ಕರ್ನಾಟಕ ತುಳು, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳಿಗೆ ಅಧ್ಯಕ್ಷರುಗಳ ನೇಮಕ

Saturday, March 16th, 2024
Karnataka-Academy

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ 19ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿ ಕರ್ನಾಟಕ ಸರಕಾರದ ಸಚಿವಾಲಯ ಅಧೀನ ಕಾರ್ಯದರ್ಶಿ ಮುಂದಿನ ಮೂರು ವರ್ಷಗಳ ಅವಧಿಗೆ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ಪತ್ರಕರ್ತ ತಾರಾನಾಥ ಗಟ್ಟಿ ಕಾಪಿಕಾಡ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್ ಶೆಟ್ಟಿ, ಶೈಲೇಶ್ ಬಿನ್ […]

ವಿಭಜನೆಯಿಲ್ಲದ ಭಜನೆಯ ಕಂಠಗಳು ಎಲ್ಲೆಡೆ ಮೊಳಗಲಿ : ಶ್ರೀ ಮೋಹನದಾಸ ಪರಮಸಿಂಹ ಸ್ವಾಮೀಜಿ

Sunday, November 7th, 2021
Bhajane

ಮಂಗಳೂರು : ಭಜನೆ ಎಂದರೆ ಕೇವಲ ಹಾಡುವುದೆಂದಷ್ಟೇ ಅರ್ಥವಲ್ಲ. ಭಕ್ತಿ, ಜಪ, ನೆನವರಿಕೆ ಮಾಡುತ್ತಾ ಭಗವಂತನಿಗೆ ಹತ್ತಿರವಾಗುವುದು. ಆಧ್ಯಾತ್ಮಕ ಪ್ರಭಾವಲಯವನ್ನು ವೃದ್ಧಿಸಿಕೊಳ್ಳುವುದೇ ಆಗಿದೆ. ಇಂದು ಕೊರೋನದಂತಹ ಕಷ್ಟ ಕಾಲದಲ್ಲಿ ನಮ್ಮ ಪೀಳಿಗೆ ಸನಾತನೀಯವಾದ ಧರ್ಮದ ಸಾರವನ್ನು ಮರೆತಿವೆ. ಅವರನ್ನು ಪುನಃ ಧಾರ್ಮಿಕ ಹಳಿಗೆ ತಂದು ಈ ರಾಷ್ಟ್ರವನ್ನು ಪ್ರೀತಿಸುವ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕಿದೆ. ಅಲ್ಲಲ್ಲಿ ಅಲ್ಲಲ್ಲಿ ಇಂತಹಾ ಜನಜಾಗೃತಿಯ ಕಾರ್ಯ ಆಗಬೇಕು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಜನಮನವನ್ನು ತಲುಪಿದೆ. […]

‘ಸರಯೂ ಸಪ್ತಾಹೊ – ತುಳುವೆರೆ ಏಳಾಟೊ ಉದ್ಘಾಟನೆ

Tuesday, August 10th, 2021
Tulu Yelata

ಮಂಗಳೂರು : ‘ಸರಯೂ ಸಪ್ತಾಹ – ತುಳುವೆರೆ ಏಳಾಟೊ’ ಎಂಬ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಪ್ರಥಮ ಮಕ್ಕಳ ಮೇಳದ ಸಪ್ತಾಹ ಇಲ್ಲಿ ದ್ವಿತೀಯ ವರ್ಷದಲ್ಲಿ ನಡೆಯುತ್ತಿದೆ. ಅನೇಕ ಹಿರಿ-ಕಿರಿಯ ಕಲಾವಿದರೊಂದಿಗೆ ಸಂಪನ್ನವಾಗುತ್ತಿರುವ ಈ ಸರಣಿ ಯಶಸ್ಸಾಗಲಿ. ತುಳುವಿಗೆ ಕಾಯಕವನ್ನು ಮಾಡುವ ಸಂಸ್ಥೆ ಇದಾಗಿದ್ದು, ಇದರ ಸರ್ವಾಂಗೀಣ ಬೆಳವಣೆಗೆಯಾಗಿ ಎಲ್ಲರಿಗೂ ಶ್ರೇಯಸ್ಸಾಗಲಿ. ತುಳುಭವನವನ್ನು ಇಂತಹಾ ಕಾರ್ಯಕ್ರಮಗಳಿಗಾಗಿ ಸದಾ ತೆರೆದಿರುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ರವರು ‘ಸಿರಿಚಾವಡಿ’ ಯಲ್ಲಿ ಸಪ್ತಾಹವನ್ನು ಉದ್ಘಾಟಿಸುತ್ತಾ, […]

ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಸಚಿವ ಅರವಿಂದ ಲಿಂಬಾವಳಿ

Tuesday, July 20th, 2021
Aravinda Limbavali

ಬೆಂಗಳೂರು  : ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್‌ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್‌ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯವು ವೇಗ ಪಡೆಯಲಿದೆ ಎಂದು ಹೇಳಿರುವ ಅವರು ಸುಮಾರು ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಹಲವು […]

ತುಳು ಅಕಾಡೆಮಿಯಲ್ಲಿ ಸ್ಥಾನ ಮಾನ ನೀಡದಿದ್ದರೆ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು : ಕತ್ತಲ್ ಸಾರ್

Monday, November 2nd, 2020
Kattalsar

ಮಂಗಳೂರು: ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ನನ್ನ ಆಡಿಯೋ ಮಾಡಿಕೊಂಡು  ವಯ್ಯಕ್ತಿಕ ಹಗೆ ಸಾಧಿಸಿದ್ದಾರೆ ಎಂದು  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ. ಜಿ.ವಿ.ಎಸ್.ಉಳ್ಳಾಲ್ ಮತ್ತು ಅವರ ಪತ್ನಿ ವಿದ್ಯಾಶ್ರೀ ಉಲ್ಲಾಳ್ ತುಳು ಅಕಾಡೆಮಿಯಲ್ಲಿ ಅಧಿಕೃತ ಸ್ಥಾನ ಮಾನಕ್ಕಾಗಿ ಬೇಡಿಕೆ ಇಟ್ಟಿದ್ದರು ಅದು ಸಾಧ್ಯವಿಲ್ಲಾ ಎಂದಿದ್ದಕ್ಕೆ ನಿಮ್ಮ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ  ಹಾಕಿದ್ದರು ಎಂದು  ಕತ್ತಲ್ ಸಾರ್ ಹೇಳಿದ್ದಾರೆ. ವಿದ್ಯಾಶ್ರೀ ಉಲ್ಲಾಳ್ ಕಾಂಗೆಸ್ಸ್ ಪಕ್ಷದವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ತುಳು ಅಕಾಡೆಮಿಯಲ್ಲಿ ಸದಸ್ಯರಾಗಿದ್ದರು.  ಜಿ.ವಿ.ಎಸ್.ಉಳ್ಳಾಲ್  ನನ್ನನ್ನು ಶ್ವಾನ ವನ್ನು […]

ಬೆಂಗಳೂರು : ತುಳು ಭಾಷೆ ಭಾರತೀಯ ಸಂಸ್ಕೃತಿಯ ಪ್ರತಿರೂಪ; ಶಶಿಧರ್ ಶೆಟ್ಟಿ

Monday, November 18th, 2019
Tulu-Bhashe

ಬೆಂಗಳೂರು : ತುಳು ಭಾಷೆ ಎನ್ನುವುದು ಕೇವಲ ಒಂದು ಭಾಷೆಯಲ್ಲ, ಅದು ಭಾರತೀಯ ಸಂಸ್ಕೃತಿಯ ಪ್ರತಿರೂಪ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ್ ಶೆಟ್ಟಿ ಹೇಳಿದ್ದಾರೆ. ರವಿವಾರ ನಗರದ ನಯನ ಸಭಾಂಗಣದಲ್ಲಿ ಬೆಂಗಳೂರು ತುಳುವರೆಂಕುಲು ಹಮ್ಮಿಕೊಂಡಿದ್ದ ಬಲಿಯೇಂದ್ರ ಪರ್ಬ ಆಚರಣೆ-ಬಲುಯೇಂದ್ರ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಳು ಭಾಷಿಕರು ತಮ್ಮ ಭಾಷೆ, ಸಂಪ್ರದಾಯ, ಸಂಸ್ಕೃತಿಯನ್ನು ಅರಿತುಕೊಂಡು ಉಳಿಸಿ-ಬೆಳಸಿ ಮುಂದಿನ ಪೀಳಿಗೆಯವರಿಗೆ ನೀಡಬೇಕು. ಇದರಿಂದ ಸಂಸ್ಕೃತಿ ಅರಿತುಕೊಳ್ಳುವುದರ ಜತೆಗೆ ಇತರೆ ಸಂಸ್ಕೃತಿ, ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲು […]

ತುಳುನಾಡ ಕೃಷಿಕರ ಸಂಸ್ಕೃತಿಯ ಅನಾವರಣ ಹಾಗೂ ಕೃಷಿ ಸಾಧಕರಿಗೆ ಸನ್ಮಾನ

Thursday, March 14th, 2019
mift

ಮಂಗಳೂರು  : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಅತ್ತಾವರದ ಮಿಫ್ಟ್ ಕಾಲೇಜಿನವರ ಸಹಯೋಗದೊಂದಿಗೆ ಮಂಗಳೂರಿನ ಪುರಭವನದಲ್ಲಿ ಮಿಫ್ಟ್ ಕಾಲೇಜಿನ ವಿದ್ಯಾರ್ಥಿಗಳಿಂದ ನೇಗಿಲ ಯೋಗಿಯ ಕಾಯಕ ನಡಿಗೆ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ದಿನಾಂಕ 08.03.2019 ರಂದು ಸಂಜೆ 5.30 ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ.ಭಂಡಾರಿ ರವರು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಹಾಗೂ ಮಂಗಳೂರು ಮನ್‌ದೇವ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಬಿ.ನಾಗರಾಜ ಸಮಾರಂಭದ […]

ತುಳು ಓದಲು ಬೆರೆಯಲು ಕಲಿಯುವವರಿಗೆ ಇಲ್ಲಿದೆ ಸುವರ್ಣಾವಕಾಶ

Monday, July 30th, 2018
Tulu

ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು “ತುಳು ಲಿಪಿ ಕಲ್ಪುಗ” ಯೋಜನೆಯಡಿ ಆಸಕ್ತರಿಗೆ ತುಳು ಲಿಪಿ ಕಲಿಸುವ ಸಲುವಾಗಿ ಉಚಿತ ತುಳು ಲಿಪಿ ಕಲಿಕಾ ತರಗತಿಯನ್ನು ಆಯೋಜಿಸುತ್ತಿದೆ. ಅಕಾಡೆಮಿ ಸಿರಿ ಚಾವಡಿಯಲ್ಲಿ ತರಗತಿಗಳನ್ನು ಸಪ್ಟೆಂಬರ್ 9 ರಿಂದ 4ಭಾನುವಾರಗಳಂದು ವ್ಯವಸ್ಥೆ ಮಾಡಲಾಗುವುದು. ತುಳು ಲಿಪಿ ಕಲಿಯಲಿಚ್ಚಿಸುವ ಆಸ್ತಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಆಸಕ್ತರು ಅಕಾಡೆಮಿ ಮೊಬೈಲ್ ಸಂಖ್ಯೆ: 9901016962 ಗೆ SMS ಅಥವಾ ಕರೆ ಮೂಲಕ ಅಕಾಡೆಮಿಗೆ ದಿನಾಂಕ 20-08-2018 ರ ಒಳಗಾಗಿ […]

ತುಳು ಸಂಸ್ಕೃತಿ ಪರಿಚಯಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ : ಡಾ. ಸದಾನಂದ ಪೆರ್ಲ

Wednesday, June 20th, 2018
Tulu-LCD

ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಂಪ್ರದಾಯಕ ಹಾಗೂ ಆಧುನಿಕ ತಂತ್ರಜ್ಷಾನದ ಬಳಕೆಯಾಗಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ರವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದ ಕಟ್ಟಡದ ಸಿರಿಚಾವಡಿಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಎಲ್.ಸಿ.ಡಿ ಪ್ರೊಜೆಕ್ಟರ್‌ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ತುಳುಭಾಷೆಗೆ ಭವ್ಯವಾದ ಇತಿಹಾಸವಿದೆ. ಮೌಲಿಕವಾದ ಸಾಹಿತ್ಯ ಪರಂಪರೆವಿದೆ. ತುಳುವರಲ್ಲಿ ಹೋರಾಟದ ಕಿಚ್ಚು ಇದೆ. ಪ್ರಾಮಾಣಿಕತೆ, ನಿಷ್ಠೆ ತುಳುವರ ಮೂಲ ಗುಣ ಆಗಿದೆ. ಆದರೂ ತುಳು ಭಾಷೆಗೆ […]

ತುಳುವರ ಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹವಾಗಬೇಕು

Thursday, June 7th, 2018
Tulu Book

ಮಂಗಳೂರು : ತುಳುಭಾಷೆ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ಗ್ರಂಥಗಳ ಪ್ರಕಟಣೆ ಹಾಗೂ ಮಾರಾಟದ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ತುಳುವರು ತಮ್ಮ ಮನೆಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯವತಿಯಿಂದ ಹಮ್ಮಿಕೊಂಡ ತುಳುನಾಡಿನ ಪ್ರಮುಖ ದೇವಸ್ಥಾನ, ದೈವಸ್ಥಾನಗಳಲ್ಲಿ ತುಳುಪುಸ್ತಕ ಪ್ರದರ್ಶನ ಮತ್ತು ಮಾರಾಟ ಅಭಿಯಾನಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಅಕಾಡೆಮಿವತಿಯಿಂದ […]