ಸಂಬಳ ಕೇಳಲು ಬಂದ ನೌಕರನ ಮೇಲೆ ಹಾರಿಸಿದ ಗುಂಡು ಮಗನಿಗೆ ತಗುಲಿ ಗಂಭೀರ

Tuesday, October 5th, 2021
vaishnavi-cargo

ಮಂಗಳೂರು : ಪಾರ್ಸೆಲ್ ಸಾಗಾಟದ  ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ.  ಸಂಸ್ಥೆಯ ನೌಕರರ ಸಂಬಳ ಕೇಳಿದ್ದಕ್ಕೆ, ಮಾಲೀಕ ಗುಂಡು ಹಾರಿಸಿದಾಗ ಅದು ಮಗನ ತಲೆಗೆ ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮೊರ್ಗನ್ಸ್ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ. ಸಂಬಳ ಕೇಳಲು ಬಂದ ನೌಕರನ ಮೇಲಿನ ಸಿಟ್ಟಿನಲ್ಲಿ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಎರಡು ಸುತ್ತು ಗುಂಡು ಹಾರಿಸಿದ್ದರು,  ಅದನ್ನು ತಡೆಯಲು ಬಂದ ತನ್ನ ಮಗನ ಮೇಲೆಯೇ ಗುಂಡು‌ ತಗುಲಿದೆ ಎನ್ನಲಾಗಿದೆ. ಕೋಷಿಷ್ಟ […]

ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ, 25ಕ್ಕೂ ಅಧಿಕ ಬೀದಿ ನಾಯಿಗಳು ನಾಪತ್ತೆ

Monday, October 4th, 2021
Chita

ಮಂಗಳೂರು:  ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಕೂಡಲೇ ಕಾರ್ಪೊರೇಟರ್‌ ಕೇಶವ್‌ ಮರೋಳಿ ಅವರ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದೆ. ಕಂಕನಾಡಿಯ ಕನಪದವು, ಮಾರ್ತ ಕಾಂಪೌಂಡ್‌, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿಅರಣ್ಯಾಧಿಕಾರಿಗಳು ಶೋಧ ನಡೆಸಿದಾಗ ನಾಲ್ಕು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆ ಗುರುತನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಕಂಕನಾಡಿ ವ್ಯಾಪ್ತಿಯ ಎರಡು ಕಡೆ […]

ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು

Monday, October 4th, 2021
Shark Fish

ಮಲ್ಪೆ :  ಅಪರೂಪದ ಹಾಗೂ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಬಿದ್ದಿದೆ. ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಈ ಮೀನು ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ ಬಿದ್ದಿದೆ. ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಈ ಮೀನು ಸುಮಾರು 84 ಕೆ.ಜಿ. ತೂಗುತ್ತಿತ್ತು. ಕೇರಳಿಗರು […]

ಹೆಂಡತಿ ಮಗುವನ್ನು ಹೊರಗೆ ಹಾಕಿ ಮೂರನೇ ಮದುವೆಯಾದ ಭೂಪ

Monday, October 4th, 2021
Raghavendra Kulakarni

ಮೂಡಬಿದ್ರೆ :  ಬೆಳುವಾಯಿ ಗ್ರಾಮದ ತರುಣಿಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾಂತ ಇದೀಗ ತನ್ನ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2017 ರ ಜೂನ್ 18 ರಂದು ಮೂಡಬಿದ್ರೆಯ ತರುಣಿಯನ್ನು ಬೆಂಗಳೂರಿ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೂಡ ಪಡೆದಿದ್ದ. ಮದುವೆಯಾದ […]

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಪರಿಸರ ಕಾಳಜಿಯನ್ನು ಮೂಡಿಸುವ ಪ್ರಯತ್ನ ನಡೆಯಬೇಕು : ಮೋಹನದಾಸ ಸ್ವಾಮೀಜಿ

Sunday, October 3rd, 2021
Manila Sree

ಧರ್ಮಸ್ಥಳ  : ಭಜನಾ ಮಂಡಳಿಯ ಸದಸ್ಯರು ತಮ್ಮ ತಮ್ಮ ಪ್ರದೇಶದ ಅಭಿವೃದ್ಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದಕ್ಕಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಎಂದು  ಅತ್ಯಾವಶ್ಯಕ ಎಂದು ಶ್ರೀ ಧಾಮ ಮಾಣಿಲ ಸೇವಾಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಮಾತನಾಡಿದರು. ಅವರು  ಧರ್ಮಸ್ಥಳದಲ್ಲಿ  ಭಜನಾ ತರಬೇತಿ ಕಮ್ಮಟದ ಎರಡನೇ ದಿನದಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭಜನಾರ್ಥಿಗಳು ಧಾರ್ಮಿಕವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿ, ಪರಿಸರ ರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಭೂಮಿಗೆ ನೀರಿಂಗಿಸುವ ಕೆಲಸ ಇಂದು ಆಗಬೇಕು. ಅಲ್ಲದೇ ಮಕ್ಕಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅವರಲ್ಲಿ ಧಾರ್ಮಿಕ ಪ್ರಜ್ಞೆ, […]

ವಿಟ್ಲದಲ್ಲಿ ಭಗವತ್ ಧ್ವಜ ತೆರವುಗೊಳಿಸಿದ ಪಿಡಿಒ

Sunday, October 3rd, 2021
Bhagavath

ಮಂಗಳೂರು : ವಿಟ್ಲ ವೀರಕಂಬ ಗ್ರಾಮದ  ಮಂಗಳಪದವು ಎಂಬಲ್ಲಿ  ಹಾಕಲಾದ  ಭಗವತ್ ಧ್ವಜವನ್ನು ಪಿಡಿಒ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದು ಸಂಘಟನೆ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು. ಬಳಿಕ ಭಗವತ್ ಧ್ವಜವನ್ನು ಮರು ಹಾಕುವ ಮೂಲಕ ಪ್ರಕರಣ ಇತ್ಯರ್ಥಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಠಾಣೆ ಮೆಟ್ಟಿಲೇರಿತ್ತು.

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

Sunday, October 3rd, 2021
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

ಮಂಗಳೂರು : ಅನ್ಯಕೋಮಿನ ಯುವಕ-ಯುವತಿಯರ ಜೋಡಿ ಚಿಲಿಂಬಿ ಗುಡ್ಡೆಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ  ಯುವಕ-ಯುವತಿಯರ ತಂಡವೊಂದು ಸುತ್ತಾಡಲು ಚಿಲಿಂಬಿ ಗುಡ್ಡೆಗೆ ಬಂದಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು, ಪೊಲೀಸರಿಗೆ ಈ ಕುರಿತಂತೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು, ವಿಚಾರಣೆ ನಡೆಸಿದ್ದರು

‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ’ : ಸಾಹಿತಿ ರಘು ಇಡ್ಕಿದು

Sunday, October 3rd, 2021
Raghu Idkidu

ಮಂಗಳೂರು : ‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ. ಮನುಷ್ಯರೊಳಗಿನ ಪ್ರೇಮ ಭಾವ ಹೊರಬಾರದೇ ಹೋದರೆ ಸಮಾಜದಲ್ಲಿ ದ್ವೇಷ ಅಸೂಯೆ ಮತ್ಸರ ಮನೆ ಮಾಡುತ್ತದೆ. ಹಾಗಾಗಿ ಪ್ರೇಮ ಕವಿತೆಗಳಿಗೂ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ಕವಿತೆಗಳನ್ನು ಬರೆಯುವ ಕವಿಗಳು ಕಡಿಮೆಯಾಗಿದ್ದಾರೆ. ಟೀಕೆಗಳು ಬರಬಹುದು ಎಂಬ ಕಾರಣಕ್ಕೆ ಕವಿಗಳು ಹಿಂಜರೆಯುತ್ತಿರಬಹುದು ಅಥವಾ ಸಮಾಜದ ದುಗುಡಗಳಿಂದಲೇ ಪ್ರೇಮ ಕವಿತೆಗಳು ಹುಟ್ಟದಿರಬಹುದು. ಕವಿಯಾದವನಿಗೆ ದೇಶ,ಭಾಷೆ,ಜಾತಿ,ಪಂಥ,ಕಾಲ ವಯಸ್ಸುಗಳೆಂಬ ಹಂಗುಗಳಿರುವುದಿಲ್ಲ. ಹಾಗಾಗಿ ಪ್ರೇಮ ಕವಿತೆಯನ್ನು ಯುವಕರೇ ಬರೆವಬೇಕೆಂದೇನಿಲ್ಲ ಆ ವಯಸ್ಸು ಮೀರಿದ ಮೇಲೂ ಬರೆಯಬಹುದು. […]

ಧರ್ಮಸ್ಥಳದಲ್ಲಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ

Saturday, October 2nd, 2021
Dharmasthala

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಮನ ಪರಿವರ್ತನೆ ಮೂಲಕ ಮದ್ಯ ವ್ಯಸನ ಮುಕ್ತ ಸಮಾಜ ರೂಪಿಸುವಲ್ಲಿ ಮಾಡಿದ ಸೇವೆ, ಸಾಧನೆ ಶ್ಲಾಘನೀಯವಾಗಿದೆ. ದೃಢ ಸಂಕಲ್ಪದಿಂದ ಮಾತ್ರ ವ್ಯವಸನ ಮುಕ್ತವಾದ ಆರೋಗ್ಯಪೂರ್ಣ ಸಮಾಜ ರೂಪಿಸಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಗಾಂಧಿ ಸ್ಮೃತಿ ಹಾಗೂ ವ್ಯಸನ ಮುಕ್ತ ಸಾಧಕರನ್ನು ಅಭಿನಂದಿಸಿ […]

ಫಿಟ್ ಇಂಡಿಯಾ ಪ್ರೀಡಂ ಓಟ 2.೦ಕ್ಕೆ ಉತ್ತಮ ಬೆಂಬಲ

Saturday, October 2nd, 2021
Freedom Run

ಮಂಗಳೂರು : ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಂಗಳೂರಿನ ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ ಹಾಗೂ ಜಿಲ್ಲಾ ಯುವ ಒಕ್ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಂ ಓಟ 2.0 ಕಾರ್ಯಕ್ರಮವನ್ನು ನಗರದ ಮಂಗಳ ಕ್ರೀಡಾಂಗಣದಲ್ಲಿ ಅ.2ರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮಕ್ಕೆ […]