‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ’ ವಾಹನ ಜಾಥಾಕ್ಕೆ ಚಾಲನೆ

Wednesday, January 26th, 2022
jatha

ಮಂಗಳೂರು:  ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಬುಧವಾರ ಬೆಳಗ್ಗೆ ಪ್ರಾರಂಭವಾಗಿದೆ. ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು. ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು. ‘ಇದು ರಾಜಕೀಯ ಪ್ರೇರಿತ ನಡಿಗೆ ಅಲ್ಲ, ಇದು ಸ್ವಾಭಿಮಾನದ ನಡಿಗೆ’  ಗಣರಾಜ್ಯೋತ್ಸವ ಪರೇಡ್‌ಗೆ […]

ನಾರಾಯಣ ಗುರುಗಳ ಸ್ತಬ್ಧ ಚಿತ್ರದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಖಂಡನೀಯ

Tuesday, January 25th, 2022
Biruver Kudla

ಮಂಗಳೂರು : ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ರಾಜಕಾರಣ ಮಾಡುತ್ತಾ  ಕಚ್ಚಾಡುತ್ತಿದೆ. ಸ್ವಾಭಿಮಾನ ಜಾಥಾ ರಾಜಕೀಯ ರಹಿತವಾಗಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಬಿರುವೆರ್ ಕುಡ್ಲ ಸ್ಪಷ್ಟ ಪಡಿಸಿದೆ. ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆ ಮುಖಂಡ ಲಕ್ಷ್ಮೀಶ್, ಬಿರುವೆರ್ ಕುಡ್ಲ ನಗರದ ವೃತ್ತಕ್ಕೆ ನಾರಾಯಣ ಗುರು ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಬೆಂಬಲ ನೀಡದವರು ಇಂದು ಜಾಥಾದಲ್ಲಿರುವುದು ರಾಜಕೀಯದ ಹುನ್ನಾರದಂತೆ ಕಾಣುತ್ತಿದೆ  ಎಂದರು. ಗಣರಾಜ್ಯೋತ್ಸವಕ್ಕಾಗಿ ಕೇರಳ ಸರಕಾರ […]

ಭಜನೆ ಮಂಗಳವಾಗುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾದ ಭಜನಾಪಟು

Sunday, September 12th, 2021
Moohan Kodle

ಮಂಜೇಶ್ವರ : ಹೊಸಂಗಡಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ವಾರದ ಭಜನೆಯ ಮಂಗಳವಾಗುತ್ತಿದ್ದಂತೆಯೇ ಮೋಹನ್ ದಾಸ್ ಕೊಡ್ಡೆ (55) ಅವರು ಶನಿವಾರ ರಾತ್ರಿ  ಹೃದಯಾಘಾತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ. ಮಂಜೇಶ್ವರದ ಬಲ್ಲಂಗುಡೇಲು ನಿವಾಸಿಯಾಗಿರುವ ಅವರು ಅಲ್ಲೇ ಭಜನಾ ತಂಡವನ್ನು ರಚಿಸಿ ಹಲವಾರು ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸುತ್ತಿದ್ದರು. ಮಂಜೇಶ್ವರ ಗಣೇಶೋತ್ಸವದಲ್ಲಿ ರಾತ್ರಿ ಹಗಲೆನ್ನದೆ ಅಹರ್ನಿಶಿ ಶ್ರಮಿಸಿದ್ದ ಅವರು ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಗುರುತಿಸಿಕೊಂಡಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿದ್ದು, ಭಜನಾ ಸಂಕೀರ್ತನಾಕಾರರಾಗಿ, ಭಜನಾ ಸಂಘಟಕರಾಗಿ ಕನಿಲ ಶ್ರೀ ಭಗವತೀ […]

ಮಂಗಳೂರು ವಿವಿ ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಉದ್ಘಾಟನೆ

Thursday, January 19th, 2017
cm university college

ಮಂಗಳೂರು: ನಾರಾಯಣ ಗುರು ಅಧ್ಯಯನ ಪೀಠಕ್ಕೆ ಈಗಾಗಲೇ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ ಒಂದು ಕೋಟಿ ರೂ. ಒದಗಿಸಲು ಸಿದ್ಧವಿದೆ . ಕ್ರಿಯಾಶೀಲ ಹಾಗೂ ಹೆಚ್ಚು ಅಧ್ಯಯನಗಳನ್ನು ನಡೆಸುವ ಪೀಠಗಳಿಗೆ ಸರ್ಕಾರ ಅನುದಾನ ನೀಡಲಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ, ಪ್ರಸಾರಾಂಗದ ರಜತ ಗ್ರಂಥ ಸರಣಿಯ 19 ಕೃತಿಗಳ ಲೋಕಾರ್ಪಣೆ ಹಾಗೂ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ […]

ಸಾಮರಸ್ಯದ ಭ್ರಾತೃತ್ವವೇ ಸಮಗ್ರ ಬಿಲ್ಲವರ ಅಸ್ತಿತ್ವ : ಜಯ ಸಿ. ಸುವರ್ಣ

Tuesday, January 10th, 2017
billava association

ಮುಂಬಯಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಆರಾಧಕರಾದ ಬಿಲ್ಲವರು ಅಂದೂ ಇಂದೂ, ಮುಂದೆಂದೂ ಬಿಲ್ಲವ ಬ್ರದರ‍್ಸ್ (ಸಹೋದರತ್ವರೇ) ಆಗಿ ಬಾಳಲಿದ್ದೇವೆ. ಸಾಮರಸ್ಯದ ಭ್ರಾತೃತ್ವವೇ ಬಿಲ್ಲವರ ಅಸ್ತಿತ್ವ ಆಗಿದ್ದು ಭ್ರಾತೃಭಾವ, ಸಾಮರಸ್ಯದ ಬಾಳಿಗೆ ಬಿಲ್ಲವರು ಒಡನಾಡಿ ಬಂಧುಗಳಾಗಿದ್ದಾರೆ ಎಂದು ಬಿಲ್ಲವರ ಧೀಶಕ್ತಿ, ಮುಖ್ಯ ಮಾರ್ಗದರ್ಶಕರೂ, ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಮುಲ್ಕಿ ಅಧ್ಯಕ್ಷ ಜಯ ಸಿ.ಸುವರ್ಣ ನುಡಿದರು. ಸಾಂತಕ್ರೂಜ್ ಪೂರ್ವದಲ್ಲಿನ ನವೀಕೃತ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಸಾಧಾರಣ […]

ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿ ಆಚರಣೆ

Saturday, September 17th, 2016
Narayana-Guru

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ವತಿಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಜಯಂತಿಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಓರ್ವ ದಾರ್ಶನಿಕನಾಗಿ ಸಾಮಾಜಿಕ ಸುಧಾರಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ನಿರ್ವಹಿಸಿದ ಪಾತ್ರ ಅತಿ ಪ್ರಮುಖವಾದುದು. ಎಲ್ಲರಿಗೂ ಸುಶಿಕ್ಷಿತ ಶಿಕ್ಷಣ ದೊರೆಯಬೇಕು. […]

ಬಿ.ಸಿ.ರೋಡಿನ ಮುಖ್ಯವೃತಕ್ಕೆ ನಾಮಕರಣ ಗೊಂದಲ

Thursday, August 6th, 2015
bantwal circle

ಬಂಟ್ವಾಳ: ಡಾ. ಬಾಬಾ ಸಾಹೇಬ್ ಅಂಬೇಡ್ಕ್‌ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ ಮತ್ತೆ ನಾಮಕರಣ ಗೊಂದಲ ಕಾಡಲಾರಂಭಿಸಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ಸಮುದಾಯದ ಪರವಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಬಂಟ್ವಾಳ ತಾಲೂಕಿನವರೇ ಆದ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡ ಬೇಕೆನ್ನುವ ಒತ್ತಾಯಗಳು ಜನ ಸಮುದಾಯದಿಂದ […]

ಮಂಗಳೂರು ದಸರಾಕ್ಕೆ ಸಚಿವ ವಯಲಾರ್‌ ರವಿ ಅವರಿಂದ ವಿದ್ಯುಕ್ತ ಚಾಲನೆ

Monday, October 3rd, 2011
Vayalar Ravi

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಖ್ಯಾತ ಮಂಗಳೂರು ದಸರಾಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಸಾಗರೋತ್ತರ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್‌ ರವಿ ಅವರು ರವಿವಾರ ಚಾಲನೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿ ಸಾರಿರುವ ಸಂದೇಶ ವಿಶ್ವಮಾನ್ಯವಾಗಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದಾಗಿ ಏಕತೆಯ ಸಂದೇಶ ನಮ್ಮೆಲ್ಲರ ಶಕ್ತಿ. ನಾನು ಬಾಲ್ಯದಿಂದಲೂಅವರ ಸಂದೇಶ ನನ್ನ ಚಿಂತನೆಗಳನ್ನು ಕೇಳುತ್ತಿದ್ದೆ. ಚಿಕ್ಕಂದಿನಲ್ಲಿ ವರ್ಕಳ ಶಿವಗಿರಿ ಮಠಕ್ಕೆ ಹೋಗುತ್ತಿದ್ದ ಪ್ರವಚನಗಳು ಇಂದಿಗೂ ನನ್ನ ಮೇಲೆ […]

ಬ್ರಹ್ಮಶ್ರೀ ನಾರಾಯಣ ಗುರುಗಳ 157ನೇ ಜನ್ಮ ದಿನಾಚರಣೆ

Monday, September 12th, 2011
Narayana Guru Jayanti

ಮಂಗಳೂರು: ಅಖೀಲ ಭಾರತ ಬಿಲ್ಲವರ ಯೂನಿಯನ್‌, ಬಿಲ್ಲವರ ಮಹಿಳಾ ಸಂಘ ಹಾಗೂ ಕುದ್ರೋಳಿಯ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಅವರ 157ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾರಾಯಣ ಗುರು ಅವರ ಜನ್ಮದಿನವನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನೂ ಪಾಲಿಸಬೇಕು. ಬಿಲ್ಲವ ಸಮಾಜದ ಅಭಿವೃದ್ಧಿಗೆ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ, ನಗರದ ಕುಂಜತ್ತಬೈಲ್‌ನಲ್ಲಿ ನಿರ್ಮಿಸಲು […]