ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Monday, January 15th, 2024
satish-kumapala

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆಯಾಗಿದ್ದಾರೆ. ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾಗಿದ್ಧ ಸತೀಶ್ ಕುಂಪಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್ ವಿರುದ್ಧ ಬಿಜೆಪಿಯಿಂದ ಸತೀಶ್ ಕುಂಪಲ ಅವರು ಸ್ಪರ್ಧಿಸಿ ಸೋತಿದ್ದರು.ಸತೀಶ್ ಕುಂಪಲ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಬಿಲ್ಲಯ್ಯ ಸಮುದಾಯದ ಮುಖಂಡರಾಗಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡು ಎಲ್‌‌ಡಿಎಫ್ -3 ಯುಡಿಎಫ್ -2 ಕ್ಷೇತ್ರಗಳಲ್ಲಿ ಗೆಲುವು

Sunday, May 2nd, 2021
Kasaragod

ಕಾಸರಗೋಡು : ಕೇರಳ  ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಸಿಪಿಎಂ ನೇತೃತ್ವದ ಎಲ್‌‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್  ಎರಡು  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ತೀವ್ರ ಪೈಪೋಟಿ ಇದ್ದ ಮಂಜೇಶ್ವರದಲ್ಲಿ ಯುಡಿಎಫ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಅಧಿಪತ್ಯ ಮುಂದುವರಿಸಿದರೆ. ಉದುಮ, ಕಾಞ0ಗಾಡ್ ಮತ್ತು ತೃಕ್ಕರಿಪುರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ. ಮಂಜೇಶ್ವರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು 1,143 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಎಣಿಕೆಯ ಎಲ್ಲಾ ಸುತ್ತುಗಳಲ್ಲೂ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ಅಂತಿಮವಾಗಿ ಸಣ್ಣ […]

ವಿಧಾನಸಭಾ ಚುನಾವಣೆ : ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಸ್ಪರ್ಧೆಗೆ

Tuesday, March 23rd, 2021
Surendran

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದ್ದು ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರದಲ್ಲಿ ಆರು, ಕಾಸರಗೋಡು ಏಳು, ಉದುಮ ಆರು, ಕಾಞಂಗಾಡ್ 11, ತೃಕ್ಕರಿಪುರ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ: ಎ. ಕೆ ಎಂ ಅಶ್ರಫ್ (ಮುಸ್ಲಿಂ ಲೀಗ್), ವಿ.ವಿ ರಮೇಶನ್ (ಸಿ ಪಿ ಐ ಎಂ), ಕೆ. ಸುರೇಂದ್ರನ್ (ಬಿಜೆಪಿ), ಪ್ರವೀಣ್ ಕುಮಾರ್ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಜೋನ್ ಡಿಸೋಜ […]

ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ: ಅನಿತಾ ಕುಮಾರಸ್ವಾಮಿ

Monday, November 5th, 2018
anitha-kumarswamy

ಹಾಸನ: ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಿದ್ದೇವೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಅಷ್ಟೇ ಅಲ್ಲ, ಉಳಿದ ನಾಲ್ಕು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಸಿಗಲಿದೆ. ಚುನಾವಣಾ ಕಣಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನು ಆಗುತ್ತೋ ನನಗೆ ಗೊತ್ತಿಲ್ಲ. ನಾನು ಕೂಡ ರಾಜಕೀಯ ಪ್ರವೇಶ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಮಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಕೆಲಸ […]

ಮಂಗಳೂರಿನಲ್ಲಿ ಬೆಳಗ್ಗೆ 7 ರಿಂದ ಮತ ಚಲಾವಣೆ ಆರಂಭ

Saturday, May 12th, 2018
Mangalore Voting

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರು ಬೆಳಗ್ಗೆ 7 ರಿಂದ ಮತ ಚಲಾವಣೆ ಆರಂಭಿಸಿದರು. ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳಿಲ್ಲಿ ಇಂದು ಮತದಾನ ನಡೆಯುತ್ತಿದ್ದು, 13,176 ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 221 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಕಣ್ಗಾವಲಿನೊಂದಿಗೆ ಮತದಾನ ನಡೆಯುತ್ತಿದೆ. ಉರ್ವಾದ ಗಾಂಧಿನಗರ ಮತಗಟ್ಟೆಯಲ್ಲಿ ಡಿ. ವೇದವ್ಯಾಸ ಕಾಮತ , ಸಂಸದ ನಳಿನ್ ಕುಮಾರ್ […]

ವಿಧಾನಸಭಾ ಚುನಾವಣೆ… ಮತಗಟ್ಟೆಗೆ ತೆರಳಲು ಸಿದ್ಧರಾದ ಅಧಿಕಾರಿಗಳು

Friday, May 11th, 2018
election-vote

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಮತಗಟ್ಟೆಗೆ ತೆರಳಲು ಅಧಿಕಾರಿಗಳು ಸಿದ್ಧಗೊಂಡಿದ್ದಾರೆ. ಇವಿಎಂ ಮಷಿನ್‌‌ಗಳ ಬಾಕ್ಸ್‌‌ಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಯಾವುದೇ ಚ್ಯುತಿ ಬಾರದಂತೆ ಜಿಲ್ಲಾ ಚುನಾವಣಾ ಆಯೋಗ ನಿಗಾ ವಹಿಸಿದೆ. ದ.ಕ. ಜಿಲ್ಲೆಯಲ್ಲಿ 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 8 ಕ್ಷೇತ್ರಗಳಿಗೆ 13,176 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ […]

ಬಿಜೆಪಿಯ ನಿಷ್ಠಾವಂತ ಕಟ್ಟಾಳು ಸಂಜೀವ ಮಠಂದೂರು

Friday, May 11th, 2018
sanjeeva-matandoor

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ ಸಂಜೀವ ಮಠಂದೂರು. ಕಳೆದ ಬಾರಿ ಶಕುಂತಳಾ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿ ಆದಾಗ ಬಿಜೆಪಿ ಮಠಂದೂರುಅವರನ್ನು ಅಭ್ಯರ್ಥಿ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಗಿರುವ ಸಂಜೀವ ಮಠಂದೂರು ಒಬ್ಬ ಅದರ್ಶ ಕೃಷಿಕ ,ಒಬ್ಬ ಪ್ರಾಮಾಣಿಕ ವ್ಯಕ್ತಿತ್ವ ಉಳ್ಳವರು,ಕಾರ್ಯದಕ್ಷತೆಯನ್ನು ಮೈಗೂಡಿಸಿಕೊಂಡವರು.ಮಾತು ಕಡಿಮೆ‌ ಕೆಲಸ ಜಾಸ್ತಿ ಮಾಡುವ ನಾಯಕ. ಗ್ರಾಮ ಪಂಚಾಯತ್ ನಿಂದ ಇಲ್ಲಿಯವರೆಗೆ ಬಿಜೆಪಿಯ ಮುಖಾಂತರ ಹಿಂದುತ್ವದ ಪಕ್ಷ ಬಿಜೆಪಿಯನ್ನು ಸಂಘಟನೆ ಮಾಡಿದವರು. […]

ಬಿಸಿಲ ಹೊಡೆತಕ್ಕೆ ಪ್ರಚಾರದ ಸಮಯವನ್ನೇ ಬದಲಿಸಿಕೊಂಡ ಕರಾವಳಿಗರು

Wednesday, May 2nd, 2018
election

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿಯಿದೆ. ಅದರಲ್ಲೂ ರಾಜಕೀಯ ಪಕ್ಷಗಳಿಗೆ ತಮ್ಮ ಪರ ಪ್ರಚಾರ ನಡೆಸಲು ಬೆರಳೆಣಿಕೆಯ ದಿನಗಳು ಮಾತ್ರವಿದೆ. ಆದರೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪಕ್ಷಗಳಿಗೆ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಲು ಬಿಸಿಲು ಅಡ್ಡಿಯಾಗಿದೆ.ಹೌದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಕಾರಣಕ್ಕಾಗಿ ಎಲ್ಲಾ ಪಕ್ಷದ ಕಾರ್ಯಕರ್ತರು ಬಿಸಿಲಿನ ಝಳ ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಚಾರದ ಸಮಯವನ್ನೇ ಬದಲಾವಣೆ ಮಾಡಬೇಕಾದ […]

ಕರಾವಳಿಯಲ್ಲಿ ಬಿಜೆಪಿ ಗೆಲ್ಲುವ ಸೀಟೆಷ್ಟು ?

Monday, April 30th, 2018
bjp Candidate

ಮಂಗಳೂರು  : ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತಲೂ ಹೆಚ್ಚು ಚರ್ಚಾ ವಿಚಾರ ಕರಾವಳಿಯಲ್ಲಿ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ಸೀಟೆಷ್ಟು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಏಳು ಸ್ಥಾನ ಗೆದ್ದರೆ, ಬಿಜೆಪಿ ಗೆದ್ದಿರುವುದು ಕೇವಲ ಒಂದೇ. ಅಂದೂ 1300 ಮತಗಳ ಕಡಿಮೆ ಅಂತರದಿಂದ. ಉಡುಪಿಯಲ್ಲಿ ಕೂಡ ಬಿಜೆಪಿ ಗೆದ್ದಿರುವುದು ಒಂದೇ ಸ್ಥಾನ. ಕಾಂಗ್ರೆಸ್ ಮೂರು ಮತ್ತು ಒಬ್ಬ ಪಕ್ಷೇತರ  […]

ದ.ಕ: 8 ಕ್ಷೇತ್ರಗಳಿಗೆ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Friday, April 27th, 2018
candidates

ಮಂಗಳೂರು : ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿಗೆ ಅಂತಿಮವಾಗಿ 58 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಬೆಳ್ತಂಗಡಿ ಕ್ಷೇತ್ರ (6 ಅಭ್ಯರ್ಥಿಗಳು) ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್), ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ), ಜಗನ್ನಾಥ(ಎಂಇಪಿ), ಸೈಯದ್ ಹಸನ್(ಪಕ್ಷೇತರ)’. ಮೂಡಬಿದ್ರ್ರೆ ಕ್ಷೇತ್ರ (7 ಅಭ್ಯರ್ಥಿಗಳು) ಕೆ. ಅಭಯಚಂದ್ರ(ಕಾಂಗ್ರೆಸ್), ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ), ಜೀವನ್  ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ),  ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ), ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), […]