ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಮ್ ಉಚ್ಚಿಲ್ ವಜಾ

Wednesday, April 6th, 2022
Rahim-Uchil

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಮ್ ಉಚ್ಚಿಲ್ ಅವರನ್ನು ಪದಚ್ಯುತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಏಪ್ರಿಲ್ 5 ರ ಮಂಗಳವಾರದಂದು ವಜಾ ಆದೇಶವನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಉಚ್ಚಿಲ್, “ವಜಾಗೊಳಿಸಿದ ಕಾರಣದ ಬಗ್ಗೆ ನನಗೆ ತಿಳಿದಿಲ್ಲ. ಆದೇಶ ಬಂದ ನಂತರವೇ ನನ್ನನ್ನು ವಜಾ ಮಾಡಿರುವ ವಿಚಾರ ತಿಳಿಯಿತು. ಎರಡು ಬಾರಿ ಅಧ್ಯಕ್ಷನಾಗಿ ಉಳಿಯಲು ಪಕ್ಷ […]

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಸಚಿವ ವಿ. ಸುನಿಲ್‌ಕುಮಾರ್ ಭೇಟಿ

Wednesday, January 5th, 2022
Tulu-Academy

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ರಾಜ್ಯ ಸಚಿವರಾದ ವಿ. ಸುನಿಲ್‌ಕುಮಾರ್ ಜ. 5ರಂದು ಭೇಟಿ ನೀಡಿ ತುಳು ಭವನದ ಅಪೂರ್ಣ ಕಾಮಗಾರಿ ಹಾಗೂ ವಿವಿಧ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅವರು ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿ, ತುಳು ಭವನ ಸಂಪೂರ್ಣಗೊಳ್ಳಲು ಮಂಜೂರಾಗಿರುವ ರೂ. 3.6 ಕೋಟಿ ಸಹಿತ ಹೆಚ್ಚುವರಿಯಾಗಿ 2 ಕೋ. ರೂ.ವಿನ ಅಗತ್ಯವಿದೆ. ಇದು ಸಂಪೂರ್ಣ […]

ಕಾರ್ಕಳ ದ ವಿವಿಧೆಡೆ ಲಕ್ಷ ಕಂಠಗಳ ಗೀತ ಗಾಯನ

Thursday, October 28th, 2021
Geetha Gayana

ಕಾರ್ಕಳ : ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ವಿ ಸುನಿಲ್ ಕುಮಾರ್‌ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ವಿನೂತನ, ವಿಭಿನ್ನವಾದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು ಕಾರ್ಕಳ ದಾದ್ಯಂತ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಮತ್ತು ಮಲ್ಪೆ ಕಡಲ ತೀರ ಸೇರಿದಂತೆ […]

ಸಚಿವ ಸುನಿಲ್ ಕುಮಾರ್ ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಕ್ಕೆ ಭೇಟಿ

Monday, August 9th, 2021
Sunil V

ಬಂಟ್ವಾಳ : ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸತನವನ್ನು ತರುವ ಮೂಲಕ ರಾಜ್ಯದ ಜನತೆಗೆ ಒಳಿತನ್ನು ಮಾಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ಶುಕ್ರವಾರ ತಾನು ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ರಾಜರಾಜೇಶ್ವರಿ ಭಕ್ತನಾದ ತಾನು ಇಂದು ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ಎಲ್ಲರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದರು. ಬಂಟ್ವಾಳ ಶಾಸಕ […]

ವೃತ್ತಿಯಲ್ಲಿ ನೈಪುಣ್ಯತೆ ಪಡೆಯಿರಿ : ಶಾಸಕ ಅಪ್ಪಚ್ಚುರಂಜನ್ ಸಲಹೆ

Wednesday, February 5th, 2020
appacchu

ಮಡಿಕೇರಿ : ಸವಿತಾ ಮಹರ್ಷಿಯ ತತ್ವಾದರ್ಶಗಳನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ನೈಪುಣ್ಯತೆ ಪಡೆಯುವುದರ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಿವಿಮಾತು ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ದೇವರಾಜ ಅರಸು ಭವನ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಆಚರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್ಥಿಕವಾಗಿ ಸಬಲರಾದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ದುಡಿದಿದ್ದನ್ನು ಕುಟುಂಬಕ್ಕೆ ಮತ್ತು ಸಮಾಜದ ಏಳ್ಗೆಗೆ […]

ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮಾರ್ಗದರ್ಶಿ : ಎಸ್. ಪ್ರದೀಪ ಕುಮಾರ ಕಲ್ಕೂರ

Wednesday, November 27th, 2019
Akka Mahadevi

ಮಂಗಳೂರು : ಅಕ್ಕಮಹಾದೇವಿಯವರು ಬರೆದ ವಚನಗಳ ಸಾರ ನಮ್ಮ ಸಾತ್ವಿಕಜೀವನಕ್ಕೆ ಮಾರ್ಗದರ್ಶಿಯಾಗಿದೆ ಎಂದು ದ.ಕ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಅವರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಏರ್ಪಡಿಸಿದ್ದ 5ನೇ ವರ್ಷದ ವಚನ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಚನ ಸಾರಗಳನ್ನು ನಾವು ಅರಿತುಕೊಳ್ಳುವುದಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸಿ ಹೇಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ […]

