ಕೊನೆಗೂ ಸಾಕಾರಗೊಂಡ ಅಂತರ್ ರಾಜ್ಯ ಕಡಿಮೆ ದೂರದ ಸಂಚಾರಿ ರಸ್ತೆ

Tuesday, April 12th, 2016
Sullia Bandadka

ಕಾಸರಗೋಡು : ಹಲವು ವರ್ಷಗಳ ಬಹು ನಿರೀಕ್ಷಿತ ಸುಳ್ಯ-ಬಂದಡ್ಕ ಅಂತರ್ ರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ತಿಯಾಗಿದೆ.ಮೂರು ಕೋಟಿ ರೂ.ವ್ಯಯಿಸಿ ಈ ರಸ್ತೆಯ ಕಾಮಗಾರಿ ನಡೆಸಲಾಗಿದೆ.ಈ ಮೂಲಕ ಬಂದಡ್ಕ ದಾರಿಯಾಗಿ ಸುಳ್ಯ ತಲಪಲು ಅತೀ ಕಡಿಮೆ ದೂರದ ರಸ್ತೆಯ ಕನಸು ನನಸಾಗಿದೆ.ಕೇರಳದ ಕನ್ನಾಡಿತೋಡಿನಿಂದ ಸುಳ್ಯ ತಾಲೂಕಿನ ಆಳೆಟ್ಟಿ ಗ್ರಾ.ಪಂ ನ ಕೋಲ್ಚಾರ್ ವರೆಗಿನ 1800 ಮೀಟರ್ ದೂರದ ರಸ್ತೆಯ ಕಾಮಗಾರಿ ಪೂರ್ತೀಕರಿಸಲಾಗಿದೆ.ಏ.14 ರಂದು ಈ ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಪುತ್ತೂರಿನ ಹರೀಶ್ ಪೂಜಾರಿ ಈ ಕಾಮಗಾರಿಯ ಟೆಂಡರ್ […]

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಏರ್ಪಡಿಸಲು ಆದೇಶ

Monday, April 11th, 2016
Eelection Commission

ಕಾಸರಗೋಡು : ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲೂ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಎ.30 ರೊಳಗೆ ಖಚಿತಪಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಕಾಸರಗೋಡು ಕಲೆಕ್ಟರೇಟ್‌ನ ಮಿನಿ ಕಾನರೆನ್ಸ್ ಹಾಲ್‌ನಲ್ಲಿ ಜರಗಿದ ಚುನಾವಣಾ ಸೆಕ್ಟರಲ್ ಆಫೀಸರ್‌ಗಳ ಅವಲೋಕನಾ ಸಭೆಯಲ್ಲಿ ಅವರು ಈ ಬಗ್ಗೆ ಆದೇಶಿಸಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ಶೌಚಾಲಯ, ರ‍್ಯಾಂಪ್, ಕುಡಿಯುವ ನೀರು, ಪೀಠೋಪಕರಣಗಳು, ಗಾಲಿ ಕುರ್ಚಿ, ಪ್ರಥಮ ಚಿಕಿತ್ಸೆ , ವಿದ್ಯುತ್, ದೂರವಾಣಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಬೇಕಾಗಿದೆ. ಶೌಚಾಲಯದ ವ್ಯವಸ್ಥೆ […]

ಮತದಾರರ ಕೈಯಲ್ಲಿ ದೇಶದ ಭವಿಷ್ಯ

Monday, April 11th, 2016
Kerala Vote

ಕಾಸರಗೋಡು : ನಾಡಿನ ಭವಿಷ್ಯ ತಮ್ಮ ಕೈಯ್ಯಲಿದೆ ಎಂಬುದನ್ನು ಮತದಾರರು ತಿಳಿದಿರಬೇಕು ಎಂದು ಖ್ಯಾತ ಸಾಹಿತಿ ಡಾ.ಅಂಬಿಕಾಸುತನ್ ಮಾಂಙಾಡ್ ಹೇಳಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಮತದಾರರಿಗಿರುವ ತಿಳುವಳಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಅಧಿಕಾರವಿದ್ದು , ಅದರ ಸ್ಪಷ್ಟ ಅರಿವು ನಮಗಿರಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ‘ತಾನು ಮತ ಚಲಾಯಿಸಿ ತನ್ನ ಕರ್ತವ್ಯವನ್ನು ಪಾಲಿಸುತ್ತೇನೆ’ […]

‘ನಮ್ಮ ಕುಡ್ಲ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಏಕಕಾಲದಲ್ಲಿ ಅದ್ದೂರಿ ಬಿಡುಗಡೆ

