ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ : ಡಾ.ಅಬ್ದುಲ್ ಖಾದರ್

Friday, January 15th, 2016
Kulapati

ಕುಂಬಳೆ: ಮಾನವೀಯ ಚಿಂತನೆಗಳಿಗಿಂತ ಮಿಗಿಲಾದ ಮಾನವ ಧರ್ಮ ಬೇರೊಂದಿಲ್ಲ.ಇಂದಿನ ಯಾಂತ್ರಿಕ ಯುಗದಲ್ಲಿ ಮಾನವೀಯತೆ, ಸಂಬಂಧಗಳು ಗಂಭೀರವಾಗಿ ಕುಸಿಯುತ್ತಿರುವುದು ಆತಂಕಾರಿ. ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿ ಸಮದೇಶಗಳನ್ನು ಸಮಾಜದಲ್ಲಿ ಪಸರಿಸಲು ಪ್ರಯತ್ನಿಸಬೇಕೆಂದು ಕಣ್ಣೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಅಬ್ದುಲ್ ಖಾದರ್ ಆಶಯ ವ್ಯಕ್ತಪಡಿಸಿದರು. ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ರಾಜ್ಯ ಸರಕಾರದ ಮಂಜೇಶ್ವರ ಐಎಚ್‌ಆರ್‌ಡಿ ಕಾಲೇಜಿನಲ್ಲಿ ಆರಂಭಿಸಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜು ಯೂನಿಯನ್ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ನಿರ್ದೇಶಕ ರಾಜನ್ […]

ಬಂಟ್ವಾಳ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

Thursday, January 14th, 2016
Bantwal DC

ಬಂಟ್ವಾಳ: ಪಾಣೆಮಂಗಳೂರು ಸೇತುವೆ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಇನ್ನೂ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ನಿರ್ಲಕ್ಷ್ಯ ತೋರಿದ ತಹಶೀಲ್ದಾರರನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಗುರುವಾರ ನಡೆಯಿತು. ಬಂಟ್ವಾಳ ತಾಲೂಕಿನಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಸಾಧಿಸಲಾದ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕುರಿತಾಗಿ ಬಂಟ್ವಾಳ ತಾಲೂಕು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದ ನಿಯೋಗವೊಂದು […]

ಕಣ್ವತೀರ್ಥ ಮನೆಗೆ ಪೇಜಾವರ ಶ್ರೀ ಭೇಟಿ

Thursday, January 14th, 2016
Kanwa Tirtha

ಮಂಜೇಶ್ವರ: ಪೇಜಾವರ ಮಠಾಧೀಶ ಶ್ರೀ ವಿಶೇಷತೀರ್ಥ ಶ್ರೀಪಾದರು ಬುಧವಾರ ರಾತ್ರಿ ಕಣ್ವತೀರ್ಥ ಮಧುಸೂದನ ಆಚಾರ್ಯರ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,ಪ್ರದೀಪ್ ಕುಮಾರ್ ಕಲ್ಕೂರ,ಸುಧಾಕರ ರಾವ್ ಪೇಜಾವರ,ಉದಯಕುಮಾರ್ ಕಣ್ವತೀರ್ಥ,ಪುರುಷೋತ್ತಮ ಮಂಜೇಶ್ವರ,ಸುನಂದಾ ಆಳ್ವ ಉಪಸ್ಥಿತರಿದ್ದು, ಶ್ರೀಗಳನ್ನು ಗೌರವಾದಾರಗಳಿಂದ ಬರಮಾಡಿಕೊಂಡರು. ಮಧುಸೂದನ ಆಚಾರ್ಯ ದಂಪತಿಗಳು ಪಾದಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಶ್ರೀಗಳು ಮುಂದೆ ನಡೆಯಲಿರುವ ಪರ್ಯಾಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭಕ್ತರ ಸಹಕಾರ ಕೋರಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖೇನ ಪರ್ಯಾಯ ಉತ್ಸವಕ್ಕೆ […]

