ನಕಲಿ ಸಾರಿಗೆ ಸಂಚಾರ ನಿರೀಕ್ಷಕನ ಬಂಧನ

Wednesday, December 12th, 2012
Fake traffic inspector

ಮಂಗಳೂರು :ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ಕಳುಹಿಸಿದ್ದಾರೆಂದು ನಕಲಿ ಗುರುತುಪತ್ರ ತೋರಿಸಿ ಕಳೆದೆರಡು ದಿನಗಳಿಂದ ತಪಾಸನಾಧಿಕಾರಿಯ ಸಮವಸ್ತ್ರ ಧರಿಸಿ, ಸುಬ್ರಹ್ಮಣ್ಯಕ್ಕೆ ಬರುವ ಎಲ್ಲಾ ಸರಕಾರಿ ಬಸ್ ಗಳ ತಪಾಸಣೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ತಪಾಸಣಾಧಿಕಾರಿಯನ್ನು ಸೆರೆ ಹಿಡಿಯಲಾಗಿದೆ. ತುಮಕೂರು ಬಿ.ಎಂ ಪಾಳ್ಯದ ಉರಿಡೆಗೆರೆ ರವಿಕುಮಾರ್(25) ಎಂಬಾತ ಆರೋಪಿಯಾಗಿದ್ದಾನೆ. ಇಲಾಖೆಯ ಜಾಗೃತ ದಳದವರು ಮಂಗಳವಾರ ಈತನನ್ನು ಹಿಡಿದು ಸುಬ್ರಹ್ಮಣ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ. ಐಟಿಐ ತರಬೇತಿ ಹೊಂದಿರುವ ಈತ ಬೆಂಗಳೂರು ಕೇಂದ್ರ ಕಚೇರಿಯಿಂದ […]

ಧರ್ಮಸ್ಥಳ : 80ನೇ ಸರ್ವಧರ್ಮ ಸಮ್ಮೇಳನ

Wednesday, December 12th, 2012
Sarva Dharma Sammelan

ಧರ್ಮಸ್ಥಳ :ಧರ್ಮಸ್ಥಳದ ಲಕ್ಷದೀಪೋತ್ಸವ ಅಂಗವಾಗಿ ಮಂಗಳವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 80ನೆ ಸರ್ವಧರ್ಮ ಸಮ್ಮೇಳನವು ನಡೆಯಿತು ನಿವೃತ್ತ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ವಿರೋಧಿಸು, ದ್ವೇಷಿಸು ಎಂದು ಹೇಳಿಲ್ಲ ಆದರೆ ಧರ್ಮದ ಮೂಲ ತಿರುಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದೇಶ, ದೇಶಗಳು ಹಾಗೂ ಧರ್ಮ, ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿವೆ. ಕೆಲವರು ಧರ್ಮಗಳ ನಡುವೆ ಭಿನ್ನಮತ ಸೃಷ್ಟಿಸಿ ಲಾಭ ಪಡೆಯುಲು ಯತ್ನಿಸುತ್ತಾರೆ ಎಂದ ಅವರು, ಧರ್ಮದ ಸಾರವನ್ನು […]

ನಗರದಲ್ಲಿ ಆರ್‌ಸಿ-ಕೆಎಸ್‌ಸಿಎ ಕ್ರಿಕೆಟ್‌ ಅಕಾಡೆಮಿಗೆ ಚಾಲನೆ

Tuesday, December 11th, 2012
Cricket Academy Mangalore

ಮಂಗಳೂರು :ಮಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಕಾದು ಕುಳಿತ್ತಿದ್ದ ಆರ್‌ಸಿ-ಕೆಎಸ್‌ಸಿಎ ಕ್ರಿಕೆಟ್‌ ಆಕಾಡೆಮಿ ಸೋಮವಾರ ನಗರದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಎಂಡ್ ಮ್ಯಾನೇಜ್‌ಮೆಂಟ್‌ನ ಆವರಣದಲ್ಲಿ ಉದ್ಘಾಟನೆಗೊಂಡಿತು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಪ್ರೊ|. ಡಾ| ಎಂ. ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ದ.ಕನ್ನಡ ಜಿಲ್ಲೆ ಬ್ಯಾಂಕಿಂಗ್‌, ಶಿಕ್ಷಣ, ಉದ್ದಿಮೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನ ಹಿರಿಮೆಯನ್ನು ಸಾಧಿಸಿದೆ ಆದರೆ ಕ್ರಿಕೆಟ್‌ ಕ್ಷೇತ್ರದಲ್ಲಿ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಮೂಲಭೂತ ಸೌಲಭ್ಯಗಳ ಕೊರತೆ. ಇದೀಗ […]

