ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಡ್ವಾಣಿ

Monday, June 10th, 2013
lk advani

ನವದೆಹಲಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಗೈರು ಆಗಿದ್ದ ಆಡ್ವಾಣಿ,  ಸೋಮವಾರ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತನ್ನ ಆಪ್ತರಲ್ಲಿ ರವಾನಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ಹಿರಿಯ ನಾಯಕ […]

ಹೋಮ್ ಸ್ಟೇ ದಾಳಿ : ಪತ್ರಕರ್ತರ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ಮನವಿ

Saturday, June 8th, 2013
Journalist Appeal

ಮಂಗಳೂರು : ಹೋಮ್ ಸ್ಟೇ ದಾಳಿ ಪ್ರಕರಣದಲ್ಲಿ ಪತ್ರಕರ್ತರ ಮೇಲೆ ದಾಖಲಾದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಖಜಾಂಜಿ ಯೋಗೀಶ್ ಹೊಳ್ಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ.ಆರ್., ಪ್ರಧಾನ ಕಾರ್ಯದರ್ಶಿ ಕಿರಣ್ ಸಿರ್ಸೀಕರ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು. ದಾಳಿಯಲ್ಲಿ ಭಾಗವಹಿಸದೆ ಕೇವಲ ಕರ್ತವ್ಯ […]

ಜನಪರವಾಗಿ ಕರ್ತವ್ಯ ನಿರ್ವಹಿಸಿ: ಸಚಿವ ಖಾದರ್

Friday, June 7th, 2013
Khader Zilla Panchayat

ಮಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಪ್ರಾಕೃತಿಕ ವಿಕೋಪದಲ್ಲಿ ಸಂಭವಿಸಿದ ಹಾನಿಗೆ ತುತರ್ು ಪರಿಹಾರ ನೀಡುವುದು ಇಂಜಿನಿಯರ್ ವಿಭಾಗದ ಹೊಣೆ ಎಂದು ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಹೇಳಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನೀರು, ನೈರ್ಮಲ್ಯ ಹಾಗೂ ರಸ್ತೆಗಳಿಗೆ ಆದ್ಯತೆ ನೀಡಿ. ನಮ್ಮ ಗ್ರಾಮ ನಮ್ಮ ರಸ್ತೆಯಡಿ ರಸ್ತೆಗಳಿಗಾಗಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿ. ಮಳೆಗಾಲದಲ್ಲಿ ರಸ್ತೆ ಇಲ್ಲದೆ […]

ಮಂಗಳೂರು ರಥಬೀದಿಯಲ್ಲಿ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಬಲಿ

Friday, June 7th, 2013
Auto Driver Died

ಮಂಗಳೂರು : ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಬಳಿ ರಿಕ್ಷಾ  ಚಾಲಕರೊಬ್ಬರು ದಾರಿ ಮಧ್ಯದಲ್ಲಿ ರಿಕ್ಷಾವನ್ನು ನಿಲ್ಲಿಸಿ  ಹೃದಯಾಘಾತದಿಂದ  ಸ್ಥಳದಲ್ಲೇ  ಬಿದ್ದು  ಮೃತಪಟ್ಟ ಘಟನೆ  ಇಂದು ನಡೆದಿದೆ. ಆಟೊ ರಿಕ್ಷಾದ ಚಾಲಕ ಸುರೇಶ್(43) ಮೃತಪಟ್ಟವರಾಗಿದ್ದು  ಅವರು ಮಂಗಳಾದೇವಿ ಬೋಳಾರದ ನಿವಾಸಿಯಾಗಿದ್ದಾರೆ.  ನಗರದ ವಿಶ್ವಭವನದ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಕೆ.ಎ.19ಸಿ 2373 ನೋಂದಣಿ ಸಂಖ್ಯೆಯ ಆಟೋವನ್ನು ಪಾರ್ಕ್ ಮಾಡುತ್ತಿದ್ದರು. ಇಂದು ರಥಬೀದಿಗೆ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಸಂದರ್ಭದಲ್ಲಿ  ತೀವ್ರ ತೆರನಾದ ಎದೆನೋವು ಕಾಣಿಸಿಕೊಂಡು ದಾರಿಮಧ್ಯೆಯೇ ರಿಕ್ಷಾವನ್ನು […]

ವಾಹನಗಳಿಗೆ ಕೆಂಪು ದೀಪ ಬಳಕೆಗೆ ಕಡಿವಾಣ, ಸಾರಿಗೆ ಇಲಾಖೆ ಹೊಸ ಆದೇಶ

Friday, June 7th, 2013
Red light car

ಬೆಂಗಳೂರು : ಸಾರಿಗೆ ಇಲಾಖೆ ವಾಹನಗಳಿಗೆ ಕೆಂಪು ದೀಪ ಅಳವಡಿಸಿಕೊಳ್ಳಲು ಹೊಸ  ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ  ಕೇವಲ ಕೆಂಪು ದೀಪ ಅಳವಡಿಸಲು ಅವಕಾಶವಿರುವುದು ಅತಿಗಣ್ಯರಿಗೆ ಮಾತ್ರ. ಸುಪ್ರೀಂ ಕೋರ್ಟ್ 2010ರಲ್ಲೇ ಈ ಕುರಿತು ಆದೇಶ ಹೊರಡಿಸಿದ್ದರೂ ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಮೇಲ್ನೋಟಕ್ಕೆ ಆದೇಶ ಹೊರಡಿಸಿ ಸುಮ್ಮನಾಗಿತ್ತು. ಆ ಆದೇಶಗಳಲ್ಲೇ ಕೆಲವು ಲೋಪಗಳಿದ್ದುದರಿಂದ ಬೇಕಾಬಿಟ್ಟಿ ಕೆಂಪು ದೀಪ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಸಾರಿಗೆ ಇಲಾಖೆ ಇದೀಗ ಕೆಂಪು ದೀಪ ಅಳವಡಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು […]

ಎರಡನೇ ಬಾರಿ ಹಸೆಮಣೆ ಏರಿದ ನಟಿ ಶ್ರುತಿ

Thursday, June 6th, 2013
Shruti Chandrashekar

ಕೊಲ್ಲೂರು : ನಟಿ ಶ್ರುತಿ ಅವರು ಗುರುವಾರ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಅವರನ್ನು  ವರಿಸುವ ಮೂಲಕ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರ ಜೊತೆ ವಿವಾಹ ವಿಚ್ಛೇದನ ಪಡೆದಿರುವ ಶ್ರುತಿ ಕೊಲ್ಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7.45ಕ್ಕೆಎರಡನೇ ಬಾರಿ ಹಸೆಮಣೆ ಏರಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಣಿಗ ಗ್ರಾಮದಲ್ಲಿ ಶ್ರುತಿ-ಚಂದ್ರಶೇಖರ್ ಅವರ ಮದುವೆ ನಿಗದಿಯಾಗಿತ್ತು. ಗ್ರಾಮದ ಪ್ರಸಿದ್ಧ ಬಾಣೇಶ್ವರ, ವೆಂಕಟರಮಣ, ಆಂಜನೇಯ ಸ್ವಾಮಿ (ಒಟ್ಟಿಗೆ ಇರುವ ದೇವಸ್ಥಾನಗಳು) ದೇವಸ್ಥಾನದಲ್ಲಿ […]

ಶಾಸಕ ವಸಂತ ಬಂಗೇರ ವಿಧಾನಸಭೆಯಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ವಚನಕ್ಕೆ ಸ್ಪೀಕರ್ ಆಕ್ಷೇಪ

Wednesday, June 5th, 2013
Vasanth Bangera

ಬೆಳ್ತಂಗಡಿ  : ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ವಿಧಾನಸಭೆಯಲ್ಲಿ ಮೇ 30ರಂದು ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ, ಆ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಲ್ಲ. ನೀವು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಅದು ಅಸಿಂಧುವಾಗಲಿದೆ ಎಂದಿದ್ದರು. ಶಾಸಕ ವಸಂತ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷೆಯ ಅಸ್ತಿತ್ವ ಹಾಗೂ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.  ಇದು ತುಳುವರ […]

