ಸೀಲಿಂಗ್‌ ಫ್ಯಾನ್‌ ಹಿಡಿದು ಬೀದಿಗಿಳಿದ ಶ್ರೀರಾಮುಲು

Thursday, November 17th, 2011
Sri Ramulu

ಬಳ್ಳಾರಿ: ಇಷ್ಟು ದಿನ ಬಿಜೆಪಿಯಲ್ಲಿದ್ದು  ಇದೀಗ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ತಮ್ಮ ಚಿಹ್ನೆ‌ ಸೀಲಿಂಗ್‌ ಫ್ಯಾನ್‌ ಹಿಡಿದು ಪ್ರಚಾರ ನಡೆಸಲು  ಬೀದಿಗಿಳಿದಿದ್ದಾರೆ. ಬಳ್ಳಾರಿ  ಜನರಿಗೆ ಶ್ರೀರಾಮುಲು ಅಂದರೆ ಬಿಜೆಪಿ ಹಾಗೂ ಕಮಲ ಎಂದರೆ ರಾಮುಲು ಎಂಬಾಂತಾಗಿತ್ತು. ಹೀಗಾಗಿ ಹಳ್ಳಿಗಾಡಿನ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ರಾಮುಲು ಮತದಾರರಿಗೆ ತನ್ನ  ಚುನಾವಣಾ ಪ್ರಚಾರದಲ್ಲಿ ತಿಳಿಸಿದರು. ಬುಧವಾರ ಮೋಕಾ, ಯರಗುಡಿ, ಬೆಣಕಲ್ಲು, ಸಿಂಧವಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ […]

ದಲಿತರಿಂದ ಮಲ ತೆಗೆಸುವ ಪದ್ಧತಿಯನ್ನು ನಿಷೇಧಿಸಬೇಕು :ದ.ಸಂ.ಸ

Thursday, November 17th, 2011
Dalit Protest

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಕೃಷ್ಣಪ್ಪ ಸ್ಥಾಪಿತ) ಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯದಲ್ಲಿ ಮಾನವ ಕೈಗಳಿಂದ ಮಲ ತೆಗೆಸುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ಐ.ಪಿ.ಡಿ. ಸಾಲಪ್ಪ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಇತ್ತೀಚೆಗೆ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ಕೃಷ್ಣ ಕೊರಗ ಮತ್ತು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌. ನಲ್ಲಿ ಓರ್ವ ಪೌರ ಕಾರ್ಮಿಕ ಶೌಚಾಲಯ ಗುಂಡಿಯಲ್ಲಿ ಸಾವನ್ನಪ್ಪಿರುವುದರ ಪ್ರತಿಭಟನಾರ್ಥ ಈ […]

ವಿದ್ಯಾಗಿರಿಯಲ್ಲಿ ಎಂಟನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನೆ

Saturday, November 12th, 2011
Alvas Nudi Siri

ಮೂಡಬಿದ್ರೆ : ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಡಾ| ಎಂ. ಮೋಹನ್‌ ಆಳ್ವ ಅವರ ಸಾರಥ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳಕಾಲ ನಡೆಯಲಿರುವ ಎಂಟನೇ ಆಳ್ವಾಸ್‌ ನುಡಿಸಿರಿಯ ಉದ್ಘಾಟನೆಯನ್ನು ಶುಕ್ರವಾರ ಡಾ| ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ನುಡಿಸಿರಿಯ ಉದ್ಘಾಟನೆಗೂ ಮುನ್ನ ವೈಭವದ ಮೆರವಣಿಯನ್ನು ಎತ್ತರದ ವೇದಿಕೆಯ ಮೇಲಿರಿಸಿದ್ದ ತುಳುನಾಡಿನ ಆರಾಧನೆ ದೈವದ ಪ್ರತಿರೂಪದ ಎದುರಿಗಿದ್ದ ದೀವಟಿಗೆ ಬೆಂಕಿ ಹಚ್ಚುವ ಮೂಲಕ ಮೂಡಬಿದರೆಯ ಶಾಸಕ ಅಭಯಚಂದ್ರ ಜೈನ್ ಅವರು ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷರು, ಉದ್ಘಾಟಕರು, ಸಂಸದರು, ಶಾಸಕರು ಸೇರಿದಂತೆ […]

