Blog Archive

ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಪ್ರಾಧಿಕಾರ ಮುಂದಾಗಬೇಕು: ಖಾದರ್‌

Tuesday, August 30th, 2016
Khadar

ಮಂಗಳೂರು: ಪಂಪ್‌ವೆಲ್‌ನಿಂದ ತಲಪಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ಹಾಗೂ ವಿಸ್ತರಣೆ ಕಾಮಗಾರಿಯಿಂದ ವಾಹನಗಳು ಸಾಗಲು ಮಾತ್ರವಲ್ಲ, ಸುತ್ತಮುತ್ತಲಿನ ಜನರಿಗೂ ಸಹಾಯಕವಾಗಬೇಕು. ಹೆದ್ದಾರಿಗಾಗಿ ಸುಮಾರು 780 ಕೋ.ರೂ. ವ್ಯಯಿಸುತ್ತಿರುವಾಗ ಸಾರ್ವಜನಿಕರ ಹಿತದೃಷ್ಟಿಯಿಂದ 10 ಕೋ.ರೂ.ಗಳಲ್ಲಿ ಸರ್ವಿಸ್‌ ರಸ್ತೆ, ಪ್ರಮುಖ ಜಂಕ್ಷನ್‌ಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಪ್ರಾಧಿಕಾರ ಮುಂದಾಗಬೇಕು ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಯಿಂದ […]

ರಕ್ಷಣಾ ಕ್ರಮಗಳ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಸೂಚನೆ: ಸಂಸದ ನಳಿನ್‌

Tuesday, July 5th, 2016
Z-P Meeting

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವುಗೊಳಿಸಲು ತತ್‌ಕ್ಷಣ ಕಾರ್ಯಾಚರಣೆ ಪ್ರಾರಂಭಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಯಾವುದೇ ಅನಧಿಕೃತ ಕಟ್ಟಡಗಳು, ಅಂಗಡಿಗಳು ನಿರ್ಮಾಣವಾಗದಂತೆ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು ಹಾಗೂ ಈಗಾಗಲೇ ಇರುವ ಅಕ್ರಮ ಕಟ್ಟಡಗಳು, ಅಂಗಡಿಗಳನ್ನು ತೆರವುಗೊಳಿಸಲು […]

ವಾಹನ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ಮಹಿಳೆ ಮೃತ್ಯು

Tuesday, March 22nd, 2016
Mahile

ಬಂಟ್ವಾಳ; ಪಾಣೆಮಂಗಳೂರು ಗ್ರಾಮದ ಬೋಳಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಮಾ.14 ರಂದು ಅಪಘಾತ ನಡೆದಿದ್ದು, ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತದೇಹದ ಶವಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮಂಗಳೂರಿನ ಶವಾಗಾರದಲ್ಲಿರಿಸಲಾಗಿದೆ. ಮೃತ ಮಹಿಳೆಯ ವಾರೀಸುದಾರರಿದ್ದಲ್ಲಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ(08255-281111)ಯನ್ನು ಸಂಪರ್ಕಿಸುವಂತೆ ಸಂಚಾರಿ […]

ಪೊಲೀಸ್‌ ಉಪಸ್ಥಿತಿಯಲ್ಲಿ ಟೋಲ್‌ ಸಂಗ್ರಹ ಆರಂಭ

Monday, April 21st, 2014
Toll Gate

ಬಂಟ್ವಾಳ : ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್‌ ಗೇಟ್ ನಲ್ಲಿ ನಡೆದ ಹಲ್ಲೆಯ ಬಳಿಕ ನಿಲುಗಡೆ ಆಗಿದ್ದ ಟೋಲ್‌ ಸಂಗ್ರಹವನ್ನು ಎ. 20ರಂದು ಬೆಳಗ್ಗೆ 10 ಗಂಟೆಯಿಂದ ಪೊಲೀಸ್‌ ರಕ್ಷಣೆಯಲ್ಲಿ ಆರಂಭಿಸಲಾಗಿದೆ. ಶುಕ್ರವಾರ ರಾತ್ರಿ ಟೋಲ್‌ ಸಂಗ್ರಹ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹ ನಿಲುಗಡೆಗೊಂಡಿತ್ತು. ಮುಂಜಾನೆ ಊರಿನ ಜನತೆ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೊಲೀಸ್‌ ರಕ್ಷಣೆ ಒದಗಿಸಿಯಾದರೂ ಟೋಲ್‌ ಸಂಗ್ರಹ ನಡೆಯಬೇಕು ಎಂಬ […]

