Blog Archive

ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು, ಬೆಂಕಿ ಹಚ್ಚಬಾರದು : ಸಚಿವ ರೈ

Monday, January 2nd, 2017
rai

ಮಂಗಳೂರು, : ಕೊಣಾಜೆಯಲ್ಲಿ  ‘ದ.ಕ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ’ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜವಾಬ್ದಾರಿಯುತ ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು. ಚುನಾಯಿತ ಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ಸಲ್ಲದು. ಈ ಬಗ್ಗೆ ಗೃಹ ಸಚಿವರಲ್ಲಿ ಸಂಪರ್ಕದಲ್ಲಿದ್ದು, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಅವರು ಬೆಂಕಿ ಹಚ್ಚುವಾಗ ಅದನ್ನು ಶಮನ ಮಾಡುವ ಶಕ್ತಿ ಸರಕಾರಕ್ಕಿದೆ ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆ ಮುಂದೆ […]

ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ: ರಮಾನಾಥ ರೈ

Saturday, December 10th, 2016
ramanatha-rai

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ. ಆ ಬಳಿಕವೂ ಯೋಜನೆ ಕೈಬಿಡಲು ಸಾಧ್ಯವಾಗದಿದ್ದಲ್ಲಿ ನಾನು ರಾಜಕೀಯದಿಂದಲೇ ಹೊರಬರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ವಿರುದ್ಧ ವಿಧಾನಸಭಾ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕೈಬಿಡುವಂತೆ ನಿಲುವಳಿ ಮಂಡಿಸಲಿ. ಆ ಬಳಿಕ ಮುಖ್ಯಮಂತ್ರಿಯವರ ಕೈಕಾಲು ಹಿಡಿದಾದರೂ ಯೋಜನೆಯನ್ನು ನಿಲ್ಲಿಸುತ್ತೇನೆ. ಇಲ್ಲದಿದ್ದಲ್ಲಿ […]

ಸಮುದ್ರದ ಅಂಚಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವ ಬಗ್ಗೆ ಸಭೆ

Friday, December 2nd, 2016
Ramanathha rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮುದ್ರದ ಅಂಚಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ವಾಸಿಸಲು ಹಾಗೂ ಇತರ ಉದ್ದೇಶಗಳಿಗೆ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಸಲಾಯಿತು. ಸಮುದ್ರದ ಅಂಚಿನಲ್ಲಿ ವಾಸಿಸುತ್ತಿರುವ ಕುಟುಂಬಧಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಿ.ಆರ್‌.ಝಡ್‌. ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಪ್ರಸ್ತುತ ಕೆಲವು ಸಮಸ್ಯೆಗಳಿವೆ. ಕಂದಾಯ ಸಚಿವ […]

ಟಿಪ್ಪು ಸುಲ್ತಾನ್‌ ಜನ್ಮದಿನ ಆಚರಣೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮ ಆಗಿದೆ: ರಮಾನಾಥ ರೈ

Friday, November 11th, 2016
Tippu Jayanthi

ಮಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ ಸೇನಾನಿ ಟಿಪ್ಪು ಸುಲ್ತಾನ್‌ ಅವರ ಜನ್ಮದಿನ ಆಚರಣೆ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮವೂ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ದೇಶದ ಇತಿಹಾಸವನ್ನು ಅವಲೋಕಿಸಿದಾಗ ಬ್ರಿಟಿಷರ […]

ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ರಮಾನಾಥ ರೈ ಶಿಲಾನ್ಯಾಸ

Tuesday, November 8th, 2016
Urwa market

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗರದ ಉರ್ವ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಇಂದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪಾಲಿಕೆಯು ಉತ್ತಮವಾಗಿ ಆಡಳಿತವನ್ನು ನಿರ್ವಹಿಸುತ್ತಿದೆ. ಪಾಲಿಕೆಯ ವಾರ್ಡ್‌ಗಳಲ್ಲಿ ಸದಸ್ಯರು ಇನ್ನಷ್ಟು ಸಮರ್ಪಕವಾಗಿ ಕೆಲಸಗಳನ್ನು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಹರಿನಾಥ್, ಮಾರುಕಟ್ಟೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು. ಉಪ ಮೇಯರ್ […]

ಕಾಂಗ್ರೆಸ್‌, ಮಹಿಳೆಯರಿಗೆ ಹೆಚ್ಚು ಗೌರವ ಹಾಗೂ ಮೀಸಲಾತಿ ಒದಗಿಸಿದೆ: ರಮಾನಾಥ ರೈ

Monday, November 7th, 2016
empower-women

ಮಂಗಳೂರು: ಮಹಿಳೆಯರ ಸಶಕ್ತೀಕರಣಕ್ಕೆ ಕಾಂಗ್ರೆಸ್‌ ಪಕ್ಷ ಮಾಡಿದಷ್ಟು ಕೆಲಸ ಇತರ ಯಾವುದೇ ಪಕ್ಷಗಳು ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಂಗಳೂರು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದ ಶಾಂತಿ ನಿಲಯದಲ್ಲಿ ಆಯೋಜಿಸಲಾದ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಇತಿಹಾಸವುಳ್ಳ ಪಕ್ಷ. ಎಲ್ಲ ಜಾತಿ, ಧರ್ಮಗಳ ಜನರು ಈ ಪಕ್ಷದಲ್ಲಿದ್ದು, ಮಹಿಳೆಯರಿಗೆ ಹೆಚ್ಚು ಗೌರವ […]

ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಅಡೆತಡೆಯನ್ನು ನಿವಾರಿಸಲು ತ್ವರಿತ ಕ್ರಮ: ರಮಾನಾಥ ರೈ

Saturday, October 15th, 2016
stadium-in-benjanapadavu

ಮಂಗಳೂರು: ನಗರ ಹೊರವಲಯದ ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಅಡೆತಡೆಯನ್ನು ನಿವಾರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ನೂತನ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ಪಡೀಲಿನಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದಕ್ಕೆ ಬೇಕಾದ 40 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಚೆನ್ನೈನ ಹಸಿರು ಪೀಠಕ್ಕೆ ಪರಿಸರದ ಹೆಸರಿನಲ್ಲಿ ಕೆಲವರು ದೂರು […]

ಕಣಚೂರು ಸಂಸ್ಥೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯಲಿದೆ: ರಮಾನಾಥ ರೈ

Wednesday, September 28th, 2016
kanachur-institution

ಉಳ್ಳಾಲ: ಕಣಚೂರು ಮೋನು ಅವರು ಶ್ರಮಜೀವಿಯಾಗಿ, ಯಶಸ್ವಿ ಉದ್ಯಮಿಯಾಗಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಕಾಲಿರಿಸಿ ಇದೀಗ ವೈದ್ಯಕೀಯ ಕಾಲೇಜು ಸ್ಥಾಪಿಸಿರುವುದು ಅವರಲ್ಲಿರುವ ಕ್ರಿಯಾಶೀಲತೆ ಮತ್ತು ಕಾರ್ಯತತ್ಪರತೆಗೆ ಸಾಕ್ಷಿ ಎಂದು ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು. ದೇರಳಕಟ್ಟೆಯ ನಾಟೆಕಲ್‌ನ ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ನ ಕ್ಯಾಂಪಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ಯಾರಾ ಮೆಡಿಕಲ್‌ ಕೋರ್ಸ್‌, ನರ್ಸಿಂಗ್‌ ಹಾಗೂ ಫಿಸಿಯೋಥೆರಪಿ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯ ಬದುಕಿನಲ್ಲಿ ಶ್ರೀಮಂತಿಕೆ, ಆಸ್ತಿ, ಸಂಪತ್ತು ಕ್ಷಣಿಕ. […]

ನಾಟಿ ವೈದ್ಯೆ ದೇಯಿ ಬೈದೇತಿ ಹೆಸರಿನಲ್ಲಿ ರಾಜ್ಯದ ಪ್ರಸಿದ್ಧ ಮತ್ತು ಮಾದರಿ ಔಷಧ ಕೇಂದ್ರ ನಿರ್ಮಾಣ: ರೈ

Wednesday, September 14th, 2016
padumale

ಪುತ್ತೂರು : ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಹುಟ್ಟೂರು ಪಡುಮಲೆ ಕ್ಷೇತ್ರದಲ್ಲಿ ತಾಯಿ, ನಾಟಿ ವೈದ್ಯೆ ದೇಯಿ ಬೈದೇತಿ ಹೆಸರಿನಲ್ಲಿ 9 ಎಕ್ರೆ ವಿಸ್ತಾರ ಪ್ರದೇಶದ ಔಷಧ ವನ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಇನ್ನಷ್ಟು ಆವಶ್ಯಕತೆಗಳನ್ನು ಸೇರಿಸಿಕೊಂಡು ರಾಜ್ಯದ ಪ್ರಸಿದ್ಧ ಮತ್ತು ಮಾದರಿ ಔಷಧ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ರಾಜ್ಯ ಅರಣ್ಯ ಇಲಾಖೆ ವತಿಯಿಂದ 54 ಲಕ್ಷ […]

ಓಣಂ ಹಬ್ಬವು ಸರ್ವಧರ್ಮೀಯರನ್ನು ಒಗ್ಗೂಡಿಸುವ ಹಬ್ಬವಾಗಿದೆ: ರಮಾನಾಥ ರೈ

Wednesday, September 14th, 2016
ramanatha-rai

ಮಂಗಳೂರು: ಹಬ್ಬಗಳು ಸರ್ವ ಧರ್ಮಗಳ ಪ್ರೀತಿಯ, ಭಕ್ತಿಯ ನೆಲೆಯಾಗಿ ರೂಪಿಸುವ ಮಹಾನ್‌ ಕಾರ್ಯ ನಮ್ಮಿಂದ ನಡೆಯಬೇಕು. ಓಣಂ ಹಬ್ಬವು ಸರ್ವಧರ್ಮೀಯರನ್ನು ಒಗ್ಗೂಡಿಸುವ ಹಬ್ಬವಾಗಿದೆ; ದೇಶಕ್ಕೆ ಕೇರಳ ರಾಜ್ಯವು ಮಾದರಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಕೇರಳ ಸಮಾಜಂ ವತಿಯಿಂದ ನಗರದ ಮಿಲಾಗ್ರಿಸ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ “ಓಣಂ ಸಂಭ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು. ಕೇರಳದಲ್ಲಿ ಒಂದು ಭಾಷೆಯು ಎಲ್ಲ ವಿಭಾಗದ ಜನರನ್ನು ಒಟ್ಟುಗೂಡಿಸುತ್ತದೆ. ಇದು ದೇವರು ಅವರಿಗೆ ಒದಗಿಸಿರುವ ಆಶೀರ್ವಾದ. […]