ಮುಂಬೈ ತ್ರಿವಳಿ ಸ್ಪೋಟ 18ಸಾವು 131ಮಂದಿಗೆ ತೀವ್ರ ಗಾಯ

Thursday, July 14th, 2011
Mumbai-attack/ಮುಂಬೈ ಸ್ಫೋಟ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಬುಧವಾರ ಸಂಜೆ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, 131 ಮಂದಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಭಯೋತ್ಪಾದನೆ ದಾಳಿ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಆದರೆ ತ್ರಿವಳಿ ಸ್ಫೋಟ ನಡೆದು 15 ಗಂಟೆಗಳಾದರೂ ಯಾವುದೇ ಭಯೋತ್ಪಾದನೆ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಅಲ್ಲದೆ ಮೃತ ವ್ಯಕ್ತಿಯೊಬ್ಬರ ಮರೋಣೋತ್ತರ ಪರೀಕ್ಷೆಯ ವೇಳೆ ಶರೀರದಲ್ಲಿ ಐಇಡಿ ಸರ್ಕ್ಯೂಟ್ ಪತ್ತೆಯಾಗಿರುವುದು ಮತ್ತಷ್ಟು ಶಂಕೆಗೆ ಎಡೆ ಮಾಡಿಕೊಟ್ಟಿದೆ. […]

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು101 ಪದಕಗಳು

Thursday, October 14th, 2010
ಸೈನಾ ನೆಹ್ವಾಲ್

ನವದೆಹಲಿ : ದೆಹಲಿಯಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಭರ್ಜರಿ 38 ಸ್ವರ್ಣ ಪದಕ, 27ಬೆಳ್ಳಿ, 36 ಕಂಚು ಒಟ್ಟು101  ಪದಕ ಗೆದ್ದುಕೊಳ್ಳುವ ಮೂಲಕ ಆತಿಥೇಯ ಭಾರತ ತಂಡವು ನೂತನ ಇತಿಹಾಸ ರಚಿಸಿದೆ. ಕಾಮನ್ ವೆಲ್ತ್ ಗೇಮ್ಸ್ ನ ಕೊನೆಯ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಿಂಗಲ್ಸ್ ವಿಭಾಗದಲ್ಲಿ ಜಯಗಳಿಸಿ ಭಾರತವನ್ನು ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆರುವಂತೆ ಮಾಡಿದರು. 2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 22 ಚಿನ್ನಗಳನ್ನು […]

ಅಯೋದ್ಯೆಯ ವಿವಾದಿತ ಸ್ಥಳದ ತೀರ್ಪು ಅಲಹಾಬಾದ್ ಹೈಕೋರ್ಟಿನಿಂದ ಪ್ರಕಟ

Thursday, September 30th, 2010
ಅಲಹಾಬಾದ್ ಹೈಕೋರ್ಟ್

ಲಖನೌ  : ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. 60 ವರ್ಷಗಳ ವಿವಾದಿತ 2.7 ಎಕರೆ ಭೂಮಿಯನ್ನು  ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು  ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿದೆ. ರಾಮಲಲ್ಲಾನ ವಿಗ್ರಹ ಇರುವ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು  ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, […]

ಅಯೋಧ್ಯೆಯ ಐತಿಹಾಸಿಕ ತೀರ್ಪಿಗಾಗಿ ಕಾತರಗೊಂಡ ದೇಶದ ಜನತೆ

Thursday, September 30th, 2010
ಅಯೋಧ್ಯೆಯ ಐತಿಹಾಸಿಕ ತೀರ್ಪು

ನವ ದೆಹಲಿ : ಹದಿನೆಂಟು ವರ್ಷದ ಹಿಂದೆ ನೆಲ ಸಮ ಗೊಂಡ ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಗೆ ಸಂಬಧಿಸಿದ ಪ್ರಕರಣಕ್ಕೆ ಇಂದು ಅಲಹಾಬಾದ್‌ ನ್ಯಾಯಾಲಯ ತೀರ್ಪು ನೀಡಲಿದೆ. ಈ  ಐತಿಹಾಸಿಕ ತೀರ್ಪಿಗಾಗಿ  ದೇಶದ ಜನತೆ ಕಾತರರಾಗಿದ್ದಾರೆ. ಅಲಹಾಬಾದ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಪ್ರಕಟಿಸಲಿದ್ದು,  ಈ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ನ್ಯಾಯಾಲಯದ ಆವರಣದ ಸುತ್ತಲಿನ ಪ್ರದೇಶಕ್ಕೆ ನಿರ್ಭಂಧ ಹೇರಲಾಗಿದೆ. ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿಂದಾಗಿ […]

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ತೀರ್ಪು ಸೆಪ್ಟೆಂಬರ್ 30 ಕ್ಕೆ

Tuesday, September 28th, 2010
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ

ನವದೆಹಲಿ : ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ತೀರ್ಪು ಮುಂದೂಡಲು ರಮೇಶ್ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಸೆಪ್ಟೆಂಬರ್ 30ರಂದು ಗುರುವಾರ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 24ರಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಬೇಕಿದ್ದ ತೀರ್ಪಿನ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ […]

