Blog Archive

ಮತ ಎಣಿಕೆಯ ಬೆನ್ನಲ್ಲೆ ವ್ಯಾಪಕ ಹಿಂಸಾಚಾರ; ದಿಕ್ಕೆಟ್ಟ ಜನತೆ

Thursday, May 19th, 2016
Kerala Counting

ಕುಂಬಳೆ: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಗುರುವಾರ ಜಿಲ್ಲೆಯಾದ್ಯಂತ ಹಲವೆಡೆ ವ್ಯಾಪಕ ಹಿಂಸಾಚಾರಗಳು ನಡೆದು ಜನ ಸಾಮಾನ್ಯರು ಅಕ್ಷರಶಃ ಕಂಗೆಟ್ಟು ಸಂಕಷ್ಟ ಅನುಭವಿಸಿದ ಸ್ಥಿತಿ ನಿರ್ಮಾಣವಾಯಿತು. ಮಂಜೇಶ್ವರ,ಕಾಸರಗೋಡು ಮತ್ತು ಉದುಮ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ನಡೆದ ಕಾಸರಗೋಡು ಸರಕಾರಿ ಕಾಲೇಜಿನ ಆವರಣದಲ್ಲಿ ಗುರುವಾರ ಬೆಳಿಗ್ಗೆಯೇ ಜಮಾಯಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ತೀವ್ರ ಕುತೂಹಲಿಗಳಾಗಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾತರಿಸುತ್ತಿದ್ದು ಕಂಡುಬಂತು.ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಮುಗಿಲುಮುಟ್ಟಿದ […]

ಭಾರತದ ಶಿಕ್ಷಣ ವ್ಯವಸ್ಥೆ ವಿಶ್ವದಲ್ಲಿಯೇ ಅಗ್ರಮಾನ್ಯ : ಹರ್ಷಾದ್ ವರ್ಕಾಡಿ

Saturday, January 30th, 2016
Education System

ಮಂಜೇಶ್ವರ: ಭಾರತದ ಶಿಕ್ಷಣ ವ್ಯವಸ್ಥೆ ವಿಶ್ವದಲ್ಲಿಯೇ ಮಾನ್ಯತೆಯನ್ನು ಪಡೆದಿದೆ. ವಿದೇಶಿಗರು ಇಲ್ಲಿ ಬಂದು ಶಿಕ್ಷಣ ಪಡೆಯುತ್ತಿದ್ದು, ಗುಣಮಟ್ಟದ ಹಾಗೂ ಶಿಸ್ತುಬದ್ಧ ಶಿಕ್ಷಣಕ್ಕೆ ಭಾರತ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ವ್ಯಾಸಂಗಗೈದವರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಜತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಕೇರಳ ಸರಕಾರದ ವಿನೂತನ ಯೋಜನೆಯಾದ ಮಕ್ಕಳ ಮೇಲಿರುವ ನಮ್ಮ ಜವಾಬ್ದಾರಿ ಎಂಬ ಯೋಜನೆಯ ಉದ್ಘಾಟಿಸಿ […]

ಕಾಸರಗೋಡು ಹೋಟೆಲ್ ಗಳಲ್ಲಿ ಹಳಸಿದ ಆಹಾರ, ಆರೋಗ್ಯ ಅಧಿಕಾರಿಗಳ ದಾಳಿ

Sunday, January 17th, 2016
hotel raid

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಮುನ್ಸಿಪಲ್ ಆರೋಗ್ಯ ವಿಭಾಗದ ಅಧಿಕೃತರು ಶುಕ್ರವಾರ ಮಿಂಚಿನ ಧಾಳಿ ನಡೆಸಿ ಹಲವೆಡೆಗಳಿಂದ ಹಳಸಿದ ಆಹಾರ ಹಾಗೂ ನೈರ್ಮಲ್ಯದ ತೀವ್ರ ಕೊರತೆಯನ್ನು ಕಂಡು ನೊಟೀಸ್ ಜಾರಿಗೊಳಿಸಿದರು. ಶುಕ್ರವಾರ ಬೆಳಿಗ್ಗೆ 7.30 ರಿಂದ 9ಗಂಟೆಯ ವರೆಗೆ ನಗರದ ಕರಂದಕ್ಕಾಡು,ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶ,ಹಳೆ ಬಸ್ ನಿಲ್ದಾಣ ಪರಿಸರ,ವಿದ್ಯಾನಗರ ಮೊದಲಾದ ಪ್ರದೇಶಗಳ ಹೋಟೇಲ್ ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದರು.10 ಹೋಟೆಲ್ ಗಳು ತೀವ್ರ ಕಳವಳಕಾರಿ ಕಳಪೆ ಗುಣಮಟ್ಟದ ನಿರ್ವಹಣೆಯನ್ನು ಗುರುತಿಸಿ ನೊಟೀಸ್ […]

ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಕಯ್ಯಾರರ ಹೆಸರಿಡಬೇಕು : ಡಾ.ಪಿ.ಶ್ರೀಕೃಷ್ಣ ಭಟ್

Saturday, January 9th, 2016
Govinda Pai memorial

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಆವರಣದಲ್ಲಿ ಅಸ್ತಿತ್ವಕ್ಕೆ ಬರಲಿರುವ ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಪ್ರಸಿದ್ಧ ಕವಿ, ವಿದ್ವಾಂಸ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳ ಹೆಸರಿಡಲು ಕಣ್ಣೂರು ವಿಶ್ವ ವಿದ್ಯಾನಿಲಯವು ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಭಾಷಾ ಅಧ್ಯಯನಾಂಗದ ಸಂಯೋಜಕರಾಗಿದ್ದ ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಶ್ರೀಕೃಷ್ಣ ಭಟ್ ಆಗ್ರಹಿಸಿದ್ದಾರೆ. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ‘ಕಯ್ಯಾರರ ಸಾಹಿತ್ಯ ಮರು ಓದು’ ಎನ್ನುವ ರಾಷ್ಟ್ರೀಯ […]

ನವವಿವಾಹಿತೆಯ ಶವ ಮನೆಯ ಬಾವಿಯಲ್ಲಿ ಪತ್ತೆ

Saturday, October 4th, 2014
Safida

ಕಾಸರಗೋಡು : ನವವಿವಾಹಿತೆಯ ಶವ ಕಾಸರಗೋಡು ಜಿಲ್ಲೆಯ ಅಂಬಲಟ್ಟರ ಎಂಬಲ್ಲಿ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ. ಮೃತ ವಿವಾಹಿತ ಯುವತಿಯನ್ನು ಸಫೀದಾ (19) ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸಫೀದಾ ನಾಪತ್ತೆಯಾಗಿದ್ದರು. ಮನೆಯವರು ಸಫೀದಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಅಗ್ನಿ ಶಾಮುಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡಿನಲ್ಲಿ ಮನೆಗೆ ಬೆಂಕಿ ಬಿದ್ದು ನಾಲ್ಕು ಮಂದಿ ಸಜೀವ ದಹನ

Tuesday, August 20th, 2013
Four members of family found burnt inside house at Kannur

ಕಾಸರಗೋಡು:  ಮನೆಗೆ ಬೆಂಕಿ ಬಿದ್ದ ಪರಿಣಾಮ ಸೋಮವಾರ ತಡರಾತ್ರಿ ನಿದ್ದೆಯಲ್ಲಿದ್ದ ನಾಲ್ಕು ಮಂದಿ ಸಜೀವ ದಹನಗೊಂಡ ದುರ್ಘಟನೆ ಕಣ್ಣೂರಿನ ಚೆರುಪುಳದಲ್ಲಿ ನಡೆದಿದೆ. ಸುಟ್ಟು ಕರಕಲಾಗಿರುವ ನಾಲ್ಕು ಶವಗಳು ಕೋಣೆಯಲ್ಲಿ ಪತ್ತೆಯಾಗಿದೆ ಈ ದುರ್ಘಟನೆಯಲ್ಲಿ ಸಾಜಿ (42), ಮತ್ತು  ಸಿಂಧು(31) ಮತ್ತು ಅವರ ಮಕ್ಕಳಾದ ಅಧೀರಾ (10), ಮತ್ತು  ಅತುಲ್ಯ(5) ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದಿತ್ತೇ ಅಥವಾ ಇದು ಸಾಮೂಹಿಕ ಆತ್ಮಹತ್ಯೆಯೇ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಎಲ್ಲಾ ಶವಗಳು ಒಂದೇ ಕೋಣೆಯಲ್ಲಿ ಸಿಕ್ಕಿರುವ ಕಾರಣ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದೆಂದು […]

