Blog Archive

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಕುದ್ರೋಳಿಯಲ್ಲಿ ವಿಶೇಷ ಪೂಜೆ

Monday, November 7th, 2016
pray-for-kudroli

ಮಂಗಳೂರು: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಹಿರಿಯ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗೋಕರ್ಣನಾಥ ದೇವರಿಗೆ ಅಭಿಷೇಕ ಹಾಗೂ ಕೃಷ್ಣ ದೇವರಿಗೆ ವಿಶೇಷ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಹಿಲರಿ ಕ್ಲಿಂಟನ್‌ಗೆ ಇಡೀ ಜಗತ್ತನ್ನು ಕಾಪಾಡುವ ಶಕ್ತಿ ಇದೆ. ಆಕೆ ಪಾಕಿಸ್ತಾನ ಪರವಾದ ನಿಲುವನ್ನು ಹೊಂದಿಲ್ಲ. ಭಾರತ ಪರವಾಗಿಯೇ ಇದ್ದಾರೆ. ಅಮೆರಿಕಾದಲ್ಲಿ ಇರುವ ಅನಿವಾಸಿ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ

Wednesday, October 12th, 2016
mangalore-dasara

ಮಂಗಳೂರು: ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸಿ- ವಿಜೃಂಭಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ ಭಾರೀ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ, ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಸಂಜೆ ಆರಂಭವಾಗಿ ಬುಧವಾರ ಮುಂಜಾನೆ ಸಂಪನ್ನಗೊಂಡಿತು. ಶ್ರೀ ಕ್ಷೇತ್ರದಿಂದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ವಿಗ್ರಹಗಳ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ಕುದ್ರೋಳಿಯಿಂದ ಹೊರಟು ಕಂಬಾರ […]

ಕುದ್ರೋಳಿಯಲ್ಲಿ ಪಾರಿವಾಳ ಸ್ಪರ್ಧಾ ಕೂಟ

Wednesday, October 29th, 2014
Pigeon games held

ಮಂಗಳೂರಿನ: ನಿರಂತರ ಮೂರು ತಿಂಗಳುಗಳ ಕಾಲ ನಡೆದ 2014-15ನೆ ಸಾಲಿನ ಮಂಗಳೂರು ಚಾಂಪಿಯನ್ ಪಾರಿವಾಳ ಸ್ಪರ್ಧಾ ಕೂಟದ ಪ್ರಶಸ್ತಿ ವಿತರಣಾ ಸಮಾರಂಭವು ಸತತ 8ನೆ ಬಾರಿಗೆ ಕುದ್ರೋಳಿಯಲ್ಲಿ ಅಕ್ಟೋಬರ್ 26ರಂದು ನಡೆಯಿತು. ಕುದ್ರೋಳಿ ವಾರ್ಡ್ ಕಾರ್ಪೋರೇಟರ್ ಅಬ್ದುಲ್ ಅಝೀರೆ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪಾರಿವಾಳ ತಜ್ಞ ಕಷ್ಣ ಕುಳಾಲ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಪಾರಿವಾಳ ಸ್ಪರ್ಧೆಗಳು ಕಳೆದ 68 ವರ್ಷಗಳಿಂದ ನಡೆಯುತ್ತಿವೆ. ಆದಾಗ್ಯೂ ಜಿಲ್ಲೆಯಲ್ಲಿ ಪಾರಿವಾಳ ಸ್ಪರ್ಧಾಳುಗಳ ಯಾವುದೇ ವೇದಿಕೆ ಅಥವಾ ಸಮಿತಿ ಇಲ್ಲ. […]

