Blog Archive

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯುಟ್‌

Wednesday, January 9th, 2013
Fr Muller Hospital Fire accident

ಮಂಗಳೂರು : ಮಂಗಳವಾರ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತೀವ್ರ ನಿಗಾ ಘಟಕದ ಎ.ಸಿ. ಯಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹೊತ್ತು ಗಲಭೆಯ ವಾತಾವರಣ ನಿರ್ಮಾಣವಾಯಿತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಳಗ್ಗೆ 10.30 ರ ವೇಳೆಗೆ ಏರ್‌ಕಂಡೀಷನ್ ಯಂತ್ರದ ಒಳಗೆ ಹೊಗೆ, ಸುಟ್ಟ ವಾಸನೆ ಹಾಗೂ ಸ್ವಲ್ಪ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಆಸ್ಪತ್ರೆಯ ಸಿಬ್ಬಂದಿ, ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಉಸಿರಾಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡರು. ಸಂಸ್ಥೆಯ ಭದ್ರತಾ ಸಿಬ್ಬಂದಿ […]

ಹಸೆಮಣೆ ಏರಲಿರುವ ಮಮತಾ ಪೂಜಾರಿ

Saturday, January 5th, 2013
Mamatha Poojary

ಮಂಗಳೂರು : ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ತಂದುಕೊಟ್ಟ ಕನ್ನಡ ನಾಡಿನ ಹೆಮ್ಮೆಯ ಕಬಡಿ ಪಟು ಮಮತಾ ಪೂಜಾರಿ ಜನವರಿ 23 ರಂದು ಹಸೆಮಣೆ ಏರಲಿದ್ದಾರೆ. ಉಡುಪಿಯ ಖಾಸಗಿ ಹೋಟೆಲ್ ವೊಂದರಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಉಡುಪಿಯ ಉದ್ಯಾವರದವರಾದ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಅಭಿಷೇಕ್ ಕೋಟ್ಯಾನ್‌ರನ್ನು ಮಮತಾ ವರಿಸಲಿದ್ದಾರೆ. ತೀರಾ ಹತ್ತಿರ ಸಂಬಂಧಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 9 ರಂದು ಕಾರ್ಕಾಳದ ಅಜೆಕಾರು ಬಳಿಯಿರುವ ಹೆರ್ಮುಂಡೆಯ ಮಮತಾರವರ ಮನೆಯಲ್ಲಿ ಕುಟುಂಬಿಕರ ಹಾಗೂ […]

ಜನವರಿ 3 ರಿಂದ ಮಂಗಳೂರಿನಿಂದ ದುಬೈ ಗೆ ಜೆಟ್‌ ಏರ್‌ವೇಸ್‌ ಹಾರಾಟ

Thursday, January 3rd, 2013
Jet airways

ಮಂಗಳೂರು : ದೇಶದ ಎರಡನೇ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯಾದ ಮುಂಬಯಿ ಮೂಲದ ಜೆಟ್ ಏರ್‌ವೇಸ್, ಜನವರಿ 3ರಿಂದ ಮಂಗಳೂರು-ದುಬೈ ಮಧ್ಯೆ ಹಾರಾಟ ಆರಂಭಿಸಲಿದೆ. ಮೊದಲ ಬಾರಿಗೆ ಜೆಟ್ ಏರ್‌ವೇಸ್‌ನ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿನಿಂದ ದುಬಾಯಿಗೆ ಹಾರಾಟ ನಡೆಸಲು ಕ್ಷಣಗಣನೆ ಆರಂಭಗೊಂಡಿದೆ. ದುಬೈ ಹಾಗೂ ಮಂಗಳೂರು ನಡುವೆ ನೇರ ವಿಮಾನ ಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ಇದರ ಹಿಂದೆ ಏರ್ ಇಂಡಿಯಾ ವಿಮಾನ ಯಾನದ ಲಾಬಿ ಕೆಲಸ ಮಾಡುತ್ತಿತ್ತು ಎಂದು […]

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಸಲಿಂಗಕಾಮಿಗಳು !

Saturday, December 29th, 2012
Salinga kama

ಮಂಗಳೂರು : ನನಗೆ ರೂಮಿನಿಂದ ಹೊರಬರಲಾಗುತ್ತಿಲ್ಲ, ಎಲ್ಲಿ ನೋಡಿದರೂ ಚುಡಾಯಿಸುವ ಇಂಥವರೇ ಕಾಣಸಿಗುತ್ತಾರೆ. ಹಗಲುಹೊತ್ತು ಚೆನ್ನಾಗಿಯೇ ಮಾತಾಡುವ ಇವರು ರಾತ್ರಿಯಾದೊಡನೆ ನನ್ನ ಹಿಂದೆ ಬಿದ್ದು ಚಿತ್ರಹಿಂಸೆ ಕೊಡುತ್ತಾರೆ. ಇದರಿಂದ ನನಗೆ ಸಾಯುವ ಯೋಚನೆ ಬರುತ್ತಿದೆ ಆದರೆ ನನ್ನನ್ನು ನಂಬಿದವರ ಸ್ಥಿತಿ ನೆನೆದು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಬದುಕುತ್ತಿದ್ದೇನೆ. ನಾನು ಅನುಭವಿಸುವ ಯಾತನೆ, ನೋವು ಇನ್ನಾರೂ ಅನುಭವಿಸದಿರಲಿ ಎಂದು ನನ್ನ ಕಥೆ ನಿಮಗೆ ಹೇಳುತ್ತಿದ್ದೇನೆ ಎಂದು ಬಂಟ್ವಾಳ ಮುಸ್ಲಿಂ ಯುವಕನೊಬ್ಬ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾನೆ. ನಾನು ಅವರಿಗೇನೂ ಮಾಡಿಲ್ಲ. […]

ಮಸ್ಕತ್‌ನಲ್ಲಿ ಮಂಗಳೂರು ಸಹೋದರ ಸಂಬಂಧಿಗಳ ಸಾವು

Thursday, December 27th, 2012
Mangaloreans dies at Muscat

ಮಂಗಳೂರು : ಮಂಗಳೂರು ಜೆಪ್ಪು ಬಪ್ಪಲ್ ನಿವಾಸಿಗಳಾದ ಲ್ಯಾನ್ಸಿಲಾಟ್ ಡಿಸೋಜ (40) ಮತ್ತು ಆತನ ಸಹೋದರ ಸಂಬಂಧಿ ಶರುಣ್ ಡಿಸೋಜ (26) ಎಂಬವರು ಸೋಮವಾರ ರಾತ್ರಿ ಮಸ್ಕತ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶರುಣ್ ಡಿಸೋಜ ಕಳೆದ ಕೆಲವು ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದರು. ಆದರೆ ಲ್ಯಾನ್ಸಿಲಾಟ್ ಡಿಸೋಜ ಕಳೆದ 15 ದಿನಗಳ ಹಿಂದಷ್ಟೇ ವೀಸಾ ಪಡೆದು ಮಸ್ಕತ್‌ಗೆ ತೆರಳಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಸ್ಕತ್‌ನ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. […]

ಅಸಭ್ಯ ವರ್ತನೆ ಬಸ್ ಪರವಾನಗಿ ರದ್ದು : ಆರ್‌ಟಿಒ

Saturday, December 22nd, 2012
RTO C Mallikarjuna

ಮಂಗಳೂರು :ಮಂಗಳೂರು ಆರ್‌ಟಿಒ ಸಿ.ಮಲ್ಲಿಕಾರ್ಜುನ ರವರು ಶುಕ್ರವಾರ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಸ್ ನಲ್ಲಿ ಬಸ್ ನಿರ್ವಾಹಕ ಹಾಗೂ ಚಾಲಕ ಪ್ರಯಾಣಿಕರೊಂದಿಗೆ ಲೈಂಗಿಕ ಕಿರುಕುಳ ಅಥವಾ ಅಸಭ್ಯವಾಗಿ ವರ್ತಿಸಿದರೆ ಅಂತಹ ಬಸ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾವುದು ಎಂದು ಅವರು ಎಚ್ಚರಿಕೆ ನೀಡಿದರು. ದಿಲ್ಲಿಯ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಅಮಾನವೀಯ ಕೃತ್ಯದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಅವರು, ಮಂಗಳೂರು […]

ಉತ್ಸವಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ : ಸಿ.ಟಿ. ರವಿ

Saturday, December 22nd, 2012
Karavali Utsav 2012

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಶುಕ್ರವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯು ಹಲವು ಸಾಂಸ್ಕೃತಿಕ ಆಚರಣೆಗಳನ್ನು ಹೊಂದಿರುವ ಪ್ರದೇಶವಾಗಿದ್ದು ಉತ್ಸವಗಳು ನಮ್ಮಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ಈ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಉತ್ಸವಗಳನ್ನು ಆಯೋಜಿಸಿದ್ದಾರೆ ಎಂದು ಅವರು ಹೇಳಿದರು. […]

ನಗರದ ಕದ್ರಿಹಿಲ್ಸ್‌ನಲ್ಲಿ ವಿಜಯ ದಿವಸ ಆಚರಣೆ

Wednesday, December 19th, 2012
Vijay Diwas

ಮಂಗಳೂರು :ದ.ಕ. ಜಿಲ್ಲಾ ಎಕ್ಸ್‌ ಸರ್ವೀಸ್‌ಮೆನ್ಸ್‌ ಅಸೋಸಿಯೇಶನ್‌ ವತಿಯಿಂದ ಡಿಸೆಂಬರ್ 16ರಂದು ಕದ್ರಿಹಿಲ್ಸ್‌ನ ಯುದ್ಧಸ್ಮಾರಕದಲ್ಲಿ ವಿಜಯ ದಿವಸ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 1971ರ ಡಿಸೆಂಬರ್ 16 ಭಾರತವು ಪಾಕಿಸ್ಥಾನದ ಮೇಲೆ ವಿಜಯ ಸಾಧಿಸಿದ ದಿನವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಸಲುವಾಗಿ ಇದನ್ನು ಪ್ರತಿವರ್ಷ ವಿಜಯ ದಿವಸವಾಗಿ ಆಚರಿಸಲಾಗುತ್ತಿದೆ. ಭಾರತೀಯ ಸೇನೆಯ ಮೂರು ವಿಭಾಗಗಳ ಮಾಜಿ ಸೈನಿಕರು, ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬಂದಿ, ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು […]

ಅಡ್ಯಾರು ಬಳಿ ಅಪಘಾತ ಚಾಲಕ ಪವಾಡ ಸದೃಶ ಪಾರು

Thursday, December 13th, 2012
Accident in Adyar

ಮಂಗಳೂರು : ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದಿಂದ ಮಂಗಳೂರಿಗೆ ದೊಡ್ಡದಾದ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಹೊರವಲಯದ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಅಪಘಾತಕ್ಕೀಡಾಗಿ ಚಾಲಕನು ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ. ಲಾರಿಯ ಮುಂದೆ ಚಲಿಸುತ್ತಿದ್ದ ಕಾರೊಂದು ಅನಿರೀಕ್ಷಿತವಾಗಿ ತಿರುಗಿದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನು ಬ್ರೇಕ್ ಹಾಕಿದ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿಯು ಮುಂದಿನ ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಕೊಳವೆಗಳು ಮುಂದಕ್ಕೆ ಜಾರಿ ಚಾಲಕನು ಕುಳಿತುಕೊಳ್ಳುವ […]

ಜೆಸಿಂತಾ ಆತ್ಮಕ್ಕೆ ಶಾಂತಿ ಕೋರಿ ನಗರದಲ್ಲಿ ಇಂದು ಮೊಂಬತ್ತಿ ಮೆರವಣಿಗೆ

Wednesday, December 12th, 2012
Jacintha Saldanha

ಮಂಗಳೂರು :ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಮೂಲದ ನರ್ಸ್ ಜೆಸಿಂತಾ ಸಲ್ದಾನ ಅವರ ಆತ್ಮಕ್ಕೆ ಶಾಂತಿಕೋರಿ ಇಂದು ಮಂಗಳೂರಿನಲ್ಲಿ ಮೊಂಬತ್ತಿ ಮೆರವಣಿಗೆ ಹಾಗೂ ಸಂತಾಪ ಸಭೆ ಆಯೋಜಿಸಲಾಗಿದೆ. ನಗರದ ವೆಲೆನ್ಸಿಯಾ ವೃತ್ತದಿಂದ ಬೆಂದೂರುವೆಲ್‌ವರೆಗೆ ಸಂಜೆ 6.30ಕ್ಕೆ ಮೊಂಬತ್ತಿ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ ಸಂತಾಪ ಸಭೆ ಜರಗಲಿದೆ ಎಂದು ಐವನ್‌ ಡಿಸೋಜ ಅವರು ತಿಳಿಸಿದ್ದಾರೆ. ಲಂಡನ್‌ನಲ್ಲಿ ನರ್ಸ್‌ ಜೆಸಿಂತಾ ಸಲ್ದಾನ ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಇಂಧನ ಮತ್ತು ನೈಸರ್ಗಿಕ […]