೂರು ಪ್ರಾದೇಶಿಕ ಆಯುಕ್ತರಾದ […]