Blog Archive

ಮೋದಿ ಅವರ ಬೆಂಗಳೂರು ಭಾಷಣ ಕೇವಲ ‘ಸಂಡೇ ಶೋ’: ಯು.ಟಿ.ಖಾದರ್

Monday, February 5th, 2018
u-t-kader

ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಕೇವಲ ‘ಸಂಡೇ ಶೋ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಿರೀಕ್ಷೆಯಂತೆ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಒಂದು ತಾಸಿನ ಸುಳ್ಳಿನ ಕಂತೆ ಹೇಳಿ ಮರಳಿದ್ದಾರೆ. ಅವರ ಆಗಮನದಿಂದ ರಾಜ್ಯ ಆಡಳಿತಕ್ಕೆ ಬಲ ಬರುತ್ತದೆಯೇ ಹೊರತು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. “ಅವರ ನಯವಾದ ಸುಳ್ಳನ್ನು ರಾಜ್ಯದ ಬುದ್ಧಿವಂತ […]

ಯುವಕರು ಪಕೋಡ ಮಾರಿ ಬದುಕ್ತಿರೋದೆ ಮೋದಿ ಮೇಕ್‌ ಇನ್‌ ಇಂಡಿಯಾ: ಹೆಚ್‌ಡಿಕೆ ವ್ಯಂಗ್ಯ

Tuesday, January 30th, 2018
kumarswamy

ವಿಜಯಪುರ: ನಮ್ಮ ಯುವಕರು ಪಕೋಡ ಮಾರಾಟ ಮಾಡಿ ಬದುಬೇಕಿದೆ. ಇದೇ ಪ್ರಧಾನಿ ಮೋದಿ‌ ಅವರ ಮೇಕ್ ಇನ್ ಇಂಡಿಯಾ ಎಂದು ಉದ್ಯೋಗ ಸೃಷ್ಟಿ ಕುರಿತ ಪ್ರಧಾನಿ ಮೋದಿ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ. ಸೋಮವಾರದಿಂದ ಐದು ‌ದಿನಗಳ ವಿಜಯಪುರ‌ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜತೆ ಮಾತಾನಡಿದರು. ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ್ದರು. ಪಕೋಡ ಮಾರಾಟ ಮಾಡುವುದೂ ಸಹ‌ ಮೇಕ್ […]

ಎಡಪಕ್ಷಗಳ ಜತೆ ಸೀಟು ಹೊಂದಾಣಿಕೆ ಜೆಡಿಎಸ್ ಸಿದ್ಧ: ದೇವೇಗೌಡ

Monday, January 22nd, 2018
JDS-Devegowda

ಮಂಗಳೂರು: ಒಂದು ವೇಳೆ ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಮೈತ್ರಿಗೆ ಮುಂದಾದರೆ ಅವರಿಗೆ ಕೆಲ ಸ್ಥಾನಗಳನ್ನು ಬಿಟ್ಟುಕೊಡಲು ಜೆಡಿಎಸ್ ಸಿದ್ಧವಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಫೆಬ್ರವರಿ ಮೂರನೇ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಒಂದು ವೇಳೆ ವಿಧಾನಸಭೆಯ ಚುನಾವಣೆಯ ನಂತರ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಯಾವುದೇ ಪಕ್ಷಗಳ ಜತೆ […]

ಕರ್ನಾಟಕ ಚುನಾವಣೆ: ದಿಲ್ಲಿಯಲ್ಲಿಂದು ಮೋದಿ, ಅಮಿತ್‌ ಶಾ ಭೇಟಿ

Thursday, January 11th, 2018
narendra-modi

ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಲಕ್ಷಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರುಗಳನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು ಸಹೋದ್ಯೋಗಿಗಳಿಗೆ ಭೋಜನ ಕೂಟವೊಂದನ್ನು ಏರ್ಪಡಿಸಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಈ ವರ್ಷ ಮೇಘಾಲಯ, ನಾಗಾಲ್ಯಾಂಡ್‌, ಮಿಜೋರಾ,, ಮಧ್ಯ ಪ್ರದೇಶ, ರಾಜಸ್ಥಾನ, ತ್ರಿಪುರ ಮತ್ತು ಛತ್ತೀಸ್‌ಗಢ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ಕಾರ್ಯ ತಂತ್ರ ರೂಪಿಸುವ […]

ಸ್ವಚ್ಛ ಭಾರತಕ್ಕೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ: ಹರೀಶ್‌

Thursday, January 11th, 2018
swachaa-bharath

ಮೂಲ್ಕಿ : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕಲ್ಪನೆಯು ಕನಸು ನಿಜವಾಗುವಲ್ಲಿ ದೇಶದ ಮಾಹಾನ್‌ ಯುವ ಶಕ್ತಿ ಅದರಲ್ಲೂ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಹಕಾರ ನೀಡಿದರೆ ಯಾವುದೇ ಶ್ರಮ ರಹಿತವಾಗಿ ಪರಿಪೂರ್ಣಗೊಳಿಸಲು ಸಾಧ್ಯವಾದೀತು ಎಂದು ಮೂಲ್ಕಿ ಸಮಾಜ ಸೇವಾಕರ್ತ ಹರೀಶ್‌ ಅಮೀನ್‌ ಹೇಳಿದರು. ಅವರು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ನಗರ ಸ್ವಚ್ಛತಾ ಅಂದೋಲನದಲ್ಲಿ ನಾವೇನು ಮಾಡಬಹುದು ಎಂಬ ವಿಚಾರದಲ್ಲಿ ಮಾತನಾಡಿದರು. ನಮ್ಮ ಪರಿಸರ ಮತ್ತು ಮುಂದಿನ ಪೀಳಿಗೆಯ ರಕ್ಷಣೆಯ ಕೆಲಸಕ್ಕಾಗಿ ನಾವು ನಮ್ಮ ಮನೆಯಿಂದ […]

ಕೇಂದ್ರದ ಅನುದಾನವನ್ನು ಸಿದ್ದರಾಮಯ್ಯ ನುಂಗಿದ್ದಾರೆ: ಅಮಿತ್ ಶಾ

Wednesday, January 10th, 2018
Amit-shah

ಚಿತ್ರದುರ್ಗ: ಕೇಂದ್ರದ ಮೋದಿ ಸರ್ಕಾರ ನೀಡಿದ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಕೋಟೆ ನಾಡು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಯೋಜನೆಗೊಂಡಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ಕರ್ನಾಟಕಕ್ಕೆ 2.19 ಲಕ್ಷ ಕೋಟಿ ರೂಪಾಯಿ ಅನುದಾನ ಬಂದಿದೆ ಆದರೆ ಸಿದ್ದರಾಮಯ್ಯ ಆ ಅನುದಾನವನ್ನು ದುರಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಕೇಂದ್ರದ ಲೆಕ್ಕ ಕೇಳುತ್ತಾರೆ, ನಾನಿಂದು ಬಂದಿರುವುದು ಅದೇ ಲೆಕ್ಕ ಹೇಳಲು ಎಂದ […]

ಭಾರತ ಆತಂಕದಲ್ಲಿದೆ…ಬಹ್ರೇನ್‌ನಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Tuesday, January 9th, 2018
rahul-gandhi

ಬಹ್ರೇನ್: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹ್ರೇನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಹ್ರೇನ್‌ನ ಮನಮ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ರಾಹುಲ್ ಭೇಟಿಯಾಗಿ ಸಂವಾದ ನಡೆಸಿದರು. ಬಹ್ರೇನ್ ಬಳಿಕ ಕಾಂಗ್ರೆಸ್ ಯುವರಾಜ ಕೆನಡಾ ಹಾಗೂ ಸಿಂಗಪೂರ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ಸರ್ಕಾರದ ಜಿಎಸ್‌ಟಿ ಹಾಗೂ ನೋಟ್ ಬ್ಯಾನ್ ನಿರ್ಧಾರದಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ದೂರಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ […]

ಮೋದಿ ಅಶ್ವಮೇಧಕ್ಕೆ ರೈತರು, ಕಾರ್ಮಿಕರಿಂದ ಬ್ರೇಕ್ : ಸೀತಾರಾಮ್ ಯೆಚೂರಿ

Wednesday, January 3rd, 2018
ashwameda

ಮಂಗಳೂರು: “ಹಮೇ ನೇತಾ ನಹಿ ನೀತಿ ಚಾಹಿಯೇ” ಎಂದು ‘ಸಿಪಿಐಎಂ’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದ್ದ ‘ಸಿಪಿಐಎಂ ರಾಜ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ಅನೇಕ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಈವರೆಗೆ ನಡೆದಿಲ್ಲ ಎಂದು ಅವರು ಆರೋಪಿಸಿದರು. ‘ಪನಾಮಾ ಪೇಪರ್ಸ್’ ಅವ್ಯವಹಾರ ಪ್ರಕರಣದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ […]

ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಗೆ ಮಖಭಂಗ

Thursday, November 24th, 2016
Modi

ಬೆಳಗಾವಿ: 500, 1000 ರೂಪಾಯಿ ನೋಟು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ ನಡೆಸಿ ಮಖಭಂಗಕ್ಕೀಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ. ರೇಷನ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಕಾಂಗ್ರೆಸ್ ಪಕ್ಷದವರು ಜನರನ್ನು ಕರೆತಂದಿದ್ದರು. ಆದರೆ ಸ್ಥಳಕ್ಕೆ ಬಂದಾಗ ನೋಟು ನಿಷೇಧಿಸಿದ್ದ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದಾಗ…ಜನರು ಗರಂ […]

ಮೋದಿಯವರನ್ನು ಪ್ರಧಾನಿ ಹುದ್ದೆಗೇರಲು ಅವಕಾಶ ಮಾಡಿಕೊಡಬಾರದು : ಪೂಜಾರಿ

Wednesday, July 17th, 2013
Poojary Press

ಮಂಗಳೂರು : ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಸಮರ್ಥ ವ್ಯಕ್ತಿಯಾಗಿದ್ದು, ಅವರ ಸಿದ್ದಾಂತಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿಯಾಗಿರದೆ ಎಲ್ಲಾ ಸಮುದಾಯಗಳಿಗೂ ಅಪಾಯಕಾರಿಯಾಗಿದೆ. ಮೋದಿ ತನ್ನ ಹುಸಿ ಮಾತುಗಳಿಂದ ದೇಶವನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ , ಮೋದಿ  ಓರ್ವ ‘ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಸಿದ್ದಾಂತಗಳಿಗೆ ಬಿಜೆಪಿಯ ಉನ್ನತ ಮಟ್ಟದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಅಡ್ವಾಣಿಯವರು ಕೂಡ […]