Blog Archive

ಸರ್ಕಾರದಿಂದಲೂ ಜೀತಪದ್ಧತಿ: ಬಿ.ಎಂ.ಭಟ್ ಆರೋಪ

Friday, December 6th, 2013
akshara

ಪುತ್ತೂರು: ಸಿಐಟಿಯು ನೇತೃತ್ವದ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತರು ಗುರುವಾರ ಪುತ್ತೂರಿನ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯ ದರ್ಶಿ ಬಿ.ಎಂ. ಭಟ್  ಮಾತನಾಡಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಜೀತದಾಳು ಪದ್ಧತಿ ಅನುಸರಿ ಸುತ್ತಿರುವ ಹೋಟೆಲ್ ಇನ್ನಿತರ ಸಂಸ್ಥೆ ಗಳ ವಿರುದ್ಧ ಕನಿಷ್ಠ […]

ರೈತ ಸಂಘ ಒಕ್ಕೂಟದ ವತಿಯಿಂದ ಪ್ರತಿಭಟನೆ

Thursday, December 5th, 2013
WTO

ಮಂಗಳೂರು: ದಕ್ಷಿಣ ಭಾರತ ರೈತ ಸಂಘ ಒಕ್ಕೂಟದ ವತಿಯಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 33 ರಾಷ್ಟ್ರಗಳ 9ನೇ ಶೃಂಗಸಭೆಯಿಂದ ಭಾರತದ ಪ್ರತಿನಿಧಿಗಳು ಹೊರನಡೆಯಬೇಕು ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಮಂಗಳವಾರ ನವಮಂಗಳೂರು ಬಂದರು ಮಂಡಳಿ ಮುಂದೆ ಪ್ರತಿಭಟನೆ ನಡೆಯಿತು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ರೈತ ಪ್ರತಿನಿಧಿಗಳು ಹಾಗೂ ರಾಜ್ಯದ ಮಂಡ್ಯ, ತುಮಕೂರು, ಕೊಡಗು ಗಡಿಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿ 33 […]

ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ಪ್ರತಿಭಟನೆ

Friday, November 1st, 2013
sowjanya

ಬಂಟ್ವಾಳ:  ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಹಾಗೂ ಜಿಲ್ಲೆಯಲ್ಲಿ ನಡೆದ ಇತರ ಅಸಹಜ ಸಾವಿನ ಪ್ರಕರಣಗಳ ಸಿಬಿಐ ತನಿಖೆ ಆಗಲಿ ಎಂದು ಅ. 31ರಂದು ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಸಿದ್ದಕಟ್ಟೆಯ ಭಾರತಿ, ಅಡ್ಯಾರ್‌ನ ಅಕ್ಷತಾ, ಮೂಡಬಿದಿರೆಯ ಸುಚರಿತ ಸಹಿತ ಎಲ್ಲ ಅಸಹಜ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಮಾಯಕ ಮಹಿಳೆಯರ […]

ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರಿಂದ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

Friday, October 4th, 2013
nantoor

ಮಂಗಳೂರು : ಗುರುವಾರ ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರು ವರ್ಷಗಳು ಕಳೆದರೂ ತಾಂತ್ರಿಕ ದೋಷ ಪೂರಿತ ನಂತೂರು ವೃತ್ತದಲ್ಲಿನ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು . ಸ್ಥಳೀಯ ನಾಗರಿಕರಾದ ಎ.ಜಿ.ಶರ್ಮ ಅವರು, ಪ್ರತಿಭಟನೆಯನ್ನುದ್ದೇಶಿಸಿ ನಂತೂರು ವೃತ್ತದ ದುಸ್ಥಿತಿ ಕೇಳುವವರಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆಯ ಗಮನಕ್ಕೆ ತಂದರೂ ಈ ಬಗ್ಗೆ ಯಾರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಕೆಸರು ನೀರುಗಳು ರಸ್ತೆಯ […]

ಡಿವೈಎಫ್‌ಐ ವತಿಯಿಂದ ಪಡೀಲ್ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Tuesday, October 1st, 2013
DYFI-stage

ಮಂಗಳೂರು : ಪಡೀಲ್ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಬಜಾಲ್ ಪಡೀಲ್ ವಾಸಿಗಳ ಎರಡು ದಶಕಗಳ ಬೇಡಿಕೆ ಈಡೇರಿಸಲಾಗದ ಸರಕಾರ ಇರುವುದಾದರೂ ಏತಕ್ಕೆ , ಒಂದು ಗಂಟೆಯಲ್ಲಿ ನಾಲ್ಕೈದು ಬಾರಿ ಗೇಟ್ ಹಾಕುವುದರಿಂದ ಸಾರ್ವಜ ನಿಕರು ಪರದಾಡುವಂತಾಗಿದೆ. ಜನ ಪ್ರತಿನಿಧಿಗಳ ಸೋಮಾರಿತನವೇ ರೈಲ್ವೆ ಇಲಾಖೆಯ ನಿರ್ಲಕ್ಷಕ್ಕೆ ಕಾರಣ ಎಂದು ಅವರು ಆರೋಪಿಸಿದರು. ಪಡೀಲ್ ರೈಲ್ವೆ ಕೆಳ ಸೇತುವೆ ನಿರ್ಮಾಣದ ಬೇಡಿಕೆಯೂ ಸೇರಿದಂತೆ […]

ಸಿ‌ಐಟಿಯು ವತಿಯಿಂದ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಪ್ರದರ್ಶನ ಹಾಗೂ ಬೃಹತ್ ಮೆರವಣಿಗೆ

Saturday, September 21st, 2013
mangalore-protest

ಮಂಗಳೂರು :  ಕಾರ್ಮಿಕ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು  ಖಂಡಿಸಿ ಸಿ‌ಐಟಿಯು ವತಿಯಿಂದ, ಕನಿಷ್ಠ ಕೂಲಿ, ಮನೆ ನಿವೇಶನ ಎಲ್ಲಾ ಕುಟುಂಬಗಳಿಗೂ ರೇಷನ್, ಕಾರ್ಮಿಕ ಕಾನೂನಿನ ಕಟ್ಟುನಿಟ್ಟಿನ ಜಾರಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಶುಕ್ರವಾರ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ  ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಯಿತು. ಸಿ‌ಐಟಿಯು ಕೇಂದ್ರ ಸಮಿತಿ ಮುಖಂಡ ಬಿ.ಮಾಧವ ಪ್ರತಿಭಟನಕಾರರನ್ನು ಉದ್ದೇಶಿಸಿ  ಕಾರ್ಮಿಕರು ಬಿಪಿ‌ಎಲ್ ರೇಷನ್ ಕಾರ್ಡ್, ಸಂಬಳದಲ್ಲಿ ಹೆಚ್ಚಳ, ಸಾಮಾಜಿಕ ಭದ್ರತೆ, ಪಿಂಚಣಿ ಸೌಲಭ್ಯ ಹಾಗೂ ಎಫ್ ಡಿ‌ಐ […]

ಡಿ.ಸಿ. ಆಪೀಸ್ ಬಳಿ ಡಾ. ನರೇಂದ್ರ ದಾಬೊಲ್ಕರ್ ಹತ್ಯೆ ಖಂಡಿಸಿ ಪ್ರತಿಭಟನೆ

Tuesday, August 27th, 2013
Narenra Dabolkar Murder

ಮಂಗಳೂರು : ಡಾ. ನರೇಂದ್ರ ದಾಬೊಲ್ಕರ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮಂಗಳೂರಿನ ವಿಚಾರವಾದಿ ಸಂಘಟನೆಯ ವತಿಯಿಂದ ನಗರದ ಡಿ.ಸಿ. ಆಪೀಸ್ ಬಳಿ ಆಗಸ್ಟ್ 26ರಂದು ಪ್ರತಿಭಟನೆ ನಡೆಯಿತು. ವಿಚಾರವಾದಿ ಡಾ. ನರೇಂದ್ರ ದಾಬೊಲ್ಕರ್ ಅವರ ತೀವ್ರ ವಿಚಾರಗಳನ್ನು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಮುಗಿಸಿದ್ದಾರೆ, ಆದರೆ ಅವರ ವಿಚಾರಗಳನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ. ಜನರ ಮೂಡನಂಬಿಕೆಗಳು ತೊಲಗಬೇಕು, ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ವಿಚಾರವಾದಿ ಸಂಘಟನೆಯ ಮುಖಂಡರಾದ ನರೇಂದ್ರ ನಾಯಕ್ ತಿಳಿಸಿದರು. ನಮ್ಮ ಕೊನೆಯ ಶ್ವಾಸ ಇರುವವರೆಗೆ […]

