ಬಿಜೈ-ಕಾಪಿಕಾಡ್ ಮನೆಯೊಂದರಲ್ಲಿ ಯುವತಿಯ ಶವ ಪತ್ತೆ ಕೊಲೆ ಶಂಕೆ

Thursday, April 18th, 2013
Women killed at Kapikad

ಮಂಗಳೂರು : ಕಾಟಿಪಳ್ಳದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ಅಂಜನಾ ಎಂಬಾಕೆಯ ಮೃತ ದೇಹವು ಬುಧವಾರ ತಡರಾತ್ರಿ ಬಿಜೈ-ಕಾಪಿಕಾಡ್ ಬಳಿಯ ಮನೆಯೊಂದರಲ್ಲಿ ಪತ್ತೆಯಾಗಿದೆ. ಮುಲತಹ ಕೇರಳದವರಾದ ಅಂಜನಾ ಕಾಟಿಪಳ್ಳದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದು, ಗಾಂಧಿನಗರದಲ್ಲಿರುವ ಬ್ಯಾಂಕ್ ಕ್ವಾರ್ಟರ್ಸ್ ನಲ್ಲಿ  ವಾಸ್ತವ್ಯ ಹೂಡಿದ್ದರು.  ಅಂಜನಾರ ತಾಯಿ ಪ್ರಸನ್ನ ಎರಡು ದಿನಗಳ ಹಿಂದೆ ಈಕೆ ನಾಪತ್ತೆಯಾದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತ ಅಂಜನಾ ಕಾಪಿಕಾಡ್ ನಲ್ಲಿರುವ ಒಂದು ಮನೆಗೆ ಆಗಾಗ ಹೋಗುತ್ತಿದ್ದು […]

ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ರಿಂದ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಎನ್.ಯೋಗೀಶ್ ಭಟ್ ಆರೋಪ

Thursday, April 18th, 2013
Yogish Bhat

ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎನ್.ಯೋಗೀಶ್ ಭಟ್ ಆರೋಪಿಸಿದ್ದಾರೆ. ಅವರು ಇಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಈ ಕುರಿತು ಪ್ರಸ್ತಾಪಿಸಿದರು. ಜೆ.ಆರ್.ಲೋಬೊ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಎನ್.ಆರ್.ರೈ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರು ಈಗಲೂ ವಿಚಾರಣೆಯ ಹಂತದಲ್ಲಿದ್ದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲೋಬೊ ಈ ಬಗ್ಗೆ ಯಾವುದೇ […]

ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಮಹಿಳೆಯರ ಸೆರೆ, ಬಾಲಕಿಯರ ರಕ್ಷಣೆ

Wednesday, April 17th, 2013
Suratkal for Trapping Girls into Sex Trade

ಮಂಗಳೂರು : ಮೈಸೂರಿನ ಸ್ವಯಂ ಸೇವಾ ಸಂಸ್ಥೆ ಯೊಂದು ನೀಡಿದ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಐಡಿ ಪೊಲೀಸರು ಮಕ್ಕಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ನಗರದ ಕುಳಾಯಿ ಬಳಿ ಮಂಗಳವಾರ ಬಂದಿಸಿದ್ದಾರೆ.  ಹಾಸನ ಜಿಲ್ಲೆಯ ತಾರಾ ಹಾಗು ಚಿಕ್ಕಮಗಳೂರಿನ  ದೀಪಾ ಬಂಧಿತ ಆರೋಪಿಗಳಾಗಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ತಿರುಗಾಡುತ್ತಿದ್ದ ಶ್ವೇತಾ ಎಂಬ ಬಾಲಕಿಯನ್ನು ಮೈ ಸೂರಿನ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಗೆ ಕರೆತಂದ ಸಂದರ್ಭ ಬಾಲಕಿಯು ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ತಾರಾಳ […]

ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್, ಕಾಂಗ್ರೆಸ್ಸ್ ಅಭ್ಯರ್ಥಿ ಜೆ. ಆರ್. ಲೋಬೋ ನಾಮಪತ್ರ ಸಲ್ಲಿಕೆ

Tuesday, April 16th, 2013
N Yogish Bhat files nomination

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ಸೋಮವಾರ ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು. ಐದನೇ ಬಾರಿ ಚುನಾವಣಾ ಕಣದಲ್ಲಿ ಭಾಗವಹಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ತಮ್ಮ ಬೆಂಬಲಿಗರೊಂದಿಗೆ ಚೆಂಡೆ ವಾಧ್ಯ ಘೋಷಗಳೊಂದಿಗೆ ಮೆರೆವಣಿಗೆ ಮೂಲಕ  ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್,ನಿತಿನ್ ಕುಮಾರ್, ಶ್ರೀಕಾರ ಪ್ರಭು, ರಾಜ್ ಗೋಪಾಲ್ ರಾಯ್ ಮೊದಲಾದವರು […]

ಹಿಂದೂ ಸಂಸ್ಕೃತಿ ನಿಧಾನವಾಗಿ ನಾಶವಾಗುತ್ತಿದೆ ಎಚ್ಚರ-ಜಗದೀಶ್ ಶೇಣವ

Monday, April 15th, 2013
Thoudugoli Vishu

ಮಂಗಳೂರು : ಶಾಲಾ ಕಾಲೇಜುಗಳಲ್ಲಿ ಅನ್ಯ ಧರ್ಮೀಯರು ಹಿಂದೂ ಧರ್ಮದ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿದ್ದು ಆ ಮೂಲಕ ಹಿಂದೂ ಸಂಸ್ಕೃತಿಯನ್ನು ಸಂಪೂರ್ಣ ನಾಶಪಡಿಸುವ ಹುನ್ನಾರ ನಡೆಸುತ್ತಿದ್ದು ಪೋಷಕರೇ ಎಚ್ಚರ ಎಂದು ವಿಶ್ವಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯಾಧ್ಯಕ್ಷ  ಜಗದೀಶ್ ಶೇಣವ ಅಭಿಪ್ರಾಯಪಟ್ಟರು. ಅವರು ಭಾನುವಾರ ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿಷು ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸಂಸ್ಕೃತಿ ಗೌರವಿಸದ ಸಂಸ್ಕಾರ ನಮ್ಮದಾಗದಂತೆ ಪೋಷಕರು ಎಚ್ಚೆತ್ತುಕೊಳ್ಳಬೇಕು. ಹಿಂದೂ ಹಬ್ಬ […]

ಜಿಲ್ಲಾ ಕಾರಾಗೃಹ, ರಶೀದ ಮಲಬಾರಿಯಿಂದ ಕೈದಿ ಮೇಲೆ ಹಲ್ಲೆ

Saturday, April 13th, 2013
Rashid Malbari, Muneer Ahamad

ಮಂಗಳೂರು : ಮಂಗಳೂರಿನಲ್ಲಿ ಕಂಪ್ಯೂಟರ್ ಮತ್ತು ಎಲೆಕ್ರಾನಿಕ್ ಕಳವು ಗೈದ ಆರೋಪದ ಮೇಲೆ ಈ ಹಿಂದೆ ಪೊಲೀಸ್  ಮಾಹಿತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುನೀರ್ ಅಹ್ಮದ್ ಮೇಲೆ ಜಿಲ್ಲಾ ಕಾರಾಗೃಹದಲ್ಲಿ ರಶೀದ್ ಮಲಬಾರಿ ಮತ್ತು ಇತರರು  ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಪೊಲೀಸ್ ಇಲಾಖೆಗೆ ಮಾಹಿತಿದಾರನಾಗಿ ಸಹಕರಿಸುತ್ತಿದ್ದ ಮುನೀರ್ ಅಹ್ಮದ್ ಕಳ್ಳತನದ ಆರೋಪದ ಮೇಲೆ ಜಿಲ್ಲಾ ಕಾರಾಗೃಹದಲ್ಲಿದ್ದು ಈತನ ಮೇಲೆ ರಶೀದ ಮಲಬಾರಿ ಹಲ್ಲೆ ನಡೆಸಿದ್ದಾನೆ. ಪೊಲೀಸ್  ಕ್ರೈಮ್ ಬ್ರಾಂಚ್  ಆಗಾಗ ಜೈಲಿಗೆ ಭೇಟಿ  ನೀಡುತ್ತಿದ್ದು ಜೈಲಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ  […]

ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದಲ್ಲಿ ಪ್ರಶಾಂತ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

Saturday, April 13th, 2013
Prashanth murder 4 killers arrested

ಮಂಗಳೂರು : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದ ಪಾಂಡೇಶ್ವರ ಪೊಲೀಸ್‌ ಠಾಣೆ ಮತ್ತು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌ಗಳು ನಡೆಸಿದ  ಜಂಟಿ ಕಾರ್ಯಾಚರಣೆಯಲ್ಲಿ ಪ್ರಶಾಂತ್‌ (36) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದಿನಾಥೇಶ್ವರ ಟ್ರಾನ್ಸ್‌ಪೊರ್ಟ್‌ ಕಂಪೆನಿಯ ಮ್ಯಾನೇಜರ್‌ ಕುಂಜತ್ತಬೈಲ್‌ನ ಪ್ರಶಾಂತ್‌ ನನ್ನು ಆರೋಪಿಗಳು ಎಪ್ರಿಲ್ 7 ರಂದು ರಾತ್ರಿ 11.25 ರ ವೇಳೆಗೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್‌ ಬಳಿ ಮಾರಕಾಯುಧಗಳಿಂದ ಕಡಿದು ಕೊಲೆ ಮಾದಿದ್ದರು. ಆರೋಪಿಗಳಾದ ಜಪ್ಪಿನ ಮೊಗರು […]

ಏಪ್ರಿಲ್ 14, ತೌಡುಗೋಳಿಯಲ್ಲಿ, ವಿಷು ಪೂಜೆ, ಧಾರ್ಮಿಕ ಸಭೆ

Friday, April 12th, 2013
Durgadevi Temple Toudugoli

ತೌಡುಗೋಳಿ : ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ತಾ 14-04-2013 ರಂದು ಸೌರಯುಗಾದಿಯ ವಿಷು ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ವಿಷು ಪೂಜೆ, ಧಾರ್ಮಿಕ ಪ್ರವಚನ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ಇದರ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ  ಹರಿಕೃಷ್ಣ ಪುನರೂರು ವಹಿಸಲಿರುವರು. ಧಾರ್ಮಿಕ ಉಪನ್ಯಾಸವನ್ನು ವಿಶ್ವ ಹಿಂದೂ ಪರಿಷತ್, ಮಂಗಳೂರು. ಇದರ ಕಾರ್ಯಧ್ಯಕ್ಷರಾದ ಜಗದೀಶ ಶೇಣವ ನೀಡಲಿರುವರು. […]

ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Friday, April 12th, 2013
Karinja temple pond

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಕೆರೆಯಲ್ಲಿ ಈಜಲೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಗುರುವಾರ ಮಧ್ಯಾಹ್ನನದ ವೇಳೆ ಸಂಭವಿಸಿದೆ.  ಫಾರ್ಲ ನಿವಾಸಿಗಳಾದ ಥಾಮಸ್ ಮತ್ತು ಅರ್ಸಿಲ್ಲಾ ಡಿ ಮೆಲ್ಲೋ ದಂಪತಿ ಪುತ್ರ ಅಥ್ವಿನ್ ಡಿ ಮೆಲ್ಲೋ (20) ಮತ್ತು ಜಾನ್ ಹಾಗೂ ಲೀನಾ ಲಸ್ರಾದೊ ದಂಪತಿ ಪುತ್ರ ರೋಷನ್ ಲಸ್ರಾದೋ(17) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನದ ವೇಳೆ ಕಾರಿಂಜೇಶ್ವರ ದೇವಸ್ಥಾನದ ಕೆರೆಗೆ ಈಜಲೆಂದು ಅಥ್ವಿನ್ ಡಿ ಮೆಲ್ಲೋ, ರೋಷನ್ ಲಸ್ರಾದೋ ಹಾಗು ಪ್ರಕಾಶ್ ವೇಗಸ್ ಈ ಮೂವರು […]

ಪೆರ್ನೆ ಅನಿಲ ದುರಂತ, ಜಿಲ್ಲಧಿಕಾರಿ ಹರ್ಷ ಗುಪ್ತ ರಿಂದ ಕಂಪನಿಯ ಅಧಿಕಾರಿಗಳಿಗೆ ಎಚ್ಚರಿಕೆ

Thursday, April 11th, 2013
Harsh Gupta

ಮಂಗಳೂರು : ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್‌ ದುರಂತವು ೮ ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೆ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಯನ್ನು ನಾಶಪಡಿಸಿದೆ. ಇಷ್ಟಾದರು ಇದಕ್ಕೆ ಕಾರಣವಾದ ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಈ ನಿರ್ಲಕ್ಶ್ಯ ಮುಂದುವರಿದಲ್ಲಿ  ಈ ದುರ್ಘಟನೆಗೆ ಕಾನೂನು ಪ್ರಕಾರ ಕಂಪೆನಿಯನ್ನೆ ಹೊಣೆಯನ್ನಾಗಿ ಮಾಡಬೇಕಾದೀತು ಎಂದು ಜಿಲ್ಲಧಿಕಾರಿ ಹರ್ಷ ಗುಪ್ತ ಎಚ್ಚರಿಸಿದ್ದಾರೆ. ಅವರು ಈ ಸಂಬಂಧ  ಬುಧವಾರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲೂ ಕಂಪನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ಆಸಮಧಾನ […]