ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನ ಡಕ್ಕಿ ಹೊಡೆದು ವೈದ್ಯ ಮೃತ್ಯು

Saturday, July 20th, 2013
Doctor

ಮಂಗಳೂರು : ಮಂಗಳೂರು-ಮೂಡಬಿದಿರೆಯ ಹೆದ್ದಾರಿಯಲ್ಲಿರುವ  ಪೊಳಲಿ ದ್ವಾರದ ಬಳಿ ಅಪರಿಚಿತ ವಾಹನವೊಂದು ಬೈಕ್ ನಲ್ಲಿ ಹೋಗುತ್ತಿದ್ದ  ಪಾಂಡೇಶ್ವರದ ವೈದ್ಯರೊಬ್ಬರಿಗೆ  ಡಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ  ಮೃತ  ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿನ ಪಾಂಡೇಶ್ವರದ ನಿವಾಸಿ  ಡಾ.ಹರ್ಷವರ್ಧನ ಗಣೇಶ್ ಉಳ್ಳಾಲ್ ಮೃತಪಟ್ಟ ದುರ್ದೈವಿ.  ಗುರುವಾರ ಹರ್ಷವರ್ಧನ್ ತನ್ನ ಮೂವರು ಗೆಳೆರೊಂದಿಗೆ ಗಂಜಿಮಠದಲ್ಲಿರುವ ಗೆಳೆಯನ ಮನೆಗೆ ಹೊಗಿದ್ದರು. ಶುಕ್ರವಾರ ಮುಂಜಾನೆ ಮೂರು ಮಂದಿ ಗೆಳೆಯರು ಕಾರಿನಲ್ಲಿ ಹೊರಟರು, ಹರ್ಷವರ್ಧನ್ ಮಾತ್ರ ಗಂಜಿಮಠದಿಂದ ಮಂಗಳೂರಿಗೆ ಬೈಕ್ ನಲ್ಲೇ ತೆರಳಿದರು. ಮಂಗಳೂರು-ಮೂಡಬಿದಿರೆ […]

ಎ.ಜೆ. ವೈದ್ಯಕೀಯ ವಿದ್ಯಾಲಯದಿಂದ ಬಂಜೆತನ ಶಿಬಿರ

Saturday, July 20th, 2013
AJ Hospital

ಮಂಗಳೂರು: ಎ.ಜೆ. ವೈದ್ಯಕೀಯ ವಿದ್ಯಾಲಯದ ಸ್ತ್ರೀರೋಗ ವಿಭಾಗದಿಂದ ಬಂಜೆತನ ಶಿಬಿರವನ್ನು ಜುಲೈ 22 ರಿಂದ ಅಗಸ್ಟ್ 3,2013ರ ವರೆಗೆ ಎ.ಜೆ. ವೈದ್ಯಕೀಯ ವಿದ್ಯಾಲಯದ ಹೊರರೋಗಿ ವಿಭಾಗದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದದಲ್ಲಿ ಉಚಿತ ವೈದ್ಯಕೀಯ ಸಲಹೆ, ರಕ್ತ ತಪಾಸನೆ ಮತ್ತು ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಎ.ಜೆ. ವೈದ್ಯಕೀಯ ವಿದ್ಯಾಲಯವು ಎ.ಜೆ.ಶೆಟ್ಟಿ ಅವರ ದೂರದರ್ಶಿತ್ವದಿಂದ 2002ರಲ್ಲಿ ಸ್ಥಾಪನೆಯಾಯಿತು. ಇದರ ಮುಖ್ಯಧ್ಯೇಯ  ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ, ಈ ವಿದ್ಯಾಲಯದ ಉಪಾಧ್ಯಕ್ಷ ಶ್ರೀ ಪ್ರಶಾಂತ್ ಶೆಟ್ಟಿ, ಡೀನ್ ಡಾ. […]

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆ

Saturday, July 20th, 2013
Vasantha shetty

ನವ ದೆಹಲಿ: ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯದ ಕಳಂಜದವರಾದ ವಸಂತ ಶೆಟ್ಟಿ ರಿಯಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ದೆಹಲಿ ಕರ್ನಾಟಕ  ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸುಳ್ಯ ತಾಲೂಕಿನ ಎರಡನೆಯವರಾಗಿದ್ದಾರೆ. ಈ ಮೊದಲು ಡಾ.ಪುರುಷೋತ್ತಮ ಬಿಳಿಮಲೆ ಕೂಡಾ  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿಯದದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಒಟ್ಟಾರೆ 15 ಜನರುಗಳ ಎರಡು ತಂಡಗಳು ಹಾಗೂ ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟು 31 ಜನ ಸ್ಪರ್ಧಿಸಿದ್ದರು. […]

ಜಿಲ್ಲೆಯ ವಿವಿಧ ದೇವಸ್ಥಾನಗಳಿಂದ ಕದ್ದ 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಶ

Saturday, July 20th, 2013
six temple thieves

ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಬಸದಿಗಳಲ್ಲಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಅವರಲ್ಲಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಪ್ರಾಚೀನ ಜೈನ ತೀರ್ಥಂಕರ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂದು ಅವರ ಕಚೇರಿಯಲ್ಲಿ ಜುಲೈ 19ರಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಬಂಟ್ವಾಳ ಪೊಲೀಸರು  ಜೂನ್ 12ರಂದು ವಾಹನ ತಪಾಸಣೆ ಮಾಡುತ್ತಿದ್ದಾಗ […]

ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿಗೆ ನುಗ್ಗಿದ ಕಳ್ಳರು, ನಗದು ಮತ್ತು ಸ್ಯಾನಿಟರಿ ವಸ್ತುಗಳ ಲೂಟಿ

Saturday, July 20th, 2013
PC Mallappa &Co

ಮಂಗಳೂರು: ಪಳ್ನೀರ್ ನ ಹೈಲ್ಯಾಂಡ್ ಆಸ್ಪತ್ರೆ ಸಮೀಪವಿರುವ ಪಿಸಿ ಮಲ್ಲಪ್ಪ ಆ್ಯಂಡ್ ಕಂಪನಿ ಯಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು. ಸುಮಾರು  50 ಸಾವಿರ ರೂ. ನಗದು ಮತ್ತು ಸ್ಯಾನಿಟರಿವೇರ್ ನ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಶೋರೂಮ್ ನ ಮುಂದಿನ ಶಟರ್ ನ್ನು ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಬೆಲೆಬಾಳುವ ಜಾಕ್ವರ್ ವಾಲ್ ಮಿಕ್ಸರ್ ತ್ರೀ ಇನ್ ವನ್ ನ  ಬಾಕ್ಸ್ ಗಳು ಹಾಗೂ 50 ಸಾವಿರ ರೂ. ನಗದನ್ನು ಕಳ್ಳತನ ಮಾಡಲಾಗಿದೆ. ಜಾಕ್ವರ್ ವಾಲ್ ಮಿಕ್ಸರ್ ನ […]

ಕುಡುಕ ಗಂಡನ ಬಿಟ್ಟು, ಮಗಳಿಗಾಗಿ ಒಳ್ಳೆಯ ತಂದೆಯನ್ನು ಮದುವೆಯಾದ ಯುವತಿ

Friday, July 19th, 2013
Missing married woman

ವಿಟ್ಲ :  ವಿಟ್ಲಮುಡ್ನೂರು ಗ್ರಾಮದ ಹಲಸಿನಕಟ್ಟೆಯ ವಿಹಾಹಿತ ಯುವತಿ ನಳಿನಿ(23) ಮಂಗಳವಾರ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.  ಗುರುವಾರ ನಳಿನಿ ತನ್ನ ಸಂಬಂಧಿ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ. ನಳಿನಿ ಮಂಗಳವಾರ ನೇರವಾಗಿ ಮನೆಬಿಟ್ಟು ತನ್ನ ಸಂಬಂಧಿ ಫರ್ನೀಚರ್ ಅಂಗಡಿ ಉದ್ಯೋಗಿ ಜಗದೀಶನ ಜತೆ  ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ. ಅಲ್ಲಿಂದ ಠಾಣೆಗೆ ಬಂದು ಆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ತನ್ನ ಮಗಳ ಭವಿಷ್ಯಕ್ಕಾಗಿ ನಾನು ಬೇರೆ ವಿವಾಹವಾಗಿದ್ದೇನೆ. ತನ್ನ ಗಂಡ ರಾಜೇಶ್ ವಿಪರೀತ ಮದ್ಯ ಸೇವಿಸುತ್ತಿದ್ದು, ನನ್ನ […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

Friday, July 19th, 2013
University College Students’ Union

ಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ವಿದ್ಯಾರ್ಥಿ […]

ಪಂಪ್‌ವೆಲ್ : ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ಕಳ್ಳತನ

Thursday, July 18th, 2013
Medical shop theft

ಮಂಗಳೂರು : ಪಂಪ್‌ವೆಲ್ ನಲ್ಲಿ ಸರಣಿ  ಕಳ್ಳತನಕ್ಕೆ ಪ್ರಯತ್ನಿಸಿದ ಕಳ್ಳರು ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದಾರೆ. ಸಿಟಿ ಪಾಯಿಂಟ್ ಮೆಡಿಕಲ್ಸ್, ಜ್ಯೂಸ್ ಪಾಲೇಸ್, ವೈನ್ ಶಾಪ್ ಈ ಮೂರು ಅಂಗಡಿಗಳನ್ನು ಕಳ್ಳರು ಗುರಿಯಾಗಿಟ್ಟು ಕೊಂಡಿದ್ದರು. ಸಿಟಿ ಪಾಯಿಂಟ್ ಮೆಡಿಕಲ್ ನ ಬೀಗ ಒಡೆದು ಒಳಗೆ ನುಗ್ಗಿದ ಕಳ್ಳರಿಗೆ ರೂ.10,000 ಮಾತ್ರ ಸಿಕ್ಕಿದೆ. ಉಳಿದೆರಡು ಶಾಪ್ ಗಳಲ್ಲಿ ಕಳ್ಳರಿಗೆ ಯಾವುದೇ ಬೆಲೆ ಬಾಳುವ ವಸ್ತುಗಳು ದೊರೆತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, […]

ಹಿಂದೂ ಜನಜಾಗ್ರತಿ ಸಮಿತಿಯಿಂದ ಗುರುಪೂರ್ಣಿಮ ಮಹೋತ್ಸವ

Thursday, July 18th, 2013
Sanatana

ಮಂಗಳೂರು : ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ದೇಶಾದಾದ್ಯಂತ ಗುರುಪೂರ್ಣಿಮ ಮಹೋತ್ಸವನ್ನು ಜುಲೈ 22 ರಂದು ಆಚರಿಸಲಾಗುವುದು. ಆ ಪ್ರಯುಕ್ತ ಅದೇ ದಿನ ಸಂಜೆ 4 ಗಂಟೆಗೆ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಶ್ರೀ ಗುರುಗಳಿಲ್ಲದೇ ಶಿಷ್ಯನಿಗೆ ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ ಅದುದರಿಂದ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ. ಗುರುಪೂರ್ಣಿಮ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪರಮ ಪೂಜ್ಯ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ ನಡೆಯಲಿದೆ. ಅಂದು […]

ಹಡಗು ಅಪಹರಣ : 24 ಮಂದಿ ಭಾರತೀಯರ ಜೊತೆ ಕಾಸರಗೋಡಿನ ಇಬ್ಬರಿಗೆ ದಿಗ್ಬಂಧನ

Thursday, July 18th, 2013
Kasagod Sailors

ಕಾಸರಗೋಡು:  ಸೋಮವಾರ, ಜುಲೈ 15 ರಂದು ಗೆಂಟಿಲ್ ಪೋರ್ಟ್ ನಿಂದ 15 ನ್ಯುಟ್ರಿಕಲ್ ಮೈಲಿ ದೂರದಲ್ಲಿ ಸೊಮಾಲಿಯಾದ ಕಡಲ್ಗಳ್ಳರಿಂದ ಅಪರಿಸಲ್ಪಟ್ಟಿರುವ ಎಂ.ವಿ.ಕೋಟನ್ ಹಡಗಿನಲ್ಲಿ 24 ಮಂದಿ ಭಾರತೀಯರಿದ್ದರು. ಹಡಗು ಅಪಹರಣಕಾರರ ಹೋತೋಟಿಯಲ್ಲಿದ್ದು ನೌಕರರಿಗೆ ದಿಗ್ಬಂಧನ ಹೇರಲಾಗಿದೆ, ರವಿವಾರದಿಂದ ಹಡಗು ಸಂಪರ್ಕ ಕಡಿದುಕೊಂಡಿದೆ ಅಪಹರಣಕಾರರು ಹಡಗನ್ನು ನೈಜೀರಿಯಾದ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಹೃತ ಹಡಗಿನಲ್ಲಿ ಇಬ್ಬರು ಕಾಸರಗೋಡಿನವರಿದ್ದಾರೆ. ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಕಳನಾಡು ನಿವಾಸಿ ವಸಂತ ಕುಮಾರ್(35) ಮತ್ತು ಪಾಲಕುನ್ನು ನಿವಾಸಿ ಬಾಬು(32) ಅವರು  […]