ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡು ಎಲ್‌‌ಡಿಎಫ್ -3 ಯುಡಿಎಫ್ -2 ಕ್ಷೇತ್ರಗಳಲ್ಲಿ ಗೆಲುವು

Sunday, May 2nd, 2021
Kasaragod

ಕಾಸರಗೋಡು : ಕೇರಳ  ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಸಿಪಿಎಂ ನೇತೃತ್ವದ ಎಲ್‌‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್  ಎರಡು  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ತೀವ್ರ ಪೈಪೋಟಿ ಇದ್ದ ಮಂಜೇಶ್ವರದಲ್ಲಿ ಯುಡಿಎಫ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಅಧಿಪತ್ಯ ಮುಂದುವರಿಸಿದರೆ. ಉದುಮ, ಕಾಞ0ಗಾಡ್ ಮತ್ತು ತೃಕ್ಕರಿಪುರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ. ಮಂಜೇಶ್ವರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು 1,143 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಎಣಿಕೆಯ ಎಲ್ಲಾ ಸುತ್ತುಗಳಲ್ಲೂ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ಅಂತಿಮವಾಗಿ ಸಣ್ಣ […]

ಉಡುಪಿಯಲ್ಲಿ ಬಸ್ ಸಂಚಾರವನ್ನು ತಡೆಹಿಡಿದ ಪ್ರತಿಭಟನಾಕಾರರು, ಪೊಲೀಸರಿಂದ ಬಂಧನ

Monday, September 28th, 2020
udupi bundh

ಉಡುಪಿ : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿ ಬಸ್ ಸಂಚಾರವನ್ನು ತಡೆಹಿಡಿದರು.  ಈ ಸಂದರ್ಭ ಅಲ್ಲಿಗೆ ಬಂದ ಪೊಲೀಸರು ಪ್ರತಿಭಟನಾಕಾರರನ್ನುಬಂಧಿಸಿದ್ದಾರೆ. ಬಂದ್ ಬೆಂಬಲ ಕೊಟ್ಟ ವಿವಿಧ ಸಂಘಟನೆಯವರು ಬಂದ್ ಕರೆ ಕೊಟ್ಟರೂ ಸರ್ವಿಸ್ ಮತ್ತು ಸಿಟಿ ಬಸ್ಸುಗಳು ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿರುವುದರಿಂದ ಬಸ್ ಸಂಚಾರ ನಡೆಸದಂತೆ ಪ್ರತಿಭಟನಾಕಾರರು ಮನವಿ ಮಾಡಿದರೆನ್ನಲಾಗಿದೆ. ಬಸ್ ಸಂಚಾರ ಮುಂದುವರಿಸುವುದಾಗಿ ಪಟ್ಟು ಹಿಡಿದ ಚಾಲಕರ ಹಾಗೂ ನಿರ್ವಾಹಕರ ಧೋರಣೆ ವಿರೋಧಿಸಿ ಪ್ರತಿಭಟನಾಕಾರರು […]

ಸಿಪಿಎಂ ಮುಖಂಡನ ಅಂಗಡಿಗೆ ಮತ್ತೆ ಬೆಂಕಿ ಹಚ್ಚಲು ಯತ್ನ!

Monday, May 7th, 2018
cpm-leader

ಮಂಗಳೂರು: ಸಿಪಿಎಂ ಪಕ್ಷದ ಮುಖಂಡನ ಅಂಗಡಿಗೆ ದುಷ್ಕರ್ಮಿಗಳು ಎರಡನೇ ಬಾರಿ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಸುರತ್ಕಲ್‌‌ನ ಕುಳಾಯಿಯಲ್ಲಿ ನಡೆದಿದೆ. ಸುರತ್ಕಲ್ ಭಾಗದ ಸಿಪಿಎಂ ಮುಖಂಡ ಶ್ರೀನಾಥ್ ಕುಲಾಲ್ ಎಂಬವರಿಗೆ ಸೇರಿದ ಗೋಡೌನ್ ಇದಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಚಾರದಲ್ಲಿ ಇವರು ತೊಡಗಿದ್ದಾರೆ. ಕಳೆದ ಶನಿವಾರ ರಾತ್ರಿ ಬೆಂಕಿ ಹಚ್ಚಲು ಯತ್ನಿಸಿದ್ದ ದುಷ್ಕರ್ಮಿಗಳು ಮತ್ತೆ ನಿನ್ನೆ ಸಂಜೆಯೂ ಸಹ ಬೆಂಕಿ ಹಚ್ಚಲು ಯತ್ನಿಸಿದ್ದು, ಚುನಾವಣಾ ದ್ವೇಷದಿಂದ ಈ ಕೃತ್ಯ ನಡೆದಿರುವ ಶಂಕೆ […]

ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಮುನೀರ್‌ ಕಾಟ್ಟಿಪಳ್ಳ

Thursday, April 19th, 2018
muneer-katipal

ಮಂಗಳೂರು: ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಿಪಿಎಂ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯಾಗಿರುವ ಖಾಟ್ಟಿಪಳ್ಳ ಅವರು ನಾಮಪತ್ರ ಸಲ್ಲಿಕೆಗೆ ಮುನ್ನ ಕೆಂಪು ಸಮವಸ್ತ್ರ ಧರಿಸಿದ ನೂರಾರು ಕಾರ್ಯಕರ್ತರೊಂದಿಗೆ ಪಿವಿಎಸ್ ವೃತ್ತದಿಂದ ಪಾಲಿಕೆ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ನಂತರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

Friday, March 16th, 2018
udupi-protest

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ಹಾಗೂ ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ನಡೆಸಿದ ದೇಶವ್ಯಾಪಿ ಪ್ರತಿಭಟನೆಯನ್ನು ಉಡುಪಿಯಲ್ಲೂ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ನಡೆಸಲಾಯಿತು. ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಸಂಜೆ ಕಾರ್ಮಿಕರ ಬೃಹತ್ ಮೆರವಣಿಗೆ, ಧರಣಿ ಮತ್ತು ಪ್ರತಿಭಟನಾ ಸಭೆ ನಡೆಯಿತು. ಕೇಂದ್ರ ಸರಕಾರ ರೈತ, ಕಾರ್ಮಿಕ ಹಾಗೂ ಸಾಮಾನ್ಯ ಜನರ […]

ತ್ರಿಪುರಾದಲ್ಲಿ ಸಿಪಿಎಂ ವಿರುದ್ಧದ ದೌರ್ಜನ್ಯ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Tuesday, March 13th, 2018
belthangady

ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಶ್ಯದ ಕಮ್ಯೂನಿಸ್ಟ್‌ ನಾಯಕ ಲೆನಿನ್ ಪಾತ್ರ ಮಹತ್ತರವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್ ಇದೀಗ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್‌.ಎಂ. ಟೀಕಿಸಿದ್ದಾರೆ. ತ್ರಿಪುರದಲ್ಲಿ ಬಿಜೆಪಿ, ಐ.ಪಿ.ಎಫ್.ಟಿ. ಕಾರ್ಯಕರ್ತರು ಕಮ್ಯೂನಿಸ್ಟ್‌ ಪಕ್ಷದ ಕಚೇರಿ, ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಧಾಳಿಯನ್ನು ಖಂಡಿಸಿ ಸೋಮವಾರ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ದೇಶದಾದ್ಯಂತ ಅಧಿಕಾರದ ಮದದಲ್ಲಿ […]

ತ್ರಿಪುರಾದಲ್ಲಿ ಬಿಜೆಪಿ ದೌರ್ಜನ್ಯ ವಿರುದ್ಧ ಸಿಪಿಎಂ ಪ್ರತಿಭಟನೆ

Thursday, March 8th, 2018
protest-CPI

ಮಂಗಳೂರು: ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಐಪಿಎಫ್‌ಟಿ ಒಕ್ಕೂಟವು ಜಯ ಗಳಿಸಿದ ಬಳಿಕ ಸಿಪಿಎಂ ಪಕ್ಷದ ಕಚೇರಿಗೆ ದಾಳಿ, ಕಾರ್ಯಕರ್ತರಿಗೆ ಹಲ್ಲೆ, ಲೆನಿನ್ ಪ್ರತಿಮೆಗೆ ಹಾನಿ ಇತ್ಯಾದಿಯ ಮೂಲಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಆಡಳಿತ ಕೊನೆಗೊಂಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಗಳ ಬದಲಾವಣೆ ಸಹಜವಾದರೂ ಬಿಜೆಪಿ ನೇತೃತ್ವದ ಒಕ್ಕೂಟವು […]

ಯೆಚೂರಿಯವರ ಮೇಲೆ ಹಲ್ಲೆ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ : ಶ್ರೀಯಾನ್

Friday, June 9th, 2017
cpim-yechuri

ಮಂಗಳೂರು : ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಹಲ್ಲೆ ಯತ್ನವನ್ನು  ಖಂಡಿಸಿ ಸಿಪಿಎಂ ಕೇಂದ್ರ ಸಮಿತಿ ನೀಡಿದ ಕರೆಯ ಮೇರೆಗೆ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಆರ್. ಶ್ರೀಯಾನ್, ಏಕಸಂಸ್ಕೃತಿ, ಏಕರಾಷ್ಟ್ರ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಜಾತ್ಯಾತೀತ ತತ್ವಕ್ಕೆ ಸಂಘಪರಿವಾರ ಕೊಡಲಿಪೆಟ್ಟು ನೀಡುತ್ತಿದೆ. […]

ತಿರುವನಂತಪುರ ಬಿಜೆಪಿ ಕಚೇರಿ ಮೇಲೆ ಬಾಂಬ್‌ ಎಸೆತ, ಸಿಪಿಎಂ ಕೃತ್ಯ

Wednesday, September 7th, 2016
Bomb-BJP-office

ತಿರುವನಂತಪುರ : ನಗರ ಹೃದಯಭಾಗದಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಕಚ್ಚಾ ಬಾಂಬ್‌ ಎಸೆಯಲಾದ ಘಟನೆ ನಡೆದಿದ್ದು ಇದರ ಹಿಂದೆ ಸಿಪಿಐಎಂ ಕಾರ್ಯಕರ್ತರು ಇರುವುದಾಗಿ ಬಿಜೆಪಿ ಆರೋಪಿಸಿದೆ. ಬಾಂಬ್‌ ಎಸೆತದಿಂದ ಯಾರೂ ಗಾಯಗೊಂಡ ವರದಿ ಇಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಸೆಪ್ಟಂಬರ್‌ 23ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಪರಿಷತ್‌ ಸಭೆ ನಡೆಯಲಿರುವ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮೊದಲಾದ ಪಕ್ಷದ ವರಿಷ್ಠರು ಭಾಗವಹಿಸಲಿರುವ, ಕೋಯಿಕ್ಕೋಡ್‌ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ […]

ತೂಮಿನಾಡು: ಲೀಗ್ ನಿಂದ ಸುಮಾರು 40 ರಷ್ಟು ಯುವಕರು ಸಿಪಿಎಂ ಗೆ ಸೇರ್ಪಡೆ

Tuesday, April 12th, 2016
Muslim Leeg

ಮಂಜೇಶ್ವರ : ಮುಸ್ಲಿಂ ಲೀಗ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ತೂಮಿನಾಡು ಹಾಗೂ ಕುಂಜತ್ತೂರು ಪರಿಸರದ ಸುಮಾರು 40 ರಷ್ಟು ಯುವಕರು ಲೀಗ್ ನಲ್ಲಿ ಬೇಸೆತ್ತು ಸಿಪಿಎಂ ಗೆ ಸೇರ್ಪಡೆಗೊಂಡ ಘಟನೆ ನಡೆದಿದೆ. ಸಕ್ರಿಯವಾಗಿ ಕಾರ್ಯಕರ್ತರಾಗಿದ್ದ ನಮ್ಮ ಯಾವೊಂದು ಬೇಡಿಕೆಯನ್ನು ಕೂಡಾ ಮುಸ್ಲಿಂ ಲೀಗ್ ನೇತಾರರು ನೆರವೇರಿಸಿಲ್ಲವೆಂಬುದಾಗಿ ಸಿಪಿಎಂ ಗೆ ಸೇರ್ಪಡೆಗೊಂಡ ಯುವಕರ ಮುಖಂಡ ತೂಮಿನಾಡು ನಿವಾಸಿ ಮುನೀರ್ ಕೆ ಎ ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಎಡರಂಗದ ಅಭ್ಯರ್ಥಿ ಸಿ […]