ಬಂಟ್ವಾಳ ತಾಲೂಕು ಜಿ.ಪಂ. ಹಾಗೂ ತಾ.ಪಂ.ನಲ್ಲಿ ಕಾಂಗ್ರೆಸ್ಸ್ ಮೇಲುಗೈ

Tuesday, February 23rd, 2016
Bantwal TP ZP

ಬಂಟ್ವಾಳ: ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ.ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಮೇಲುಗೈ ಸಾಧಿಸಿದೆ.ತಾಲೂಕು ಪಂಚಾಯತ್‍ನ 34 ಸ್ಥಾನಗಳ ಪೈಕಿ ಕಾಂಗ್ರೆಸ್ಸ್ 23 ಹಾಗೂ ಬಿಜೆಪಿ 11ರಲ್ಲಿ ಗೆಲುವು ಸಾಧಿಸಿದ್ದು, ಜಿ.ಪಂ.ನ 9 ಕ್ಷೇತ್ರಗಳ ಪೈಕಿ ಕಾಂಗ್ರೆಸ್ಸ್ 5 ಹಾಗೂ ಬಿಜೆಪಿ 4 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ. ಬಂಟ್ವಾಳ ತಾಲೂಕು ಪಂಚಾಯತ್ ಆಡಳಿತ ಕೈ ವಶವಾಗಿದೆ. ಜಿ.ಪಂ. ಕ್ಷೇತ್ರ: ಸಂಗಬೆಟ್ಟು – ತುಂಗಪ್ಪ ಬಂಗೇರ(ಬಿಜೆಪಿ), ಸರಪಾಡಿ- ಪದ್ಮಶೇಖರ್ ಜೈನ್(ಕಾಂಗ್ರೆಸ್), ಪುದು-ರವೀಂದ್ರ ಕಂಬಳಿ(ಬಿಜೆಪಿ), ಗೋಳ್ತಮಜಲು-ಕಮಲಾಕ್ಷಿ ಪೂಜಾರಿ(ಬಿಜೆಪಿ), ಮಾಣಿ – ಮಂಜುಳಾ […]

ಸಲಿಲಸಲಿಲ ಜಲ ಧಾರೆ- ಅದರಿಲ್ಲಿ ಬಾವಿಗೆ ಮಣ್ಣಿನ ಧಾರೆ

Sunday, February 21st, 2016
mogral

ಕುಂಬಳೆ: ಶತಮಾನಗಳಿಂದ ನೂರಾರು ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದಕ್ಕೆ ಮಣ್ಣು ತುಂಬಿಸಿ ಮುಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ರಸ್ತೆ ಅಭಿವೃದ್ದಿಯ ಹೆಸರಲ್ಲಿ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿರುವ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. 1913ರಲ್ಲಿ ಸಾರ್ವಜನಿಕರಿಗೆ,ದಾರಿ ಹೋಕರಿಗೆ ನೀರಡಿಕೆಯನ್ನು ತಣಿಸಲು ಅಂದಿನ ಆಡಳಿತ ನಿರ್ಮಿಸಿದ್ದ ಶತಮಾನದ ಬಾವಿಯನ್ನು ಅಭಿವೃದ್ದಿಯ ಹೆಸರಲ್ಲಿ ಮುಚ್ಚಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಹದಗೆಟ್ಟ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ಕುಸಿಯುತ್ತಿರುವ ನೀರ ಸೆಲೆಗಳ ತೀವ್ರ ಆತಂಕಕಾರಿ ಸ್ಥಿತಿಯಲ್ಲೂ […]

ಹೊಸಬೆಟ್ಟು ಶ್ರೀ ರಾಧಾಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Sunday, February 21st, 2016
Hosabettu

ಮಂಜೇಶ್ವರ: ಹೊಸಬೆಟ್ಟಿನ ಶ್ರೀರಾಧಾಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಏಕಾಹ ಭಜನೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ಏಕಾಹ ಭಜನಾ ದೀಪ ಪ್ರಜ್ವಲನೆಯನ್ನು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ನೆರವೇರಿಸಿ ಚಾಲನೆ ನೀಡಿದರು. ಕಾಕುಂಜೆ ಬಾಲಕೃಷ್ಣ ಭಟ್,ಬಲರಾಮ ಭಟ್ ಕಾಕುಂಜೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಅಂಗಡಿಪದವು,ಕೋಶಾಧಿಕಾರಿ ನ್ಯಾ.ನವೀನ್ ರಾಜ್ ಕೆ.ಜೆ,ಕಾರ್ಯದರ್ಶಿ ತುಳಸೀದಾಸ್,ರಾಘವ,ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸೋಮವಾರ ಬೆಳಗ್ಗೆ ಏಕಾಹ ಭಜನೆಯ ಮಂಗಳಾಚರಣೆ […]

ಮಾನವಿಕ ಐಕ್ಯ ಸಂದೇಶ ಯಾತ್ರೆಗೆ ಚಾಲನೆ

Sunday, February 21st, 2016
Kerala Yuva Janatha Dal

ಕುಂಬಳೆ: ಭೂರಹಿತ ಸಮೂಹಕ್ಕೆ ಯುವಪ್ರದ ರಕ್ಷಣೆ ಎಂಬ ಸಂದೇಶದೊಂದಿಗೆ ಯುವಜನತಾದಳ(ಯು) ಇದರ ರಾಜ್ಯ ಅಧ್ಯಕ್ಷ ಸಲಾಂ ಮಡವೂರ್‌ರ ನೇತೃತ್ವದ ಮಾನವಿಕ ಐಕ್ಯ ಸಂದೇಶ ಯಾತ್ರೆ ಕುಂಬಳೆಯಿಂದ ಶನಿವಾರ ಆರಂಭಗೊಂಡಿತು. ಯುವ ಜನತಾದಳ ಕೇಂದ್ರ ಪ್ರಧಾನ ಕಾರ್ಯದರ್ಶಿ ಜಾವೇದ್ ರಾಸ ಯಾತ್ರೆಯನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ.ಶ್ರೀಧರನ್, ಜೆಡಿಯುರಾಜ್ಯ ಉಪಾಧ್ಯಕ್ಷ ಕೋರನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಪಿ.ಕುಂಞಲಿ ಸಹಿತ ಅನೇಕರ ಗಣ್ಯರು ಉಪಸ್ಥಿತರಿದ್ದರು.

ತುಂಬೆ ಪ್ರಕಾಶ್ ಶೆಟ್ಟಿಯವರಿಗೆ ಗೆಲುವು ಕಷ್ಟವಲ್ಲ.. ಅವರ ಸಾಧನೆಯೇ ಮಾನದಂಡ..

Wednesday, February 17th, 2016
Thumbe prakash

ಬಂಟ್ವಾಳ : ಈ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲರ ಬಾಯಲ್ಲೂ ಮೊದಲು ಕೇಳಿ ಬಂದ ಪ್ರಶ್ನೆ ತುಂಬೆ ಪ್ರಕಾಶ್ ಶೆಟ್ರು ನಿಲ್ಲುತ್ತಾರಾ? ಹೌದು, ಪ್ರಕಾಶ್ ಶೆಟ್ಟಿಯವರ ವರ್ಚಸ್ಸೇ ಅಂತಹುದು. ಅವರ ಪೂರ್ಣ ಹೆಸರು ಚಂದ್ರಪ್ರಕಾಶ್ ಶೆಟ್ಟಿ ತುಂಬೆ. ಎಲ್ಲರ ಬಾಯಲ್ಲಿ ಪ್ರಕಾಶಣ್ಣ. ಬೇಬಿಯಣ್ಣನ ನಿಷ್ಠಾವಂತ ಬಂಟ. ಬೇಬಿಯಣ್ಣ ಅಂದರೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ಕರ್ನಾಟಕ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರೂ ಆಗಿರುವ ಬೆಳ್ಳಿಪ್ಪಾಡಿ ರಮಾನಾಥ ರೈ. ಚಂದ್ರಪ್ರಕಾಶ್ ಶೆಟ್ಟಿಯವರ ಮನೆ ಇರುವುದು […]

ಸುಚರಿತ ಶೆಟ್ಟಿಯವರಿಗೆ ಅವರ ಸಾಧನೆಯೇ ಬೆಂಗಾವಲು…

Wednesday, February 17th, 2016
Sucharitha Shetty

ಮೂಡಬಿದಿರೆ : ಪುತ್ತಿಗೆ ಜಿಲ್ಲಾ ಪಂಚಾಯತ್ ಸುಚರಿತ ಶೆಟ್ಟಿಯವರ ಭದ್ರಕೋಟೆ. ಹಲವು ಧಾರ್ಮಿಕ ಹಿನ್ನೆಲೆಯುಳ್ಳ ಈ ಪುತ್ತಿಗೆ ಕ್ಷೇತ್ರದಿಂದ ಕೆ. ಸುಚರಿತ ಶೆಟ್ಟಿಯವರು ಮತ್ತೇ ಕಣದಲ್ಲಿ ಇದ್ದಾರೆ. ಈ ಹಿಂದೆ ಪುತ್ತಿಗೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವ ಇವರ ಬೆನ್ನಿಗಿದೆ. ಕಳೆದ ಬಾರಿ ಇದೇ ಕ್ಷೇತ್ರವನ್ನು ಇವರ ಪತ್ನಿ ಸುನೀತಾ ಶೆಟ್ಟಿ ಪ್ರತಿನಿಧಿಸುತ್ತಿದ್ದರು. ಸುಚರಿತ ಶೆಟ್ಟಿಯವರು ಆರು ವರ್ಷಗಳ ಕಾಲ ಪಾಲಡ್ಕ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಬಾರಿ ಅದೇ ಗ್ರಾಮ […]

ಉತ್ತಮ ಆಡಳಿತ ನಿರ್ವಹಣೆಯ ಸಮರ್ಥ ನಾಯಕಿ ಕೆ.ಟಿ ಶೈಲಜಾ ಭಟ್

Wednesday, February 17th, 2016
Shailaja Bhat

ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 15 ನೇ ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಕೆ.ಟಿ ಶೈಲಜಾ ಭಟ್ ಇವರು ಸ್ಪರ್ಧಿಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಹಾಸ್ಯಗಾರ ದಿ. ಕೊಡಕ್ಕಲು ಗೋಪಾಲ ಕೃಷ್ಣ ಭಟ್‌ರವರ ಸುಪುತ್ರಿಯಾದ ಇವರು ಶ್ರೀ.ಕೆ.ಎಂ. ತಿರುಮಲೇಶ್ವರ ಭಟ್ ಕೊಂಕೋಡಿ ಮನೆ ಇವರ ಧರ್ಮಪತ್ನಿಯಾಗಿರುತ್ತಾರೆ ಬಿ.ಎ ವಿದ್ಯಾರ್ಥಿನಿ ದೆಸೆಯಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ಸಕ್ರೀಯ ಕಾರ್ಯಕರ್ತೆಯಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಸಮಸ್ಯೆಗಳ […]

ದಿನದ ಗರಿಷ್ಟ ಸಮಯವನ್ನು ಕ್ಷೇತ್ರದ ಸಮಸ್ಯೆಗೆ ಮೀಸಲಿರಿಸುವ ಮಹಮ್ಮದ್ ಮುಸ್ತಾಫ

Wednesday, February 17th, 2016
musthafa

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 16 ನೇ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಯಾಗಿ ಮಹಮ್ಮದ್ ಮುಸ್ತಾಫ ಇವರು ಸ್ಪರ್ಧಿಸುತ್ತಿದ್ದಾರೆ. ಸಾಧನೆಯ ಹಾದಿಯೆಡೆಗೆ ಸಾಧಿಸುವ ಛಲದೊಂದಿಗೆ ಗುರಿ ಮುಟ್ಟುವ ಹಾದಿ ಮಧ್ಯೆ ಕಠಿಣ ಸವಾಲನ್ನು ಮೆಟ್ಟಿನಿಂತು ವೃತ್ತಿ ಜೀವನದ ಜೊತೆಜೊತೆಗೆ ರಾಜಕೀಯ ಆಸಕ್ತಿಯಿಂದ ಅವಕಾಶವು ತನ್ನನ್ನು ಅರಸಿಕೊಂಡು ಬಂದಾಗ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ 2000 ನೇ ಇಸವಿಯಲ್ಲಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೆಶ […]

ಯಶಸ್ವಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್ ಮುಂದಿದೆ ಗೆಲುವು…

Wednesday, February 17th, 2016
MS mohammed

ವಿಟ್ಲ : ಪುಣಚ ಗ್ರಾಮದ ಮಣಿಲ ಎಂಬಲ್ಲಿ ಮಧ್ಯಮ ವರ್ಗದಲ್ಲಿ ಹುಟ್ಟಿದ ಎಂಎಸ್ ಮೊಹಮ್ಮದ್ ಅವರದ್ದು ಬಾಲ್ಯದಿಂದಲೂ ನಾಯಕತ್ವದ ಗುಣ. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಗುರುತಿಸಿಕೊಂಡಿದ್ದ ಇವರಿಗೆ ಪಕ್ಷ ಕೂಡ ಯೋಗ್ಯ ಸ್ಥಾನಮಾನ ನೀಡಿ ಗೌರವಿಸಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿರುವ ಎಂಎಸ್ ಮೊಹಮ್ಮದ್ ಅವರ ಸಕ್ರಿಯ ರಾಜಕೀಯ ನಡೆಗಳನ್ನು ಗುರುತಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಯನ್ನಾಗಿ ಮಾಡಿದರು. ಬಳಿಕ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಹಿರಿಯ […]

ಜನಪರ ಕೆಲಸಕ್ಕೆ ಸದಾ ಸಿದ್ಧವಾಗಿರುವ ತುಂಗಪ್ಪ ಬಂಗೆರಾ

Wednesday, February 17th, 2016
Tungappa Bangera

ಬಂಟ್ವಾಳ : ಪಿಲಾತಬೆಟ್ಟು ಮಂಡಲ ಪಂಚಾಯತ್ ಸದಸ್ಯ ಪಂಚಾಯತ್ ಉಪಾಧ್ಯಕ್ಷ ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಿಲ್ಲಾ ತೋಟಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಜಿಲ್ಲಾ ಪಂಚಾಯತ್ ಸದಸ್ಯ-ಉಪಾಧ್ಯಕ್ಷ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಹೀಗೆ ಸಮಾಜದ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಗಾಗಿ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಎಂ.ತುಂಗಪ್ಪ ಬಂಗೇರಾ ಅವರು ಈ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಂಗಬೆಟ್ಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನಾನು ಅಧಿಕಾರವಿದ್ದಾಗಲೂ ಇಲ್ಲದಾಗಲೂ ಸಮಾನವಾಗಿ ನನ್ನಿಂದ […]