ಪತ್ರಕರ್ತ ನವೀನ್ ಸೂರಿಂಜೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Tuesday, December 11th, 2012
DFYI SFI handcuff protest

ಮಂಗಳೂರು :ಮಾನವಹಕ್ಕುಗಳ ದಿನವಾದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಜನವಾದಿ ಮಹಿಳಾ ಸಂಘಟನೆಗಳಿಂದ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ದಾಳಿ ಪ್ರಕರಣದ ಬಗ್ಗೆ ವರದಿ ಮಾಡಿದ ಪತ್ರಕರ್ತ ನವೀನ್ ಸೂರಿಂಜೆಯ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದರ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೈ ಕೋಳ ತೊಟ್ಟು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ ಡಿವೈಎಫ್‌ಐಯ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ […]

ಜುವೆಲ್ಲರಿಗೆ ಕನ್ನ ಲಕ್ಷ ರೂಪಾಯಿ ಮೌಲ್ಯದ ಆಭರಣಗಳ ಕಳವು

Tuesday, December 11th, 2012
Manjushree Jewellers

ಮಂಗಳೂರು :ಭಾನುವಾರ ರಾತ್ರಿ ನಗರದ ಲೋವರ್ ಬೆಂದೂರ್‌ನ ಮಂಜುಶ್ರೀ ಜುವೆಲ್ಲರ್ಸ್‌ಗೆ ನುಗ್ಗಿದ ಕಳ್ಳರು ಸುಮಾರು 7.3 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಜುವೆಲ್ಲರಿ ಹಿಂಬದಿ ಒಂದು ಕಿರಿದಾದ ದಾರಿ ಇದ್ದು ಈ ದಾರಿಯಿಂದ ಬಂದ ಕಳ್ಳರು ಗೋಡೆಯನ್ನು ಕೊರೆದು ಒಳನುಗ್ಗಿದ್ದಾರೆ. ಅಂಗಡಿ ಮಾಲೀಕರಾದ ಮಂಜುನಾಥ ಶೇಟ್ ಭಾನುವಾರ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಎಂದಿನಂತೆ ಅಂಗಡಿ ಬಾಗಿಲು ತೆರೆದು ನೋಡಿದಾಗ ಒಳಗಡೆ […]

2012 ಉತ್ಕ್ರಾಂತಿ ವರ್ಷವೇ ಹೊರೆತು ಪ್ರಳಯದ ಸಂಕೇತವಲ್ಲ

Tuesday, December 11th, 2012
Earth

ಮಂಗಳೂರು :ನಭೋಮಂಡಲದ ಚಿದಂಬರ ರಹಸ್ಯ ಭೇದಿಸಿದರೆ, `ನಿಬುರು’ ಕಪೋಲ ಕಲ್ಪಿತ ತಲೆಬುರುಡೆ ಆಕಾರದ ದೂರಗಾಮಿ ಛಾಯಾರೂಪದ ಕ್ಷುದ್ರಶಕ್ತಿ ಅಥವಾ ಅನ್ಯಗ್ರಹ. ಕ್ರಿ.ಪೂ. 1800 ವರ್ಷಗಳ ಹಿಂದೆ ಬಾಬಿಯೋನ್ ಪೂರ್ವಜರು ಇಹಲೋಕದ ಅಧಿದೇವರು ಎಂದೇ ಭಾವಿಸಿ ಈ ಗ್ರಹವನ್ನು ಪೂಜಿಸುತ್ತಿದ್ದರು. ಅವರು ಬ್ರಹ್ಮಾಂಡದ ಸೌರಮಂಡಲದಲ್ಲಿಯೇ ಅತಿ ದೊಡ್ಡದಾದ ಗುರುಗ್ರಹವನ್ನೇ ‘ನಿಬುರು’ ಎಂದು ಕರೆಯುತ್ತಿದ್ದುದು. ಇಂದು ದೂರಗಾಮಿ ಅನ್ಯಗ್ರಹಗಳು ಮತ್ತು ಕ್ಷುದ್ರಗ್ರಹಳನ್ನು ಪತ್ತೆ ಮಾಡಲು ವೈಜ್ಞಾನಿಕ ಸ್ಥಾವರಗಳು ಇವೆ. ಈ ಸ್ಥಾವರಗಳು ಹಲವು ರೇಡಿಯೋ ಟೆಲಿಸ್ಕೋಪ್ ಗಳು ಮತ್ತು ಸೂಪರ್ […]

ಇಂಧನ ಟ್ಯಾಂಕರ್ ಗೆ ಕಣ್ಣ ಹಾಕಿ ಹಣ ದೋಚುತ್ತಿದ್ದ ಜಾಲ ಪತ್ತೆ

Tuesday, December 11th, 2012
Fuel theft racket

ಮಂಗಳೂರು :ಪೆಟ್ರೋಲ್ ಟ್ಯಾಂಕರ್ ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್ ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಪತ್ತೆಹಚ್ಚುವ ಮೂಲಕ ಬೃಹತ್ ಕಾರ್ಯಚರಣೆ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 69 ಲಕ್ಷ ರೂ. ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕು ಮಾಣಿ ಮನೆ […]

ಬೆಳ್ತಂಗಡಿಯಲ್ಲಿ ನಕ್ಸಲರೂ ಮಕ್ಕಳಾಟಿಕೆಯಾದರೂ

Tuesday, December 11th, 2012
Chaarmaadi

ಮಂಗಳೂರು :ಮನೆಯಿಂದ ಪರಾರಿಯಾಗಿದ್ದ ಬಾಲಕರಿಬ್ಬರು ಕಾಡಿನಲ್ಲಿ ದಿನಬಳಕೆ ವಸ್ತುಗಳನ್ನು ಶೇಖರಿಸಿಟ್ಟಿದ್ದು ಎಎನ್ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಚಾರ್ಮಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿತ್ತು. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ […]

ಲೋಕಸಭೆ ಚುನಾವಣೆಯಲ್ಲಿ ಪೂಜಾರಿ ಎಂಟ್ರಿ !

Tuesday, December 11th, 2012
Janardhan Poojari & Vinaykumar Sorake

ಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸೋಲು ನಾಲ್ಕು ಬಾರಿ ಗೆಲುವು ದಾಖಲಿಸಿರುವ ಜನಾರ್ದನ ಪೂಜಾರಿ ಐದನೆಯ ದಾಖಲೆಗಾಗಿ ಕೊನೆಯ ಹೋರಾಟಕ್ಕೆ ಇಳಿದಿದ್ದಾರೆ. ತನ್ನನ್ನು ಬೆಂಬಲಿಸಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡುತ್ತಿದ್ದಾರೆ ಆಯ್ದ ಕೆಲವರೊಂದಿಗೆ ಆತ್ಮೀಯ ಸಭೆಯನ್ನು ನಡೆಸಿದ್ದಾರೆ. ಕಾರ್ಪೊರೇಟರ್ ಗಳಿಗೆ ತನ್ನನ್ನೇ ಬೆಂಬಲಿಸುವಂತೆ ಕೋರುವ ಆದೇಶವನ್ನೂ ನೀಡಿರುವುದು ಹೊಸ ಬೆಳವಣಿಗೆ. ತೀರಾ ಇತ್ತೀಚೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಾರ್ಪೊರೇಟರ್ ಗಳ ಗುಪ್ತ ಸಭೆ ಕರೆದು ತನಗೆ ಬೆಂಬಲಿಸುವವರ ಪಡೆಯನ್ನು ಪೂಜಾರಿ ಖಾತ್ರಿ […]

ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆನಂದ, ಸಹಾಯಕ್ಕೆ ಕೋರಿಕೆ

Monday, December 10th, 2012
Ananda Kundaaje

ಮಂಗಳೂರು :ಕಳೆದ ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆತನದ್ದು ಅಸಹನೀಯ ಬದುಕು. ಆ ಯುವಕನ ಬದುಕು ಕಮರಿ ಹೋಗಿದೆ. ಜೀವನ್ಮರಣ ಹೋರಾಟದಲ್ಲಿ ಗೆಲುವು ಅಷ್ಟರಲ್ಲೇ ಇದೆ. ಜರ್ಜರಿತಗೊಂಡ ಈತನ ಕುಟುಂಬ ಬಡತನದ ಬೇಗೆಯಲ್ಲಿ ಬಳಲಿಬೆಂಡಾಗಿದೆ. ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿ ಆನಂದ ಎಂಬ ಯುವಕನ ಚಿಂತಾಜನಕ ಸ್ಥಿತಿ, ಹಾಗೂ ಆತನ ಕುಟುಂಬದ ಭವಣೆಯ ಒಂದು ಚಿತ್ರಣ. ಎಂಟು ವರ್ಷಗಳ ಹಿಂದೆ ಮರದಿಂದ ಬಿದ್ದು ಬೆನ್ನುಹುರಿ ನೋವಿನಿಂದ ಬಳಲುತ್ತಿರಿರುವ ಆನಂದನ ಮನೆಯಲ್ಲಿ ಆನಂದವೇ ಇಲ್ಲ, […]