Saturday, April 9th, 2016
Namma kudla Film

ಮಂಗಳೂರು : ‘ನಮ್ಮ ಕುಡ್ಲ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಚಾಂದ್ರಮಾನ ಯುಗಾದಿಯ ಶುಭದಿನ ಎಪ್ರಿಲ್ 8 ಶುಕ್ರವಾರ ಮಂಗಳೂರು, ಉಡುಪಿ ಸೇರಿದಂತೆ ಒಟ್ಟು 13 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಅದಕ್ಕೂ ಮೊದಲು ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಚಿತ್ರ ತಂಡದ ನಾಯಕ, ನಾಯಕಿ ಹಾಗೂ ಇನ್ನಿತರ ನಟರು ವಾಹನ ಜಾಥ ನಡೆಸಿದರು. ಆಸರೆ ಪೌಂಡೇಶನ್ ಮಂಗಳೂರು ಇದರ ಮುಖ್ಯಸ್ಥೆ, ಡಾ. ಆಶಾ ಜ್ಯೋತಿ ರೈ ದೀಪ ಬೆಳಗಿಸುವುದರ […]

ದುಬೈ : ಹರ್ಷಾದ್ ವರ್ಕಾಡಿಗೆ ಸಮ್ಮಾನ

Wednesday, April 6th, 2016
Harshad Vorkady

ಮಂಜೇಶ್ವರ: ದುಬೈ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರನ್ನು ಸಮ್ಮಾನಿಸಲಾಯಿತು. ಮಲಬಾರ್ ಕಲಾ ಸಾಂಸ್ಕ್ರತಿಕ ಕಲಾ ವೇದಿಕೆ ಹಾಗೂ ದುಬೈ ಕನ್ನಡಿಗರ ಜಂಟಿ ಆಶ್ರಯದಲ್ಲಿ ದುಬ ಇಂಡಿಯನ್ ಸ್ಕೂಲ್ ಆಡಿಟೋರಿಯಂನಲ್ಲಿ ಜರುಗಿದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಅನಿವಾಸಿ ಉದ್ಯಮಿ ಪದ್ಮಶ್ರಿ ಡಾ.ಬಿ.ಆರ್.ಶೆಟ್ಟಿ ಹರ್ಷಾದ್ ವರ್ಕಾಡಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಚಿವರುಗಳಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಯುಎಇ ಎಕ್ಸ್‌ಚೇಂಜ್ ಅಧ್ಯಕ್ಷ […]

ತಂತ್ರಜ್ಞಾನಗಳ ಉಪಯೋಗವನ್ನು ಗರಿಷ್ಠಗಳಸಿ ಕೊಳ್ಳುವಲ್ಲಿ ಹಿಂದುಳಿಯಬಾರದು : ಡಾ.ಕೆ.ವಿ.ಆರ್.ಠಾಗೂರ್

Wednesday, April 6th, 2016
Karnataka Janapada Parishad

ಕುಂಬಳೆ: ಶ್ರೇಷ್ಠ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗಳಿರುವ ಭಾರತೀಯ ಪ್ರಾಚೀನ ಕಲೆಗಳ ದಾಖಲಾತಿಯಲ್ಲಿ ನಾವು ಹಿಂದುಳಿದಿದ್ದೇವೆ. ಇತಿಹಾಸದ ನನಹುಗಳಿಲ್ಲದೆ ಮುಂದಿನ ತಲೆಮಾರಿಗೆ ಕೃತಿ,ಸಾಧನೆಗಳ ಅರಿವು ಮೂಡಿಸಲು ದಾಖಲೀಕರಣಗಳ ಪ್ರಯತ್ನಗಳು ಇನ್ನಷ್ಟು ಆಗಬೇಕಿದೆಯೆಂದು ಕಾರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಕೆ.ವಿ.ಆರ್.ಠಾಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕೈಗೆತ್ತಿಕೊಂಡಿರುವ ಜಾನಪದ ಕಲೆ, ಕಲಾವಿದ ಹಾಗೂ ಪ್ರಾಚೀನ ಆಚರಣೆಗಳ ಪುಸ್ತಕ ಹಾಗೂ ಅಂತರ್ಜಾಲ ದಾಖಲೀಕರಣದ ಪೂರ್ವಭಾವೀ ಪರಿಚಯ ಪತ್ರವನ್ನು ಘಟಕದ ಕಾರ್ಯದರ್ಶಿ ಕೇಳು ಮಾಸ್ಟರ್ […]

‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8 ರ ಚಾಂದ್ರಮಾನ ಯುಗಾದಿಯಂದು ಬಿಡುಗಡೆ

