Blog Archive

ವಿಧಾನಸೌಧ ಮುಂದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ

Friday, February 21st, 2014
Vidhana-Soudha

ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ಕುಟುಂಬವೊಂದು ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧದ ಮುಂದೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಘಟನೆ ಶುಕ್ರವಾರ ನಡೆಯಿತು. ನಿವೃತ್ತ ಎಸಿಪಿ ಸುಬ್ಬಣ್ಣ ವಿರುದ್ಧ ಕಿರುಕುಳ ಆರೋಪ ಮಾಡಿರುವ ಕುಟುಂಬ, ಇಂದು ಬೆಳಗ್ಗೆ ವಿಕಾಸಸೌಧದ ಮುಂದೆ ಕುಟುಂಬದ ಆರು ಮಂದಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ಕಾರಿನಲ್ಲಿ ಕುಳಿತು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರ ಮಧ್ಯಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದರು. […]

ಕೃಷ್ಣಾ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

Tuesday, February 18th, 2014
Siddaramaiah

ಬೆಂಗಳೂರು: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2013 ನವೆಂಬರ್ 29 ರಂದು ಕೃಷ್ಣಾ ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮಂಗಳವಾರ ನಿರ್ಧರಿಸಿದೆ. ಹಿರಿಯ ವಕೀಲ ನಾರಿಮನ್ ಅವರ ಸಲಹೆಯಂತೆ ಕೃಷ್ಟಾ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡುವ ಅಗತ್ಯತೆ ಇದ್ದು, ಈ ಸಂಬಂಧ ಸ್ಪಷ್ಟಿಕರಣಕ್ಕಾಗಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪಿಗೆ […]

ಬಿಬಿಎಂಪಿಯಿಂದ ಸುಮಾರು 8 ಸಾವಿರ ಕೋಟಿ ಬಜೆಟ್ ಮಂಡನೆ

Monday, February 17th, 2014
mahanagara-palike

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2014-2015ನೇ ಸಾಲಿನ ಬಜೆಟ್‌ನ್ನು ಸೋಮವಾರ ಮಂಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಮಾರು 7779.51 ಕೋಟಿ ರುಪಾಯಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್ ಶಿವಪ್ರಸಾದ್ ಅವರು ಮಂಡಿಸಿದ್ದಾರೆ. ಬಿಬಿಎಂಪಿ ಬಜೆಟ್‌ನ ಪ್ರಮುಖ ಅಂಶಗಳು: ಬೆಂಗಳೂರಿನ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂಪಾಯಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ‘ಹಸಿರು’ ಪೊಲೀಸ್ ತಂಡ ರಚನೆ ಹೊಸ […]

ಅಧಿಕಾರಿಗಳು ಹಣ ಕೇಳಿದರೆ ನಮಗೆ ಹೇಳಿ: ಸಚಿವ ಜಾರ್ಜ್

Saturday, February 8th, 2014
Mr-George

ಬೆಂಗಳೂರುಃ ‘ಮೇಲಿನವರಿಗೆ ಕೊಡಬೇಕು’ ಎಂದು ಯಾವುದೇ ಇಲಾಖೆ ಅಧಿಕಾರಿಗಳು ಹಣ ಸುಲಿಗೆ ಮಾಡಲು ಯತ್ನಿಸಿದರೆ ಕೊಡಬೇಡಿ, ನಮಗೆ ತಿಳಿಸಿ… ಉದ್ಯಮಿಗಳು ಹಾಗೂ ನಾಗರಿಕರಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಮಾಡಿರುವ ಮನವಿ ಹಾಗೂ ಹೇಳಿರುವ ಕಿವಿಮಾತಿದು. ಕ್ಲಬ್, ಮನರಂಜನಾ ತಾಣಗಳಲ್ಲಿ ಮೇಲಿನವವರಿಗೆ ಹಣ ನೀಡಬೇಕು ಎಂದು ಸುಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಮಗೆ ಯಾರ ದುಡ್ಡು ಬೇಕಿಲ್ಲ, ಯಾರೂ ನಮಗೆ ದುಡ್ಡು ಕೊಡಬೇಕಿಲ್ಲ. ಅಂತಹ ಪದ್ಧತಿಯೂ ನಮ್ಮಲ್ಲಿಲ್ಲ. ಕೆಲವರು ನಮ್ಮ ಪಕ್ಕದಲ್ಲೇ ಇದ್ದು ಪೊಲೀಸರು, ಅಧಿಕಾರಿಗಳ […]

ಬೆಂವಿವಿ ವಿಭಜನೆ ಅಗತ್ಯ

Thursday, February 6th, 2014
siddaramaiah

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯ ಅತ್ಯಂತ ದೊಡ್ಡದಾಗಿರುವುದರಿಂದ ವಿಭಜಿಸುವುದು ಅವಶ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂವಿವಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಆಚರಣೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 3.5ಲಕ್ಷ ವಿದ್ಯಾರ್ಥಿಗಳು: ಈ ಹಿಂದೆ ವಿವಿ 32 ಕಾಲೇಜು ಹೊಂದಿತ್ತು. 16,300 ವಿದ್ಯಾರ್ಥಿಗಳಿದ್ದರು. ಇಂದು 3.5ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 650ಕ್ಕೂ ಹೆಚ್ಚಿನ ಕಾಲೇಜುಗಳು ಇಂದು ಸಂಯೋಜನೆ ಪಡೆದಿರುವುದರಿಂದ ವಿವಿ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ವಿವಿ […]

ದಾಖಲೆ ಬದಲು, ಭಾರಿ ಘಾಟು

Wednesday, February 5th, 2014
Caste-,-Income-Certificate

ಬೆಂಗಳೂರು: ಜಾತಿ, ಆದಾಯ ಪ್ರಮಾಣ ಪತ್ರ ಬದಲಿಸಿ ಸಿಇಟಿ ಸೀಟು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಲ್ಲಿಸಿದ ಮೂಲ ಅರ್ಜಿ ದಾಖಲೆಗಳನ್ನು ಏಳು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬದಲಿಸಿದ್ದಾರೆ! ಇವರಲ್ಲಿ ಸುಮಾರು 2100 ವಿದ್ಯಾರ್ಥಿಗಳು ವೈದ್ಯ, ದಂತವೈದ್ಯ, ಎಂಜಿನಿಯರಿಂಗ್ ಹಾಗೂ ಫಾರ್ಮಾ ಸೈನ್ಸ್ ಕೋರ್ಸ್‌ಗಳಲ್ಲಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಗಳೆಲ್ಲ ಅಕ್ರಮ ಹಾದಿ ತುಳಿದು ಸೀಟು ಪಡೆದಿದ್ದಾರೆ ಎಂದಲ್ಲ. ಆದರೆ ಮೂಲ ಅರ್ಜಿಯಲ್ಲಿನ ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಕೆಟಗರಿ ಬದಲಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಏಕೆಂದರೆ ಮಾರ್ಚ್ ತಿಂಗಳಲ್ಲಿ […]

ಬೆಂಗಳೂರಿನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ

Thursday, January 23rd, 2014
National-Flag

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಸ್ಟೀಲ್ ನಿಂದ ನಿರ್ಮಿತವಾದ 210 ಅಡಿಗಳ ಎತ್ತರದ ಅತೀ ದೊಡ್ಡ ದ್ವಜ ಸ್ತಂಭ. ಆ ಧ್ವಜ ಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 35 ಕೆಜಿ ತೂಕದ ರಾಷ್ಟ್ರಧ್ವಜವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇಂದು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಬಹುದೊಡ್ಡ ರಾಷ್ಟ್ರಧ್ವಜ ರಾರಾಜಿಸಿದೆ. ಈ ಸಮಾರಂಭದಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹಾಜರಿದ್ದು,ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. […]