ಪ್ರಿಯಕರನ ಜೊತೆಗೂಡಿ ಪತ್ನಿಯಿಂದ ಗಂಡನ ಕೊಲೆ

Friday, June 28th, 2013
Scrape Merchant Murder

ಪಣಂಬೂರು : ಕುದ್ರೋಳಿಯ ಗುಜರಿ ವ್ಯಾಪಾರಿ ಅಬ್ದುಲ್‌ ರಶೀದ್‌ ನಿಗೂಢ ಸಾವು ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದ್ದು  ಪೊಲೀಸರು ಪತ್ನಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರಶೀದ್‌ ಪತ್ನಿ ನಸೀಮಾ (36),ಆಕೆಯ ಪ್ರಿಯಕರ ಮಹಮ್ಮದ್‌ ಇಮ್ರಾನ್‌(32) ಹಾಗೂ ನಸೀಮಾಳ ತಂಗಿಯ ಗಂಡ ಸಲೀಂ (38) ಬಂಧಿತರು. ಆರೋಪಿಗಳಾದ ಅಬ್ದುಲ್ಲಾ ಯಾನೆ ಕಾಲಿಯಾ ಮತ್ತು ಮುಕ್ರಿ ಸಿದ್ದಿಕ್‌ ಪರಾರಿಯಾಗಿದ್ದಾರೆ. ಜೂನ್‌ 21ರಂದು ತಣ್ಣೀರುಬಾವಿ ಬಳಿ ಅಬ್ದುಲ್‌ ರಶೀದ್‌ ಅವರ ಮೃತ ದೇಹ ಪತ್ತೆಯಾಗಿತ್ತು. ಸೆಂಟ್ರಲ್‌ ಮಾರ್ಕೆಟ್‌ ಬಳಿ […]

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Tuesday, May 14th, 2013
Shivraj Kumar

ಮಂಗಳೂರು : ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಕುಂಟುಂಬ ಸಮೇತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ  ನಗರಕ್ಕೆ ಆಗಮಿಸಿದ್ದ ಅವರ ಜೊತೆಯಲ್ಲಿ ಪತ್ನಿ ಗೀತಾ, ಹಿರಿಯ ನಟ ಚಂದ್ರಶೇಖರ್, ಗುರುದತ್ ಹಾಗು ಇತರರು ಆಗಮಿಸಿದ್ದರು. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ರವರು ಶಿವರಾಜ್ ಕುಮಾರ್ […]

ಕುದ್ರೋಳಿಯಲ್ಲಿ ಜನವರಿ 1 ರಂದು ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ

Wednesday, December 26th, 2012
Urulu Seve

ಮಂಗಳೂರು :ಜನವರಿ 1 ರಂದು ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ನಡೆಸುವುದಲ್ಲದೆ ಇದಾದ ನಂತರ ಪತಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ ಮಾಡಲಾಗುವುದು ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ ದೇವರು ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವಾಗ ಮನುಷ್ಯರಾದ ನಾವೇಕೆ ತಾರತಮ್ಯ […]

ಮಂಗಳೂರಿಗೆ ಎರಡು ನೂತನ ಉಪ ವಿದ್ಯತ್ ಕೇಂದ್ರಗಳ ಸಮರ್ಪಣೆ

Thursday, January 27th, 2011
ನೂತನ ಉಪ ವಿದ್ಯತ್ ಕೇಂದ್ರಗಳ ಉದ್ಘಾಟನೆ

ಮಂಗಳೂರು: ಮಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಗರದ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ 33/11 ಕೆ.ವಿ ವಿತರಣಾ ಕೇಂದ್ರಗಳ ಚಾಲನೆಗೊಲಿಸುವ ಮೂಲಕ ಶೋಭಾಕರಂದ್ಲಾಜೆ ಉದ್ಘಾಟನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ ನೂತನವಾಗಿ 33/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಗಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಸ್ಥಾಪಿತವಾಗಿರುವ ಈ ನೂತನ ವಿದ್ಯುತ್ ಉಪಕೇಂದ್ರಗಳಾದ ಕುದ್ರೋಳಿಯಲ್ಲಿ 5 ಎಮ್. ವಿ. ಎ ಸಾಮಥ್ರ್ಯದ ಎರಡು […]