ಹೂವಿನ ವ್ಯಾಪಾರಿ ದಂಪತಿಗಳ ಬೈಕಿಗೆ ಟೆಂಪೋ ಡಿಕ್ಕಿ, ಪತ್ನಿ ಸಾವು, ಪತಿ ಗಂಭೀರ

Wednesday, July 17th, 2013
Flower Merchants Killed

ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ. ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ಉತ್ತರಾಖಂಡ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ 10 ಲಕ್ಷ ಸಹಾಯಧನ

Wednesday, July 17th, 2013
kmf cheque

ಮಂಗಳೂರು : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು  ಉತ್ತರಾಖಂಡ ದಲ್ಲಿ ಪ್ರಕೃತಿ ವಿಕೋಪದಿಂದ ಕೇದಾರನಾಥ, ಉತ್ತರಕಾಶಿ ಹಾಗೂ ಇತರ ಪ್ರದೇಶಗಳಲ್ಲಿ ಅಪಾರ ಜನರು ಪ್ರಾಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿ, ಅಪಾರ ಆಸ್ತಿ ನಷ್ಟವಾಗಿರುವುದನ್ನು ಮನಗಂಡು ಮುಖ್ಯಮಂತ್ರಿಗಳ ಮೂಲಕ ಸಹಾಯಧನ ಚೆಕ್ಕನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈರವರೊಂದಿಗೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರು ಮತ್ತು ನಿರ್ದೇಶಕರಾದ ಶ್ರೀ ಸೀತರಾಮ ರೈ ಸವಣೂರು, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ […]

ಮೋದಿಯವರನ್ನು ಪ್ರಧಾನಿ ಹುದ್ದೆಗೇರಲು ಅವಕಾಶ ಮಾಡಿಕೊಡಬಾರದು : ಪೂಜಾರಿ

Wednesday, July 17th, 2013
Poojary Press

ಮಂಗಳೂರು : ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಸಮರ್ಥ ವ್ಯಕ್ತಿಯಾಗಿದ್ದು, ಅವರ ಸಿದ್ದಾಂತಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿಯಾಗಿರದೆ ಎಲ್ಲಾ ಸಮುದಾಯಗಳಿಗೂ ಅಪಾಯಕಾರಿಯಾಗಿದೆ. ಮೋದಿ ತನ್ನ ಹುಸಿ ಮಾತುಗಳಿಂದ ದೇಶವನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ , ಮೋದಿ  ಓರ್ವ ‘ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಸಿದ್ದಾಂತಗಳಿಗೆ ಬಿಜೆಪಿಯ ಉನ್ನತ ಮಟ್ಟದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಅಡ್ವಾಣಿಯವರು ಕೂಡ […]

ಕಾಲಮಿತಿ ಯಕ್ಷಗಾನ ಪ್ರದರ್ಶನ ಅಪೇಕ್ಷಣೀಯವಾಗಿದೆ : ಪ್ರೊ.ಸಾಮಗ

Tuesday, July 16th, 2013
Darmasthala Yakshagana

ಉಜಿರೆ: ಇಂದಿನ ಯುವಜನತೆ ಹಾಗೂ ಮುಂದಿನ ತಲೆಮಾರಿಗೆ ಯಕ್ಷಗಾನದ ಸೊಗಡನ್ನು ಪರಿಚಯಿಸುವ ದೃಷ್ಟಿಯಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಅಪೇಕ್ಷಣಿಯವಾಗಿದೆ. ಇದರಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಅದನ್ನು ಸುಲಭದಲ್ಲಿ ಪರಿಹರಿಸಬಹುದು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಹೇಳಿದರು. ಧರ್ಮಸ್ಥಳದಲ್ಲಿ ಮಂಗಳವಾರ ಆಯೋಜಿಸಲಾದ ಯಕ್ಷಗಾನ ಪ್ರದರ್ಶನದ ಬಗ್ಯೆ ಚಿಂತನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದಲಾದ ಆಧುನಿಕ ಜೀವನ ಶೈಲಿ ಹಾಗೂ ಕಾಲಧರ್ಮಕ್ಕೆ ಅನುಗುಣವಾಗಿ ಯಕ್ಷಗಾನ ಪ್ರದರ್ಶನದಲ್ಲಿ ಕೆಲವು ಆಂತರಿಕ […]

ಕೆ.ಎಂ.ಎಫ್ ನ ಹೈ ಸ್ಪೀಡ್ ಹಾಲು ಪ್ಯಾಕಿಂಗ್ ಯಂತ್ರಕ್ಕೆ ಹಾಗೂ ನಂದಿನಿ ಉತ್ಪನ್ನಗಳ ವಿಶೇಷ ಮಾರಾಟ ಯೋಜನೆಗೆ ಚಾಲನೆ

Tuesday, July 16th, 2013
Kmf high speed Packing

ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನೂತನ ಹೈಸ್ಪೀಡ್‌ ಹಾಲು ಪ್ಯಾಕಿಂಗ್‌ ಯಂತ್ರದ ಉದ್ಘಾಟನೆ ಮತ್ತು ನಂದಿನಿ ಉತ್ಪನ್ನಗಳ ವಿಶೇಷ ಮಾರಾಟ ಯೋಜನೆಯ ಬಿಡುಗಡೆ ಸಮಾರಂಭವು ಸೋಮವಾರ ನಗರದ ಕುಲಶೇಖರದಲ್ಲಿ ಜರಗಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರಕುಮಾರ್ ಅವರು ಈ ಯೋಜನೆಗೆ ಚಾಲನೆ ನೀಡಿದರು. ಕೆ.ಎಂ.ಎಫ್ ನ ಗುಣಮಟ್ಟದ ಉತ್ಪನ್ನಗ್ಳಾಗಳಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಜಿಲ್ಲೆಯಲ್ಲಿ ಉತ್ತಮ ಬೇಡಿಕೆ ಹೆಚ್ಚಿದೆ. ಇಂದಿನ ಪೈಪೋಟಿ ಯುಗದಲ್ಲಿ ಗ್ರಾಹಕರ […]

ಕ್ಯಾರಿ ಓವರ್ ಪದ್ಧತಿ ಜಾರಿಗೆ ತರಲು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

Tuesday, July 16th, 2013
Polytechnic students protest

ಮಂಗಳೂರು : ಪಾಲಿಟೆಕ್ನಿಕ್ ಸರ್ವಕಾಲೇಜು ಸಂಘದ ವತಿಯಿಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಯಾದ (ಕ್ಯಾರಿ ಓವರ್ ನಿಯಮ)ದ ಶೀಘ್ರ ಪರಿಹಾರಕ್ಕಾಗಿ ಜುಲೈ 16 ಮಂಗಳವಾರ ಬೆಳಿಗ್ಗೆ ಮಂಗಳೂರು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯ ನೇತೃತ್ವವನ್ನುವಹಿಸಿದ ಅಧ್ಯಕ್ಷರಾದ ರಮಿತ್ ಕುಮಾರ್  ವಿದ್ಯಾರ್ಥಿಗಳ ಪರ ಮಾತಾಡುತ್ತಾ ಹಿಂದಿನ ಸರಕಾರ ಹೊರಡಿಸಿದ ಆದೇಶದಲ್ಲಿ 2013-14ನ ಸಾಲಿನಿಂದ ಕಡ್ಡಾಯವಾಗಿ ಡಿಪ್ಲೋಮಾ ವಿದ್ಯಾರ್ಥಿಗಳು ಮೂರನೇ ಹಾಗೂ ಐದನೇ ಸೆಮಿಸ್ಟರ್  ಗಳಿಗೆ ಪ್ರವೇಶ ಪಡೆಯಲು 2009-10ನೇ ಸಾಲಿನಂತೆಯೇ ನಾಲ್ಕು […]

ನಾಳೆ ಮಂಗಳೂರಿನಲ್ಲಿ ಬಸ್ ಬಂದ್ ಇಲ್ಲ : ಬಸ್ಸು ಮಾಲಕರ ಸಂಘ

Tuesday, July 16th, 2013
No Bus Bandh

ಮಂಗಳೂರು : ನಾಳೆ ಎರಡು ಜಿಲ್ಲೆಗಳಲ್ಲಿ ಬಸ್ ಬಂದ್ ಇಲ್ಲ ಎಂದು ದ.ಕ ಜಿಲ್ಲಾ ಬಸ್ಸು ಮಾಲಕರು ತಿಳಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸ್ ಕಮಿಷನರಿಗೆ ಮನವಿ ಮಾಡಿದ ಬಸ್ಸು ಮಾಲಕರು ಬಂದ್ ಇಲ್ಲ ಎಂದು ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ(ಜು.17) ಬಸ್ ಬಂದ್ ನಡೆಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ […]

69ರ ಅಜ್ಜಿಯನ್ನು ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿದ ಯುವಕ

Tuesday, July 16th, 2013
Rapist Boy

ಮಂಗಳೂರು: ಅಜ್ಜಿಯ ಬಟ್ಟೆಯನ್ನು ಬಲವಂತದಿಂದ ಬಿಚ್ಚಿಸಿ ವಿವಸ್ತ್ರ ಗೊಳಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸರಿಪಲ್ಲ ನಿವಾಸಿ ಮೇರಿ ಡಿ’ಸೋಜಾ (69)ರ  ಮನೆಗೆ ನುಗ್ಗಿದ  ಚಿಕ್ಕಬಳ್ಳಾ ಪುರ-ಚಿಂತಾಮಣಿ ನಿವಾಸಿ ನಾಗೇಶ(24) ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿ ದಂತೆ ಬೆಲೆಬಾಳುವ ಸೊತ್ತುಗಳನ್ನು ದೋಚಿದ್ದ. ಅಜ್ಜಿಗೆ ಚೂರಿ ತೋರಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಬಳಿಕ ಅಜ್ಜಿ ಕೂಗಿಕೊಂಡರು, ಆಗ ಸರಿಪಲ್ಲದ ಯುವಕರು ಓಡಿಬಂದರು, ಯವಕರನ್ನು ಕಂಡಾಗ ನಾಗೇಶ […]

ಅವರಿಬ್ಬರ ನಡುವಿನ ಸಂಶಯ ಕೊಲೆ ಮಾಡುವ ವರೆಗೆ ಮುಟ್ಟಿತು !

Tuesday, July 16th, 2013
Gangadhar Padubidre

ಮಂಗಳೂರು : ದೂರದರ್ಶನದ (ಡಿ.ಡಿ-1) ವರದಿಗಾರ ಗಂಗಾಧರ್ ಪಡುಬಿದ್ರೆ ತನ್ನ ಪತ್ನಿಯನ್ನು ಹತೈಗೈದ ಘಟನೆ ಸೋಮವಾರ ಸಂಜೆ ಕೋಡಿಕಲ್‌ನ ಜೆ.ಬಿ.ರಸ್ತೆಯ ಮನೆಯೊಂದರಲ್ಲಿ ನಡೆದಿದೆ. ಅರೋಪಿ ಗಂಗಾಧರ್ ಪಡುಬಿದ್ರೆ ದೂರದರ್ಶನದ (ಡಿ.ಡಿ-1) ವರದಿಗಾರರಾಗಿದ್ದರು. ಮತ್ತು ಆಕೆಸ್ಟ್ರಾ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮಮತಾ ಶೆಟ್ಟಿ ( 32) ನಗರದ ಎಸ್.ಡಿ.ಎಮ್ ಕಾಲೇಜಿನ ಶಿಕ್ಷಕಿ ಯಾಗಿದ್ದರು. ಕೊಲೆಯಾದ ಮಮತಾ ಎಳವೆಯಲ್ಲಿಯೇ  ಹೆತ್ತವರನ್ನು ಕಳೆದುಕೊಂಡು  ಹಾಸ್ಟೆಲ್‌ನಲ್ಲಿದ್ದಳು. ಅಲ್ಲಿಂದ ಮಮತಾಳನ್ನು ಕರೆತಂದ ಗಂಗಾಧರ ಪಡುಬಿದ್ರಿ ಆಕೆಗೆ ಶಿಕ್ಷಣ ಕೊಡಿಸಿದ್ದ, ಆಕೆ ಕಾನೂನು […]

ಪಾವಂಜೆ ಯಲ್ಲಿ ತುಳುನಾಡ ಕೃಷಿ ಜನಪದೋತ್ಸವ

Monday, July 15th, 2013
tulunad krishi

ಮಂಗಳೂರು : ಪಾವಂಜೆ ಶ್ರೀ ಜನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಅಯೋಜಿಸಲಾದ  ತುಳುನಾಡ ಕೃಷಿ ಜನಪದೋತ್ಸವದ ಉದ್ಘಾಟನೆಯನ್ನು ಶನಿವಾರ ಉದ್ಯಮಿ ರಘುನಾಥ ಸೋಮಯಾಜಿ ಅವರು ನೆರವೇರಿಸಿದರು. ಪಾವಂಜೆ ಯಲ್ಲಿ ಎರಡು ದಿನಗಳ ಕಾಲ ನಡೆಯುವ  4ನೇ ವರ್ಷದ ಜನಪದೋತ್ಸವದ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮಣ್ಣಿನ ಹಾಗೂ ಕೆಸರಿನ ಬಗ್ಗೆ ಯುವಜನರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಸಮಾಜ ಕಟ್ಟಲು ಕೆಸರುಗದ್ದೆ ಪ್ರೇರಣೆಕೊಡುತ್ತದೆ ಎಂದು ಸೋಮಯಾಜಿ ತಿಳಿಸಿದರು. ಕೊಯ್‌ಕುಡೆ ಹರಿಪಾದೆಯ […]