ಕಾಸರಗೋಡಿನಲ್ಲಿ ಸ್ತ್ರೀ ಸ್ವಾಭಿಮಾನ ಯಾತ್ರೆಗೆ ಭವ್ಯ ಸ್ವಾಗತ

Wednesday, January 27th, 2016
Stree Swabhimana yatre

ಕಾಸರಗೋಡು: ಕಳೆದ 50 ವರ್ಷಗಳಿಂದ ಕೇರಳದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕ್ಷೇತ್ರ ಸಂರಕ್ಷಣಾ ಸಮಿತಿಯು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಸ್ತ್ರೀ ಸುರಕ್ಷೆ , ಸ್ತ್ರೀ ಸಬಲೀಕರಣ, ಕುಟುಂಬ ಭದ್ರತೆ ಇತ್ಯಾದಿಗಳನ್ನು ಗುರಿಯಾಗಿರಿಸಿಕೊಂಡು ಈ ಸ್ತ್ರೀ ಸ್ವಾಭಿಮಾನ್ ಯಾತ್ರೆಯನ್ನು ಆಯೋಜಿಸಲಾಗಿದೆ. ಅತ್ಯಂತ ದಯನೀಯ ಹಾಗೂ ಆಪತ್ತಿನಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀಯರು ಬದುಕುವಂತಾಗಿದೆ ಎಂದು ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಸುವರ್ಣ ಜಯಂತಿ ಆಚರಣೆಯ ಅಂಗವಾಗಿ ಮಾತೃಸಮಿತಿಯ ರಾಜ್ಯಾಧ್ಯಕ್ಷೆ ಪ್ರೊ.ವಿ.ಟಿ.ರಮಾ […]

ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವ

Wednesday, January 27th, 2016
vidyavarthaka

ಮಂಜೇಶ್ವರ: ವಿದ್ಯಾಭ್ಯಾಸದಿಂದ ಮಾನವೀಯ ಮೌಲ್ಯಗಳು ಬೆಳೆಯಬೇಕು.ಮೌಲ್ಯಯುತ ಶಿಕ್ಷಣ ನೀಡುವ ಸಂಸ್ಥೆಗಳಿಂದ ಅಭಿಮಾನ ಉಂಟಾಗಿ ಪ್ರತಿಭೆಗಳ ಅನಾವರಣಕ್ಕೆ ದಾರಿ ಸುಗಮಗೊಳಿಸುತ್ತದೆ.ಕಲೆ,ಸಂಸ್ಕ್ರತಿಗಳ ಬೆಳವಣಿಗೆ,ಪ್ರೋತ್ಸಾಹಗಳಿಗೆ ಶಿಕ್ಷಣ ಸಂಸ್ಥೆಗಳ ಕ್ರೀಯಾಶೀಲ ಚಟುವಟಿಕೆಗಳು ಬೆನ್ನೆಲುಬಾದಾಗ ನೈಜ ಅರ್ಥದ ಶಿಕ್ಷಣ ನೀಡಿದಂತಾಗುತ್ತದೆಯೆಂದು ಜಿಲ್ಲಾ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ವ್ಯಕ್ತಪಡಿಸದರು. ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ನಡೆಸಲಾಗುವ ಒಂದು ವರ್ಷಗಳ ನಿರಂತರ ಕಾರ್ಯಕ್ರಮಗಳ ಸುವರ್ಣ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲಲಿ ಅವರು ಮಾತನಾಡುತ್ತಿದ್ದರು. ವಿದ್ಯಾವರ್ಧಕ ಸಂಘದ ಹಿರಿಯ […]

