ಅನಿರೀಕ್ಷಿತ ಮಳೆಗೆ ಜಿಲ್ಲೆಯಲ್ಲಿ ಮನೆಕುಸಿತ, ವಿದ್ಯುತ್ ವತ್ಯಯ

Saturday, September 25th, 2010
ಅತ್ತಾವರದಲ್ಲಿ ಮಳೆಗೆ ಕುಸಿದ ಮನೆ

ಮಂಗಳೂರು : ಮುಂಗಾರು ಮಳೆ ಕಡಿಮೆಯಾಗಿ ಜನರು ಸ್ವಲ್ಪ ಮಟ್ಟಿಗೆ ಓಡಾಟ ಅರಂಭಿಸುತ್ತಿರುವಾಗಲೇ ಮತ್ತೆ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಪಾರ ನಷ್ಟ, ಹಾನಿ ಸಂಭವಿಸಿದೆ. ಮಂಗಳೂರಿನ ಪಾಂಡೇಶ್ವರದಲ್ಲಿ ರುಕ್ಮಯ ಎಂಬವರ ಮನೆ, ಪಂಪ್ವೆಲ್ ಸಮೀಪ ಒಂದು ಮನೆ ಅರ್ಧದಷ್ಟು ಕುಸಿದಿದೆ, ಬೆಂದೂರುವೆಲ್ ಸಮೀಪ ಆವರಣಗೋಡೆಯೊಂದು ಕುಸಿದು ಬಿದ್ದಿದೆ.  ಅತ್ತಾವರ ಕೆಎಂಸಿ ಆಸ್ಪತ್ರೆ ಎದುರಿನಲ್ಲಿ ಹಳೆಯ ಹಂಚಿನ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಸುರತ್ಕಲ್  ಪರಿಸರದಲ್ಲಿ ಹಾನಿಯಾದ ಪ್ರದೇಶಗಳಿಗೆ […]

ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

Friday, September 24th, 2010
ದ ಕ ಎಸ್ ಪಿ ಪತ್ರಿಕಾಗೋಷ್ಠಿ

ಮಂಗಳೂರು : ರೌಡಿ ಶೀಟರ್  ತಿಂಗಳಾಡಿ ಉಮೇಶ್‌ ರೈ (36)  ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಅಮ್ಮಣ್ಣ ರೈ ಅವರ ಬಾವ ಈಶ್ವರಮಂಗಲ ನಿವಾಸಿ ಜಯರಾಜ ರೈ ಹಾಗೂ ಅರಿಯಡ್ಕ ನಿವಾಸಿಗಳಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ಬಂದಿತ ಆರೋಪಿಗಳು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಉಮೇಶ್‌ ರೈ […]

ವಳಾಲು ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ.

Thursday, September 23rd, 2010
ವಳಾಲು ಶಾಲೆ

ಪುತ್ತೂರು: ಮಧ್ಯಾಹ್ನ ಬಿಸಿಯೂಟ ಮಾಡಿದ 45 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ವಳಾಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿದೆ. ಕೆಲವು ಮಕ್ಕಳನ್ನು ಖಾಸಗಿ ಆಸ್ವತ್ರೆಗೆ ಸೇರಿಸಲಾಗಿದೆ. ಸಹಾಯಕ ಕಮಿಷನರ್ ಡಾ| ಹರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮತ್ತು ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟದ ಸ್ಯಾಂಪಲ್ನ್ನು ಆರೋಗ್ಯ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ […]

`ಅಂಬಿಟ್ ಕಿರು ಚಲನಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ

Thursday, September 23rd, 2010
ಕಿರು ಚಲನಚಿತ್ರ

ಮಂಗಳೂರು : ನಗರದ ಹಂಪನಕಟ್ಟೆಯ ಗೋಕುಲ್ ಮಾರ್ಕೆಟ್  ಬಿಲ್ಡಿಂಗ್ನಲ್ಲಿರುವ ಪ್ರಸಿದ್ದ `ಅಂಬಿಟ್’ ಕಂಪ್ಯೂಟರ್ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಯ ವತಿಯಿಂದ 64ನೇ ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಲಾದ ಪ್ರಥಮ ವಾರ್ಷಿಕ `ಅಂಬಿಟ್’ ಕಿರು ಚಲನಚಿತ್ರ (AMBIT-Short Film Competition) ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ಪರ್ಧೆಯು 28 ಆಗಸ್ಟ್ 2010ರಂದು ನಡೆದಿದ್ದು ಅಂಬಿಟ್ ರಾಯಭಾರಿ ಪ್ರಸಾದ್ B.N. ರವರು ಸಂಯೋಜನಾ ಅಧಿಕಾರಿಯಾಗಿ, ಕರ್ನಾಟಕ ಸರಕಾರದ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ಯ ಅಧೀನ […]

ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ’

Wednesday, September 22nd, 2010
ಸಿಪಿಐಎಂ ವತಿಯಿಂದ `ಶಾಂತಿಗಾಗಿ ಸೌಹಾರ್ದ ನಡಿಗೆ'

ಮಂಗಳೂರು: ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ತೀರ್ಪನ್ನು ಅಲಹಾಬಾದ್ ಕೋರ್ಟ್ ಸೆಪ್ಟೆಂಬರ್ 24 ರಂದು ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಕೋಮಿನವರು ಶಾಂತಿ ಕಾಪಾಡಬೇಕೆಂದು ಸಿಪಿಐಯಂ ನ ಕಾರ್ಯಕರ್ತರು ಗಾಂಧಿ ಪ್ರತಿಮೆಯ ಮುಂಭಾಗದಿಂದ ಡಿಸಿ ಕಛೇರಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಕಾಲ್ನಡಿಗೆಯಲ್ಲಿ `ಶಾಂತಿಗಾಗಿ ಸೌಹಾರ್ದ ನಡಿಗೆ’ಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಯಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ್ ಅವರು ನ್ಯಾಯಾಲಯ ನೀಡುವ ತೀರ್ಪನ್ನು ಹಿಂದೂಗಳು ಮತ್ತು ಮುಸ್ಲೀಮರು ಸೌಹಾರ್ದಯುತವಾಗಿ ಸ್ವೀಕರಿಸಬೇಕು. ಕಾನೂನು ಮತ್ತು […]

ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

Tuesday, September 21st, 2010
 ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

ಮಂಗಳೂರು: ವಿಂಶತಿ ವರ್ಷಾಚರಣೆಯಲ್ಲಿರುವ ಸಮತಾ ಮಹಿಳಾ ಬಳಗದ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವು ಶನಿವಾರ ಶ್ರೀ ಸುಬ್ರಹ್ಮಣ್ಯ ಸಭಾ ಸದನದಲ್ಲಿ ನೆರವೇರಿತು. ಕಲಾನಿಕೇತನದ ಸಂಗೀತ ಮತ್ತು ವೀಣಾ ಶಿಕ್ಷಕಿ ಶ್ರೀಮತಿ ಸಾವಿತ್ರಿ ರಾಮ್ ರಾವ್ ಮುಖ್ಯ ಅತಿಥಿಯಾಗಿದ್ದರು. ಸಮತಾದ ಸದಸ್ಯೆಯರ 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಧಾರ್ಮಿಕ  ಚೌಕ್ಕಟ್ಟಿನೊಳಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಭಾಗವಹಿಸಿದ ಪುಟಾಣಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಆರ್ಥಿಕವಾಗಿ ತೊಂದರೆಗೀಡಾಗಿರುವ ರವೀಂದ್ರ ಎಂಬ ವಿದ್ಯಾರ್ಥಿಗೆ ಧನಸಹಾಯ ನೀಡಲಾಯಿತು. ಬಳಿಕ ಶಿಕ್ಷಕಿ ಸಾವಿತ್ರಿ […]

ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವದ ವೈಭದ ಮೆರವಣಿಗೆ

Saturday, September 18th, 2010
ಹಿಂದೂ ಯುವಸೇನೆಯ 18  ನೇ ವರ್ಷದ ಗಣೇಶೋತ್ಸವದ ವೈಭದ ಮೆರವಣಿಗೆ

ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ ನಗರದ ನೆಹರೂ ಮೈದಾನಿನಲ್ಲಿ ನಡೆಯುವ 18   ನೇ ವರ್ಷದ ಗಣೇಶೋತ್ಸವದ ವೈಭಯುತ ವಿಸರ್ಜನಾ ಮೆರವಣಿಗೆ ಶುಕ್ರವಾರ  ಸಂಜೆ 7 ಗಂಟೆಗೆ ನಡೆಯಿತು.  7 ದಿನಗಳಿಂದ ಗಣಪತಿಯ  ಉತ್ಸವ ಮೂರ್ತಿಯನ್ನು ಬಗೆ ಬಗೆಯ ಶೃಂಗಾರದಿಂದ, ನಾನಾ ಬಗೆಯ ಖಾದ್ಯ – ಪದಾರ್ಥಗಳನ್ನಿಟ್ಟು  ಆರಾಧಿಸಲಾಗುತಿತ್ತು. ವಿಸರ್ಜನಾ ಮೆರವಣಿಗೆಯು ನೆಹರೂ ಮೈದಾನದಿಂದ  ಹೊರಟು ಕ್ಲಾಕ್ ಟವರ್ ಮಾರ್ಗವಾಗಿ, ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್, ಡೊಂಗರಕೇರಿ,   ನ್ಯೂಚಿತ್ರ ಟಾಕೀಸ್, […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]

ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

Wednesday, September 15th, 2010
ನುಡಿಸಿರಿ ಅಧ್ಯಕ್ಷೆಯಾಗಿ ಕನ್ನಡದ ಪ್ರಸಿದ್ಧ ಲೇಖಕಿ ವೈದೇಹಿ.

ಮಂಗಳೂರು:  ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2010ರ ಸರ್ವಾಧ್ಯಕ್ಷೆಯಾಗಿ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಕ್ಟೋಬರ್ 29, 30, 31 ರಂದು ಮೂಡಬಿದಿರೆಯ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಕನ್ನಡ ಮನಸ್ಸು: ಜೀವನ ಮೌಲ್ಯಗಳು’ ಎಂಬ ಪರಿಕಲ್ಪನೆಯಡಿ ಸಮ್ಮೇಳನ ನಡೆಯಲಿದೆ ಎಂದು ಆಳ್ವ  ಹೇಳಿದರು. ಜಾನಕಿ ಶ್ರೀನಿವಾಸ ಮೂರ್ತಿ ವೈದೇಹಿ ಕಾವ್ಯನಾಮದಿಂದ ಚಿರಪರಿಚಿತರು. ಕವಿತೆ, ಕಥೆ, ನಾಟಕ, […]

ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

Wednesday, September 15th, 2010
ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

ಮಂಗಳೂರು : ಇಲ್ಲಿಯವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗುತಿತ್ತು. ಈ ಹಿಂದಿನ ನಾಗರೀಕ ಬಂದೂಕು ತರಬೇತಿ ಶಿಬಿರ ( ಆಗಸ್ಟ್-2010) ದಲ್ಲಿ ಹೇಳಿದ್ದಂತೆ ದಿನಾಂಕ : 13.09.2010 ರಂದು ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ (Dakshina Kannada District Rifle Association) ಈ ಕೆಳಗಿನ ಲಾಂಛನದೊಂದಿಗೆ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ  ಸಂಘವನ್ನು Karnataka Societies Registration Act -1960 -1960 ರ ಅನ್ವಯ ಸಹಕಾರಿ ಸಂಘಗಳ ಉಪ […]