ಗುಜರಾತ್ 6 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು

Wednesday, June 5th, 2013
Narendra Modi

ಅಹಮದಾಬಾದ್:  ಗುಜರಾತ್ ವಿಧಾನಸಭೆಯ ನಾಲ್ಕು ಹಾಗೂ ಎರಡು ಲೋಕಸಭೆ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಆರು ಸ್ಥಾನಗಳಲ್ಲೂ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪೋರಬಂದರ್ ಮತ್ತು ಬನಸ್ಕಾಂತ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಲಿಂಬ್ಡಿ, ಚೆತ್ಪುರ್, ಧೋರ್ಜಿ ಹಾಗೂ ಮಾರ್ವ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳಲ್ಲೂ ಗೆಲುವು ಸಾಧಿಸಿದೆ. ಈ ಎಲ್ಲ ಕ್ಷೇತ್ರಗಳಿಗೆ ಕಳೆದ ಭಾನುವಾರ ಮತದಾನ ನಡೆದಿತ್ತು. ಗುಜರಾತ್ ಉಪ […]

900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Wednesday, June 5th, 2013
Mutton Merchants Association book distributes

ಮಂಗಳೂರು : ಮಂಗಳೂರಿನ ಜಮಿಯತುಲ್ ಸಾ-ಅದಾ (ಮಾಂಸ ವ್ಯಾಪಾರಸ್ತರ ಸಂಘ) ವತಿಯಿಂದ 1ರಿಂದ 10ನೆ ತರಗತಿಯ ವರೆಗಿನ 900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವ ಕಾರ್ಯಕ್ರಮ ಇಂದು ಕುದ್ರೋಳಿಯ ಏಒನ್ ಬಾಗ್ ನಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂದರ್ ಠಾಣೆಯ ಇನ್ಸ್ ಪೆಕ್ಟರ್ ವಿ.ಟಿ. ಸುಬ್ರಹ್ಮಣ್ಯ ಮಾತನಾಡಿ, ಓದು ಬರಹ ಇಲ್ಲದ ವ್ಯಕ್ತಿಗೆ ಕಾನೂನಿನ ಅರಿವು ಇರುವುದಿಲ್ಲ. ಇಂತಹವರು ಸಮಾಜದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ. ಜ್ಞಾನವೇ ಆಸ್ತಿ, ಅದನ್ನು ಗಳಿಸಲು ಶ್ರಮಿಸಿರಿ […]

ನಾಲ್ಕು ವರ್ಷ ಯುವತಿಯನ್ನು ಬಂಧನದಲ್ಲಿದ್ದಲ್ಲಿಟ್ಟು ಪೋಷಕರಿಂದ ಚಿತ್ರಹಿಂಸೆ

Tuesday, June 4th, 2013
Hemavathi

ಬೆಂಗಳೂರು : ಯುವತಿಯೊಬ್ಬಳನ್ನು ಆಕೆಯ ಪೋಷಕರೇ ಗೃಹ ಬಂಧನದಲ್ಲಿದ್ದಲ್ಲಿಟ್ಟು ಚಿತ್ರಹಿಂಸೆನೀಡಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮಗಳು ಪ್ರೀತಿ ಮಾಡಿದ ತಪ್ಪಿಗಾಗಿ ಆಕೆಯನ್ನು ಬಂಧನದಲ್ಲಿಡಲಾಗಿತ್ತು. ಮಂಗಳವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ಪೊಲೀಸರು ಮತ್ತು ವೈದ್ಯರ ಸಹಾಯದಿಂದ ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಮಾವತಿ (35) ಮಲ್ಲೇಶ್ವರಂ ನಿವಾಸಿಗಳಾದ ರೇಣುಕಪ್ಪ ಮತ್ತು ಗೌರಮ್ಮ ನ ಮಗಳು.  ನಾಲ್ಕು ವರ್ಷಗಳಿಂದ ಅರೆನಗ್ನ ಸ್ಥಿತಿಯಲ್ಲಿ ಮನೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದರು.  ಯುವತಿ ಕೊಠಡಿ ಬಿಟ್ಟು ಹೊರಗೆ […]