ಕಾಸರಗೋಡು ಯುವಕನ ಇರಿದು ಕೊಲೆ, ಮೂವರು ವಶಕ್ಕೆ

Wednesday, July 10th, 2013
Sabith murder

ಕಾಸರಗೋಡು: ಮೀಪುಗುರಿಯ  ಜೆ.ಪಿ. ಕಾಲನಿ ಬಳಿ ಜುಲೈ 7ರಂದು ಬಟ್ಟೆ ಅಂಗಡಿ ಉದ್ಯೋಗಿ ಟಿ.ಎ. ಸಾಬಿತ್(19)ರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಭಾನುವಾರ ಬೆಳಗ್ಗೆ ಗೆಳೆಯ ರಶೀದ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಇರಿದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡ ಸಾಬೀತ್  ನನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಿದೆ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಅಕ್ಷಯ್ ಮತ್ತು […]

ಕಾಸರಗೋಡು ಯುವಕನ ಕೊಲೆ, 7ಮಂದಿಯ ವಿರುದ್ಧ ದೂರು ದಾಖಲು ; ಒಂದು ವಾರ ನಿಷೇಧಾಜ್ಞೆ ಜಾರಿ

Monday, July 8th, 2013
Kasaragod youth Murder

ಕಾಸರಗೋಡು : ಕಾಸರಗೋಡು ಸಮೀಪದ ವಿದ್ಯಾನಗರ, ನುಳ್ಳಿಪಾಡಿಯ ಜೆಪಿ ನಗರ ನಿವಾಸಿ ಟಿ.ಎ. ಸಾಬೀದ್(18) ತನ್ನ ಸ್ನೇಹಿತನ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಇರಿದು  ಕೊಲೆ ಮಾಡಿದ  ಘಟನೆ ಭಾನುವಾರ ನಡೆದಿದೆ. ಟಿ.ಎ. ಸಾಬೀದ್ ಕಾಸರಗೋಡು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ಬೆಳಗ್ಗೆ ಗೆಳೆಯ ರಶೀದ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ತಂಡವೊಂದು ಇರಿದು ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡ ಸಾಬೀದ್ ನನ್ನು ಸ್ಥಳೀಯರು ಕೂಡಲೇ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ […]

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ, ಸೆರೆ

Thursday, May 30th, 2013
CP Abdul Latif

ಕಾಸರಗೋಡು : ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಹೋಗುವಾಗ, ಪೊಲೀಸರ ಕಣ್ತಪ್ಪಿಸಿ ಪರಾರಿಯಾದಾತನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಚಟ್ಟಂಚಾಲ್ ತೆಕ್ಕಿಲ್ ನ ಸಿ.ಎ.ಅಬ್ದುಲ್ ಲತೀಫ್ (43) ಪರಾರಿಯಾದ ಆರೋಪಿಯಾಗಿದ್ದಾನೆ. ಕಳವು ಪ್ರಕರಣದ ಹಿನ್ನಲೆಯಲ್ಲಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಲತೀಫ್ ನನ್ನು ಪೊಲೀಸರು ಸೋಮವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ವಾಪಾಸ್ ಕಣ್ಣೂರಿಗೆ ಕರೆದುಕೊಂಡು ಹೋಗುವಾಗ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಈ ವೇಳೆ ಪರಾರಿಯಾದ […]

ಕಾಸರಗೋಡು : ಟಾಟಾ ಸುಮೋದ ಮೂಲಕ ಸಾಗಿಸುತ್ತಿದ್ದ ಗಾಂಜಾ ವಶ, ಇಬ್ಬರ ಸೆರೆ

Wednesday, May 15th, 2013
Ganja seize Kasargod

ಕಾಸರಗೋಡು : ಟಾಟಾ ಸುಮೋದ ಮೇಲ್ಬಾಗದಲ್ಲಿ ವಿಶೇಷ ರಂದ್ರ ನಿರ್ಮಿಸಿ ಆ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 52 ಕೆ.ಜಿ ಗಾಂಜಾ ಸಹಿತ ಇಬ್ಬರನ್ನು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕೋಟಯಂ ನಿವಾಸಿ ಕೆ.ಎ. ನವಾಝ್ (32), ನೀಲೇಶ್ವರ ಕುನ್ನುಂಗೈಯ ಸಿ.ಎಚ್.ಸಲೀಂ(32) ಬಂಧಿತ ಆರೋಪಿಗಳಾಗಿದ್ದಾರೆ. ಕಾಸರಗೋಡು ಡಿವೈಎಸ್ಪಿ  ಮೋಹನ್ ಚಂದ್ರನ್ ನಾಯರ್ ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬೇವಿಂಜೆ ಬಳಿ […]