ಅಯೋಧ್ಯ ವಿವಾದದ ತೀರ್ಪು ಮುಂದಕ್ಕೆ : ಜಿಲ್ಲಾಡಳಿತ ಹೊರಡಿಸಿರುವ ಆದೇಶ ರದ್ದು

Thursday, September 23rd, 2010
ಅಯೋಧ್ಯೆ

ಮಂಗಳೂರು : ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದ ಹಿನ್ನಲೆಯಲ್ಲಿ ಶುಕ್ರವಾರ ಪ್ರಕಟವಾಗಬೇಕಿದ್ದ ತೀರ್ಪು ಸೆಪ್ಟೆಂಬರ್ 28 ಕ್ಕೆ ಮುಂದೂಡಲಾಗಿದೆ. ರಮೇಶ್ ಚಂದ್ರ ತ್ರಿಪಾಠಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ಶುಕ್ರವಾರ ಅಪರಾಹ್ನ ಪ್ರಕಟಿಸ ಬೇಕಿದ್ದ ತೀರ್ಪನ್ನು ಮುಂದೂಡಿದೆ. ತ್ರಿಪಾಠಿಯ  ಅರ್ಜಿಯನ್ನು ಮತ್ತೊಂದು ಪೀಠವು ವಿಚಾರಣೆ ನಡೆಸಲಿದ್ದು.  ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ನ್ಯಾಯಾಲಯ ಮುಂದೂಡಿ, ಆ ತನಕ ಅಲಹಾಬಾದ್ ಹೈಕೋರ್ಟ್ ತೀರ್ಪು […]

ಹಿಂದೂ ದೇವರು ಮತ್ತು ದೇವತೆಗಳನ್ನು ಶೂಗಳ ಮೇಲೆ ಚಿತ್ರಿಸಿದ ಅಮೇರಿಕ ಶೂ ಕಂಪೆನಿ

Wednesday, September 22nd, 2010
ಹಿಂದೂ ದೇವರು ಮತ್ತು ದೇವತೆಗಳನ್ನು ಶೂಗಳ ಮೇಲೆ ಚಿತ್ರಿಸಿದ ಅಮೇರಿಕ ಶೂ ಕಂಪೆನಿ

ವಾಷಿಂಗ್ಟನ್ : ಹಿಂದೂಗಳು ಪೂಜಿಸುವ ದೇವರು ಮತ್ತು ದೇವತೆಗಳನ್ನು ಕಾಲಿಗೆ ಹಾಕುವ ಶೂಗಳಿಗೆ ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ  ಹಿಂದೂ ಸಮುದಾಯದಿಂದ ತೀವ್ರ ಆಕ್ಷೇಪ ಕ್ಕೆ ಗುರಿಯಾಗಿದೆ. ಅಮೆರಿಕದ ಗಿಟಾರ್  ವಾದಕ ದಿವಂಗತ ಜಿಮಿ ಹೆಂಡ್ರಿಕ್ಸ್ ಹೆಸರಿನಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಗಿತ್ತು . ಹಿಂದೂಗಳ ವಿರೋಧ ಹಾಗೂ ಪ್ರತಿಭಟನೆಗೆ ಮಣಿದ ಅಮೆರಿಕ ಮೂಲದ ಶೂ ಕಂಪನಿ ಶೂಗಳನ್ನು ಮಾರಾಟ ಮಾಡದೆ ಮಾರುಕಟ್ಟೆಯಿಂದ ವಾಪಸ್ ಪಡೆದಿದೆ. ಶೂನಲ್ಲಿ ಹಿಂದೂ ದೇವರ ಚಿತ್ರಗಳನ್ನು […]

ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

Thursday, September 9th, 2010
ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

ನ್ಯೂಯಾರ್ಕ್: ಯು.ಎಸ್ ಓಪನ್ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಅವರು ಪಾಕಿಸ್ಥಾನದ ಐಸಾಮ್ ಉಲ್ ಹಕ್ ಕುರೇಶಿ ಜತೆಗೂಡಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.  ಬೋಪಣ್ಣ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆಯಾಗಿದೆ. ಯು.ಎಸ್ ಓಪನ್ ಕೂಟದ 16ನೇ ಶ್ರೇಯಾಂಕಿತರಾದ ಬೋಪಣ್ಣ – ಕುರೇಶಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10ನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾದ ವೆಸ್ಲೆ ಮೂಡಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ವಿರುದ್ಧ 7-5, 7-6 ಅಂತರದಿಂದ ಜಯ ದಾಖಲಿಸಿದರು. ಈ […]

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

Saturday, August 21st, 2010
ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಜಾಮೀನು ಪಡೆದುಕೊಂಡ ಮೂರು ವಾರಗಳ ನಂತರ ಇದೀಗ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತ ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. 2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತ್ತು. 25,000 ರೂಪಾಯಿ ಠೇವಣಿ ಮತ್ತು ಇಬ್ಬರು […]