ಹಾಸನ-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ

Saturday, September 21st, 2013
press-meet

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಶಂಕರ್ ಭಟ್ ಅಗಲೀಕರಣಕ್ಕೆ ಕಲ್ಲಡ್ಕ ಪೇಟೆಯನ್ನೇ ಬಲಿಕೊಡುವ ಹುನ್ನಾರ ನಡೆಯುತ್ತಿದೆ. ಇದರಿಂಧಾಗಿ 30 ಅಂಗಡಿ ಮುಂಗಟ್ಟುಗಳು ಸರಿಸುಮಾರು 200 ಮನೆಗಳು ನಾಶವಾಗುವ ಭೀತಿಯಲ್ಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆ ನಿರ್ಮಾಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿಯವರ ಆದೇಶದಂತೆ ಕಲ್ಲಡ್ಕ ಪೇಟೆಯ ಇಕ್ಕೆಲಗಳಲ್ಲಿ 22.5 ಮೀಟರ್ ಸ್ವಾದೀನಪಡಿಸುವಂತೆ ಈಗಾ ಗಲೇ ಗುರುತು ಹಾಕಲಾಗಿದೆ. ಇದರಂತೆ ನಡೆದರೆ ಹೆದ್ದಾರಿ ಅಕ್ಕಪಕ್ಕದಲ್ಲಿರುವ […]

ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಂದಾಪುರ – ತಲಪಾಡಿ ನಡುವಿನ ಚತುಷ್ಪಥ ಕಾಮಗಾರಿ ಕುಂಠಿತ

Thursday, December 6th, 2012
Kundapur Talapady project

ಮಂಗಳೂರು :ಕುಂದಾಪುರ- ಸುರತ್ಕಲ್ ಮತ್ತು ನಂತೂರು- ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು 2010ರ ಸೆ.5ರಲ್ಲಿ ನವಯುಗ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದ್ದು 910 ದಿನ ಅಂದರೆ 2013ರ ಮಾ.5ಕ್ಕೆ ಮುಗಿಸುವ ಒಪ್ಪಂದವಾಗಿತ್ತು. ಅದರಂತೆ ಪ್ರಾರಂಭದಲ್ಲಿ ಕಾಮಗಾರಿ ಶರವೇಗದಲ್ಲಿ ನಡೆಯುವ ಮೂಲಕ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಗುತ್ತಿಗೆ ಪಡೆದಿರುವ ಕಂಪನಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಳೆಗಾಲದ ನಂತರ ಕಾಮಗಾರಿ ಪುನಾರಂಭಗೊಂಡಿಲ್ಲ. ತಿಂಗಳಿಗೆ ಕನಿಷ್ಠ 10 ಕಿ.ಮೀ. ಕಾಮಗಾರಿ ಮುಗಿಸಬೇಕು ಎಂಬ ಉದ್ದೇಶವಿದ್ದರೂ, ಈಗಿನ ಆರ್ಥಿಕ […]

ರಾಷ್ಟ್ರೀಯ ಹೆದ್ದಾರಿ : ಮಂದಗತಿಯ ಕಾಮಗಾರಿ, ಅಲ್ಲಲ್ಲಿ ಟೋಲ್‌ಗೇಟ್‌ – ಸಭೆ

Sunday, November 27th, 2011
DC Chennappa Gowda

ಮಂಗಳೂರು: ಸುರತ್ಕಲ್‌- ಬಿ.ಸಿ. ರೋಡ್‌ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ  ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಟೋಲ್‌ಗೇಟ್‌ನಿಂದ ಕನಿಷ್ಠ 60 ಕಿ. ಮೀ. ದೂರದಲ್ಲಿ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು. ಅಲ್ಲದೆ ಮಹಾನಗರ ಪಾಲಿಕೆಯ ಗಡಿಯಿಂದ 10 ಕಿ. ಮೀ. ಅನಂತರ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು ಎನ್ನುವ ನಿಯಮವಿದೆ. ಬ್ರಹ್ಮರಕೂಟ್ಲುವಿನಲ್ಲಿ ರಾ. ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಿಸಲಾಗಿದ್ದು, ಬೈಕಂಪಾಡಿ ಪರಿಸರದಲ್ಲಿ ಇನ್ನೊಂದು […]

ರಸ್ತೆ ಅಫಘಾತ ಮಂಜೇಶ್ವರ ಆನೆಕಲ್ಲು ನಿವಾಸಿ ಸಾವು

Tuesday, August 9th, 2011
Car Accident/ ರಸ್ತೆ ಅಫಘಾತ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್‌ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್‌ ರಝಾಕ್‌(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್‌ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ಟಿಪ್ಪರ್‌ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ […]