Blog Archive

ಪ್ರವಾದಿ ಮುಹಮ್ಮದ್ ಮುಸ್ತಫ ರ ಜನ್ಮದಿನ: ಕರಾವಳಿಯಾದ್ಯಂತ ಮೀಲಾದುನ್ನಬಿ ಸಂಭ್ರಮಾಚರಣೆ

Tuesday, November 20th, 2018
eid-milad

ಮಂಗಳೂರು: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ.)ರವರ ಜನ್ಮದಿನದ ಪ್ರಯುಕ್ತ ಇಂದು ಕರಾವಳಿಯಾದ್ಯಂತ ಬೆಳಗ್ಗೆಯಿಂದಲೇ ಮೀಲಾದುನ್ನಬಿ ಸಂಭ್ರಮಾಚರಣೆ ಆರಂಭಗೊಂಡಿದ್ದು, ಪ್ರವಾದಿ ಮುಹಮ್ಮದ್ (ಸ)ರ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕರಾವಳಿಯ ವಿವಿಧೆಡೆಗಳಲ್ಲಿ ಮುಸ್ಲಿಂ ಭಾಂದವರು ಮೀಲಾದುನ್ನಬಿಯನ್ನು ಆಚರಿಸಿದರು. ನಗರದ ಬಂದರ್‌ನ ಪ್ರಮುಖ ರಸ್ತೆಗಳಲ್ಲಿ ವಿವಿಧ ಮದ್ರಸಗಳ ವಿದ್ಯಾರ್ಥಿಗಳು ಬೆಳಗ್ಗೆ ಆಕರ್ಷಕ ಮೀಲಾದ್ ರ್ಯಾಲಿ ನಡೆಸಿದರು. ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದ್ರಸದ ವತಿಯಿಂದ ಮೀಲಾದ್ ಜಾಥಾ ನಡೆಯಿತು. ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಧ್ವಜಾರೋಹಣಗೈದರು. […]

ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ: ಸಿಎಂ ಕುಮಾರಸ್ವಾಮಿ

Tuesday, October 30th, 2018
byndoor

ಉಡುಪಿ: ಉಡುಪಿಯ ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಸಂದರ್ಭ ಅವರು ಮಾತನಾಡಿದರು. ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ-ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ. ಭಾವನಾತ್ಮಕ ವಿಚಾರವನ್ನು ಜನರ ಮುಂದಿಡುತ್ತ ಬಿಜೆಪಿ ಚುನಾವಣೆ ನಡೆಸುತ್ತೆ ಎಂದು ಸಿಎಂ ಗುಡುಗಿದರು. ನಾನು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಸಂದರ್ಭ ವೈಯುಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡಲ್ಲ. ಕುಮಾರ್ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ. ನಾನು ಈ ಬಗ್ಗೆ ಮಾತನಾಡಲ್ಲ. ಎಲ್ಲವನ್ನು ಎದುರಿಸುವ ಸಾಮರ್ಥ್ಯವನ್ನು ದೇವರು ಕೊಟ್ಟಿದ್ದಾನೆ […]

ತೀವ್ರಗೊಂಡ ಮರಳಿಗಾಗಿ ಹೋರಾಟ: ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ

Thursday, October 25th, 2018
shobha-karandlaje

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮರಳಿಗಾಗಿ ಹೋರಾಟ ತೀವ್ರಗೊಂಡಿದೆ. ಟಿಪ್ಪರ್ ಮಾಲೀಕರು ಜಿಲ್ಲೆಯಾದ್ಯಂತ ಹೋರಾಟ ಆರಂಭಿಸಿದ್ದು, ಅಕ್ಟೋಬರ್ 25 ರಿಂದ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಲಿದೆ. ಮಳೆಗಾಲದಿಂದಲೇ ಮರಳುಗಾರಿಗೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕಾರ್ಮಿಕರು ಮತ್ತು ಟಿಪ್ಪರ್ ಚಾಲಕರು ಬೀದಿಗೆ ಬಿದ್ದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಬಂದು ಮರಳುಗಾರಿಕೆ ಆರಂಭಿಸುವ ಭರವಸೆ ಕೊಟ್ಟರೂ ಅಧಿಕಾರಿಗಳು ಅವಕಾಶ ನೀಡಿಲ್ಲ ಎನ್ನುವುದು ಇವರ ಆಕ್ರೋಶವಾಗಿದೆ. ಹೋದಲ್ಲಿ ಬಂದಲ್ಲಿ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. […]

ಮಂಗಳೂರಿನ ದಸರಾ ವೈಭವ: ಕರಾವಳಿಯಾದ್ಯಂತ ಹುಲಿ ವೇಷಧಾರಿಗಳ ಭರ್ಜರಿ ಕುಣಿತ

Friday, October 19th, 2018
hulivesha

ಮಂಗಳೂರು: ದಸರಾ ಎಂದರೆ ನಮಗೆ ನೆನಪಿಗೆ ಬರುವುದು ನಾನಾ ಬಗೆಯ ವೇಷಗಳು. ಅದರಲ್ಲೂ ದಸರಾ ಹುಲಿಗಳೆಂದರೆ ನೋಡುಗರಿಗೆ ಅದರಲ್ಲೂ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ದಿವಂಗತ ಬಿ ಕೃಷ್ಣಪ್ಪ 1928 ರಲ್ಲಿ ಬಜಿಲಕೇರಿಯಲ್ಲಿ ಆರಂಭಿಸಿದ ಹುಲಿ ವೇಷಕ್ಕೆ ಈಗ 90 ವರ್ಷ . ಅವರ ನಂತರ ಅವರ ಮಗ ಕಮಲಾಕ್ಷ ಕೇಸರಿ ಪ್ರೆಂಡ್ಸ್ ಹೆಸರಿನಲ್ಲಿ ಸುಮಾರು ಐವತ್ತರಿಂದ ಅರವತ್ತು ಜನ ಸದಸ್ಯರೊಂದಿಗೆ ತಂಡವನ್ನು ನಡೆಸಿಕೊಂಡು ಬಂದಿದ್ದಾರೆ. ಹುಲಿವೇಷದಿಂದಲೇ ಮಂಗಳೂರಿನ ದಸರಾ ವೈಭವ ಕಳೆಗಟ್ಟುತ್ತದೆ ಎಂದರೆ ತಪ್ಪಿಲ್ಲ. ನವರಾತ್ರಿಯ ಆರಂಭದಿಂದ ಮೊದಲ್ಗೊಂಡು ತಾಸೆ , ಡೋಲು […]

ಅಮೇರಿಕಾದ ‘ಅಕ್ಕ’ದಲ್ಲಿ ಕರಾವಳಿ ಕಂಪು

Friday, September 21st, 2018
akka

ಮಂಗಳೂರು: ದಿನಾಂಕ 01-09-2018ರಂದು ಅಮೇರಿಕಾದ ಡಲ್ಲಾಸ್‌ನಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಎಸ್. ಎಸ್. ನಾಯಕ್‌ ಇವರು ಮಂಗಳೂರಿನ ಪ್ರತಿನಿಧಿಯಾಗಿ ಭಾಗವಹಿಸಿದರು. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ, ಹಾಸ್ಯ, ಜೀವನ ಪ್ರೀತಿ ಮುಂತಾದವುಗಳ ಕುರಿತು ಅಭಿರುಚಿ ಹೊಂದಿರುವ ಇವರು ಅಮೇರಿಕಾದಲ್ಲಿ ನೆರೆದಿರುವ ಕನ್ನಡಿ ಗಜನಸ್ತೋಮವನ್ನುತಮ್ಮ ಹಾಸ್ಯ ಚಟಾಕಿಗಳ ಮೂಲಕ ನಗೆಗಡಲಲ್ಲಿ ತೇಲಿಸಿದರು. ಅಮೇರಿಕಾದಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಭಾಷಾ ಬೆಳವಣಿಗೆಯ ಕಾರ್ಯಕ್ರಮಗಳು ಸದಾ ಮುಂದುವರಿಯಲಿ ಹಾಗೂ ಮುಂದೆ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ […]

ಉಡುಪಿ ಕಡಲ ಕಿನಾರೆಯಲ್ಲಿ ಅಲೆಗಳ ಜೊತೆಗೆ ಬರುತ್ತಿವೆ ರಾಶಿ ರಾಶಿ ಮೀನುಗಳು!

Wednesday, September 5th, 2018
beach

ಉಡುಪಿ: ರಾಜ್ಯದಲ್ಲಿ ಸುರಿದಿದ್ದ ಮಹಾಮಳೆಗೆ ಕೊಡಗಿನಲ್ಲಿ ಭಾರೀ ಹಾನಿಯಾಗಿದ್ದರ ಜೊತೆಗೆ ಅದರ ಕಾವು ಕರಾವಳಿಗೂ ತಟ್ಟಿ ಮೀನು ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಹಲವಾರು ದಿನಗಳ ಕಾಲ ಸಮುದ್ರಕ್ಕೆ ಮೀನಿನ ದೋಣಿಗಳು ಇಳಿಯದೇ ಇದ್ದಿದ್ದರಿಂದ ಕರಾವಳಿಯ ಮೀನು ಪ್ರಿಯರಿಗೆ ಮೀನಿನ ಕೊರತೆ ಉಂಟಾಗಿತ್ತು. ಆದರೆ ಇದೀಗ ಉಡುಪಿಯ ಹೆಜ ಮಾಡಿಯ ಕೋಡಿಯಲ್ಲಿ ಮೀನಿನ ಸುಗ್ಗಿ ಶುರುವಾಗಿದೆ. ಹೌದು, ಉಡುಪಿಯ ಹೆಜಮಾಡಿ ಕೋಡಿ ಕಡಲ ಕಿನಾರೆಯಲ್ಲಿ ಮೀನುಗಳು ಅಲೆಗಳ ಜೊತೆಗೆ ಸಮುದ್ರ ಕಿನಾರೆಗೆ ಅಪ್ಪಳಿಸಿಸುತ್ತಿವೆ. ಈ ರೀತಿಯಾಗಿ ಗೋಲಯಿ […]