ವರ್ಕಾಡಿ ಬ್ಯಾಂಕ್‌ನ ಸಾಯಾಹ್ನ ಶಾಖೆ ಆರಂಭ

Wednesday, January 27th, 2016
vorkady

ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಮಜೀರ್‌ಪಳ್ಳ ಸಂಜೆ ಶಾಖೆಯನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಸಹಕಾರಿ ಬ್ಯಾಂಕ್ ಕೃಷಿಕರ ಬೆನ್ನೆಲುಬಾಗಿದೆ. ಸಹಕಾರಿ ಸಂಸ್ಥೆಯ ಪೂರ್ಣ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಂಡಲ್ಲಿ ನಮ್ಮ ಪ್ರದೇಶದ ಕೃಷಿ ಹಾಗೂ ವ್ಯಾಪಾರ ರಂಗಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಯಾಂಕ್‌ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ನ ಕಂಪ್ಯೂಟರ್ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್ ನಿರ್ವಹಿಸಿದರು. […]

ಉಗ್ರವಾದಿಗಳಿಂದ ಮುಸ್ಲಿಮರಿಗೆ -ಪಾಣಕ್ಕಾಡ್ ತಂಙಳ್

Wednesday, January 27th, 2016
Tangal

ಮಂಜೇಶ್ವರ: ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರಗಾಮಿ ಸಂಘಟನೆಗಳು ಮುಸ್ಲಿಂ ಸಮುದಾಯಕ್ಕೇ ಮುಖಭಂಗಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ. ಇದರಿಂದ ಜಾಗತಿಕ ಶಾಂತಿ ಭಂಗದ ಜೊತೆಗೆ ಬಹುದೊಡ್ಡ ಸಮುದಾಯದ ತೇಜೋವಧೆಗೆ ಕಾರಣವಾಗಿ ಲೋಕಮುಖಕ್ಕೆ ಎಲ್ಲರೂ ಅಪಾಯಕಾರಿಗಳಾಗಿ ಕಾಣಿಸಿಕೊಳ್ಳಲು ಕಾರಣರಾಗಿರುವುದು ಉತ್ತಮ ಬೆಳವಣಿಗೆಗಳಲ್ಲವೆಂದು ಮುಸ್ಲಿಂಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ಅಭಿಪ್ರಾಯ ವ್ಯಕ್ತಪಡಿಸಿದರು. ಹೊಸಂಗಡಿಯಲ್ಲಿ ಭಾನುವಾರ ಸಂಜೆ ಸಚಿವ ಪಿ.ಕೆ.ಕುಂಞಲಿಕುಟ್ಟಿ ನಾಯಕತ್ವದಲ್ಲಿ ಆರಂಭಗೊಂಡ ಮುಸ್ಲಿಂಲೀಗ್ ನ ಕೇರಳ ರಾಜ್ಯ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಿರಪರಾಧಿಗಳನ್ನು ಹತ್ಯೆಗೈಯ್ಯುವ ಪಾತಕಿಗಳನ್ನು […]

ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರ ಹೂಗಳು – ಬನಾರಿ ನಾರಾಯಣ ಭಟ್

Wednesday, January 27th, 2016
Narayana Bhat Banari

ಬದಿಯಡ್ಕ : ವಸಂತ ಕಾಲದಲ್ಲಿ ಹೂಗಳೆಲ್ಲ ಅರಳಿ ಸುಂದರವಾಗಿ ಬರುವ ಕಾಲ. ಸುಂದರ ಹೂದೋಟದ ಮಧ್ಯೆ ಬಂದು ನಿಂತಿರುವ ಸಂಭ್ರಮವಿದೆ. ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರವಾದ ಹೂಗಳು ಎಂದು ನಿವೃತ್ತ ಶಿಕ್ಷಕ ಬನಾರಿ ನಾರಾಯಣ ಭಟ್ ನುಡಿದರು. ಅವರು ಶುಕ್ರವಾರ ಸಂಜೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ‘ವಸಂತೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಪ್ತವರ್ಣದ ಮಿಶ್ರಣದೊಂದಿಗೆ ಬಹುಸುಂದರ ಪುಷ್ಪಗಳು ಇಲ್ಲಿ ಅರಳುತ್ತಾ ಇದೆ. ಆದ್ದರಿಂದ ಇದು ವಸಂತೋತ್ಸವ ಆಗಿದೆ. ನನ್ನ ಜೀವನದ ಅತ್ಯಂತ […]

ಕಾರು ಕೆರೆಗೆ ಬಿದ್ದು ಯುವಕ ಮೃತ್ಯು-ಸಹೋದರ ಪಾರು

Friday, January 22nd, 2016
Mulleria Accident

ಮುಳ್ಳೇರಿಯಾ: ಕಾರೊಂದು ಕೆರೆಗೆ ಬಿದ್ದು ಸಹೋದರರ ಪೈಕಿ ಓರ್ವ ಮೃತಪಟ್ಟು ಮತ್ತೋರ್ವ ಅದೃಷ್ಟವಶಾತ್ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳ್ಳೂರು ಸಮೀಪದ ಬಜ ಎಂಬಲ್ಲಿ ನಡೆದಿದೆ. ಬಜ ಅಮರನಾಥ ರೈ ಯವರ ಪುತ್ರ ಸುಪ್ರೀತ್ ರೈ (33)ಮೃತಪಟ್ಟ ದುರ್ದೈವಿ.ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಸಹೋದರ ಗುರು ಕಿರಣ ರೈ ಯನ್ನು ಕುಳ್ಳಿರಿಸಿ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸುವಷ್ಟರಲ್ಲಿ ಅಂಗಳದಿಂದ 10ಮೀಟರ್ ದೂರದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಅಪಘಾತ ನಡೆಯಿತು. ನೀರಲ್ಲಿ ಮುಳುಗಿದ ಕಾರನ್ನು ತಕ್ಷಣ ಸ್ಥಳೀಯರು […]

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಿರಾಕರಿಸಿದ ಜಿಲ್ಲಾಧಿಕಾರಿ

Friday, January 22nd, 2016
DC Ibrahim

ಮಂಗಳೂರು : ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಪ್ರತಿಭಟನೆ ಮಾಡಲೆಂದೇ ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಗಳು, ಸಾರ್ವಜನಿಕರು ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲು ಸಹಕಾರಿಯಾಗುವಂತೆ ನಗರದ ಕೇಂದ್ರ ಸ್ಥಾನದಲ್ಲಿ ನಾಲ್ಕು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್‌ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನದ (ಫುಟ್ಬಾಲ್‌) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, […]

ಸನಾತನ ಸಂಸ್ಕೃತಿ ಭೋಗ ಲಾಲಸೆಗಳಿಗೆ ಎಂದೂ ಆಸ್ಪದ ನೀಡಿಲ್ಲ್ಲ : ಪ್ರವೀಣ್ ಕೋಡೋತ್ತ್

Friday, January 22nd, 2016
Yeniyarpu

ಬದಿಯಡ್ಕ: ಪ್ರಾಚೀನ ಸತನಾತನ ಧರ್ಮದಲ್ಲಿ ಆಚರಿಸುವ ಆಚರಣೆಗಳ ಹಿಂದೆ ಮಹತ್ವವಾದ ಹಿನ್ನೆಲೆಗಳಿವೆ. ಆದರೆ ಆಧುನಿಕ ಚಿಂತನೆಗಳ ಫಲಗಳೆಂದು ಆಚರಣೆಗಳನ್ನು ಹೀಯಾಳಿಸುವುದು ತರವಲ್ಲ ಎಂದು ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ತ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲು ಸಮೀಪದ ಏಣಿಯರ್ಪು ಕೋದಂರ್ಬತ್ತ್ ತರವಾಡು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷೋಪನ್ಯಾಸಗೈದು ಮಾತನಾಡುತ್ತಿದ್ದರು. ಭೋಗ ಸಂಸ್ಕೃತಿಯ ಜಗತ್ತಿನ ದೊಡ್ಡಣ್ಣಗಳು ಆಧ್ಯಾತ್ಮಿಕ,ಭೌದ್ದಿಕ ಶ್ರೀಮಂತಿಕೆಯ ಕೊರತೆಯಿಂದ ಧೂಳೀಪಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವೆಲ್ಲವಕ್ಕೂ ಕಲಶಪ್ರಾಯವಾಗಿ […]

ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ : ರಮೇಶ್ ಚೆನ್ನಿತ್ತಲ

Friday, January 22nd, 2016
lodging-house

ಕಾಸರಗೋಡು: ರಾಜ್ಯದ ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೂ ಸಮಾನ ಪ್ರಾತಿನಿಧ್ಯ ನೀಡಲಾಗುವುದೆಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದರು. ಅವರು ಗುರುವಾರ ಪಾರೆಕಟ್ಟೆಯಲ್ಲಿರುವ ಶಸಸ್ತ್ರ ಮೀಸಲು ಪಡೆಯ ಪೊಲೀಸ್ ವಸತಿ ಗೃಹ ಕಟ್ಟಡ ಸಮುಚ್ಛಯವನ್ನು ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಪಡೆಯಲ್ಲಿ ಕೇವಲ 1 ಶೇ. ವಿದ್ದ ಮೀಸಲಾತಿಯನ್ನು ಶೇ.6 ಕ್ಕೇರಿಸಲಾಗಿದೆ. ಇನ್ನು ಅದು ಶೇ.10 ಕ್ಕೇರಲಿದೆ ಎಂದ ಅವರು ಪೊಲೀಸ್, ಅಗ್ನಿಶಾಮಕ ದಳಗಳಲ್ಲಿ ಹಾಗೂ ಬಂಧಿಖಾನೆಗಳಲ್ಲಿ ಮಹಿಳೆ-ಪುರುಷ ಎಂಬ ತಾರತಮ್ಯ ಇಲ್ಲದೆ ನೇಮಕಾತಿ ನಡೆಸಲಾಗುವುದು. ಕೇರಳ ಪೊಲೀಸ್ ಪಡೆಯ […]

ನೀರು ಹಾಯಿಸದೆ ಒಣಗುತ್ತಿರುವ ಕಾಸರಗೋಡು ಸರ್ಕಲ್ ಹುಲ್ಲು ಹಾಸು

Friday, January 22nd, 2016
crop

ಕಾಸರಗೋಡು: ಯೋಜನೆಯನ್ನು ತರಾತುರಿಯಲ್ಲಿ ಸಾಕಾರಗೊಳಿಸುವ ಸಂದಭದಲ್ಲಿ ಅದರ ಮುಂದಿನ ನಿರ್ವಹಣೆಯ ಬಗ್ಗೆ ಆಲೋಚಿಸುವುದಿಲ್ಲ. ಸರಕಾರದ ಬಹುತೇಕ ಯೋಜನೆಗಳು ಹೀಗೇ. ಯಾವುದೇ ಯೋಜನೆಗಳು ಉದ್ಘಾಟನೆಗೊಳ್ಳುತ್ತದೆ. ಆ ಬಳಿಕ ಅದರ ಪರಿಸ್ಥಿತಿ ಏನಾಯಿತು ? ಎಲ್ಲಿಗೆ ತಲುಪಿತು ? ಎಂಬ ಬಗ್ಗೆ ವೀಕ್ಷಿಸುವುದೇ ಇಲ್ಲ. ಕಚೇರಿ ಕಟ್ಟಡವಾಗಲೀ, ಪಾರ್ಕ್ ಆಗಲೀ…ಏನೇ ಆದರು ಆ ಬಳಿಕ ಅತ್ತ ಕಣ್ಣು ಹಾಯಿಸಿಯೂ ನೋಡುವುದಿಲ್ಲ. ಇಂತಹ ವಿಪರ್ಯಾಸಕ್ಕೆ ಹಲವು ಉದಾಹರಣೆಗಳು ಲಭಿಸುತ್ತದೆ. ಅವುಗಳಲ್ಲೊಂದು ಈ ಸರ್ಕಲ್. ನಗರಸಭೆಯ ಪ್ರದೇಶವನ್ನು ಸುಂದರಗೊಳಿಸುವ ಅಂಗವಾಗಿ ಕಾಸರಗೋಡು ನಗರಸಭೆ […]