ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

Sunday, August 24th, 2014
ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

ಮಂಗಳೂರು : ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನ ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ ಎಂದು ರೋಶನಿ ನಿಲಯದಲ್ಲಿ ನಡೆದ ಸಮಾಜ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಭಂಧಪಟ್ಟ ವಿಚಾರಗೋಷ್ಠಿಯಲ್ಲಿ ಸಮಾಜ ಕಾರ್ಯ ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಡಿ ಸಂಸ್ಥೆ ಹಾಗೂ ರೋಶನಿ ನಿಲಯ ಸಹಭಾಗಿತ್ವದಲ್ಲಿ ಆಯೋಜಿಸಿದ ಎಂ.ಎಸ್.ಡಬ್ಲು ಕ್ಷೇತ್ರ ಅಧ್ಯಯನದ ಪೂರ್ವಸಿದ್ದತಾ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ನಡೆಸಲಾದ ಸಂದರ್ಭದಲ್ಲಿ ಫ್ರೊಫೆಸರ್ ರೀಟಾ ನರೋನ್ಹಾ ರವರು ಭಾಗವಹಿಸಿ, ಸಮಾಜ ಕಾರ್ಯ ಅಧ್ಯಯನಕ್ಕೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ […]

ಸ್ಪರ್ಧೆಗಳು ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರಬೇಕು : ರತೀಂದ್ರನಾಥ್

Sunday, August 24th, 2014
sai-kids-jone

ಬಂಟ್ವಾಳ: ಮಕ್ಕಳ ಅಭಿರುಚಿಗೆ ಪೂರಕವಾಗಿರುವ ಚಿತ್ರ ಕಲೆಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ, ಸ್ಪರ್ಧೆ ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರರಬೇಕು ಎಂದು ಮಂಗಳೂರು ಶ್ರೀಶಿರ್ಡಿ ಬಾಬ ರಿಯಲ್ ಎಸ್ಟೇಟ್ ಮತ್ತು ಪ್ರೋಮೊಟರ‍್ಸ್ ಮಾಲಕ ಎಚ್ ರತೀಂದ್ರನಾಥ್ ಹೇಳಿದರು ಅವರು ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಝೋನ್ ಪ್ಲೇ ಸ್ಕೂಲ್ ನ ವತಿಯಿಂದ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು […]

ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಬೇಕು : ನಗರೇಶ್

Sunday, August 24th, 2014
adhivakta

ಮಂಗಳೂರು: ಸಾಮಾಜಿಕ ಬದಲಾವಣೆಗೆ ಕಾನೂನು ಉತ್ತಮ ಸಾಧನವಾಗಿದೆ. ಜನಸಾಮಾನ್ಯರಿಗೂ ಕಾನೂನು ಸೇವೆ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಸದಸ್ಯ, ಕೇರಳ ಬಾರ್ ಅಸೋಸಿಯೇಶನ್ ಸದಸ್ಯ ನಗರೇಶ್ ಹೇಳಿದರು. ಅವರು ಭಾನುವಾರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್‌ನ ದ.ಕ.ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜನ ಸಾಮಾನ್ಯರ ಸೇವೆ ಮಾಡುವ ರಾಜಕೀಯೇತರ ವಕೀಲರ ಸಂಘಟನೆಯೇ ಅಧಿವಕ್ತಾ ಪರಿಷತ್ ಆಗಿದೆ. ದೇಶದಲ್ಲಿ ಸಾವಿರಾರು ವಕೀಲರ ಸಂಘಟನೆಗಳಿದ್ದು, ಕೆಲವು […]

ಉಳ್ಳಾಲದಲ್ಲಿ ಮಸಣದಲ್ಲಿ ಸತ್ತ ಹಸುಗೂಸು ಅಳಲು ಆರಂಭಿಸಿದ ವಿಸ್ಮಯಕಾರಿ ಘಟನೆ

Saturday, August 23rd, 2014
infant

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ […]

ಅನಂತಮೂರ್ತಿಯವರ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

Saturday, August 23rd, 2014
Veerendra Heggade

ಧರ್ಮಸ್ಥಳ : ಖ್ಯಾತ ಸಾಹಿತಿ ಶ್ರೀ ಯು. ಆರ್. ಅನಂತಮೂರ್ತಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು ಕ್ಷೇತ್ರದ ಅಭಿಮಾನಿಯಾಗಿದ್ದು ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಹಾಗೂ 51 ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಧರ್ಮ, ಸಾಹಿತ್ಯ ಹಾಗೂ ಇತರ ಸಾಮಾಜಿಕ ವಿಚಾರಗಳ ಬಗ್ಗೆ ಅವರು ನೇರವಾಗಿ ಹಾಗೂ ಅಷ್ಟೇ ಖಾರವಾಗಿ ತಮ್ಮ ಅಭಿಪ್ರಾಯವನ್ನು ಸಾದರ ಪಡಿಸುತ್ತಿದ್ದರು. ಧರ್ಮಸ್ಥಳದ ವಿವಿಧ ಸೇವಾಕಾರ್ಯಗಳ ಬಗ್ಗೆ […]

ರಂಜಾಳ ವಾಸುದೇವ ಪ್ರಭು ನಿಧನ- ಬಿಜೆಪಿ ಸಂತಾಪ

Saturday, August 23rd, 2014
Renjala Vasudeva Prabhu

ಮಂಗಳೂರು : ರಂಜಾಳ ವಾಸುದೇವ ಪ್ರಭು (84 ವರ್ಷ) ಇವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (23.08.2014) ನಿಧನರಾಗಿದ್ದಾರೆ. ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಂಸ್ಕೃತ ಅಧ್ಯಾಪಕರಾಗಿದ್ದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಶ್ರೀಯುತರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ , ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ […]

ಬಂಟ್ಸ್ ಹಾಸ್ಟೆಲ್‌ನಲ್ಲಿ ಆಗಸ್ಟ್ 29 ರಿಂದ 31 ರವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ

Friday, August 22nd, 2014
Bunts Ganeshotsava

ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್‌ನ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಆಗಸ್ಟ್ 29 ರಿಂದ 31 ರವರೆಗೆ ತೆನೆಹಬ್ಬ, ಗಣೇಶೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಿದ್ಧಿ ವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ೨೮ರಂದು ನಗರದ ರಾಧಾಕೃಷ್ಣ ಮಂದಿರದಿಂದ ಬಂಟ್ಸ್‌ಹಾಸ್ಟೆಲ್‌ಗೆ ದೇವರ ವಿಗ್ರಹ ತರಲಾಗುವುದು. 29ರಂದು ಬೆಳಿಗ್ಗೆ ತೆನೆಹಬ್ಬ. ದೇವರ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮವನ್ನು ಫಾದರ್ […]

ಅಕ್ರಮ-ಸಕ್ರಮ ಶೀಘ್ರ ವಿಲೇವಾರಿ- ಶಾಸಕಿ ಶಕುಂತಳಾ ಶೆಟ್ಟಿ

Friday, August 22nd, 2014
Shakuntala shetty

ವಿಟ್ಲ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುವ ರೈತರ ಜಮೀನನ್ನು ಅಕ್ರಮ-ಸಕ್ರಮ ಕಾರ್ಯಕ್ರಮದಡಿ ಶೀಘ್ರ ವಿಲೇವಾರಿ ಮಾಡಲಾಗುವುದು. ಆದರೆ, ಕುಮ್ಕಿ ಜಮೀನು, ಬನ, ಕಾನ, ಅರಣ್ಯ ಪ್ರದೇಶಗಳನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಶಾಸಕಿ ಗುರುವಾರ ವಿಟ್ಲ ಪ್ರವಾಸಿ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಕ್ರಮ ಸಕ್ರಮ ವಿಚಾರಣೆ ನಡೆಸಿದರು. ಕರ್ನಾಟಕ ಭೂಕಂದಾಯ ಕಾಯಿದೆ ಪ್ರಕಾರ […]

ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 42000 ಪ್ರಗತಿಬಂಧು ಸ್ವ-ಸಹಾಯ ಸಂಘಗಳರಚನೆ – ಡಾ.ವಿರೇಂದ್ರ ಹೆಗ್ಗಡೆ

Friday, August 22nd, 2014
Pragati Bandhu

ಬೆಂಗಳೂರು : ಸ್ವ-ಸಹಾಯ ಸಂಘಗಳನ್ನುಕಟ್ಟಿಕೊಳ್ಳುವ ಮೂಲಕ ಸ್ವಶಕ್ತಿಯಿಂದ ಬದುಕುವ ಕಲೆ ರೂಪಿಸಿಕೊಂಡು ಪ್ರಗತಿ ಹೊಂದಬೇಕು ಹಾಗೂ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ||ವಿರೇಂದ್ರ ಹೆಗ್ಗಡೆಯವರು ತಿಳಿಸಿದರು. ಇತ್ತೀಚೆಗೆ ಬೆಂಗಳೂರಿನ ಟಿ.ದಾಸರಹಳ್ಳಿ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರ ಏಕಾಗ್ರತೆ ಇರುವುದು ಸುಖಶಾಂತಿ,ನೆಮ್ಮದಿಗಾಗಿ ಮಾತ್ರ ನಿತ್ಯ ದೇವರನ್ನು ಸಾಂಪ್ರದಾಯಿಕ ವಿಧಿವಿಧಾನಗಳಿಂದ ಸಮಸ್ಯೆ ಪರಿಹರಿಸುವಂತೆ ಬೇಡಿದರೆ ಸಾಕಾಗುವುದಿಲ್ಲ. ಮಾನವನ ಪ್ರಯತ್ನವು ಬೇಕಾಗುತ್ತದೆ. ಮನುಷ್ಯ ವ್ಯವಸ್ಥಿತ ಬದುಕು […]

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸ್ ಜನ್ಮ ದಿನಾಚರಣೆ

Thursday, August 21st, 2014
Rajiv-gandhi-birthday

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜೀ ಪ್ರಧಾನಿ ದಿ| ರಾಜೀವ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ| ದೇವರಾಜ್ ಅವರಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜಿ.ಆರ್.ಲೋಬೋರವರು ಮಾತನಾಡುತ್ತಾ, ಇಬ್ಬರು ಮಹಾ ನಾಯಕರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ರಾಜೀವ್ ಗಾಂಧಿಯವರು ದೇಶದ ಪ್ರಧಾನಿಯಾಗಿ ದೇಶದ ಆಥರ್ಿಕತೆ, ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಬಲಿಷ್ಠ ಭಾರತ ನಿರ್ಮಾಣಕ್ಕಾಗಿ […]