ಕಡಲಬ್ಬರಕ್ಕೆ ಆಳ ಸಮುದ್ರದಲ್ಲೇ ಲಂಗರು ಹಾಕಿದ ಮೀನುಗಾರಿಕಾ ದೋಣಿಗಳು..!

Friday, August 10th, 2018
fisheries

ಮಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನೆರೆಯ ಪರಿಸ್ಥತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಡಲು ರೌದ್ರವತಾರ ತಾಳಿದೆ. ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಗಳು ತಟಕ್ಕೆ ಹಿಂದಿರುಗಲಾಗದೇ ಆಳ ಸಮುದ್ರದಲ್ಲೇ ಲಂಗರುಹಾಕಿವೆ. ಸರಿಸುಮಾರು 800 ಮೀನುಗಾರಿಕಾ ದೋಣಿಗಳು ಮಂಗಳೂರು ಮೀನುಗಾರಿಕಾ ಬಂದರಿನಿಂದ ಅಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದವು. ಆದರೆ ಈ ಪೈಕಿ ಕೆಲವು ಮೀನುಗಾರಿಕಾ […]

ಕರಾವಳಿಯಲ್ಲಿ ವರುಣನ ಅಬ್ಬರ..ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ!

Friday, August 10th, 2018
karavali

ಮಂಗಳೂರು: ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಹಾಗು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದೆ . ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಮನೆ ಹಾಗು ಅಪಾರ ಪ್ರಮಾಣದಲ್ಲಿ ಕೃಷಿ, ತೋಟ ನಾಶವಾಗಿದೆ. ಬೆಟ್ಟದ ಮೇಲಿಂದ ಹರಿದು ಬರುವ […]

‘ದಗಲ್‌ಬಾಜಿಲು’ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ..!

Friday, July 20th, 2018
dagalbajilu

ಮಂಗಳೂರು: ಅನುಗ್ರಹ ಫಿಲಂಸ್ ಲಾಂಛನದಲ್ಲಿ ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ ಎ.ಎಸ್. ಪ್ರಶಾಂತ್ ನಿರ್ದೇಶನದ ದಗಲ್‌ಬಾಜಿಲು ತುಳುಹಾಸ್ಯ ಸಿನಿಮಾ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಶಕ್ತಿನಗರ ಸಾನಿಧ್ಯ ವಸತಿ ಶಾಲೆಯ ವಿಶೇಷ ಮಕ್ಕಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ದೇವದಾಸ್ ಕಾಪಿಕಾಡ್, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ಕಿಶೋರ್ ಡಿ. ಶೆಟ್ಟಿ , ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ದ.ಕ.ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ […]

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆ.. ಭಾರೀ ಮಳೆಗೆ ಅಡಿಕೆ ತೋಟಗಳು ಧ್ವಂಸ!

Tuesday, July 17th, 2018
karavali

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಾದ್ಯಂತ ಮಳೆ ಎಡೆಬಿಡದೆ ಸುರಿಯಲಾರಂಭಿಸಿದೆ. ಮಳೆಯ ಜೊತೆ ಜೊತೆಗೆ ಭಾರೀ ಗಾಳಿಯೂ ಬೀಸುತ್ತಿರುವ ಪರಿಣಾಮ ಹಲವು ಅಡಿಕೆ ತೋಟಗಳು ಧ್ವಂಸಗೊಂಡಿವೆ. ಭಾರೀ ಗಾಳಿ ಮಳೆಯಿಂದಾಗಿ ಸಾವಿರಾರು ಅಡಿಕೆ ಮರಗಳು ತುಂಡಾಗಿ‌ ಬಿದ್ದಿದ್ದು, ಅಡಿಕೆ ಕೃಷಿಕರಿಗೆ ಭಾರೀ ನಷ್ಟ ಉಂಟಾಗಿದೆ. ಅದಲ್ಲದೆ ಭಾರೀ ಗಾಳಿ ಬೀಸುತ್ತಿರುವ ಕಾರಣ ಬೆಳ್ಳಾರೆ ಮೊದಲಾದ ಕಡೆಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ‌ ಬಿದ್ದು ವಿದ್ಯುತ್ […]