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಕರ ಸಂಕ್ರಮಣ ಉತ್ಸವ

Thursday, January 14th, 2016
rss uppala

ಉಪ್ಪಳ : ಭಾರತ ಸಾಂಸ್ಕ್ರತಿಕ ಸಂಪನ್ನ ದೇಶ. ಈ ದೇಶದ ಮೂಲ ಪ್ರಜೆಗಳು ಹಿಂದುಗಳು, ಇದರಿಂದಾಗಿ ಭಾರತ ಸಾಂಸ್ಕ್ರತಿಕ ಸಂಪನ್ನ ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್ ಉಮೇಶ್ ತಿಳಿಸಿದರು. ಅವರು ಉಪ್ಪಳ ಮಂಡಲದ ಪ್ರತಾಪನಗರ ಶಾಖೆಯ ಮಕರ ಸಂಕ್ರಮಣ ಉತ್ಸವದಲ್ಲಿ ಮಾತನಾಡುತ್ತಿದ್ದರು. ನಮ್ಮ ಪರಂಪರೆಯಲ್ಲಿ ಕರ್ತವ್ಯ ಪ್ರಜ್ನೆ ಧರ್ಮ ಪ್ರಜ್ನೆ ಗಳು ಇದೆ.ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಆ ಮೂಲಕ ಜಗತ್ತಿಗೆ ಒಳಿತನ್ನು ಬಯಸಬೇಕು.ಸಂಕ್ರಮಣ ಪ್ರತಿ ವರ್ಷವೂ ಬರುತ್ತದೆ. ಆದರೆ […]

ಪರಿಹಾರಧನ ಬಿಡುಗಡೆ, ಜಪ್ತಿ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಸೊತ್ತುಗಳನ್ನು ಇಲಾಖೆಗೆ ಮರಳಿಸಿದ ಕೊರ್ಟ್

Wednesday, January 13th, 2016
court

ಮಂಗಳೂರು : ಭೂಸ್ವಾಧೀನದ ಬಗ್ಗೆ ಮಂಜೂರಾದ ಪರಿಹಾರಧನವನ್ನು ಪಾವತಿಸಿದ ಹಿನ್ನಲೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿಯವರ ಕಚೇರಿಯ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತಿಮಾಡಿದ ಪ್ರಕರಣ ಮಂಗಳೂರಿನಲ್ಲಿ ಸೋಮವಾರ ನಡೆದಿದೆ. ಮಂಗಳೂರು ಉಪವಿಭಾಗಾಧಿಕಾರಿಯವರ ವಾಹನ, ಕಚೇರಿಯ ಪೀಠೊಪಕರಣ, ಕಪಾಟು ಸಹಿತ ಎಲ್ಲ ಚರ ವಸ್ತುಗಳು ಜಪ್ತಿ ಮಾಡಲಾಯಿತು. ಬಜ್ಪೆ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿಯಲ್ಲಿ ಕ್ರಿಸ್ತಿನಾ ಡಿಸೋಜಾ ಎಂಬವರ 4.5 ಎಕರೆ ಕೃಷಿ ಭೂಮಿಯನ್ನು 2005ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನ ಪಡಿಸಲಾಗಿತ್ತು. ಇದಕ್ಕಾಗಿ ಅವರಿಗೆ 59 ಲಕ್ಷ ರೂ. ಪರಿಹಾರ […]

ಗಾಂಜಾ ಮಾರಾಟ ಪ್ರಕರಣದ ಆರೋಪಿಗಳ ಬಂಧನ

Wednesday, January 13th, 2016
Ganja seller

ಮಂಜೇಶ್ವರ : ಗಾಂಜಾ ಪ್ರಕರಣದ ಆರೋಪಿ ಪಾವೂರು ಬಳಿಯ ಮಚ್ಚಂಪಾಡಿ ನಿವಾಸಿ ಮೊಹಮ್ಮದ್ ಹನೀಫ್(25)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗಿದ್ದ ಇನ್ನೋರ್ವ ಪರಾರಿಯಾಗಿದ್ದು ಈತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈತನನ್ನು ಮೊರತ್ತಣೆಯಿಂದ ಬಂಧಿಸಲಾಗಿದೆ. ಈತ ಸಂಚರಿಸಿದ ಬೈಕ್‌ನ್ನು ವಶಪಡಿಸಲಾಗಿದೆ. ಈ ಬೈಕ್‌ನ್ನು ಕಳವು ಮಾಡಿದ್ದಾಗಿ ಪೊಲೀಸರು ಶಂಕಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಪೋಲಿಸರು ಮಂಗಳವಾರ ಸಂಜೆ ಕುಂಬಳೆ ಮೀನು ಮಾರುಕಟ್ಟೆ ಬಳಿ 150 ಗ್ರಾಂ ಗಾಂಜಾ ಸಹಿತ ಓರ್ವನನ್ನು ಸೆರೆಹಿಡಿದಿದ್ದಾರೆ. ಪೇರಾಲ್ ನಿವಾಸಿ ಉಮ್ಮರ್ ಶಾಫಿ (40)ಬಂಧಿತ. […]

ಪಯಸ್ವಿನಿ ಹೊಳೆ ತಡೆಗೋಡೆ ಕಾಮಗಾರಿ ಸ್ಥಗಿತ, ಕಾಸರಗೋಡಿನ ಜನತೆಗೆ ಉಪ್ಪು ನೀರು ಕುಡಿಸುವ ಜಿಲ್ಲಾಡಳಿತ

Wednesday, January 13th, 2016
Payashvini

ಕಾಸರಗೋಡು: ಜಿಲ್ಲಾಡಳಿತ ಈ ಬಾರಿಯೂ ನಗರದ ಜನತೆಗೆ ಉಪ್ಪು ನೀರು ಕುಡಿಸಲು ತಯಾರಿ ನಡೆಸುತ್ತಿದೆ. ಶಾಶ್ವತ ತಡೆಗೋಡೆ ಕಾಮಗಾರಿ ಸ್ಥಗಿತಗೊಂಡಿದ್ದು, ಪರಿಷ್ಕೃತ ಎಸ್ಟಿಮೇಟ್ ಕಳುಹಿಸಿ ಸರ್ಕಾರದ ಅನುಮೋದನೆ ಲಭಿಸಿದ್ದರೂ ಹಲವು ಕಾರಣಗಳಿಂದ ಯೋಜನೆ ಜಾರಿಯಾಗದೆ ಕಡತದಲ್ಲೇ ಉಳಿದಿದೆ. ನಗರದ ಜನತೆಗೆ ಕುಡಿಯುವ ಶುಧ್ಧ ನೀರು ಪೂರೈಕೆಯ ಗುರಿಯಿರಿಸಿರುವ ಜಿಲ್ಲಾಡಳಿತ ಬಾವಿಕ್ಕೆರೆಯ ಪಯಸ್ವಿನಿ ಹೊಳೆಗೆ ಅಡ್ಡ ಮರಳಚೀಲದ ತಾತ್ಕಾಲಿಕ ತಡೆಗೋಡೆಯ ನಿರ್ಮಾಣಕ್ಕೆ ಮುಂದಾಗಿದೆ. ಸಮುದ್ರದ ಉಪ್ಪುನೀರು ಸಿಹಿ ನೀರಿನೊಂದಿಗೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಇಲ್ಲಿ ಹೊಳೆಗೆ […]

ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆ ಆರಂಭ

Wednesday, January 13th, 2016
Kanipura Jatre

ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ಕ್ಷೇತ್ರಗಳಲ್ಲಿ ಒಂದಾದ ಅತ್ಯಂತ ಕಾರಣಿಕ ಮಹತ್ವ ಪಡೆದಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.14ರಿಂದ 18ರ ವರೆಗೆ ಐದು ದಿನಗಳ ಪರ್ಯಂತ ಶ್ರದ್ಧಾಭಕ್ತಿಯಿಂದ ಜರಗಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ. ಕಣಿಪುರ ದೇವಾಲಯದ ಜಾತ್ರಾ ಮಹೋತ್ಸವದ ಪ್ರಯುಕ್ತ ಕುಂಬಳೆ ಪೇಟೆ ಹಾಗೂ ಆಸುಪಾಸಿನ ಪ್ರದೇಶಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಎಲ್ಲಡೆ ಕೇಸರಿ ಬಂಟಿಂಗ್ಸ್ , ಓಂಕಾರ ಧ್ವಜಗಳು, ಫ್ಲೆಕ್ಸ್ ಬೊರ್ಡ್ […]

ಮತ್ತೆ ವ್ಯಾಪಕ ಬೆಂಕಿ-ನಿಲ್ಲದ ಸಮಾಜ ದ್ರೋಹಿಗಳ ಅಟ್ಟಹಾಸ

Wednesday, January 13th, 2016
Badiyadka Fire

ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ಪರಿಸರದಲ್ಲಿ ಬೆಂಕಿ ಅನಾಹುತಗಳು ಮತ್ತೆ ಮಂಗಳವಾರ ಮಧ್ಯಾಹ್ನ ಸಂಭವಿಸಿದ್ದು, ಪರಿಸರ ವಾಸಿಗಳು ತೀವ್ರ ಭಯಗ್ರಸ್ಥರಾಗಿದ್ದಾರೆ. ಜನವರಿ 2 ರಿಂದ ನಿರಂತರ ಈ ಪ್ರದೇಶದ ಅಲ್ಲಲ್ಲಿ ಈ ವರೆಗೆ ಅಗ್ನಿ ವ್ಯಾಪಿಸುತ್ತಿದ್ದು, ಒಟ್ಟು 40 ಎಕ್ರೆಗಳಿಗಿಂತಲೂ ಅಧಿಕ ಪ್ರದೇಶದಲ್ಲಿ ಮರಗಿಡಗಳ ಸಹಿತ ಪ್ರಾಣಿ ಪಕ್ಷಿಗಳಿಗೆ ವ್ಯಾಪಕ ನಷ್ಟ ಅನುಭವಿಸಿದೆ. ಮುಳಿಹುಲ್ಲುಗಳು ವ್ಯಾಪಕವಾಗಿ ಬೆಳೆದಿರುವ ಬಯಲು ಪ್ರದೇಶದಲ್ಲಿ ಮೊದಲು ಬೆಂಕಿ ವ್ಯಾಪಿಸತೊಡಗುತ್ತಿದ್ದು, ಬಳಿಕ ವೇಗವಾಗಿ ಬೀಸುವ ಗಾಳಿಗೆ ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸುತ್ತಿದೆ. ಇದರಿಂದ ಜನ […]

ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ

Wednesday, January 13th, 2016
yeddyurappa Kunjathuru

ಮಂಜೇಶ್ವರ : ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಭೇಟಿ ನೀಡಿದರು. ಈ ಪ್ರಯುಕ್ತ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಯುವ ಜನಾಂಗ ಕಠಿಣ ಪರಿಶ್ರಮಿಗಳಾಗಿ ಸುದೃಢ ದೇಶವನ್ನು ಕಟ್ಟುವ ಕಾರ್ಯವನ್ನು ನಿರಂತರ ಮಾಡಿಕೊಂಡು ಬರಬೇಕು ಎಂದು ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಅಭೀವೃದ್ಧಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ,ದಾಖಲೆಯ ಅವಧಿಯಲ್ಲಿ ಶ್ರೀ ಕ್ಷೇತ್ರದ ಪುನರ್‌ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದುದರ ಬಗ್ಗೆ ಸಂತಸ ಸೂಚಿಸಿದರು. ಉಡುಪಿ ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ […]