Blog Archive

ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ ಆಸ್ಪತ್ರೆಯಲ್ಲಿ ಮೃತ

Friday, August 7th, 2020
irfan

ಹುಬ್ಬಳ್ಳಿ:  ಬೀಗರನ್ನು ಬೀಳ್ಕೊಡಲು  ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಗುಂಡಿನ ಸುರಿಮಳೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ (52) ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಅಲ್ಲಿಯೇ ನೆಲೆಯೂರಿ ತನ್ನ ಅಪರಾಧ ಜಗತ್ತನ್ನು ವಿಸ್ತಾರ ಮಾಡಿಕೊಂಡು ಡಾನ್ ಆಗಿದ್ದ. ಮಗನ ಮದುವೆ ಮುಗಿಸಿ ಅತಿಥಿಗಳನ್ನು ಕಳುಹಿಸಲು ರಸ್ತೆ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಮಳೆಗರೆದಿದ್ದರು. ಇರ್ಫಾನ್ ತಮ್ಮ ಮಗನ ಮದುವೆ […]

ಹುಬ್ಬಳ್ಳಿ: ಎಸ್.ಡಬ್ಲೂ.ಆರ್ ಹೊಸ ಆವಿಷ್ಕಾರ: ಸೈಕಲ್ ಪೆಡಲ್ ಟ್ರಾಲಿ ಶೋಧನೆ

Thursday, August 6th, 2020
cycle pedal

ಹುಬ್ಬಳ್ಳಿ: ನೈಋತ್ಯ ರೈಲ್ವೇ ವಲಯದಲ್ಲಿ ಹೊಸ ಆವಿಷ್ಕಾರದ ಮೂಲಕ ವಿನೂತನ ಪ್ರಯತ್ನವೊಂದು ನಡೆದಿದ್ದು ಸೈಕಲ್ ಪೆಡಲ್ ಮೂಲಕ ಟ್ರಾಲಿಯನ್ನು ಆವಿಷ್ಕಾರ ಮಾಡಿದೆ. ಹೌದು…ಮೊದಲು ಯಂತ್ರಚಾಲಿತ ಟ್ರಾಲಿಯನ್ನು ನಡೆಸಲಾಗುತಿತ್ತು ಆದರೇ ಈಗ ಸೈಕಲ್ ಪೆಡಲ್ ಮೂಲಕವೇ ರೈಲ್ವೇ ಟ್ರ್ಯಾಕ್ ಮೇಲೆ ಟ್ರಾಲಿ ನಡೆಸುವ ಪ್ರಯತ್ನ ನಡೆಸಿದೆ. ಅಲ್ಲದೇ ರೈಲ್ವೇ ಟ್ರ್ಯಾಕ್ ವೀಕ್ಷಣೆ ಹಾಗೂ ಕಾಮಗಾರಿ ಪರಿಶೀಲನೆ, ಸಿಗ್ನಲ್ ಸೇರಿದಂತೆ ರೈಲ್ವೇಗೆ ಸಂಬಂಧಿಸಿದ ಎಲ್ಲ ರೀತಿಯ ಪರಿಶೀಲನೆ ನಡೆಸಬಹುದಾಗಿದ್ದು,ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ ತಯಾರಿಸಿದ ಸೈಕಲ್ ಪೆಡಲ್ ಟ್ರಾಲಿಯನ್ನು ರೈಲ್ವೇ […]