ಐದು ಮಂದಿ ಕ್ರೈಸ್ತ ಸಾಧಕ ಗಣ್ಯರಿಗೆ ರಚನಾ ಪ್ರಶಸ್ತಿ ಘೋಷಣೆ

Friday, November 11th, 2011
Rachana Award

ಮಂಗಳೂರು  : ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್‌ ಆಂಡ್ ಇಂಡಸ್ಟ್ರೀಸ್‌ ವತಿಯಿಂದ ಪ್ರತಿ ವರ್ಷ ನೀಡಲಾಗುವ ರಚನಾ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಐವರು ಸಾಧಕರಿಗೆ ಈ  ವರ್ಷ ಘೋಷಿಸಲಾಗಿದೆ. ರಚನಾ ಮಹಿಳಾ ಪ್ರಶಸ್ತಿಗೆ ಸಿ| ಮರಿಯಾ ಗೊರಟ್ಟಿ, ಮದರ್‌ ಜನರಲ್‌, ಎಸ್‌.ಆರ್‌.ಎ. ಆಸ್ಟ್ರೀಯಾ, ರಚನಾ ಕೃಷಿಕ ಪ್ರಶಸ್ತಿಗೆ ಪಾವ್‌ ತಾವ್ರೊ ಮಡಂತ್ಯಾರು, ರಚನಾ ಉದ್ಯಮಿ ಪ್ರಶಸ್ತಿಗೆ ರಿಚರ್ಡ್‌ ರೋಡ್ರಿಗಸ್‌ ಮಂಗಳೂರು, ರಚನಾ ವೃತ್ತಿಪರ ಪ್ರಶಸ್ತಿಗೆ ಸಿ.ಟಿ.ಜೆ. ಗೊನ್ಸಾಲ್ವಿಸ್‌ ಹಾಗೂ ರಚನಾ ಅನಿವಾಸಿ ಭಾರತೀಯ ಉದ್ಯಮಿ ಪ್ರಶಸ್ತಿಗೆ […]

ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮಹತ್ತರ ಜವಾಬ್ದಾರಿ ವಹಿಸಬೇಕು : ಜಿಲ್ಲಾಧಿಕಾರಿ

Wednesday, November 9th, 2011
Pollution control

ಮಂಗಳೂರು :  ದ.ಕನ್ನಡ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳವಾರ ನಗರದಲ್ಲಿ ಆಯೋಜಿಸಿದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ  ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ತಡೆಯುವಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಬೇಕು. ವಾಯುಮಾಲಿನ್ಯದಿಂದ ಜಗತ್ತಿನಲ್ಲಿ 2.5 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮಹತ್ತರ ಜವಾಬ್ದಾರಿ ವಹಿಸಬೇಕು ಎಂದು ಚನ್ನಪ್ಪ ಗೌಡ ಹೇಳಿದರು. ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನ ಕೂಡಾ ಗಣನೀಯವಾಗಿ […]

ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯುವ ಗಾಯಕ ರಾಜೇಶ್‌ಕೃಷ್ಣನ್‌

Tuesday, November 8th, 2011
Rajesh Krishnan Wedding

ಕೊಲ್ಲೂರು : ಕನ್ನಡ ಹಾಗೂ ತಮಿಳು, ಹಿಂದಿ ತೆಲುಗು ಮೊದಲಾದ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಯುವ ಗಾಯಕ ರಾಜೇಶ್‌ಕೃಷ್ಣನ್‌ ಅವರು ಸೋಮವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಿರುತೆರೆ ಅಭಿನೇತ್ರಿ ರಮ್ಯಾ ವಸಿಷ್ಠ ಅವರನ್ನು ವರಿಸಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕೆಲವೇ ಅಭಿಮಾನಿಗಳು ಹಾಗೂ ಬಂಧು ಮಿತ್ರರು, ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿತು. ರಾಜೇಶ್‌ಕೃಷ್ಣನ್‌ ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ತನ್ನದೇ ಶೈಲಿಯಲ್ಲಿ ಹೊಸ ಛಾಪನ್ನು ಮೂಡಿಸಿದ್ದಾರೆ. ಹಲವಾರು ಭಕ್ತಿಗೀತೆಗಳ ಅಲ್ಬಂಗಳಲ್ಲೂ ಹಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಗೀತ […]

ಎರಡು ