Blog Archive

ಸಿದ್ದರಾಮಯ್ಯ ಸಮಾಜವನ್ನು ಅಚ್ಚುಕಟ್ಟಾಗಿ ಒಡೆಯುತ್ತಿದ್ದಾರೆ

Tuesday, March 11th, 2014
HD-Deve-Gowda

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಾತಿ ಸಮಾವೇಶವನ್ನೂ ಬಾಕಿ ಉಳಿಸಿಲ್ಲ. ಸಮಾಜವನ್ನು ಒಡೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಲ್ಲಿನ ಸಣ್ಣ ಸಮಾಜಗಳನ್ನೂ ಭಾಗ ಮಾಡಿದ್ದಾರೆ. ಮಠಗಳಿಗೆ ಸಮಾಜದ ಹೆಸರಿನಲ್ಲಿ 50 ಲಕ್ಷ, ಒಂದು ಕೋಟಿ ಹಣ ನೀಡಿ ಅವರನ್ನೂ ವಿಭಜನೆ ಮಾಡಿದ್ದಾರೆ. ಇವರ ಉದ್ದೇಶ ಒಂದೇ- ಸಮಾಜ ಒಡೆಯುವುದು. ಹಿಂದುಳಿದವರನ್ನು ಬಾಳುವುದಕ್ಕೂ ಬಿಡುತ್ತಿಲ್ಲ. ಈ ಎಲ್ಲ ಸಮಾಜಗಳನ್ನು ಛಿದ್ರ ಛಿದ್ರ ಮಾಡಲು ಮುಂದಾಗಿದ್ದಾರೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಸರ್ವನಾಶ ಮಾಡುತ್ತೇನೆ ಎಂದಿದ್ದಾರೆ. ಅವರ ಬಳಿ ಅಧಿಕಾರ […]

ಲೋಕ ಸಮೀಕ್ಷೆಯಲ್ಲಿ ಮೋದಿ ಮುಂದು ರಾಗಾ ಹಿಂದೆ, ಎನ್‌ಡಿಎನತ್ತ ಮತದಾರ, ಯುಪಿಎ ಕಥೆ ಹರೋಹರ

Friday, March 7th, 2014
Narendra-Modi

ನವದೆಹಲಿ: ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಬ್ಬರಕ್ಕೆ ಧೂಳೀಪಟವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗದ್ದುಗೆಯ ಸನಿಹ ಬಂದು ನಿಲ್ಲಲಿದೆ. ಎನ್‌ಡಿಎ 212- 232 ಸ್ಥಾನಗಳನ್ನು ಗೆದ್ದರೆ, ಯುಪಿಎ 119ರಿಂದ 139 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಿಎನ್‌ಎನ್‌ಐಬಿನ್- ಲೋಕನೀತಿ- ಸಿಎಸ್‌ಡಿಎಸ್ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ ಅತಿದೊಡ್ಡ ಪಕ್ಷ: ಒಂದು ವೇಳೆ ತಕ್ಷಣಕ್ಕೆ ಚುನಾವಣೆ ನಡೆದರೆ ಬಿಜೆಪಿ […]

ನೀತಿ ಸಂಹಿತೆ ಜಾರಿ ಭಯ ಕಡತಗಳಿಗೆ ತರಾತುರಿ ಸಹಿ, 18 ಕೈಗಾರಿಕೆಗಳಿಗೆ ಸಿದ್ದು ಗ್ರೀನ್ ಸಿಗ್ನಲ್

Wednesday, March 5th, 2014
Siddaramaiah

ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಯೋಜನೆಗಳ ಕಡತ ವಿಲೇವಾರಿ ತ್ವರಿತಗೊಳಿಸಿದ್ದು, ಮಂಗಳವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ 13770 ಕೋಟಿ ಮೊತ್ತದ 18 ಕೈಗಾರಿಕಾ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದಾರೆ. ನೀತಿ ಸಂಹಿತೆ ಜಾರಿಯಾದ ನಂತರ ಯೋಜನೆ ಆರಂಭಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಆರಂಭಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ. ಮಂಗಳವಾರ ಇದಕ್ಕೆ ಇನ್ನಷ್ಟು ವೇಗ ನೀಡಿದ ಅವರು, ಗೃಹ ಕಚೇರಿ ಕೃಷ್ಣಾದಲ್ಲಿ ಹಲವು […]

ಜನರಲ್ ವಿ.ಕೆ.ಸಿಂಗ್ ಬಿಜೆಪಿಗೆ ಸೇರ್ಪಡೆ

Saturday, March 1st, 2014
VK-Singh

ನವದೆಹಲಿ: ಭೂಸೇನೆ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಶನಿವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಇಂದು ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವಿ.ಕೆ.ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರು ಹೂಗುಚ್ಛವನ್ನು ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಮೆಮೋರಿಯಲ್ಗೆ ಭೇಟಿ ನೀಡಿದ್ದ ವಿ.ಕೆ.ಸಿಂಗ್ ಅವರು ಅಲ್ಲಿ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಬಿಜೆಪಿ ಪಕ್ಷವನ್ನು ಸೇರುತ್ತಿರುವ ಕುರಿತು ಹೇಳಿಕೆ […]

ಬಿಎಸ್‌ವೈ ಮುನಿಸು: ರಾಜ್ಯ ಬಿಜೆಪಿ ಇಕ್ಕಟ್ಟಿನಲ್ಲಿ

Tuesday, January 28th, 2014
B-S-Yeddyurappa

ಬೆಂಗಳೂರು : ಬಿಜೆಪಿಯ ಜೊತೆ ಇತ್ತೀಚೆಗಷ್ಟೇ ಕೆಜೆಪಿಯನ್ನು ವಿಲೀನಗೊಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದೀಗ ಬಿಜೆಪಿ ಯಲ್ಲಿ ಮೂಲೆ ಗುಂಪಾಗಿದ್ದು, ರಾಜ್ಯ ನಾಯಕರ ವರ್ತನೆಗೆ ಬೇಸತ್ತು ಅಧಿ ವೇಶನ ಸೇರಿದಂತೆ ಪಕ್ಷದ ಚಟುವಟಿಕೆ ಯಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮುಂಬರುವ ಲೋಕಸಭಾ ಚುನಾ ವಣೆಗೂ ಮುನ್ನವೇ ಬಿಜೆಪಿಯಲ್ಲಿ ಅಸ ಮಾಧಾನದ ಹೊಗೆ ಎದ್ದಿದೆ. ಮುನಿಸಿ ಕೊಂಡಿರುವ ಯಡಿಯೂರಪ್ಪರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕ ರಾರೂ ಮುಂದಾಗುತ್ತಿಲ್ಲ. ಇದರಿಂದಾಗಿ […]

ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ : ಅಡ್ವಾಣಿ

Monday, January 27th, 2014
Adwani

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಮೋದಿ ಅವರ ಕೈಗೆ ಚುನಾವಣೆ ಹೊಣೆ ಸಿಕ್ಕ ಮೇಲೆ ಅಡ್ವಾಣಿ ಅವರು ರಾಜ್ಯಸಭೆ ಕಣಕ್ಕಿಳಿಯಬಹುದು ಎನ್ನುವ ಊಹಾಪೋಹ ಎದ್ದಿತ್ತು. ಆದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿ ಲೋಕಸಭೆ ಸ್ಪರ್ಧೆ ಬಗ್ಗೆ ಅಡ್ವಾಣಿ ಖಚಿತಪಡಿಸಿದ್ದಾರೆ. ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ಈವರೆಗೆ ನಾನು ಏನೂ ಹೇಳಿಲ್ಲ. ಯಾರಾದರೂ ಈ ಕುರಿತು ಹೇಳಿದರೆ ಈ ಕುರಿತು ಯೋಚಿಸುತ್ತೇನೆ. ಒಂದು ವೇಳೆ ರಾಜ್ಯಸಭೆಗೆ […]

ಮೋದಿಯವರನ್ನು ಪ್ರಧಾನಿ ಹುದ್ದೆಗೇರಲು ಅವಕಾಶ ಮಾಡಿಕೊಡಬಾರದು : ಪೂಜಾರಿ

Wednesday, July 17th, 2013
Poojary Press

ಮಂಗಳೂರು : ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಸಮರ್ಥ ವ್ಯಕ್ತಿಯಾಗಿದ್ದು, ಅವರ ಸಿದ್ದಾಂತಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿಯಾಗಿರದೆ ಎಲ್ಲಾ ಸಮುದಾಯಗಳಿಗೂ ಅಪಾಯಕಾರಿಯಾಗಿದೆ. ಮೋದಿ ತನ್ನ ಹುಸಿ ಮಾತುಗಳಿಂದ ದೇಶವನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ , ಮೋದಿ  ಓರ್ವ ‘ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಸಿದ್ದಾಂತಗಳಿಗೆ ಬಿಜೆಪಿಯ ಉನ್ನತ ಮಟ್ಟದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಅಡ್ವಾಣಿಯವರು ಕೂಡ […]

ಲೋಕಸಭೆ ಚುನಾವಣೆಯಲ್ಲಿ ಪೂಜಾರಿ ಎಂಟ್ರಿ !

Tuesday, December 11th, 2012
Janardhan Poojari & Vinaykumar Sorake

ಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸೋಲು ನಾಲ್ಕು ಬಾರಿ ಗೆಲುವು ದಾಖಲಿಸಿರುವ ಜನಾರ್ದನ ಪೂಜಾರಿ ಐದನೆಯ ದಾಖಲೆಗಾಗಿ ಕೊನೆಯ ಹೋರಾಟಕ್ಕೆ ಇಳಿದಿದ್ದಾರೆ. ತನ್ನನ್ನು ಬೆಂಬಲಿಸಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡುತ್ತಿದ್ದಾರೆ ಆಯ್ದ ಕೆಲವರೊಂದಿಗೆ ಆತ್ಮೀಯ ಸಭೆಯನ್ನು ನಡೆಸಿದ್ದಾರೆ. ಕಾರ್ಪೊರೇಟರ್ ಗಳಿಗೆ ತನ್ನನ್ನೇ ಬೆಂಬಲಿಸುವಂತೆ ಕೋರುವ ಆದೇಶವನ್ನೂ ನೀಡಿರುವುದು ಹೊಸ ಬೆಳವಣಿಗೆ. ತೀರಾ ಇತ್ತೀಚೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಾರ್ಪೊರೇಟರ್ ಗಳ ಗುಪ್ತ ಸಭೆ ಕರೆದು ತನಗೆ ಬೆಂಬಲಿಸುವವರ ಪಡೆಯನ್ನು ಪೂಜಾರಿ ಖಾತ್ರಿ […]