ಎಬಿವಿಪಿ ವಿದ್ಯಾರ್ಥಿಗಳಿಂದ ಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ನಮನ

Friday, July 26th, 2013
Abvp pay tribute to Kargil Martyr

ಮಂಗಳೂರು : ಕದ್ರಿ ವಾರ್ ಮೆಮೋರಿಯಲ್ ಸ್ಮಾರಕದ ಎದುರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ವತಿಯಿಂದ ಇಂದು ಜುಲೈ26ರಂದು ಕಾರ್ಗಿಲ್ ವಿಜಯೋತ್ಸವ ದಿವಸವನ್ನು ಆಚರಿಸಲಾಯಿತು. ಮತ್ತು ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಯೋಧರಾದ ಮಾಸ್ಕರೇನಸ್ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿದರು, ಮತ್ತು ಭಾಗವಹಿಸಿದ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಎ.ಬಿ.ವಿ.ಪಿ. ರಾಜ್ಯ ಕಾರ್ಯದರ್ಶಿ ಬಿ.ರಮೇಶ್ ಉಪಸ್ಥಿತರಿದ್ದರು. ಬಳಿಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಜ್ಯೋತಿ ಸರ್ಕಲ್ […]

ಮಾಜಿ ಸೈನಿಕರ ಎಸೋಸಿಯೇಶನ್ ವತಿಯಿಂದ ಕಾರ್ಗಿಲ್ ಯೋಧರಿಗೆ ನಮನ

Friday, July 26th, 2013
Loins Kargil Diwas

ಮಂಗಳೂರು : ದ.ಕ. ಮಾಜಿ ಸೈನಿಕರ ಎಸೋಸಿಯೇಶನ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಇಂದು ಜುಲೈ26ರಂದು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಬಿ.ಎಮ್.ಎಸ್ ಕಾಲೇಜ್ ಬೆಂಗಳೂರು ಇಲ್ಲಿಯ 3ನೇ ಬಿ.ಇ. ವಿದ್ಯಾರ್ಥಿನಿಯಾದ ದಿಶಾ ಅಮಿತ್ ರವರು ಉದ್ಘಾಟನೆಯನ್ನು ನೇರವೇರಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಶಾ, ಮಾಜಿ ಸೈನಿಕರು ಸಲ್ಲಿಸಿದ ಸೇವೆಯು  ಪ್ರಸ್ತುತ ಪೀಳಿಗೆಗೆ ಉತ್ತಮ ರೀತಿಯ ಸ್ಪೂರ್ತಿ ಮತ್ತು ಅನುಕರಣೀಯವಾಗಿದೆ. ಮಾಜಿ ಸೈನಿಕರು ಈ ದೇಶಕ್ಕೆ ಸಲ್ಲಿಸಿದ ಸೇವೆ ಮತ್ತು […]

ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿ; ಚಾಲಕ ಮೃತ್ಯು, ಮೂವತ್ತು ಪ್ರಯಾಣಿಕರಿಗೆ ಗಾಯ

Friday, July 26th, 2013
Kasaragod accident

ಕಾಸರಗೋಡು: ಗುರುವಾರ ಬೆಳಗ್ಗೆ 7.45 ರ ಸಮಯದಲ್ಲಿ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚೆರ್ಕಳ ಸಮೀಪ ಬೇವುಂಜೆಯಲ್ಲಿ ನಡೆದಿದೆ. ಅಫಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಹುಬ್ಬಳ್ಳಿ ನಿವಾಸಿ ನಾಗರಾಜ(29)  ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ ಮಾನಂತವಾಡಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಮತ್ತು ಎದುರಿನಿಂದ ಬಂದ ವಾಹನವನ್ನು ಓವರ್‌ಟೇಕ್‌ ಮಾಡಿ ಬಂದ  ಲಾರಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಲಾರಿಯ ಎದುರು ಭಾಗ ಬಸ್ಸಿನ ಮುಂಭಾಗವನ್ನು […]

ಏಕ ಪೌರತ್ವದ ಕಾರ್ಡ್ ನೀಡಿ, ಸರ್ಕಾರಕ್ಕೆ ಎಂ.ಜಿ. ಹೆಗ್ಡೆ ಸೂಚನೆ

Friday, July 26th, 2013
card system

ಮಂಗಳೂರು : ಸರಕಾರದ ಬಗೆ ಬಗೆಯ ಕಾರ್ಡ್ ಬದಲು ಒಂದೇ ಕಾರ್ಡ್ ಮಾಡಿ ಗೊಂದಲ ನಿವಾರಿಸಲು  ಸಮಾನ ಮನಸ್ಕ ಸಂಘಟನೆಗಳಾದ ತುಳುನಾಡ ರಕ್ಷಣಾ ವೇದಿಕೆ, ಪ್ರೇಮ್ ಎಸೋಸಿಯೇಶನ್ ಸುರತ್ಕಲ್, ಕಡಲ ಸೇನೆ ಯುವ ಸೇವಾ ಟ್ರಸ್ಟ್ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರವು ಕಾರ್ಡ್ ಪದ್ದತಿಗಳನ್ನು ಜಾರಿ ಮಾಡುತ್ತಿದ್ದರೂ ಯಾವುದೇ ಕಾರ್ಡ್ ವ್ಯವಸ್ಥೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಕಾರ್ಡ್ ಪಡೆಯುವಲ್ಲಿ ಹರಸಾಹಸ […]

ಪಣಂಬೂರು ಬೀಚ್ ನಲ್ಲಿ`ಆಟಿಡ್ ರಡ್ಡ್ ದಿನ’ ಆಚರಣೆ

Thursday, July 25th, 2013
Atid Radd Dina

ಮಂಗಳೂರು: ಮಂಗಳೂರಿನ ಸೆಂಟ್ರಲ್ ರೋಟರಿ ಕ್ಲಬಿನ ವತಿಯಿಂದ ಪಣಂಬೂರು ಬೀಚ್ ಬಳಿ `ಆಟಿಡ್ ರಡ್ಡ್ ದಿನ’ ಎಂಬ ಕಾರ್ಯಕ್ರಮವನ್ನು ಆಗಸ್ಟ್ 09 ಮತ್ತು 10 ರಂದು  ಹಮ್ಮಿಕೊಳ್ಳಲಾಗಿದೆ. ಉತ್ಸವದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಯವರು 09ರಂದು ಸಂಜೆ 4.30ಕ್ಕೆ ನೆರವೇರಿಸುವರು ಎಂದು ರೋಟರಿ ಕ್ಲಬಿನ ಅಧ್ಯಕ್ಷರಾದ ರಾಜ್ ಗೋಪಾಲ್ ರವರು  ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೊಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಉದ್ದೇಶವೆನೆಂದರೆ ನಮ್ಮ ಯುವಪೀಳಿಗೆಗೆ ತುಳುನಾಡಿನ ಆಚಾರ-ವಿಚಾರ, ರೀತಿ-ನಿಯಮ, ಜೀವನ ಪದ್ದತಿ ಮತ್ತು ತುಳುನಾಡಿನ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದಾಗಿದೆ, […]

ಮುಲ್ಲಕಾಡುವಿನಲ್ಲಿ ದೊಡ್ಡ ಮರ ಬಿದ್ದು ಕುಂಟಿಕಾನ್ – ಕಾವೂರ್ ರಸ್ತೆ ಸಂಚಾರ ಬಂದ್

Thursday, July 25th, 2013
Mullakadu Tree Fallen

ಮಂಗಳೂರು : ಕುಂಟಿಕಾನ್ ನಿಂದ ಕಾವೂರಿನ ರಸ್ತೆಯಲ್ಲಿ ಮುಲ್ಲಕಾಡುವಿನ ಪೋರ್ಥ್ ಮೈಲ್ ಎಂಬಲ್ಲಿ 23-07-13 ಮಂಗಳವಾರದಂದು 30 ವರ್ಷದ ಹಳೆಯ ಮಾವಿನ ಮರವು  ಹೈ-ಟೆನ್ಶನ್ ವಿದ್ಯುತ್ ಕಂಬಗಳ ಮೇಲೆ ಬಿದ್ದು 4 ಕಂಬಗಳು ಕುಸಿದು ಬಿದ್ದಿದೆ. ಇದರ ಪರಿಣಾಮುವಾಗಿ ಬೆಳಿಗ್ಗೆ 6ರಿಂದ ಸಂಜೆ 4ರ ವರೆಗೆ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ, ಮರವು ಬೃಹತ್ ಗಾತ್ರದಲ್ಲಿ ಬೆಳೆದ ಪರಿಣಾಮವಾಗಿ ತನ್ನ ಹೊರೆಯನ್ನು ತಾಳಲಾರದೆ ಕುಸಿಯಿತು. ಈ ಮರವು ಹಿಂದಿನ ದಿನ ರಾತ್ರಿಯುಂದಲೇ ಕಸಿಯಲು ಪ್ರಾರಂಭವಾಗಿದೆ ಎಂದು […]

ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಕೊನೆಯ ದಿನಾಂಕ ಜುಲೈ 31

Wednesday, July 24th, 2013
kmc Health Card

ಮಂಗಳೂರು: ದ.ಕನ್ನಡ ಮತ್ತು ಉತ್ತರ ಕೇರಳದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ 2013ನೇ ನೊಂದಾವಣೆಯು ಪ್ರಾರಂಭಗೊಂಡಿದೆ. ಇದು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಒಳ ಮತ್ತು ಹೊರರೋಗಿಗಳ ವಿಭಾಗದಲ್ಲಿ ಬಹುದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಕಾರ್ಡ್ ನ ನೊಂದಾವಣೆಯು ಜುಲೈ 31 ಕೊನೆಗೊಳ್ಳುವುದೆಂದು ಕೆ.ಎಂ.ಸಿ. ಆಸ್ಪತ್ರೆಯ ಡೀನ್ ಡಾ.ಎಂ.ವಿ.ಪ್ರಭುರವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಘೊಷ್ಠಿಯಲ್ಲಿ ತಿಳಿಸಿದರು. ಕೆ.ಎಂ.ಸಿ. ಆಸ್ಪತ್ರೆಯ ಮಧುಸೂದನ್ ಉಪಾದ್ಯರವರು ಕಾರ್ಡ್ ನ ಪ್ರಯೋಜನಗಳ ಬಗ್ಗೆ ವಿವರಿಸುತ್ತಾ  ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ, […]

ಜುಲೈ 28ರಂದು ನಿಡ್ಡೋಡಿಯಲ್ಲಿ ಉಪವಾಸ ಸತ್ಯಾಗ್ರಹ

Tuesday, July 23rd, 2013
Niddodi ultra mega power plant

ನಿಡ್ಡೋಡಿ :  ಜುಲೈ 22ರಂದು ಸಂಸದ ನಳಿನ್ ಕುಮಾರ್ ಕಟೀಲ್ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು.  ನಿಡ್ಡೋಡಿ ಗ್ರಾಮವು ಕೃಷಿಗೆ ಅನುಕೂಲಕರವಾದ ಭೂಮಿಯಾಗಿದೆ. ಇಲ್ಲಿ ಸರಕಾರವು 4000 ಮೆ.ವ್ಯಾಟ್ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯನ್ನು ಹಮ್ಮಿಕೊಂಡಿರುವ ವಿಷಯ ನಮಗೆ ತಿಳಿದಿದೆ. ಸ್ಥಾವರ ಸ್ಥಾಪನೆಯಾದರೆ ಭತ್ತ, ಕಬ್ಬು, ತೆಂಗಿನಮರ ಮತ್ತು ಬಾಳೆಹಣ್ಣು ಇತ್ಯಾದಿ ಬೆಳೆಗಳು ನಾಶವಾಗುತ್ತದೆ ಎಂದು ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ ಡಿ’ ಸೋಜ ತಿಳಿಸಿದರು. ನಮಗೆ […]

ಟ್ಯಾಕ್ಷಿಮೆನ್ಸ್ ಮತ್ತು ಮ್ಯಾಕ್ಷಿಕ್ಯಾಬ್ ಎಸೋಸಿಯನ್ ನಿಂದ ಜುಲೈ 23 ರಂದು ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಸೇವಾ ಶಿಬಿರ

Tuesday, July 23rd, 2013
taxi association

ಮಂಗಳೂರು : ದ.ಕ. ಜಿಲ್ಲಾ ಟ್ಯಾಕ್ಷಿಮೆನ್ಸ್ ಮತ್ತು ಮ್ಯಾಕ್ಷಿಕ್ಯಾಬ್ ಎಸೋಸಿಯನ್ ಇವರಿಂದ  ಜುಲೈ 23ರಂದು ಬೃಹತ್ ರಕ್ತದಾನ ಮತ್ತು  ಉಚಿತ ನೇತ್ರ ಸೇವಾ ಶಿಬಿರವು ಲಯನ್ಸ್ ಸೇವಾ ಮಂದಿರ, ಕದ್ರಿ, ಮಲ್ಲಿಕಟ್ಟೆಯಲ್ಲಿ ಬೆಳಿಗ್ಗೆ 8.00 ರಿಂದ 12.30ರ ತನಕ ಜರುಗಲಿರುವುದು ಎಂದು ಲಾಲ್ಬಾಗ್ ಲಯನ್ಸ ಕ್ಲಬ್ಬಿನ ಅಧ್ಯಕ್ಷ ಉಮನಾಥ್ ಇವರು ಇಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಘೊಷ್ಟಿಯಲ್ಲಿ ತಿಳಿಸಿದರು. ಈ ಶಿಬಿರದ ಉದ್ಘಾಟನೆಯನ್ನು  ಕ್ಷೇಮ ಮಲ್ಲಿಕಟ್ಟೆ ಇಲ್ಲಿನ ಪ್ರೊ. ಚಾನ್ಸೆಲರ್ ಆದ ಡಾ. ಶಾಂತರಾಮ್ […]

ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ 43.2 ಲಕ್ಷ ಮೊತ್ತದ ಚೆಕ್ ವಿತರಣೆ

Monday, July 22nd, 2013
Perne Accident

ಬಂಟ್ವಾಳ: ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ  ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ.ರೋಡ್ ನ ಸಚಿವರ ಕಚೇರಿಯಲ್ಲಿ ವಿತರಿಸಿದರು. ಒಟ್ಟು 14 ಮಂದಿಗೆ ಪರಿಹಾರ ಧನವಾಗಿ 43.2 ಲಕ್ಷ ಮೊತ್ತದ ಚೆಕ್ ನ್ನು ವಿತರಿಸಲಾಯಿತು. ದುರಂತದಲ್ಲಿ ಜೀವಹಾನಿ ಮತ್ತು  ಮನೆ ಅಪಾರ ಆಸ್ತಿ ನಷ್ಟ ಉಂಟಾಗಿತ್ತು.  ಸ್ಥಳೀಯ ನಿವಾಸಿಗಳಾದ ಸಂದರ ರೈ ಅವರಿಗೆ 7.43 ಲಕ್ಷ, […]