ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೂತನ ವೆಬ್ ಸೈಟ್.

Tuesday, November 2nd, 2010
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ karnatakabearysahityaacademy.org ಯನ್ನು ನಗರದ ಶ್ರೀನಿವಾಸ ಹೋಟೇಲ್ ನಲ್ಲಿ ಇಂದು ಬೆಳಿಗ್ಗೆ 10.00ಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯು ತುಳು ಭಾಷೆ ಮತ್ತು ಸಂಸ್ಕೃತಿಯಷ್ಟೇ ಶ್ರೀಮಂತವಾಗಿದೆ. ಈ ಎರಡೂ ಸಮುದಾಯಗಳ ಸಂಬಂಧ ಅನನ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಉದ್ಯೋಗ ಮತ್ತಿತರ ಕಾರಣಕ್ಕಾಗಿ ಬ್ಯಾರಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ಹಂಚಿ […]

ನೆಹರೂ ಮೈದಾನಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 44 ಮಂದಿ ಸಾಧಕರಿಗೆ ಪ್ರಶಸ್ತಿ ವಿತರಣೆ

Monday, November 1st, 2010
ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ ನಡೆಯುವ ರಾಜ್ಯೋತ್ಸವದ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಜ್ಯೋತಿ ವೃತ್ತದಲ್ಲಿ ಭವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಕರ್ಷಕ ವೇಷಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಧ್ವಜಾರೋಹಣದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಇಂದು  ಕನ್ನಡ ಭಾಷೆ ಹಾಗೂ ಅಭಿವೃದ್ಧಿ ಮತ್ತು ಕನ್ನಡಿಗರ ಸಾಧನೆಯ ಬಗ್ಗೆ ಸಿಂಹಾವಲೋಕನ […]

ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾಪನ

Monday, November 1st, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ವಿವಿಧ ರಂಗಗಳಲ್ಲಿ ಸೇವೆ ಮಾಡಿದ ಹತ್ತು ಮಂದಿ ಸಾಧಕರಿಗೆ ಸನ್ಮಾನಿಸುವ ಮೂಲಕ ಸಮಾಪನ ಗೊಂಡಿದೆ. ಮಧ್ಯಾನ್ಹ 3ಕ್ಕೆ ಆರಂಭವಾದ ಸನ್ಮಾನಿತರ ಮೆರವಣಿಗೆಯಲ್ಲಿ ಡಾ. ಮೋಹನ್ ಆಳ್ವಾ, ಡಾ. ವೀರೇಂದ್ರ ಹೆಗ್ಗಡೆ, ಗಣೇಶ್ ಕಾರ್ನಿಕ್, ಕೆ. ಅಮರನಾಥ ಶೆಟ್ಟಿ , ಸಮ್ಮೇಳನಾಧ್ಯಕ್ಷೆ ವೈದೇಹಿ ಹಾಗೂ ಸನ್ಮಾನಗೊಳ್ಳುವ ಗಣ್ಯರು ಪಾಲ್ಗೊಂಡಿದ್ದರು. ಕೊಂಬು,  ಡೋಲು, ಕೊಳಲು, […]

ನಗರದಲ್ಲಿ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ವಾರ್ಷಿಕ ವೈಜ್ನಾನಿಕ ಸಮ್ಮೇಳನ ಉದ್ಘಾಟನೆ

Saturday, October 30th, 2010
ಐಎಂಎ ಮೆಡಿಕಾನ್ - 2010

ಮಂಗಳೂರು : ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ಐಎಂಎ ಮೆಡಿಕಾನ್ – 2010 ವಾರ್ಷಿಕ ಸಮ್ಮೇಳನವನ್ನು ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಸನ್ ಸೆಂಟರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಿದರು.  ಉನ್ನತ ಶಿಕ್ಷಣ  ಸಚಿವ ಡಾ| ವಿ.ಎಸ್.ಆಚಾರ್ಯ ಆವರು ” ಸರ್ವರಿಗೂ ಆರೋಗ್ಯ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎನ್.ಯೋಗೀಶ್ ಭಟ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು ಸಮಾರಂಭದ  ಅಧ್ಯಕ್ಷತೆ ಯನ್ನು […]

ಆಕರ್ಷಕ ಕಲಾಮೇಳಗಳೊಂದಿಗೆ ಆಳ್ವಾಸ್ ನುಡಿಸಿರಿ ಪ್ರಾರಂಭ

Friday, October 29th, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದ್ರೆ : ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು ಎಂಬ ಪರಿಕಲ್ಪನೆಯಡಿ ಮೂಡಬಿದ್ರೆಯ ಶ್ರೀಮತಿ ಆನಂದ ಆಳ್ವಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿ ಸಿರಿಯನ್ನು ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಇತರ ಗಣ್ಯರು ಮರದ ಕುಂಡಿಕೆಯಲ್ಲಿ ಇರಿಸಲಾದ ಭತ್ತದ ತೆನೆಗೆ ತಾಮ್ರದ ಕಲಸದಲ್ಲಿ ಹಾಲೆರೆಯುವ ಮೂಲಕ ನುಡಿಸಿರಿಯ ಆರಂಭಕ್ಕೆ ಸಾಕ್ಷ್ಯರಾದರು. ವೇದಿಕೆಯ ಮುಂಭಾಗದಲ್ಲಿ […]

“ನಮ್ಮ ಕುಡ್ಲ” ಗೂಡುದೀಪ ಸ್ಪರ್ಧೆ

Thursday, October 28th, 2010
"ನಮ್ಮ ಕುಡ್ಲ" ಗೂಡುದೀಪ

ಮಂಗಳೂರು: ನಮ್ಮ ಕುಡ್ಲ ವತಿಯಿಂದ ನವೆಂಬರ್ 4 ರಂದು ಗುರುವಾರ ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ, ಮೂರುವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿಯ ಗೂಡು ದೀಪಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಕದ್ರಿ ನವನೀತ್ ಶೆಟ್ಟಿ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ತೀಪುಗಾರರಿಗೆ […]

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ದಿಗ್ಗಜ ಕಲಾಮಣಿಗಳ ಕೂಟದಲ್ಲಿ ಮೊದಲ ಪ್ರಯೋಗ ರಂಗಾರ್ಪಣೆ

Wednesday, October 27th, 2010
`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ'

ಮಂಗಳೂರು : ಒಡಿಯೂರು ಶ್ರೀಗಳ 50ನೇ ಜನ್ಮ ದಿನೋತ್ಸವವನ್ನು ಆಚರಿಸುವ ಸುಸಂದರ್ಭದಲ್ಲಿ ಒಡಿಯೂರು ಕ್ಷೇತ್ರದ ಹಿನ್ನಲೆ ಇರುವ ಪೌರಾಣಿಕ ಹಾಗೂ ಐತಿಹಾಸಿಗಳ ಕಥೆಯನ್ನಾಧರಿಸಿ ತಾರಾನಾಥ ವರ್ಕಾಡಿ ರಚಿಸಿದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನವನ್ನು  ಇಂದು ನಗರದ ಪುರಭವನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ರಂಗಾರ್ಪಣೆಗೈದರು. ಧರ್ಮ ಮತ್ತು ಸಂಸ್ಕೃತಿಯ ಅನಾವರಣ ಆಗಬೇಕಾದರೆ ಕಲೆಯಿಂದ ಮಾತ್ರ ಸಾಧ್ಯ, ಒಡಿಯೂರು ಕ್ಷೇತ್ರ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ಭಕ್ತರಿಗೆ ತಿಳಿಸುವ ಈ ಕಾರ್ಯ ಪ್ರಶಂಶನೀಯ ಎಂದು ಶ್ರೀ […]

ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ.

Tuesday, October 26th, 2010
ಜಿಲ್ಲಾಧಿಕಾರಿ ವೇಲುಸಾಮಿ ಪೊನ್ನುರಾಜ್ ಅವರಿಗೆ ನಾಗರಿಕರ ಆತ್ಮೀಯ ವಿದಾಯ

ಮಂಗಳೂರು: ಸುಮಾರು ಒಂದೂವರೆ ವರ್ಷಕಾಲ ಉಡುಪಿಯಿಂದ ಮಂಗಳೂರಿಗೆ ಬಂದು ಇಲ್ಲಿ ಆಡಳಿತ ನಡೆಸಿ, ಈಗ ಶಿವಮೊಗ್ಗಕ್ಕೆ ವರ್ಗಾವಣೆಗೊಂಡು ಹೋಗುತ್ತಿರುವ ದ.ಕ (ಮಾಜಿ) ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಇಂದು ಹಾರ್ಧಿಕ ವಿದಾಯ, ಹಾಗೂ ಹೊಸದಾಗಿ ದಿಲ್ಲಿಯಿಂದ ಬಂದು ಇಲ್ಲಿ ಜಿಲ್ಲಾಧಿಕಾರಿಯಾಗಿರುವ ಸುಭೋಧಯಾದವ (ಐಎಎಸ್) ಅವರಿಗೆ ಸಂತೋಷಪೂರ್ವಕ ಸ್ವಾಗತ ಬಯಸುವ ಸಮಾರಂಭವೊಂದನ್ನು ಜಿಲ್ಲಾ ಕಛೇರಿಯ ಸಭಾಂಗಣದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಅವರು ನಡೆಸಿಕೊಟ್ಟರು. ಶರ್ಮರು ತಮ್ಮ ಹಿಂದಿನ ಅನುಭವಗಳನ್ನು ನೆನೆಪಿಗೆ ತಂದುಕೊಂಡು ವರ್ಗಾವಣೆಯಾಗಿ […]

ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘದಿಂದ ಹೆದ್ದಾರಿ ದುರಸ್ತಿಗೆ ಆಗ್ರಹ

Monday, October 25th, 2010
ದ.ಕ. ಬಸ್ಸು ಮಾಲಕರ ಸಂಘ ಹಾಗೂ ಕೆನರಾ ಬಸ್ಸು ಮಾಲಕರ ಸಂಘ

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪುವೆಲ್ ನಿಂದ ತಲಪಾಡಿವರೆಗೆ ರಸ್ತೆಗಳಲ್ಲಿ ಭಾರಿ ಗಾತ್ರದ ಹೊಂಡಗಳು ಬಿದ್ದಿದ್ದು ರಸ್ತೆಗಳು ಹೆಚ್ಚು ಕಡಿಮೆ ಸಂಪೂರ್ಣ ಕೆಟ್ಟು ಹೋಗಿವೆ. ಮಾತ್ರವಲ್ಲದೆ ನೇತ್ರಾವತಿ ಸೇತುವೆ ಮೇಲಿನ ಕಾಂಕ್ರೀಟ್ ಅಲ್ಲಲ್ಲಿ ಹೊಂಡ ಬಿದ್ದು ಕಬ್ಬಿಣದ ರಾಡ್ಗಳು ಮೇಲೆ ಬಂದು ಮಳೆ ನೀರು ಕಾಂಕ್ರೀಟ್ನ ಒಳ ಭಾಗಕ್ಕೆ ಹರಿಯುತ್ತಿದ್ದು ಯಾವುದೇ ಸಂದರ್ಭದಲ್ಲಿ. ಸೇತುವೆ ಬಿರುಕು ಬಿದ್ದು ಅಪಾಯವಾಗುವ ಸಂಭವವಿದೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ರಾಜವರ್ಮ ಬಲ್ಲಾಳ್ ಇಂದು ನಗರದ ವುಡ್ ಲ್ಯಾಂಡ್ಸ್ […]

ಜನ ಸಾಮಾನ್ಯರ ಬ್ಯಾಂಕ್ ವಿಜಯಾಬ್ಯಾಂಕ್ : ಸಂಸ್ಥಾಪಕರ ದಿನಾಚರಣೆಯಲ್ಲಿ ಕೆ.ಎನ್. ವಿಜಯಪ್ರಕಾಶ್

Saturday, October 23rd, 2010
ವಿಜಯಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ಎಂಬತ್ತು ವರ್ಷಗಳ ಹಿಂದೆ ಅತ್ತಾವರ ಬಾಲಕೃಷ್ಣ ಶೆಟ್ಟಿ ಮತ್ತು ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ಸ್ಥಾಪಿಸಿದ ವಿಜಯಾಬ್ಯಾಂಕಿನ  ಸಂಸ್ಥಾಪಕರ ದಿನಾಚರಣೆಯನ್ನು ಇಂದು ಜ್ಯೋತಿಯಲ್ಲಿರುವ ವಿಜಯಾಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು. ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಕೆ.ಎನ್.ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ನಿರ್ದೇಶಕ ಬಿ. ಇಬ್ರಾಹಿಂ ಸಂಸ್ಥಾಪಕರ ಬಾವಚಿತ್ರಗಳಿಗೆ ಪುಷ್ಪ ಮಾಲೆ ಹಾಕುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಜನ ಸಾಮಾನ್ಯರಿಗೆ ವಿಜಯಾಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ಮಂಗಳೂರು ನಗರ ಅಭಿವೃದ್ಧಿಗೂ ಪಾಲಿಕೆಯೊಂದಿಗೆ ಕೈ ಜೋಡಿಸಿದೆ […]