Blog Archive

ಮಂಗಳೂರಿನಲ್ಲಿ ರಾಜ್ಯದ ಮೊದಲ ಕಿಯೋಸ್ಕ್‌ ಆರೋಗ್ಯ ಸೇವೆ ಆರಂಭ

Monday, March 12th, 2018
mangaluru

ಮಂಗಳೂರು: ಸರ್ಕಾರಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ತೆರಳಲು ಸಮಯವಿಲ್ಲವೆಂದು ಗೊಣಗುವ ಪ್ರಮೇಯ ಇನ್ನಿಲ್ಲ. ಕಾರಣ ನಗರದ ಜನನಿಬಿಡ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಂತಾಗಲು ರಾಜ್ಯ ಸರ್ಕಾರ ಉಚಿತ ಹೆಲ್ತ್ ಕಿಯೋಸ್ಕ್ ಸೇವೆನ್ನು ಆರಂಭಿಸುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಆರಂಭಗೊಳ್ಳುತ್ತಿರುವ ಹೆಲ್ತ್ ಕಿಯೋಸ್ಕ್ ರಾಜ್ಯದಲ್ಲೇ ಮೊದಲು. ಈಗಾಗಲೇ ಬೆಂಗಳೂರು ಮತ್ತು ಮೈಸೂರು ಸ್ಲಂ ಪ್ರದೇಶಗಳಲ್ಲಿ ಕಿಯೋಸ್ಕ್ ಸೇವೆ ಇದೆಯಾದರೂ ಅಲ್ಲಿ ನಿರ್ದಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಿಯೋಸ್ಕ್, ಇಲ್ಲಿ ಪ್ರತ್ಯೇಕವಾಗಿ ಸ್ಥಾಪನೆಯಾಗುತ್ತಿದೆ. ಬೆಳಗ್ಗೆ 7ರಿಂದ […]

ಇಂದಿರಾ ಕ್ಯಾಂಟೀನ್‌ಗೆ ಹಾನಿ

Wednesday, March 7th, 2018
canteen

ಮಂಗಳೂರು: ನಗರದ ಪುರಭವನದ ಸಮೀಪ ಮಂಗಳವಾರ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್‌ಗೆ ರಾತ್ರಿ ದುಷ್ಕರ್ಮಿಗಳು ಹಾನಿಗೈದಿದ್ದಾರೆ. ಕ್ಯಾಂಟೀನ್‌ನ ಕೈತೊಳೆಯುವ ನೀರಿನ ನಳ್ಳಿ ಹಾಗೂ ಶೌಚಾಲಯದ ಬಾಗಿಲಿಗೆ ಹಾನಿ ಉಂಟು ಮಾಡಿರುವುದು ಬುಧವಾರ ಮುಂಜಾನೆ ಬೆಳಕಿಗೆ ಬಂತು. ತಕ್ಷಣ ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆಹಾರ ಸಚಿವ ಯು.ಟಿ.ಖಾದರ್ ಮಂಗಳವಾರ ಉದ್ಘಾಟಿಸಿದ್ದರು. ಇದರ ಬೆನ್ನಿಗೆ ಕ್ಯಾಂಟೀನ್‌ನಲ್ಲಿ ತಿಂಡಿತಿನಿಸಿಗೆ ನೂಕುನುಗ್ಗಲು ಉಂಟಾಗಿತ್ತು. ಉರ್ವಸ್ಟೋರ್‌ನಲ್ಲಿ ಕೆಲ ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್ ಕಟ್ಟಡದ ಮುಂಭಾಗದಲ್ಲಿ ಅಳವಡಿಸಿರುವ […]

ಅನಿವಾಸಿ ಕರಾವಳಿಗರನ್ನು ದೂಷಿಸಿಲ್ಲ: ಸಚಿವ ಖಾದರ್ ಸ್ಪಷ್ಟನೆ

Friday, March 2nd, 2018
u-t-kader

ಮಂಗಳೂರು: ಅನಿವಾಸಿ ಕರಾವಳಿಗರನ್ನು ದೂಷಿಸಿಲ್ಲ ಎಂದು ಆಹಾರ ಸಚಿವ ಯು. ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ಈಗ ವಿದೇಶದಲ್ಲಿ ಇರುವವರಿಗೆ ನಾನು ಬೈದಿದ್ದೇನೆ. ಅದನ್ನು ಹೊರತುಪಡಿಸಿದರೆ ಬೇರೆ ಯಾರನ್ನು ಉದ್ದೇಶಿ ನಾನು ದೂಷಣೆ ಮಾಡಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳು ನನ್ನ ಜೊತೆಗೆ ಇರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಿಜ. ಆದರೆ, ಪ್ರಕರಣಕ್ಕೆ ಮೊದಲು […]

ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಆರೋಪ: ಕೇಸ್‌ ದಾಖಲಿಸಲು ಅನುಮತಿಗೆ ಮನವಿ

Friday, March 2nd, 2018
government

ಮಂಗಳೂರು: ಸರ್ಕಾರಿ ಸಮಾರಂಭ ಹಮ್ಮಿಕೊಂಡು ರಾಜಕೀಯ ಉದ್ದೇಶಕ್ಕೆ ಬಳಸುವ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ರಾಜ್ಯಪಾಲರನ್ನು ವಿನಂತಿಸಿ, ದಾಖಲೆ ಪತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ಅ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸರ್ಕಾರಿ ಸಮಾರಂಭ ಹಮ್ಮಿಕೊಂಡು ಆ ಸಮಾರಂಭವನ್ನು ಪಕ್ಷದ ಉದ್ದೇಶಕ್ಕೆ ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿಯಲ್ಲಿ ಸ್ವಯಂ ಆಗಿ ಕೇಸು ದಾಖಲಿಸಬೇಕು. […]

ಟೀಕಾಕಾರರಿಗೆ ತಿರುಗೇಟು ನೀಡಲು ಹೋಗಿ ಅನಿವಾಸಿ ಭಾರತೀಯರನ್ನು ಅವಹೇಳನ ಮಾಡಿದ ಸಚಿವ ಯು ಟಿ ಖಾದರ್

Wednesday, February 28th, 2018
disspointed

ಮಂಗಳೂರು: ಪುತ್ತೂರು ಸಮೀಪದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಸಂಸ್ಥೆಯಲ್ಲಿ ಫೆ.3ರಂದು ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಚಿವ ಯು.ಟಿ.ಖಾದರ್ ಅವಹೇಳನಕಾರಿ ಪದ ಬಳಕೆ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದೇ ಭಾಷಣದಲ್ಲಿ ಖಾದರ್ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯಲು ಹೋಗುವವರನ್ನು ಅವಮಾನಿಸಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದಿದೆ. ಈ ಬಗ್ಗೆ ಕಳೆದ ಮೂರು ದಿನದಿಂದ ಸಚಿವ ಖಾದರ್ ಪರ ಮತ್ತು ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಾಗೂ ಆಡಿಯೊ ಹರಿದಾಡುತ್ತಿವೆ. ಹಿರಿಯ ಧಾರ್ಮಿಕ ಮತ್ತು ಸಾಮಾಜಿಕ […]

ಎಲ್‌ಪಿಜಿ, ಪೆಟ್ರೋಲ್ ಪಂಪ್ ತೆರೆಯಲು ರಾಜ್ಯ ಸರಕಾರದ ಅನುಮತಿಗೆ ಕಾನೂನು: ಯು.ಟಿ.ಖಾದರ್

Saturday, February 10th, 2018
u-t-kader

ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಹಾಗೂ ಎಲ್‌ಪಿಜಿ ವಿತರಣಾ ಕೇಂದ್ರವನ್ನು ಆರಂಭಿಸಲು ರಾಜ್ಯ ಸರಕಾರದ ಅನುಮತಿ ಪಡೆಯಬೇಕೆಂಬ ನಿಯಮಾವಳಿಯನ್ನು ರೂಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಂಧ್ರ ಪ್ರದೇಶ ಸರಕಾರ ಈ ಬಗ್ಗೆ ಈಗಾಗಲೇ ನಿಯಮಾವಳಿ ರೂಪಿಸಿದೆ. ಇದುವರೆಗೆ ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಅಥವಾ ಎಲ್‌ಪಿಜಿ ಬಂಕ್‌ಗಳನ್ನು ತೆರೆಯಲು ಕೇಂದ್ರದ ಅನುಮತಿ ಮಾತ್ರ ಸಾಕಿತ್ತು. ಆದರೆ ಇನ್ನು ಮುಂದೆ ರಾಜ್ಯ ಸರಕಾರದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗುತ್ತದೆ. […]

ಮೋದಿ ಅವರ ಬೆಂಗಳೂರು ಭಾಷಣ ಕೇವಲ ‘ಸಂಡೇ ಶೋ’: ಯು.ಟಿ.ಖಾದರ್

Monday, February 5th, 2018
u-t-kader

ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಕೇವಲ ‘ಸಂಡೇ ಶೋ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಿರೀಕ್ಷೆಯಂತೆ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಒಂದು ತಾಸಿನ ಸುಳ್ಳಿನ ಕಂತೆ ಹೇಳಿ ಮರಳಿದ್ದಾರೆ. ಅವರ ಆಗಮನದಿಂದ ರಾಜ್ಯ ಆಡಳಿತಕ್ಕೆ ಬಲ ಬರುತ್ತದೆಯೇ ಹೊರತು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. “ಅವರ ನಯವಾದ ಸುಳ್ಳನ್ನು ರಾಜ್ಯದ ಬುದ್ಧಿವಂತ […]

ಪಡಿತರ ವ್ಯವಸ್ಥೆ ಸಮರ್ಪಕಗೊಳಿಸಲು ವಿಜಿಲೆನ್ಸ್‌ ಸಮಿತಿ ರಚಿಸಲು ಪ್ರಸ್ತಾವನೆ: ಖಾದರ್‌

Saturday, February 3rd, 2018
U-T-Kader

ಮಂಗಳೂರು: ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸುವ ಸಲುವಾಗಿ ಪಂಚಾಯತ್‌‌ ರಾಜ್ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಜಿಲೆನ್ಸ್ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಮೂರು ಮಂದಿಯ ವಿಜಿಲೆನ್ಸ್ ಸಮಿತಿ ಕಾರ್ಯಾಚರಿಸುತ್ತಿತ್ತು. ಆದರೆ ನಾಗರಿಕರಿಗೆ ಪಡಿತರ ವಿತರಣೆಯಲ್ಲಿ ತೊಂದರೆ ಆಗಬಾರದು ಎಂಬ ದಿಸೆಯಿಂದ ಈ ಬದಲಾವಣೆ ತರಲಾಗುತ್ತಿದೆ ಎಂದರು. ಇನ್ನು ಮುಂದೆ ಪಡಿತರ ಅಂಗಡಿ ಹೊಂದಿರುವ ಆಯಾ ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ […]

ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಸಾ.ರಾ. ಅಬೂಬಕ್ಕರ್, ವಿನಯಾ ಪ್ರಸಾದ್ ಆಯ್ಕೆ

Saturday, January 20th, 2018
vinay-prasad

ಮಂಗಳೂರು: ಪ್ರತಿ ವರ್ಷ ನಡೆಯುವ ವೀರ ರಾಣಿ ಅಬ್ಬಕ್ಕ ಉತ್ಸವ ಈ ಬಾರಿ ಫೆಬ್ರವರಿ 3 ಮತ್ತು 4 ರಂದು ಮಂಗಳೂರಿನಲ್ಲಿ ನಡೆಯಲಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿ ಎಂದೇ ಪರಿಗಣಿಸಲಾಗುವ ಉಳ್ಳಾಲದ ಅಬ್ಬಕ್ಕ ರಾಣಿ ಸ್ಮರಣಾರ್ಥ ಈ ಉತ್ಸವ ಪ್ರತೀ ವರ್ಷ ಮಂಗಳೂರಿನಲ್ಲಿ ನಡೆಯುತ್ತದೆ. ನಗರ ಹೊರವಲಯದ ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ ಈ ಉತ್ಸವ ಜರುಗಲಿದೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ […]

‘ಕನ್ನಭಾಗ್ಯ ಎಂದು ಟೀಕಿಸಿದ ಬಿಜೆಪಿಯವರು ಈಗ ಅನ್ನಭಾಗ್ಯ ನಮ್ಮದೆನ್ನುತ್ತಿದ್ದಾರೆ’

Tuesday, January 9th, 2018
gujurat-bjp

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರೀಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದರು. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಾಗ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ. ಅದ್ಯಾಕೆ ಗುಜರಾತ್ ಸೇರಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ಅನ್ನಭಾಗ್ಯ ಈವರೆಗೆ ಜಾರಿಗೆ ತಂದಿಲ್ಲ. ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದೇ ಈಗ ಎಲ್ಲವೂ […]