ಇಂದಿನಿಂದ ವೀರರಾಣಿ ಅಬ್ಬಕ್ಕ ಉತ್ಸವ -2018

Saturday, February 3rd, 2018
veerarani-abakka

ಮಂಗಳೂರು: ದ.ಕ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವಗಳ ಸಮಿತಿಗಳ ಆಶ್ರಯದಲ್ಲಿ ಕೊಲ್ಯ ನಾಗಮಂಡಲ ಮೈದಾನದಲ್ಲಿ ನಡೆಯುವ ‘ವೀರರಾಣಿ ಅಬ್ಬಕ್ಕ ಉತ್ಸವ – 2018’ಕ್ಕೆ ಸೋಮೇಶ್ವರ ಗ್ರಾಮ ಸಂಪೂರ್ಣ ಸಿದ್ಧಗೊಂಡಿದ್ದು, ಫೆ. 3, 4ರಂದು ವಿಜೃಂಭಣೆಯಿಂದ ನಡೆಯಲಿದೆ. ರಾ.ಹೆ. 66ರ ಬಳಿ ಇರುವ ವೇದಿಕೆಗೆ ಚಪ್ಪರ ನಿರ್ಮಾಣ ಕಾರ್ಯ ಶುಕ್ರವಾರ ಸಂಜೆ ವೇಳೆ ಮುಗಿದಿದೆ. ತಲಪಾಡಿ ಕಡೆಯಿಂದ ಕೆ.ಸಿ.ರೋಡ್‌ ಬಳಿ, ತೊಕ್ಕೊಟ್ಟು ಅಂಬಿಕಾ ರಸ್ತೆ ಸೇರಿದಂತೆ ಸುಮಾರು 7 ಕಡೆ ಸ್ವಾಗತ ಕಮಾನುಗಳನ್ನು […]

ಶ್ರೀಕೃಷ್ಣನ ಗೀತೋಪದೇಶ ಅರ್ಥ ಮಾಡಿಕೊಂಡರೆ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ : ರಮಾನಾಥ ರೈ

Monday, August 14th, 2017
Krishna janmashtami

ಮಂಗಳೂರು : ದ.ಕ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಜಂಟಿಯಾಗಿ ಸರಕಾರದ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆಯನ್ನು ನಗರ ಪುರಭವನದ ಮಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಉದ್ಘಾಟನೆ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಯಾದವ ಸಮುದಾಯದಲ್ಲಿ ಹುಟ್ಟಿ ಜಗತ್ತಿಗೆ ಗೀತೆಯ ಮೂಲಕ ಸಂದೇಶ ನೀಡಿರುವ ಶ್ರೀ ಕೃಷ್ಣ ಸಾಮಾಜಿಕ ನ್ಯಾಯದ ಸಂಕೇತ ಎಂದು ಅಭಿಪ್ರಾಯಿಸಿದ್ದಾರೆ. ಶೋಷಣೆ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ, ಅನುಷ್ಠಾನಕ್ಕೆ ಹಿಂಜರಿಯುತ್ತಾರೆ, ಶ್ರೀಕೃಷ್ಣನ ಗೀತೋಪದೇಶ […]

ಧರ್ಮತ್ತಡ್ಕ ಶಾಲೆಯಲ್ಲಿ ಮೊಳಗಿದ ಗೆಜ್ಜೆನಾದ

Tuesday, July 26th, 2016
Dharmatthadka-school

ಕುಂಬಳೆ: ಆಧುನಿಕ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಎಳವೆಯಿಂದಲೇ ಕಲಿಸುವ ಅಗತ್ಯವಿದೆ.ಬಾಲ್ಯದಲ್ಲಿ ನಾವು ನೀಡುವ ಶಿಕ್ಷಣ ಮುಂದಿನ ಬದುಕನ್ನು ಗಟ್ಟಿಗೊಳಿಸುತ್ತದೆ,ಜೊತೆಗೆ ಸಾಂಸ್ಕೃತಿಕ ಬೇರುಗಳ ಉಳಿಯುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯೆಂದು ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮ್ಮೆಕ್ಕಳ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಸರಗೋಡಿನ ಸಾಮಾಜಿಕ -ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಸರಣಿ ಸಂಗೀತ ನೃತ್ಯೋತ್ಸವ ಗೆಜ್ಜೆ-ನಾದ ಕಾರ್ಯಕ್ರಮವನ್ನು ಸೋಮವಾರ ಸಂಜೆ ಧರ್ಮತ್ತಡ್ಕ ಶ್ರೀ […]

ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಚಾಲನೆ

Saturday, December 14th, 2013
Kudla kala Mela

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರಾವಳಿ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಡಿ14. ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಯುಕ್ತ ರು ಕಲಾವಿದ ಮಾತಿನಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಕಲೆಯ ಮೂಲಕ ವ್ಯಕ್ತ ಪಡಿಸುತ್ತಾನೆ. ಮನುಷ್ಯ ನೆಮ್ಮದಿಯನ್ನು ಕಾಣಲು ಕಲಾ ಪ್ರಕಾರಗಳನ್ನು ತಿಳಿಯಬೇಕು. ಇಂದಿನ […]