Wednesday, April 6th, 2016
Namma Kudla

ಮಂಗಳೂರು : ತುಳು ಚಲನಚಿತ್ರ ‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8ರ ಚಾಂದ್ರಮಾನ ಯುಗಾದಿಯ ಶುಭದಿನದಂದು ಬಿಡುಗಡೆಗೊಳ್ಳಲಿದೆ. ಚಿತ್ರದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಯಕ ನಟ ಹಾಗೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪ್ರಕಾಶ್ ಶೆಟ್ಟಿ ಧರ್ಮನಗರ ಮಾತನಾಡಿ ಈ ಚಿತ್ರವು “ವಾರ್ ಫಾರ್ ಪೀಸ್”ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡ ಈ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡು ದಾಖಲೆ ನಿರ್ಮಿಸುವತ್ತ ಮುಂದಡಿಯಿಡಲಿದೆ. ಮನೆಮಂದಿಯೆಲ್ಲಾ ಮನರಂಜಿಸಬಹುದಾದ ಈ ಚಿತ್ರವು ವಿಶೇಷ […]

ಕುಂಬಳೆ ರೈಲ್ವೇ ಫ್ಲಾಟ್ ಫಾರಂ ನಲ್ಲಿ ಕಾಂಕ್ರಿಟ್ ಕುಸಿದು ಕಲ್ಲುಗಳು ಬೀಳುತ್ತಿವೆ: ಪ್ರಯಾಣಿಕರು ಆತಂಕದಲ್ಲಿ

Sunday, April 3rd, 2016
platform

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಕಾಂಕ್ರೀಟ್ ಕುಸಿದು ಸಿಮೆಂಟ್ ಗಳು ಎದ್ದು ದೊಡ್ಡ ದೊಡ್ಡ ಕಲ್ಲುಗಳು ಬೀಳಲು ಆರಂಭಿಸಿರುವುದು ಇಲ್ಲಿಯ ಪ್ರಯಾಣಿಕರಲ್ಲಿ ಆತಂಕ ಹಾಗೂ ಭಯವನ್ನು ಸೃಷ್ಟಿಸಿದೆ. 250 ಮೀಟರ್ ಉದ್ದವಿರುವ ಫ್ಲಾಟ್ ಫರಂ ನ ಮೂರು ಕಡೆಗಳಲ್ಲಿ ಕಾಂಕ್ರೀಟ್ ಕುಸಿದು ದೊಡ್ದ ಗಾತ್ರದ ಕಲ್ಲುಗಳು ಬೀಳಲಾರಂಭಿಸಿರುವುದರಿಂದ ಪ್ರಯಾಣಿಕರು ಭಯದಿಂದ ಫ್ಲಾಟ್ ಫಾರಮ್ ನ್ನು ಪ್ರವೇಶಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂತಹ ಭೀತಿಯ ವಾತಾವರಣವಿದ್ದರೂ ಅಧಿಕೃತರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ […]

ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ- ಕಾಣಿಯೂರು ಶ್ರೀ

Sunday, April 3rd, 2016
Kaniyooru seer

ಮುಳ್ಳೇರಿಯ: ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತ ಸರ್ವವ್ಯಾಪಿ. ದೇವರ ಬಗ್ಗೆ ನಂಬಿಕೆ, ಆತ್ಮ ವಿಶ್ವಾಸ, ಭಕ್ತಿ-ಶ್ರದ್ಧೆಯಿಂದಾಗಿ ಭಗವಂತ ನಮಗೆ ಒಲಿಯುತ್ತಾನೆ. ನಮ್ಮಲ್ಲಿರುವ ದೇವರ ಇರುವಿಕೆಯ ಬಗೆಗಿನ ಗೊಂದಲದಿಂದಾಗಿ ನಮಗೆ ಪರಿಪೂರ್ಣ ಫಲ ಲಭಿಸಲಾರದು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರು ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ […]

ಹೊಸತನಗಳ ಹೊಸ ತುಳು ಚಿತ್ರ ‘ರಂಬಾರೂಟಿ’ ಏಪ್ರಿಲ್ 1 ರಂದು ಬಿಡುಗಡೆ

Thursday, March 31st, 2016
Rambarooti

ಮಂಗಳೂರು : ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಚಿತ್ರಪ್ರೇಮಿಗಳಿಗೆ ಮನರಂಜನೆ ನೀಡಲು ಸಿದ್ದಗೊಂಡಿದೆ ಎಂದು ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಗರದಲ್ಲಿ ಚಿತ್ರದ ಬಿಡುಗಡೆ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ರಂಬಾರೂಟಿ ಚಿತ್ರ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು ಹಾಗೂ ಶ್ರೀನಿವಾಸ್ ಉಜಿರೆ ನಿರ್ಮಾಣದಲ್ಲಿ ಮೂಡಿಬಂದಿದೆ. ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ಚಿತ್ರ ಮಂದಿರಗಳಲ್ಲಿ ಚಿತ್ರ ಎಪ್ರಿಲ್ 1 […]