ಉಣಕಲ್ಲ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ

Thursday, August 6th, 2020
bagina

ಹುಬ್ಬಳ್ಳಿ  : ಉಣಕಲ್ಲ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಇಂದು ಉಣಕಲ್ಲ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ರಾಜಣ್ಣ ಕೊರವಿ , ಶ್ರೀ ಉಮೇಶಗೌಡ ಕೌಜಗೇರಿ ಗಂಗಾಧರ ದೊಡ್ಡವಾಡ ಗುರುರಾಜ್ ಸೂರ್ಯವಂಶಿ ಅಧ್ಯಕ್ಷರು ಸಹಕಾರಿ ಸಂಘ ಶಿವಾನಂದ ಶಿರಗುಪ್ಪಿ ವಿಠ್ಠಲ ಸಿಂಗ್ ಹಜೇರಿ ಅಡಿವಪ್ಪ ಮೆಣಸಿಕಾಯಿ ವಿರೂಪಾಕ್ಷಿ ಕಳ್ಳಿಮನಿ ರಂಗನಗೌಡ ಚಿಕ್ಕನಗೌಡ್ರ ಶಂಕರ್ ಧಾರವಾಡ ಶಿವಾನಂದ ರೆಡ್ಡಿ ಹಾಗೂ ಗ್ರಾಮದ ಉಪಸ್ಥಿತರಿದ್ದರು. ವರದಿ : ಶಂಭು ಮೆಗಾಮೀಡಿಯಾ […]

ಕೋವಿಡ್‌ -19 ಮಣಿಸಲು ಹುಬ್ಬಳ್ಳಿ ಸಿದ್ದಾರೂಢನ ಸಂಶೋಧನೆ

Friday, July 24th, 2020
chandrashekara

ಹುಬ್ಬಳ್ಳಿ : ನಗರದ ಸಿದ್ಧಾರೂಢ ಚಂದ್ರಶೇಖರ ಅಂಗಡಿ ಕೋವಿಡ್‌ -19 ಕೋರಾನಾ ಸಾಂಕ್ರಾಮಿಕ ರೋಗ ಮಣಿಸಲು ವಿಶಿಷ್ಟ ರೀತಿಯ ಸ್ಯಾನಿಟೈಸರ್‌ ತಮ್ಮ ತಂಡದೊಂದಿಗೆ ಸಂಶೋಧಿಸಿ ಹುಬ್ಬಳ್ಳಿಯ ಹೆಸರನ್ನು ವಿಶ್ವದಾದ್ಯಂತ ಬೆಳಗಿಸಿದ್ದಾನೆ. ವಿಜ್ಹ್‌ ಕ್ಲೀಂಜರ್‌ ಇ – ಸ್ಯಾನಿಟೈಜರ್‌ ಶೋಧಿಸಿದ ಸಿದ್ಧಾರೂಢನ ತಂಡವು ಜಾಗತಿಕ ಮಟ್ಟದಲ್ಲಿ ಇದೊಂದು ಮೊಟ್ಟ ಮೊದಲ ಉತ್ಪನ್ನ (ಮೇಡ್‌ ಇನ್‌ ಇಂಡಿಯಾ, ಮೇಡ್‌ ಫಾರ್‌ ಇಂಡಿಯಾ). ಇ-ಸ್ಯಾನಿಟೈಜರ್‌ ಎಂಬ ವಿನೂತನ, ವಿಶಿಷ್ಷ ಹಾಗೂ ಪರಿಸರ ಸ್ನೇಹಿ ಉತ್ಪನ್ನವನ್ನು ವಿವಿಧ ಕಾಲೇಜಿನ ಇಂಜಿನೀಯರಿಂಗ್‌ ವಿದ್ಯಾರ್ಥಿಗಳ ಗುಂಪೊಂದು […]

