ಆಕರ್ಷಕ ಕಲಾಮೇಳಗಳೊಂದಿಗೆ ಆಳ್ವಾಸ್ ನುಡಿಸಿರಿ ಪ್ರಾರಂಭ

Friday, October 29th, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದ್ರೆ : ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು ಎಂಬ ಪರಿಕಲ್ಪನೆಯಡಿ ಮೂಡಬಿದ್ರೆಯ ಶ್ರೀಮತಿ ಆನಂದ ಆಳ್ವಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿ ಸಿರಿಯನ್ನು ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಇತರ ಗಣ್ಯರು ಮರದ ಕುಂಡಿಕೆಯಲ್ಲಿ ಇರಿಸಲಾದ ಭತ್ತದ ತೆನೆಗೆ ತಾಮ್ರದ ಕಲಸದಲ್ಲಿ ಹಾಲೆರೆಯುವ ಮೂಲಕ ನುಡಿಸಿರಿಯ ಆರಂಭಕ್ಕೆ ಸಾಕ್ಷ್ಯರಾದರು. ವೇದಿಕೆಯ ಮುಂಭಾಗದಲ್ಲಿ […]

“ನಮ್ಮ ಕುಡ್ಲ” ಗೂಡುದೀಪ ಸ್ಪರ್ಧೆ

Thursday, October 28th, 2010
"ನಮ್ಮ ಕುಡ್ಲ" ಗೂಡುದೀಪ

ಮಂಗಳೂರು: ನಮ್ಮ ಕುಡ್ಲ ವತಿಯಿಂದ ನವೆಂಬರ್ 4 ರಂದು ಗುರುವಾರ ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ, ಮೂರುವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿಯ ಗೂಡು ದೀಪಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಕದ್ರಿ ನವನೀತ್ ಶೆಟ್ಟಿ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ತೀಪುಗಾರರಿಗೆ […]

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ದಿಗ್ಗಜ ಕಲಾಮಣಿಗಳ ಕೂಟದಲ್ಲಿ ಮೊದಲ ಪ್ರಯೋಗ ರಂಗಾರ್ಪಣೆ

Wednesday, October 27th, 2010
`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ'

ಮಂಗಳೂರು : ಒಡಿಯೂರು ಶ್ರೀಗಳ 50ನೇ ಜನ್ಮ ದಿನೋತ್ಸವವನ್ನು ಆಚರಿಸುವ ಸುಸಂದರ್ಭದಲ್ಲಿ ಒಡಿಯೂರು ಕ್ಷೇತ್ರದ ಹಿನ್ನಲೆ ಇರುವ ಪೌರಾಣಿಕ ಹಾಗೂ ಐತಿಹಾಸಿಗಳ ಕಥೆಯನ್ನಾಧರಿಸಿ ತಾರಾನಾಥ ವರ್ಕಾಡಿ ರಚಿಸಿದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನವನ್ನು  ಇಂದು ನಗರದ ಪುರಭವನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ರಂಗಾರ್ಪಣೆಗೈದರು. ಧರ್ಮ ಮತ್ತು ಸಂಸ್ಕೃತಿಯ ಅನಾವರಣ ಆಗಬೇಕಾದರೆ ಕಲೆಯಿಂದ ಮಾತ್ರ ಸಾಧ್ಯ, ಒಡಿಯೂರು ಕ್ಷೇತ್ರ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ಭಕ್ತರಿಗೆ ತಿಳಿಸುವ ಈ ಕಾರ್ಯ ಪ್ರಶಂಶನೀಯ ಎಂದು ಶ್ರೀ […]

ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ.

Tuesday, October 26th, 2010
ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ

ಮಂಗಳೂರು: ಸುಮಾರು ಒಂದೂವರೆ ವರ್ಷಕಾಲ ಉಡುಪಿಯಿಂದ ಮಂಗಳೂರಿಗೆ ಬಂದು ಇಲ್ಲಿ ಆಡಳಿತ ನಡೆಸಿ, ಈಗ ಶಿವಮೊಗ್ಗಕ್ಕೆ ವರ್ಗಾವಣೆಗೊಂಡು ಹೋಗುತ್ತಿರುವ ದ.ಕ (ಮಾಜಿ) ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಇಂದು ಹಾರ್ಧಿಕ ವಿದಾಯ, ಹಾಗೂ ಹೊಸದಾಗಿ ದಿಲ್ಲಿಯಿಂದ ಬಂದು ಇಲ್ಲಿ ಜಿಲ್ಲಾಧಿಕಾರಿಯಾಗಿರುವ ಸುಭೋಧಯಾದವ (ಐಎಎಸ್) ಅವರಿಗೆ ಸಂತೋಷಪೂರ್ವಕ ಸ್ವಾಗತ ಬಯಸುವ ಸಮಾರಂಭವೊಂದನ್ನು ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಅವರು ನಡೆಸಿಕೊಟ್ಟರು. ಶರ್ಮರು ತಮ್ಮ ಹಿಂದಿನ ಅನುಭವಗಳನ್ನು ನೆನೆಪಿಗೆ ತಂದುಕೊಂಡು ವರ್ಗಾವಣೆಯಾಗಿ […]

ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘದಿಂದ ಹೆದ್ದಾರಿ ದುರಸ್ತಿಗೆ ಆಗ್ರಹ

Monday, October 25th, 2010
ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘ

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪುವೆಲ್ ನಿಂದ ತಲಪಾಡಿವರೆಗೆ ರಸ್ತೆಗಳಲ್ಲಿ ಭಾರಿ ಗಾತ್ರದ ಹೊಂಡಗಳು ಬಿದ್ದಿದ್ದು ರಸ್ತೆಗಳು ಹೆಚ್ಚು ಕಡಿಮೆ ಸಂಪೂರ್ಣ ಕೆಟ್ಟು ಹೋಗಿವೆ. ಮಾತ್ರವಲ್ಲದೆ ನೇತ್ರಾವತಿ ಸೇತುವೆ ಮೇಲಿನ ಕಾಂಕ್ರೀಟ್ ಅಲ್ಲಲ್ಲಿ ಹೊಂಡ ಬಿದ್ದು ಕಬ್ಬಿಣದ ರಾಡ್ಗಳು ಮೇಲೆ ಬಂದು ಮಳೆ ನೀರು ಕಾಂಕ್ರೀಟ್ನ ಒಳ ಭಾಗಕ್ಕೆ ಹರಿಯುತ್ತಿದ್ದು ಯಾವುದೇ ಸಂದರ್ಭದಲ್ಲಿ. ಸೇತುವೆ ಬಿರುಕು ಬಿದ್ದು ಅಪಾಯವಾಗುವ ಸಂಭವವಿದೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಜವರ್ಮ ಬಲ್ಲಾಳ್ ಇಂದು ನಗರದ ವುಡ್ ಲ್ಯಾಂಡ್ಸ್ […]

ಜನ ಸಾಮಾನ್ಯರ ಬ್ಯಾಂಕ್ ವಿಜಯಾಬ್ಯಾಂಕ್ : ಸಂಸ್ಥಾಪಕರ ದಿನಾಚರಣೆಯಲ್ಲಿ ಕೆ.ಎನ್. ವಿಜಯಪ್ರಕಾಶ್

Saturday, October 23rd, 2010
ವಿಜಯಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ಎಂಬತ್ತು ವರ್ಷಗಳ ಹಿಂದೆ ಅತ್ತಾವರ ಬಾಲಕೃಷ್ಣ ಶೆಟ್ಟಿ ಮತ್ತು ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ಸ್ಥಾಪಿಸಿದ ವಿಜಯಾಬ್ಯಾಂಕಿನ  ಸಂಸ್ಥಾಪಕರ ದಿನಾಚರಣೆಯನ್ನು ಇಂದು ಜ್ಯೋತಿಯಲ್ಲಿರುವ ವಿಜಯಾಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು. ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಕೆ.ಎನ್.ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ನಿರ್ದೇಶಕ ಬಿ. ಇಬ್ರಾಹಿಂ ಸಂಸ್ಥಾಪಕರ ಬಾವಚಿತ್ರಗಳಿಗೆ ಪುಷ್ಪ ಮಾಲೆ ಹಾಕುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಜನ ಸಾಮಾನ್ಯರಿಗೆ ವಿಜಯಾಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ಮಂಗಳೂರು ನಗರ ಅಭಿವೃದ್ಧಿಗೂ ಪಾಲಿಕೆಯೊಂದಿಗೆ ಕೈ ಜೋಡಿಸಿದೆ […]

`ಅಂದದ ಮನೆಗೊಂದು ಚಂದದ ಬುಟ್ಟಿ,

Friday, October 22nd, 2010
ಅಂದದ ಮನೆಗೊಂದು ಚಂದದ ಬುಟ್ಟಿ

ಮಂಗಳೂರು:  ಯಂತ್ರಗಳಿಗೆ ಜೋತುಬೀಳುವ ಈಗಿನ ಸಮುದಾಯ ಕರಕುಶಲ ವಸ್ತುಗಳ ತಯಾರಿಯನ್ನು ಮರೆತು ಬಿಟ್ಟಿದ್ದಾರೆ. ಗ್ರಾಮೀಣ ಮಟ್ಟದಿಂದ ಉಗಮವಾದ ಗುಡಿಕೈಗಾರಿಕೆಗಳು ಈಗ ವಿರಳವಾಗುತ್ತಿದೆ. ಎಲ್ಲೆಂದರಲ್ಲಿ ಯಾಂತ್ರೀಕೃತ ವಸ್ತುಗಳು ಮಾರುಕಟ್ಟೆಗೆ ಬರುತ್ತಿದೆ. ಕೈ ಕೆಲಸದಿಂದಲೇ ಬುಟ್ಟಿ ತಯಾರಿಸುವ ಆಂದ್ರದ ನಾಲ್ಕು ಜನ ಯುವಕರು ಮಂಗಳೂರಿನ ಲೇಡಿಹಿಲ್ ಬಳಿ ರಸ್ತೆಯ ಪಕ್ಕದಲ್ಲಿ ಬಗೆಬಗೆಯ ಬುಟ್ಟಿಗಳನ್ನು ಯಂತ್ರಗಳು ತಯಾರಿಸುವ ಕೆಲಸಕ್ಕಿಂತ ಅಚ್ಚುಕಟ್ಟಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಜಾಮಿನಿ ಬೆತ್ತ, ನಾಡಿ ಬೆತ್ತಗಳ ಜೊತೆಗೆ ಪ್ಲಾಸ್ಟಿಕ್ ವಯರ್ಗಳನ್ನು ಬಳಸಿ ಮೂರರಿಂದ ನಾಲ್ಕು ದಿನಗಳಲ್ಲಿ ಬಗೆ […]

ಹೊಸ ಚಲನಚಿತ್ರಗಳ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟಗಾರರ ಬಂಧನ.

Thursday, October 21st, 2010
ಹೊಸ ಚಲನಚಿತ್ರಗಳ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟಗಾರರ ಬಂಧನ.

ಮಂಗಳೂರು:  ಮಂಗಳೂರು ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ರವೀಂದ್ರ ಕೆ. ಗಡಾದಿ ರವರಿಗೆ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಮುಂಬಯಿಯ ಯುನಿವರ್ಸಲ್ ಕಾಪಿರೈಟ್ ಪ್ರೊಟೆಕ್ಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮುಖೇಶ್ಚಂದ್ರ ಭಟ್ ರವರು ನೀಡಿದ ಖಚಿತ ಮಾಹಿತಿಯ ಮೇರೆಗೆ ತಮ್ಮ ಕಛೇರಿಯ ಸಿಬ್ಬಂದಿಗಳ ಸಹಾಯದೊಂದಿಗೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಇರುವ ಶಿವಂ ಮ್ಯೂಸಿಕ್ ಮತ್ತು ಲಾಲ್ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್ನಲ್ಲಿರುವ ಸತ್ಯಂ ವಿಡಿಯೋ ಸಿಡಿ ಅಂಗಡಿಗಳಿಗೆ ದಿಢೀರ್ ದಾಳಿ […]

ಜಿಲ್ಲಾ ಸಶಸ್ತ್ರ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆ:

Thursday, October 21st, 2010
ಜಿಲ್ಲಾ ಸಶಸ್ತ್ರ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆ

ಮಂಗಳೂರು: ಜಿಲ್ಲಾ ಸಶಸ್ತ್ರ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ಮಂಗಳೂರು ಪೊಲೀಸ್ ಮುಖ್ಯ ಕಛೇರಿಯ ಮುಂಭಾಗದಲ್ಲಿ  ಇಂದು ಬೆಳಿಗ್ಗೆ ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು. ಕರ್ತವ್ಯದಲ್ಲಿರುವಾಗಲೇ ತಮ್ಮ ಪ್ರಾಣತೆತ್ತ, ಸಮಾಜದ ಹಿತಕ್ಕಾಗಿ ದುಡಿದ ಹುತಾತ್ಮರನ್ನು ಪ್ರತಿವರ್ಷ ನೆನಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ ಬಳಿಕ ಹೇಳಿದರು. ಹುತಾತ್ಮ ಪೊಲೀಸ್ರಿಗೆ ವರ್ಷಕ್ಕೊಮ್ಮೆ ಗೌರವ ಸಲ್ಲಿಸುವ ಬದಲು, ಅವರಿಗೆ ಗುಡಿ ಕಟ್ಟಿ ನಿತ್ಯ ಗೌರವ ಸಲ್ಲಿಸುವಂತಾಗಬೇಕು ಎಂದು ಜಿಲ್ಲಾ ಎಸ್. […]

ಕರ್ನಾಟಕ ಶ್ರೀಮದ್ ಭುವನೇಶ್ಚರೀ ಕಥಾಮಂಜರೀ ಮತ್ತು ಪಂಚಕೋಶ ವಿಪಂಚಿಕಾ ಗ್ರಂಥಗಳ ಲೋಕಾರ್ಪಣೆ

Wednesday, October 20th, 2010
ಹರಿಕೃಷ್ಣ ಪುನರೂರು

ಮಂಗಳೂರು: ವಿದ್ಯಾನ್ ಶ್ರೀ ಬಂದಗದ್ದೆ ನಾಗರಾಜರಿಂದ ರಚಿಸಲ್ಪಟ್ಟ `ಕರ್ನಾಟಕ  ಶ್ರೀಮದ್ ಭುವನೇಶ್ವರೀ ಕಥಾಮಂಜರೀ’ ಎನ್ನುವ ಶಾಸ್ತ್ರೀಯ ಕನ್ನಡ ಮಹಾಕಾವ್ಯವೂ ಮತ್ತು `ಪಂಚಕೋಶ ವಿಪಂಚಿಕಾ’ ಎನ್ನುವ ಸಂಸ್ಕೃತ ಕೃತಿಯು ದಿನಾಂಕ 25-10-2010ನೇ ಸೋಮವಾರ ಅಪರಾಹ್ನ 3.30 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿರುವುದು. ಈ ಸಾರ್ವಜನಿಕ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠಾಧೀಶ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಶ್ರೀ ವಿಶ್ವೇಶತೀರ್ಥ […]