ನಗರದ ಹೊಟೇಲ್‌ಗಳಲ್ಲಿ ವಿಪರೀತ ಬೆಲೆ ಏರಿಕೆ, ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ ಪ್ರತಿಭಟನೆ

Monday, August 26th, 2013
dyfi protest

ಮಂಗಳೂರು : ದ.ಕ  ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ  ಹೊಟೇಲ್‌ ಗಳಲ್ಲಿ ಆಹಾರ, ಪಾನೀಯಗಳ ಬೆಲೆಗಳ ಬೆಲೆ ನಿಯಂತ್ರಿಸಲು  ಏಕರೂಪದ ದರ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ  ನಗರದ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಹೊಟೇಲ್‌ಗಳ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಹೊಟೇಲ್, ಉಪಹಾರ ಗೃಹಗಳಲ್ಲಿ  ಆಹಾರ, ಪಾನೀಯಗಳ ಬೆಲೆ ವಿಪರೀತ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ಕಷ್ಟಪದುವಂತಾಗಿದೆ. ಜಿಲ್ಲಾಡಳಿತ  ಹೊಟೇಲ್, ಬೆಲೆಗಳನ್ನು  ನಿಯಂತ್ರಣ ಮಾಡಿ , ಏಕರೂಪದ […]

ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶ ವಿರೋಧಿಸಿ ವಿವಿಧ ರಿಕ್ಷಾ ಸಂಘಟನೆಗಳಿಂದ ಪ್ರತಿಭಟನೆ

Friday, July 12th, 2013
auto drivers protest

ಮಂಗಳೂರು: ಗ್ರಾಮಾಂತರ ರಿಕ್ಷಾಗಳು ಮಂಗಳೂರು ನಗರವನ್ನು ಪ್ರವೇಶಿಸುವುದನ್ನು ವಿರೋಧಿಸಿ ಮಂಗಳೂರಿನ ವಿವಿಧ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜ್ಯೊತಿ ವೃತ್ತ ದಿಂದ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ದ.ಕ ಜಿಲ್ಲಾ ಆಟೋರಿಕ್ಷಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅಲಿಹಸನ್ ಮಾತನಾಡಿ,  ಗ್ರಾಮಾಂತರ ರಿಕ್ಷಾಗಳು ಕಾನೂನು ಬಾಹಿರವಾಗಿ ನಗರದೊಳಗೆ ಪ್ರವೇಶಿಸಿ ಬಾಡಿಗೆ ಮಾಡುತ್ತಿದೆ.  ಗ್ರಾಮದಲ್ಲಿ ಸುಮಾರು 20  ಸಾವಿರ ರಿಕ್ಷಾಗಳು ಒಡಾಡುತ್ತಿವೆ. […]

ರಾಜ್ಯ ಕಾಂಗ್ರೆಸ್ ಸರಕಾರ ಕಳ್ಳಕಾಕರ ಸರಕಾರವಾಗಿದೆ : ನಳಿನ್ ಕುಮಾರ್

Friday, July 12th, 2013
Bantwal BJP

ಬಂಟ್ವಾಳ: ರಾಜ್ಯ ಸರಕಾರದ ಹೊರಡಿಸಿರುವ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ನೀತಿಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ವತಿಯಿಂದ ಗುರುವಾರ ಬಿ.ಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಅಧಿಕಾರ ಬಂದು ಎರಡು ತಿಂಗಳಲ್ಲಿಯೇ  ಪಂಚಾಯತ್ ಸದಸ್ಯರ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿರುವ ಕ್ರಮ ಸರಿಯಲ್ಲ, ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರುವ ಕರಾಳ ಮಸೂದೆಯನ್ನು ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವುದು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಕಿತ್ತುಗೊಳ್ಳುವ ಪ್ರಜಾತಂತ್ರ ವಿರೋಧಿ ನಿಲುವಾಗಿದೆ ಎಂದು ಸಂಸದ […]