ಕೋರೊನಾ ಸೋಂಕಿತರ ಜತೆ ವೈದ್ಯರ ಬ್ಯಾಡ್ಮಿಂಟನ್

Tuesday, July 21st, 2020
badminton

ಹುಬ್ಬಳ್ಳಿ: ಕೊರೊನಾ ವೈರಸ್ ರೋಗಿಗಳನ್ನು ಕೊವಿಡ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಅನೇಕ ಘಟನೆಗಳು ನಡೆದಿವೆ. ಇಂತಹದ ನಡುವೆ ಕೊವಿಡ್ ರೋಗಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಗಳ ಸಹ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿಯ ಕೊರೊನಾ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳ ಜೊತೆ ಸ್ವತಃ ವೈದ್ಯರು ಬ್ಯಾಡ್ಮಿಂಟನ್ ಆಟ ಆಡುತ್ತಿದ್ದಾರೆ. ಕೊವಿಡ್ ರೋಗಿಗಳು ಮತ್ತು ವೈದ್ಯರು ಬ್ಯಾಡ್ಮಿಂಟನ್ ಆಡುತ್ತಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿಗಷ್ಟೆ ಕೊವಿಡ್ […]

ಹುಬ್ಬಳ್ಳಿ : 24ರ ನಂತರ ಲಾಕ್ ಡೌನ್ ಗೆ ಪ್ಲಾನ್

Tuesday, July 21st, 2020
hubballi

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ಮಾಡಿದ್ರು ಸಹ ದಾರಿಗೆ ಬರದ ಕೋವಿಡ್ ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದೆ. ಅಲ್ಲದೆ ಮತ್ತೊಂದು ಸುತ್ತಿನ ಲಾಕ್ ಡೌನ್ ಮಾಡಲು ಈಗಾಗಲೇ ಸದ್ದಿಲ್ಲದೆ ಪ್ಲಾನ್ ಮಾಡಿದೆ. ಹೌದು…ರಾಜ್ಯದಲ್ಲಿ ನಿತ್ಯ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..ಈ ಹಿನ್ನೆಲೆ ಈಗಾಗಲೇ ಲಾಕ್ ಡೌನ್ ಘೋಷಣೆ ಸಹ ಮಾಡಿದೆ.ಆದ್ರೆ ಇಷ್ಟೆಲ್ಲಾ ಮಾಡಿದ್ರು ಸಹ ಕೊರೋನಾ ರಣಕೇಕೆ ಮಾತ್ರ ನಿಂತಿಲ್ಲ. […]

ಹುಬ್ಬಳ್ಳಿ : ಕೋರೊನಾ ನಿಯಂತ್ರಣಕ್ಕೆ ಸ್ವಯಂ ಸೇವಕರ ನೇಮಕಾತಿ

Monday, July 20th, 2020
corona warriors

ಹುಬ್ಬಳ್ಳಿ : ಕೊರೊನಾ ಮಹಾಮಾರಿ ತಡೆಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹೊಸ ತಂತ್ರ ಕಂಡುಕೊಂಡಿದೆ. ನಗರದ ಯುವ ಹಾಗೂ ಉತ್ಸಾಹಿ ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಕೋವಿಡ್-19 ನಿಯಂತ್ರಣಕ್ಕೆ ಮುಂದಾಗಿದೆ. ಸೋಂಕು ತಡೆ ಸಲುವಾಗಿ ಧಾರವಾಡ ಜಿಲ್ಲಾಡಳಿತ ಹಾಗೂ ಪಾಲಿಕೆಯೊಂದಿಗೆ ಕೈಜೋಡಿಸುವ ಸಲುವಾಗಿ ಕೋವಿಡ್ ನಿಯಂತ್ರಣಕ್ಕೆ ಸ್ವಯಂ ಸೇವಕರ ತಂಡ ರಚಿಸಲಾಗುತ್ತಿದೆ. ಪಾಲಿಕೆಯ ಎಲ್ಲ ವಾರ್ಡ್ ಮಟ್ಟದ ಕಾರ್ಯಪಡೆಗಳನ್ನು ರಚಿಸಿ, ಜನರಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಜೈವಿಕ ತ್ಯಾಜ್ಯ ವಿಲೇವಾರಿ ಕುರಿತು […]

ಹುಬ್ಬಳ್ಳಿ ಮೂರುಸಾವಿರ ಮಠ ಸೀಲ್ ಡೌನ್

Wednesday, June 24th, 2020
Mooru-savira-Matt

ಹುಬ್ಬಳ್ಳಿ: ಕೊರೋನಾ ವೈರಸ್ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೃದ್ದಿಸುತ್ತಿವೆ. ಉತ್ತರ ಕರ್ನಾಟಕ ರಾಜಧಾನಿ, ಛೋಟಾ ಮುಂಬೈ, ವಾಣಿಜ್ಯ ನಗರಿ ಎಂದೇ ಖ್ಯಾತಿ ಹೊಂದಿರುವ ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ‌ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರತಿದಿನ ಭಕ್ತರು ಗದ್ದುಗೆ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೀಗ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಮಠದಲ್ಲಿ ಭಕ್ತರಿಗೆ ಗದ್ದುಗೆಯ ದರ್ಶನ ಭಾಗ್ಯ ಇಲ್ಲವಾಗಿದೆ. ಮಠದ ಪಕ್ಕದಲ್ಲೆ ಪಿ- 9418 ಸೊಂಕಿತನಿಂದ ಮಠದ […]

ಹುಬ್ಬಳ್ಳಿಯಿಂದ ಮತ್ತೆ ವಿಮಾನ ಹಾರಾಟ ಸಾಧ್ಯತೆ

Friday, June 19th, 2020
indigo flight

ಹುಬ್ಬಳ್ಳಿ : ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂ.೨೪ ರಿಂದ ವಿಮಾನ ಸಂಚಾರ ಆರಂಭಿಸಲು ಇಂಡಿಗೋ ಏರಲೈನ್ಸ್‌ ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್‌ ಠಾಕ್ರೆ, ಹುಬ್ಬಳ್ಳಿ-ಕಣ್ಣೂರು ಮತ್ತು ಹುಬ್ಬಳ್ಳಿ- ಗೋವಾ ವಿಮಾನ ಸಂಚಾರಕ್ಕೆ ಅವಶ್ಯಕತೆಯಿರುವಷ್ಟು ಪ್ರಯಾಣಿಕರು ಬಂದರೆ ವಿಮಾನ ಹಾರಲಿವೆ ಎಂದಿದ್ದಾರೆ. ಈ ಹಿಂದೆಯೂ ವಿಮಾನ ಪ್ರಯಾಣ ಆರಂಭಿಸಲು ಪ್ರಯತ್ನಿಸಲಾಗಿತ್ತು ಆದರೆ ಸೂಕ್ತ ಪ್ರಮಾಣದಲ್ಲಿ ಪ್ರಯಾಣಿಕರು ಬರದೇ ಇರದ್ದರಿಂದ ಬಂದ್‌ […]

ಹುಬ್ಬಳ್ಳಿಗೆ ಪ್ರವೇಶಿಸಿದ ಮುಂಗಾರು, ವರುಣನ ಅಬ್ಬರ

Saturday, May 30th, 2020
hubballi rain

ಹುಬ್ಬಳ್ಳಿ : ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಹುಬ್ಬಳ್ಳಿಯಲ್ಲಿ ಮುಂಗಾರು ಮಳೆ ಮೇ ತಿಂಗಳ ಕೊನೆಯ ದಿನ ಮೇ.30 ರಂದು ಶನಿವಾರ ಹು-ಧಾ ಅವಳಿ ನಗರಕ್ಕೆ ಗುಡುಗು ಸಿಡಿಲಿನ ಸಮೇತ ಕಾಲಿಟ್ಟಿತ್ತು. ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶವಾಗಿದ್ದು, ಕರ್ನಾಟಕದಲ್ಲೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಮರಗಳು, ಕೆಲವರ ಪ್ರಾಣ ಹಾನಿಯೂ ಕೂಡ ಆಗಿತ್ತು. ಅಲ್ಲಿ ಹಗಲಿನಲ್ಲಿಯೇ ಮಳೆಯಾಗಿದ್ದರಿಂದ ಅನಾಹುತಕ್ಕೆ […]