ಬಲಿಷ್ಟ ಭಾರತದ ನಿರ್ಮಾಣದ ಬಜೆಟ್ : ಸಂಸದ ನಳಿನ್

Thursday, July 10th, 2014
Nalin kumar

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿತ್ವದ, ಅಭಿವೃದ್ಧಿಶೀಲ, ಬಲಿಷ್ಟ ಭಾರತದ ನಿರ್ಮಾಣಕ್ಕೆ ಪೂರಕವಾದ ಬಜೆಟನ್ನು ಸಚಿವ ಅರುಣ್ ಜೆಟ್ಲಿ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜನಸಾಮಾನ್ಯರ ಜೀವನಕ್ಕೆ ಪೂರಕವಾದ ಅಂಶಗಳನ್ನು ಗಮನಿಸಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಬಟ್ಟೆಬರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ವೇತನ ವರ್ಗದವರಿಗೆ ಆದಾಯ ಮಿತಿ 2.50ಲಕ್ಷಗೆ ವಿಸ್ತರಿಸಲಾಗಿದೆ. ಕೃಷಿ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಎಲ್ಲಾ ಮನೆಗಳಿಗೆ […]

ಪೊಳಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾಡೋಜ ಡಾ. ಕೆ.ಪಿ. ರಾವ್

Thursday, July 10th, 2014
Dr KP Rao

ಮಂಗಳೂರು : ಅಗೋಸ್ತು ತಾ. 2 ಮತ್ತು 3 ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜರಗಲಿರುವ ದ.ಕ. ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ವಿಶ್ವಮಾನ್ಯ ಕನ್ನಡಿಗ ಕಂಪ್ಯೂಟರ್ ವಿಜ್ಞಾನಿ, ಸಾಫ್ಟ್ವೇರ್ ಭಾಷಾ ತಜ್ಞ ಗಣಕ ಮಹೋಪಾಧ್ಯಾಯ – ಡಾ. ಕಿನ್ನಿಕಂಬಳ ಪದ್ಮನಾಭರಾವ್ ಆಯ್ಕೆಯಾಗಿದ್ದಾರೆ. ಸಾಹಿತ್ಯ ಮತ್ತು ಭಾಷಾ ಕ್ಷೇತ್ರ ಮತ್ತು ಗಣಕ ತಂತ್ರಜ್ಞಾನಗಳ ಸಮನ್ವಯದ ಸಂಕೇತವಾಗಿ, ಹೊಸ ಅಶೋತ್ತರಗಳ ನೆಲೆಯಲ್ಲಿ ಅವರಿಗೆ ಅರ್ಹ ಗೌರವ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. […]

ವೆನ್ಲಾಕ್ ಆಸ್ಪತ್ರೆಯಲ್ಲಿ ‘ಜೀವನ ಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ’

Thursday, July 10th, 2014
Yoga

ಮಂಗಳೂರು : ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ರೋಗಗಳ ಬಗ್ಗೆ ಆಯುಷ್ ಜನಜಾಗೃತಿ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 08.07.2014 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜರುಗಿತು. ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಜೀವನಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ ಹಮ್ಮಿಕೊಳ್ಳಲಾಯಿತು. ವೆನ್ಲಾಕ್ ಆಸ್ಪತ್ರೆಯ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಮುಂತಾದ […]

ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಆಗದಿರುವ ಬಗ್ಗೆ ಅಸಮಾಧಾನ

Wednesday, July 9th, 2014
Protest on 2003

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ಈ ಬಾರಿಯ ರೈಲ್ವೆ ಬಜೆಟ್ ಕರ್ನಾಟಕ ರಾಜ್ಯದ ಕರಾವಳಿಯ ಜನತೆಗೆ ಉತ್ತಮ ಕೊಡುಗೆಯನ್ನು ನೀಡಿದೆ. ಇದೊಂದು ಉತ್ಪ್ರೇಕ್ಷೆಗಳಿಲ್ಲದ ಸಮಾಧಾನಕರ ಬಜೆಟ್. ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗರಚನೆ ಆಗದಿರುವ ಹಾಗೂ ನೈರುತ್ಯ ವಲಯಕ್ಕೆ ಮಂಗಳೂರು ವಿಭಾಗ ಸೇರ್ಪಡೆಗೊಳಿಸದೇ ಇರುವುದು ಮಾತ್ರ ಬೇಸರದ ವಿಷಯವಾಗಿದೆ. ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ […]

ಪಯ್ಣಾರಿ ಮಾಜಿ ಉಪ ಸಂಪಾದಕ, ಹಿರಿಯ ಪತ್ರಕರ್ತ ಫೆಲಿಕ್ಸ್ ಎ. ಡಿ’ಸೋಜಾ ಬೆಂದೂರು ನಿಧನ

Wednesday, July 9th, 2014
Felix A Dsouza

ಮುಂಬಯಿ : ಮುಂಬಯಿ ಕೇಂದ್ರವಾಗಿರಿಸಿ ಸುಮಾರು ಸುವರ್ಣಯುಗ ಪೂರೈಸಿದ್ದ ಪಯ್ಣಾರಿ ಕೊಂಕಣಿ ವಾರಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕೊಂಕಣಿ ಪತ್ರಕರ್ತ ಸೇವಕ ಫೆಲಿಕ್ಸ್ ಅಂತೋನಿ ಡಿ’ಸೋಜಾ ಅವರು ಅನಾರೋಗ್ಯದಿಂದಾಗಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಕೆನಡಾದಲ್ಲಿನ ಸುಪುತ್ರನ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂದೂರು ಮೂಲದವರಾಗಿದ್ದ ಮೃತರು ಪತ್ನಿ ಶ್ರೀಮತಿ ಸೆಲಿನ್, ಡಿ’ಸೋಜಾ ಒಂದು ಹೆಣ್ಣು ಡಿ’ಸೋಜಾ (ಲಿನೇಟ್ ಆಶಾ ಡಿ’ಸೋಜಾ), ಒಂದು ಗಂಡು (ಅರುಣ್ ಡಿ’ ಸೋಜಾ) ಸೇರಿದಂತೆ ಬಂಧು ಬಳಗವನ್ನು […]

ಜನಸ್ಪಂದನೆಯ ರೈಲ್ವೇ ಬಜೆಟ್ – ಜಿಲ್ಲಾ ಬಿಜೆಪಿ ಸ್ವಾಗತ

Tuesday, July 8th, 2014
Railway budget

ಮಂಗಳೂರು : ದೇಶದ ರೈಲ್ವೇ ಪ್ರಗತಿಗೆ ಪೂರಕವಾಗಿ ಪ್ರಯಾಣಿಕರ ಸೌಲಭ್ಯ- ಸುರಕ್ಷತೆಗಳಿಗೆ ವಿಶೇಷ ಒತ್ತು ನೀಡಿ, ಕರ್ನಾಟಕದ ಜನತೆಯ ಹಿತವನ್ನೂ ಕಾಪಾಡುವುದರ ಜೊತೆಗೆ, ಜಿಲ್ಲೆಯ ಜನತೆಯ ರೈಲ್ವೇ ಬೇಡಿಕೆಗಳಿಗೆ ಸ್ಪಂದನೆಯನ್ನು ನೀಡಿರುವ ಕೇಂದ್ರ ರೈಲ್ವೇ ಬಜೆಟ ನ್ನು ಬಿಜೆಪಿ ದ.ಕ ಜಿಲ್ಲಾ ಸಮಿತಿ ಸಂಭ್ರಮದಿಂದ ಸ್ವಾಗತಿಸಿದೆ. ಭಾರತೀಯ ರೈಲನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪೂರಕವಾಗಿ ಮುಂಬೈ ಅಹಮದಬಾದ್ಗೆ ದೇಶದ ಪ್ರಪ್ರಥಮ ಬುಲೆಟ್ ಟ್ರೈನನ್ನು ಘೋಷಿಸುವುದರ ಜತೆಗೆ, ಕರ್ನಾಟಕವೂ ಸೇರಿದಂತೆ ದೇಶದಲ್ಲಿ 9 ಹೈಸ್ಪೀಡ್ ರೈಲು ಮತ್ತು 4 ಸೆಮಿ […]

ರೈಲ್ವೇ ಬಜೆಟ್ ನಲ್ಲಿ ಕರಾವಳಿಗೆ ಅತ್ಯುತ್ತಮ ಕೊಡುಗೆ : ಸಂಸದ ನಳಿನ್ ಕುಮಾರ್

Tuesday, July 8th, 2014
Nalin Rail

ಮಂಗಳೂರು: ದೇಶದ ಹಾಗೂ ರಾಜ್ಯದ ಸಮಗ್ರ ರೈಲ್ವೇ ಹಿತದೃಷ್ಠಿಯನ್ನು ಕಾಪಾಡುವುದರ ಜತೆಗೆ ಕರಾವಳಿ ಜಿಲ್ಲೆಗೆ ರೈಲ್ವೇ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಲಾಗಿದೆ. ನಮ್ಮವರೇ ಆದ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡರು ಕರಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡದಂತಹ ದೊಡ್ಡ ಪ್ರಮಾಣದ ರೈಲು ಹಾಗೂ ರೈಲು ಹಳಿಗಳ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸಚಿವರು, ಮಂಗಳೂರು ರೈಲ್ವೇ ವಿಭಾಗದ ಘೋಷಣೆಗೆ […]

ಪೊಳಲಿಯಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಲಾಂಛನ ಆಹ್ವಾನ

Monday, July 7th, 2014
Pradeep Kalkura

ಮಂಗಳೂರು : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ2014, ಆಗಸ್ಟ್ 2 ಮತ್ತು 3ರಂದು ನಡೆಯಲಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಸೂಕ್ತ ಲಾಂಛನವನ್ನು ಆಹ್ವಾನಿಸಲಾಗಿದೆ. ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಉತ್ಸವಕ್ಕೆ ಸರಿಹೊಂದುವ ‘ಲಾಂಛನ’ವನ್ನು ರಚಿಸಿ ಸ್ವವಿಳಾಸ, ದೂರವಾಣಿ ಸಂಖ್ಯೆ ಸಹಿತ ಜುಲೈ 13ರೊಳಗಾಗಿ ಅಧ್ಯಕ್ಷರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಾಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು ಇಲ್ಲಿಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಆಯ್ಕೆಗೊಂಡ ಲಾಂಛನ […]

“ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ” : ಶಿವಶರಣ್

Monday, July 7th, 2014
Shivasharan

ಕಲ್ಲಡ್ಕ : ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ಉಂಡು. ಎಂಕ್ ಮಸ್ತ್ ಖುಷಿ ಅಂಡ್ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಬಲೇ ತೆಲಿಪುಲೇ ನಾಟಕದ ರೂವಾರಿ ಹಾಗೂ ನೇತಾಜಿ ನರ್ಸಿಂಗ್ ಕಾಲೇಜಿನ ನಿದೇಶರ್ಕರಾದ ಡಾ. ಶಿವಶರಣ್ ಇವರು ಸಂವಾದ ಮತ್ತು ನಾಯಕತ್ವ ಇದೊಂದು ತೆರನಾದ ಕೌಶಲ್ಯ. ನಾಯಕತ್ವಕ್ಕೆ ಬೇಕಾದುದು ನಿರ್ಧಿಷ್ಟವಾದ ಗುರಿ. ಆ ಗುರಿ ಸಾಧಿಸಲು ನಾಯಕರಿಗೆ ಪ್ರಬಲವಾದ , ಉತ್ತಮವಾದ ಸಂಘಟನೆ ಶಕ್ತಿಯ ಅಗತ್ಯವಿದೆ. ಆಗ ತಾನೇ ನಾಯಕ ಯಶಸ್ಸಿನ ಗುರಿ ತಲುಪಲು […]

ಅಪೌಷ್ಠಿಕ ಮಕ್ಕಳು ರಾಷ್ಟ್ರಾಭಿವೃದ್ಧಿಗೆ ತೊಡಕು-ಎನ್.ಕೆ.ಪಾಟೀಲ್

Saturday, July 5th, 2014
unhealthy child seminar

ಮಂಗಳೂರು : ಬಡತನ ದೇಶದ ಒಂದು ದೊಡ್ಡ ಪಿಡುಗಾಗಿದ್ದು ,ಇದರಿಂದಾಗಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಅಪೌಷ್ಠಿಕತೆ ಮಕ್ಕಳು ನಾನಾ ರೋಗರುಜಿನಗಳಿಗೆ ತುತ್ತಾಗಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಅಧ:ಪತನಕ್ಕೆ ಕಾರಣರಾಗುತ್ತಿದ್ದಾರೆ. ಆದ್ದರಿಂದ ಇಂತಹ ಅಪೌಷ್ಠಿಕತೆಯ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಾವಲ್ಲರೂ ಮುಂದಾಗಬೇಕೆಂದು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳ ಹಾಗೂ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದರ ಕಾರ್ಯ ಯೋಜನೆ ಸಮಿತಿಯ ಗೌರವಾನ್ವಿತ ಅಧ್ಯಕ್ಷ ಎನ್.ಕೆ. ಪಾಟೀಲ್ ತಿಳಿಸಿದರು. ಅವರು ಇಂದು ನಗರದ ರೊಜಾರಿಯೋ ಕ್ಯಾಥಡ್ರಲ್ ಚರ್ಚ್ ಸಭಾಭವನದಲ್ಲಿ […]