ಎಲ್ಲಾ ರಂಗಗಳಲ್ಲೂ ಕೇರಳ ಅಧಃ:ಪತನ : ಕುಮ್ಮನಂ ರಾಜಶೇಖರನ್

Thursday, January 21st, 2016
Rajashekaran

ಕಾಸರಗೋಡು: ಬದಲಿ ಬದಲಿ ಬಂದ ಎಡರಂಗ-ಐಕ್ಯರಂಗ ಸರಕಾರಗಳು ಕೇರಳವನ್ನು ಎಲ್ಲಾ ರಂಗಗಳಲ್ಲೂ ಅಧಃ:ಪತನಕ್ಕೆ ಕೊಂಡೊಯ್ದರೆಂದು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ಹೇಳಿದರು. ಉಪ್ಪಳದಿಂದ ಆರಂಭಗೊಂಡ ಬಿಜೆಪಿ ನೇತೃತ್ವದ ವಿಮೋಚನಾ ಯಾತ್ರೆಗೆ ಕಾಸರಗೋಡಿನಲ್ಲಿ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ…ಹೀಗೆ ಎಲ್ಲಾ ರಂಗಗಳಲ್ಲೂ ಕೇರಳ ರಾಜ್ಯ ಇಂದು ಅತ್ಯಂತ ಹಿಂದುಳಿಯುವಂತೆ ಈ ಎರಡೂ ಸರಕಾರಗಳು ಮಾಡಿವೆ. ಇಲ್ಲಿ ಉದ್ಯೋಗಕ್ಕೆ ಯಾವುದೇ ಸವಲತ್ತುಗಳಿಲ್ಲದೆ ಕೇರಳೀಗರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. […]

ಕುಂಬಳೆಯ ಗಾಂಧಿ ಮೈದಾನದಲ್ಲಿ ಚಿರಂಜೀವಿ ಕ್ಲಬ್‌ನ 30ನೇ ವರ್ಷದ ರಸಮಂಜರಿ

Thursday, January 21st, 2016
Kumble Musical Nite

ಕುಂಬಳೆ: ಕುಂಬಳೆಯ ಚಿರಂಜೀವಿ ಕ್ಲಬ್ ನ 30ನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಸಂಜೆ ಕುಂಬಳೆ ಗಾಂಧಿ ಮೈದಾನದಲ್ಲಿ ರಸಮಂಜರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ 30ನೇ ವರ್ಷದ ಸವಿ ನೆನಪಿಗಾಗಿ ರಚಿಸಲಾದ ನಂದನ ಸ್ಮರಣ ಸಂಚಿಕೆಯನ್ನು ಹಿರಿಯರಾದ ಶಿವರಾಮ ಕಡಪ್ಪುರ ಪ್ರಸಿದ್ದ ವೈದ್ಯ ಡಾ.ಮುಕುಂದರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಚಿರಂಜೀವಿ ಕ್ಲಬ್ ನ ಪದಾಧಿಕಾರಿಗಳಾದ ಬಾಲಕೃಷ್ಣ ಗಟ್ಟಿ,ವಿನಯ ಕುಮಾರ್,ಕೃಷ್ಣ ಗಟ್ಟಿ,ಸಂತೋಷ್ ಕುಮಾರ್,ನಾಗೇಶ್ ಕೃಷ್ಣ ನಗರ,ಗೋಪಿ,ನವೀನ ಗಟ್ಟಿ ಕೋಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು. ರಸಮಂಜರಿ ಕಾರ್ಯಕ್ರಮದಲ್ಲಿ ಹಿರಿಯ ನಾಟ್ಯಗುರು ಬಾಲಕೃಷ್ಣ […]

ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಸನ್ಮಾನ ಕಾರ್ಯಕ್ರಮ

Thursday, January 21st, 2016
Yakshagana Artist

ಮಂಜೇಶ್ವರ: ತೆಂಕುತಿಟ್ಟು ಯಕ್ಷಗಾನದ ಸವ್ಯಸಾಚಿ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆಯವರನ್ನು ಅವರ ಇಪ್ಪತ್ತೈದನೇ ವರ್ಷದ ಮೇಳ ತಿರುಗಾಟದ ರಜತ ಸಂಭ್ರಮದ ನಿಮಿತ್ತ ಇತ್ತೀಚೆಗೆ ಸಂತಡ್ಕ ಅರಸು ಸಂಕಲ ದೈವ ಕ್ಷೇತ್ರದ ವಾರ್ಷಿಕ ನೇಮೋತ್ಸವದ ಸಂದರ್ಭ ವಿಜಯ ಫ್ರೆಂಡ್ಸ್ ಕ್ಲಬ್ ಸಂತಡ್ಕ ಇದರ ವಾರ್ಷಿಕೋತ್ಸವದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕೊಂಡೆಯೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಸನ್ಮಾನಿಸಿ ಆಶೀರ್ವಚನ ನೀಡಿದರು. ಅಧ್ಯಾಪಕ ರಾಜಾರಾಮ ರಾವ್ ಚಿಗುರುಪಾದೆ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಪಾರ್ತಿಸುಬ್ಬ […]

ಬಜಕೂಡ್ಲಿನಲ್ಲಿ ನೇಜಿ ನೆಡುವ ಉತ್ಸವದ ಸಂಭ್ರಮ

Thursday, January 21st, 2016
Rice crop

ಪೆರ್ಲ: ಮಕ್ಕಳೂ, ಮಹಿಳೆಯರೂ, ಹೊಸಬರೂ-ಹಳೆಬರೂ ಮೊಣಕಾಲಷ್ಟು ಕೆಸರು ಗದ್ದೆಯಲ್ಲಿ ಇಂಚು ಉದ್ದದ ನೇಜಿ ನೆಡುವ ನೋಟ ಬಜಕೂಡ್ಲಿನಲ್ಲಿ ಉತ್ಸವದ ಸಂಭ್ರಮವನ್ನುಂಟು ಮಾಡಿತ್ತು. ಪೆರ್ಲ ಬಜಕೂಡ್ಲಿನ ಬಂಗಾರಿ ಎಪ್.ಇ.ಒ. ಎಂಬ ಕೃಷಿಕರ ಸಂಘಟನೆ ರೈತರಿಗೆ ಶ್ರೀ ಪದ್ಧತಿಯಲ್ಲಿ ಭತ್ತಕೃಷಿ ಮಾಡುವ ತರಬೇತಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾಮಾನ್ಯವಾಗಿ ಕಾರ್ಯಕ್ರಮಕ್ಕಾಗಿ ತರಬೇತಿ ಎಂಬ ನಿಲುವನ್ನು ಬದಲಿಸಿ, ಸುಮಾರು ಎರಡು ಎಕರೆಯಷ್ಟು ವಿಶಾಲವಾದ ಹಡಿಲು ಬಿದ್ದ ಗದ್ದೆಯನ್ನು ಕೆಸರು ಗದ್ದೆಯಾಗಿ ಮಾಡಿಕೊಂಡು, ಗೋ ಆಧಾರಿತ ಜೈವ ಕೃಷಿ ಮಾಡಲು ಬಜಕೂಡ್ಲಿನ ಅಮೃತಧಾರಾ ಗೋಶಾಲೆಯ […]

ಕುಂಬಳೆ ಟೈಲರಿಂಗ್, ಜೀನಸು ಅಂಗಡಿ ಬೆಂಕಿಗಾಹುತಿ

Thursday, January 21st, 2016
tailor-Shop fire

ಕುಂಬಳೆ: ಮೊಗ್ರಾಲ್ ಪುತ್ತೂರು ಕಡವತ್‌ನಲ್ಲಿ ಎರಡು ಅಂಗಡಿಗಳು ಬೆಂಕಿ ತಗಲಿ ಉರಿದು ನಾಶಗೊಂಡಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ. ಕಡವತ್‌ನ ಕಸಬ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಮೊಗ್ರಾಲ್ ಪುತ್ತೂರು ನಿವಾಸಿ ಕೃಷ್ಣ ಅವರ ಟೈಲರಿಂಗ್ ಅಂಗಡಿ ಹಾಗೂ ಮಾಲಿಂಗ ಶೆಟ್ಟಿ ಅವರ ಜೀನಸು ಅಂಗಡಿ ಉರಿದು ನಾಶಗೊಂಡಿದೆ. ಜ.19 ರಂದು ರಾತ್ರಿ ಈ ಘಟನೆ ನಡೆದಿದೆ. ಟೈಲರಿಂಗ್ ಅಂಗಡಿಯಲ್ಲಿ ಹೊಲಿಗೆಗೆಂದು ಇರಿಸಲಾಗಿದ್ದ ಸೀರೆಗಳು, ಪ್ಯಾಂಟ್, ಶರ್ಟ್, ಚೂಡಿದಾರ, ಎರಡು ಕಪಾಟುಗಳು, ಒಂದು ಕಟ್ಟಿಂಗ್ ಟೇಬಲ್, ಒಂದು ಟೈಲರಿಂಗ್ ಮೆಶಿನ್ […]

ಸ್ತ್ರೀ ವೇಷದ ಶಕಪುರುಷ ಐತ್ತಪ್ಪ ಶೆಟ್ಟಿ ಸಂಸ್ಮರಣೆ

Thursday, January 21st, 2016
Ithappa shetty

ಉಪ್ಪಳ: ತೆಂಕುತಿಟ್ಟು ಯಕ್ಷಗಾನದಲ್ಲಿ ಹಲವು ಪಾತ್ರಚಿತ್ರಣಗಳನ್ನು ಸೃಜಿಸಿ, ರಂಗಬದ್ಧ ನಾಟ್ಯಗಳಿಂದ ಕಲೆಗೆ ಜೀವತುಂಬಿದ ದಿ| ಸ್ತ್ರೀವೇಷಧಾರಿ ಐತ್ತಪ್ಪ ಶೆಟ್ಟರು ಅಗಲಿ 4ದಶಕ ಸಂದ ಬಳಿಕ ಅವರ ಸಂಸ್ಮರಣೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ತೆಂಕಣ ಯಕ್ಷಗಾನದ ಸ್ತ್ರೀವೇಷಗಳಿಗೆ ಖಚಿತವಾದ ರಂಗನಡೆಯನ್ನು ರೂಪಿಸಿಕೊಟ್ಟು ಕೀರ್ತಿಶೇಷರಾದ ಐತ್ತಪ್ಪ ಶೆಟ್ಟರ ಕೊಡುಗೆಗಳ ಬಗ್ಗೆ ದಾಖಲಾತಿಯಾಗದೇ ಹೋದುದು ಚಾರಿತ್ರಿಕ ನಷ್ಟ. ಅವರು ಯಕ್ಷಪರಂಪರೆಗೆ ಅಸಾಮಾನ್ಯ ಕೊಡುಗೆಯನ್ನಿತ್ತ ಅನನ್ಯ ಕಲಾವಿದ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ […]

ನಮೋ ಅಭಿವೃದ್ದಿ ಮಂತ್ರದೊಂದಿಗೆ ವಿಮೋಚನಾ ಯಾತ್ರೆಗೆ ಚಾಲನೆ

Thursday, January 21st, 2016
Venkaiah Naidu Kasaragod

ಉಪ್ಪಳ: ಸರ್ವ ಧರ್ಮ ಸಹಿಷ್ಣುತೆಯ ಭಾರತ ಭುವಿಯನ್ನು ಸಮೃದ್ದವಾಗಿ ಬೆಳೆಸಿ ಭ್ರಷ್ಟಾಚಾರ ರಹಿತ,ಕೋಮುವಾದಗಳಿಲ್ಲದ ಶಾಂತ ಆಡಳಿತ ನೀಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ.ಈ ಸತ್ಯವನ್ನು ಮರೆಮಾಚುವ ಯತ್ನಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ,ಜನ ಸಾಮಾನ್ಯರಿಗೆ ಬಿಜೆಪಿಯ ಒಳನೋಟಗಳು ಅರ್ಥವಾಗುತ್ತಿದೆ.ಕಳೆದ5 ದಶಕಗಳಿಂದ ಕೇರಳವನ್ನು ಅಕ್ಷರಶಃ ದುರ್ಗಮ ಹಾದಿಗೊಯ್ದಿರುವ ಅಭಿವೃದ್ದಿಗೆ ಕಿಂಚಿತ್ ಬೆಲೆ ನೀಡದ ಎಡ-ಬಲ ರಂಗಗಳೆರಡೂ ಅಧಃ ಪತನದ ಹಾದಿ ತುಳಿಯುತ್ತಿದ್ದು,ಬದಲಾವಣೆಗೆ ಬಿಜೆಪಿಯನ್ನು ಬೆಂಬಲಿಸಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆ ನೀಡಿದರು. ಎಲ್ಲರಿಗೂ ಅನ್ನ,ನೀರು,ಮಣ್ಣು,ಉದ್ಯೋಗ ಹಾಗೂ ಸಮಾನ […]

ಕಾಸರಗೋಡು ರೆಸ್ಟ್ ಹೌಸ್ ನೂತನ ಕಟ್ಟಡ ಉದ್ಘಾಟನೆ

Tuesday, January 19th, 2016
Rest House

ಕಾಸರಗೋಡು: ರೆಸ್ಟ್ ಹೌಸ್‌ನ(ವಿಶ್ರಾಂತಿ ಗೃಹ) ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಬ್ಲಾಕೊಂದನ್ನು ನಿರ್ಮಿಸಲಾಗುವುದೆಂದು ಲೋಕೋಪಯೋಗಿ ಸಚಿವ ವಿ.ಕೆ.ಇಬ್ರಾಹಿಂ ಕುಂಞಿ ಹೇಳಿದರು. ಅವರು ಕಾಸರಗೋಡಿನ ಲೋಕೋಪಯೋಗಿ ಇಲಾಖೆಯ ರೆಸ್ಟ್ ಹೌಸ್‌ಗೆ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಲೋಕೋಪಯೋಗಿ ಇಲಾಖೆ ರೆಸ್ಟ್ ಹೌಸ್‌ನ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 72 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಲೋಕೋಪಯೋಗಿ ಕಟ್ಟಡ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ […]

ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ವೀರಪ್ಪ ಮೊಯಿಲಿ ಭೇಟಿ

Tuesday, January 19th, 2016
veerappa Moily

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಭಾನುವಾರ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಗೋವಿಂದ ಪೈ ನಿವಾಸದಲ್ಲಿ ನಡೆದ ಸಭೆಯಲ್ಲಿ ಸ್ಮಾರಕದ ಉದ್ಘಾಟನಾ ದಿನವನ್ನು ನಿಶದಚಯಿಸಲಾಯಿತು. ಫೆ.28 ರಂದು ಲೋಕಾರ್ಪಣೆಗೊಳ್ಳಲಿರುವ ಸ್ಮಾರಕದ ಅಂತಿಮ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ತಿಗೊಳಿಸಲು ನಿರ್ಮಿತಿ ಕೇಂದ್ರದವರಲ್ಲಿ ಕೇಳಿಕೊಳ್ಳಲಾಯಿತು. ಸಭೆಯಲ್ಲಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವೀರಪ್ಪ ಮೊಯಿಲಿ,ಕಾಸರಗೋಡು ಜಿಲ್ಲಾಧಿಕಾರಿ ಮುಹಮ್ಮದ್ ಸಗೀರ್,ಟ್ರಸ್ಟ್ ಸದಸ್ಯರಾದ ಡಾ.ಡಿ.ಕೆ.ಚೌಟ,ಪ್ರೊ.ಬಿ.ವಿವೇಕ ರೈ,ಡಾ.ರಮಾನಂದ ಬನಾರಿ,ತೇಜೋಮಯ,ಎಂ.ಜೆ.ಕಿಣಿ,ಸುಭಾಶ್ಚಂದ್ರ,ಕೆ.ಆರ್ ಜಯಾನಂದ ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಪುನರ್ ರಚನೆ: ಶ್ರೀಕಾಂತ್ ಜಿಲ್ಲಾಧ್ಯಕ್ಷ

Tuesday, January 19th, 2016
Kasaragod BJP

ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ,ಯುವ ನಾಯಕ ನ್ಯಾಯವಾದಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯರಾಗಿದ್ದ ನಗರಸಭಾ ಕೌನ್ಸಿಲರ್ ಪಿ.ರಮೇಶ್ ಹಾಗೂ ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯ ಎ.ವೇಲಾಯುಧನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತರಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಸಮಿತಿಯನ್ನೂ ಪುನರ್ ಸಂಘಟಿಸಲಾಗಿದ್ದು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಒಂಭತ್ತು ಉಪಾಧ್ಯಕ್ಷರುಗಳು ಮತ್ತು 42 ಮಂದಿ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಘೋಷಿಸಿದ್ದಾರೆ. ಕೆ.ಸುರೇಂದ್ರನ್,ಎಎನ್ ರಾಧಾಕೃಷ್ಣನ್,ಎಂ.ಟಿ.ರಮೇಶ್,ಶೋಭಾ […]