ಇಂದಿನಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಜರ್ಮನಿ ಪ್ರವಾಸ

Thursday, July 17th, 2014
Veerendra Hegde Family

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಶುಕ್ರವಾರದಿಂದ ಹತ್ತು ದಿನಗಳ ಕಾಲ ಜರ್ಮನಿ ದೇಶದ ಪ್ರವಾಸ ಮಾಡುವರು. ಪ್ರಾಂಕ್ ಫರ್ಟ್ ದಲ್ಲಿ ಪೂಜ್ಯ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ಕೆಲವು ದಿನ ಸತ್ಸಂಗದಲ್ಲಿ ಅವರು ಭಾಗವಹಿಸುವರು. ಬಳಿಕ ಜರ್ಮನಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವರು. ಜು. 30 ರಂದು ವಿದೇಶ ಪ್ರವಾಸದಿಂದ ಡಾ. ಹೆಗ್ಗಡೆಯವರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಪ್ರಾರಂಭ

Thursday, July 17th, 2014
Dharmasthala

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬುಧವಾರದಿಂದ ಎರಡು ತಿಂಗಳ ಕಾಲ ನಡೆಯಲಿರುವ ಪುರಾಣ ವಾಚನ-ಪ್ರವಚನ ಎಂಬ ಸತ್ಸಂಗ ಕಾರ್ಯಕ್ರಮಕ್ಕೆ ವಾಚನ-ಪ್ರವಚನಕಾರರು, ಕ್ಷೇತ್ರದ ಭಕ್ತಾದಿಗಳ ಸಮ್ಮುಖದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮಂಗಳೂರಿನ ಉದ್ಯಮಿ ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ರ ವರೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಶ್ರೀ ಕುಮಾರ ವ್ಯಾಸ ವಿರಚಿತ ಕರ್ಣಾಟ ಭಾರತ ಮಂಜರಿ ಯ ವಾಚನ – ಪ್ರವಚನ ನಡೆಯಲಿದೆ. […]

ಒಮಾನ್ ಮುಸ್ಲಿಂ ರಾಜನ ಕ್ಷೇಮಕ್ಕಾಗಿ ಕೊಡ್ಯಡ್ಕದ ಹಿಂದೂ ದೇವಳದಲ್ಲಿ ಚಂಡಿಕಾಯಾಗ

Tuesday, July 15th, 2014
Sulthan Qboos

ಮಂಗಳೂರು : ಏಳು ಸಮುದ್ರದಾಚೆಯ ಅರಬ್ ದೇಶ ಒಮಾನ್ ಗೂ ಇಲ್ಲಿಯ ಮೂಡಬಿದಿರೆಗೂ ಅದೆಂತಹ ಸಂಬಂಧ ಎನ್ನಬಹುದು ಮೂಡಬಿದಿರೆಯ ಪ್ರಸಿದ್ಧ ದೇವಾಲಯವಾದ ಅನಿವಾಸಿ ಭಾರತೀಯರೊಬ್ಬರು ನಿರ್ಮಿಸಿ ಹೆಸರುವಾಸಿಯಾಗಿರುವ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಮಾನಿನ ರಾಜನ ಆರೋಗ್ಯಕ್ಕೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಯಾಗವೊಂದು ನಡೆದಿದೆ. ಪ್ರಸ್ತುತ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ ಅವರ ಕ್ಷೇಮಕ್ಕಾಗಿ ಮೂಡಬಿದ್ರೆಯ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ […]

ಗ್ಯಾಸ್ ಸಿಲಿಂಡರ್ ನ ತೂಕಕ್ಕೆ ಕ್ರಮ: ಬಳಕೆದಾರರ ವೇದಿಕೆ ಸ್ವಾಗತ

Tuesday, July 15th, 2014
Gas

ಮಂಗಳೂರು: ಪ್ರತೀ ಗ್ರಾಹಕರ ಎದುರೇ ಗ್ಯಾಸ್ ಸಿಲಿಂಡರ್ ತೂಕ ಮಾಡಿ ಕೊಡುವ ಮೂಲಕ ಸುಪ್ರೀಮ್ ಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದಿರುವ ದ.ಕ.ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಸ್ವಾಗತಿಸಿದೆ. ಇದರಿಂದ ಗ್ರಾಹಕರಿಗೆ ತಮಗೆ ಸರಿಯಾಗಿ ತೂಗಿ ಕೊಡಲಾಗುತ್ತಿದೆ ಎಂಬ ವಿಶ್ವಾಸ ಮೂಡುವುದಲ್ಲದೆ ಗ್ಯಾಸ್ ಕಡಿಮೆ ಮಾಡಿ ಕೊಡಲಾಗುತ್ತದೆ ಎಂಬ ದೂರುಗಳಿಗೆ ಕಡಿವಾಣ ಹಾಕಬಹುದಾಗಿದೆ. ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಈ ಬೇಡಿಕೆಯನ್ನು ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದೆಯಾದರೂ ಅದರ ಜಾರಿಗೆ […]

ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

Tuesday, July 15th, 2014
ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

ಕೆಕ್ಕಾರು : ನಮ್ಮ ಬದುಕು ಸ್ಥಿರವಲ್ಲ, ಶಾಶ್ವತವಲ್ಲ. ಅದು ಕಮಲದ ಎಲೆಯ ಮೇಲಿನ ಬಿಂದುವಿನಂತೆ. ಕಮಲದ ಎಲೆಯಮೇಲೆ ಹೇಗೆ ನೀರಿನ ಬಿಂದು ಹೊಳೆಯುತ್ತದೆಯೋ ಹಾಗೆ ನಮ್ಮ ಬದುಕು ಕೂಡ ಹೊಳಪುಳ್ಳದ್ದು ಎಂದು ಭಾವಿಸುತ್ತೇವೆ. ಆದರೆ ಅದು ಸತ್ಯವಲ್ಲ; ಮಿಥ್ಯೆ. ಲೋಕ- ಶೋಕ ಅಕ್ಷರದಲ್ಲಿ ಮಾತ್ರ ವ್ಯತ್ಯಾಸ. ಆದರೆ ಅರ್ಥದಲ್ಲಿ ವ್ಯತ್ಯಾಸವಿಲ್ಲ. ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸು ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಿಳಿಸಿದರು. ಈ ದಿನ ಹರಿಕಂತ್ರ ಸಮಾಜದವರು ವಿಶೇಷ […]

ಗುರು ಅನುಗ್ರಹದಿಂದ ನಮ್ಮಲ್ಲಿ ಜ್ಞಾನ ಸೂರ್ಯ ಬೆಳಗಲಿ -ಕೊಂಡೆವೂರು ಶ್ರೀಗಳು

Monday, July 14th, 2014
Nityananda Yogashrama

ಮಂಗಳೂರು : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜುಲೈ 12 ಶನಿವಾರ ಗುರುಪೌರ್ಣಮಿ ಆಚರಣೆ ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳೊಡನೆ ಜರಗಿತು. ಇದೇ ಸಂದರ್ಭದಲ್ಲಿ ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಚಾತುರ್ಮಸ್ಯ ವೃತ ಸಂಕಲ್ಪವನ್ನೂ ಕೈಗೊಂಡರು. ಪ್ರಾತ:ಕಾಲ ‘ಗಣಹವನ’ ದಿಂದ ಮೊದಲ್ಗೊಂಡು, ನಂತರ ‘ವೇದವ್ಯಾಸ ಹವನ’ ಆರಂಭವಾಗಿ 11.30 ಕ್ಕೆ ಅದರ ಪೂರ್ಣಾಹುತಿ ನಡೆಯಿತು. ಇದೇ ಸಂದರ್ಭದಲ್ಲಿ ಕಾಮಧೇನು ಗೋಶಾಲೆಯ ನೂತನ ಕಟ್ಟಡಕ್ಕೆ ಪೂಜ್ಯ ಗುರೂಜಿ ಯವರ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ಕಾರ್ಯಕ್ರಮವೂ ನೆರವೇರಿತು. […]

ಪ್ರಗತಿಗಾಗಿ ಜನಸಂಖ್ಯೆ ನಿಯಂತ್ರಿಸಿ : ಆಶಾ ತಿಮ್ಮಪ್ಪ

Friday, July 11th, 2014
population control

ಮಂಗಳೂರು : ನಮ್ಮ ಪ್ರಗತಿಯ ಯೋಜನೆಗಳನ್ನೆಲ್ಲಾ ಇತಿಮಿತಿಯಿಲ್ಲದ ಜನಸಂಖ್ಯಾ ಸ್ಪೋಟ ನುಂಗಿ ಹಾಕುತ್ತಿದೆ. ನಾವು ಪ್ರಗತಿ ಹೊಂದ ಬೇಕಾದರೆ ಮೊದಲು ನಾವು ಸಣ್ಣ ಪರಿವಾರದ ಆಯ್ಕೆ ಮಾಡಿಕೊಂಡು ನಮ್ಮ ಜನಸಂಖ್ಯೆ ನಿಯಂತ್ರಿಸುವುದೊಂದೇ ನಮಗಿರುವ ದಾರಿ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಆಶಾ ತಿಮ್ಮಪ್ಪ ಅವರು ಕರೆ ನೀಡಿದ್ದಾರೆ. ಅವರು ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಪುರುಷರ ವಸತಿಗೃಹ ಸಭಾ […]

ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಬಲಪಡಿಸಲು ಹರೀಶ್ ಆಚಾರ್ ಕರೆ

Friday, July 11th, 2014
Harish Achar

ಮಂಗಳೂರು : ಸಹಕಾರಿ ಕ್ಷೇತ್ರಗಳ ಎಲ್ಲಾ ರಂಗಗಳನ್ನು ಬಲಪಡಿಸಬೇಕಾಗಿದೆ. ಸಹಕಾರಿ ರಂಗದಲ್ಲಿ ಮಹಿಳಾ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇತ್ರಗಳನ್ನು ಹೆಚ್ಚು ಸಕ್ಷಮವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳಸಬೇಕಾಗಿದೆ. ಇಂತಹ ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಒತ್ತು ನೀಡುವ ಮುಖಾಂತರ ಸಹಕಾರಿ ರಂಗವನ್ನು ಬಲಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಿದೆ ಎಂದು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ […]

ಬಲ್ಮಠ-ಬೆಂದೂರ್ವೆಲ್ ರಸ್ತೆಯ ಏಕಮುಖ ಸಂಚಾರ ಅವ್ಯವಸ್ಥೆ ಜಿಲ್ಲಾಧಿಕಾರಿಗೆ ದೂರು

Friday, July 11th, 2014
Bendoor Road

ಮಂಗಳೂರು: ಮಂಗಳೂರಿನ ಸಂಚಾರಿ ಪೊಲೀಸರು ನಗರದ ಬೆಂದೂರುವೆಲ್-ಬಲ್ಮಠ ರಸ್ತೆಯನ್ನು ಏಕಮುಖ ಸಂಚಾರ ವ್ಯವಸ್ಥೆಗೊಳಿಸಿರುವುದರಿಂದ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಪರಿಸರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಉದ್ಯಮಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಹಾಗೂ ತಕ್ಷಣ ಈ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಬೆಂದೂರ್ವೆಲ್-ಬಲ್ಮಠ-ಕಂಕನಾಡಿ ಪರಿಸರದ ನಿವಾಸಿಗಳು ಹಾಗೂ ಸ್ಥಳೀಯ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಸದ್ರಿ ರಸ್ತೆಯನ್ನು ಏಕಮುಖ ಸಂಚಾರಿ ರಸ್ತೆಯನ್ನಾಗಿ […]

ಕರಾವಳಿ ಕಾವಲು ಪೋಲೀಸ್ ಠಾಣೆಗೆ ಉಚಿತ ಕರೆ ಸಂಖ್ಯೆ 1093

Friday, July 11th, 2014
Coastal guard

ಮಂಗಳೂರು : ಮಂಗಳೂರು ಕರಾವಳಿ ಕಾವಲು ಪೋಲೀಸ್ ಠಾಣೆಯು ತಲಪಾಡಿ ಕಡಲ ತೀರದಿಂದ ಹೊಸಬೆಟ್ಟು ಗ್ರಾಮದ ವರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಮುದ್ರದಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯವರೆಗೆ ಇಲಾಖಾ ಬೋಟುಗಳಲ್ಲಿ ಅಹರ್ನಿಶಿಯಾಗಿ ಸಮುದ್ರ ಗಸ್ತು ಕರ್ತವ್ಯದೊಂದಿಗೆ ಅಕ್ರಮವಾಗಿ ಒಳನುಸುಳುವ ಅನುಮಾನಾಸ್ಪದ ಬೋಟುಗಳ ಚಲನವಲನಗಳನ್ನು ಭಯೋತ್ಪಾದಕರ ಬಗ್ಗೆ ನಿಗಾ ವಹಿಸುವ ಹಾಗೂ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಲುಕಿದ ಬೋಟು ಮತ್ತು ಮೀನುಗಾರರನ್ನು, ಜೀವ ಹಾನಿಯಾಗುವ ತುರ್ತು ಸಂದರ್ಭಗಳಲ್ಲಿ […]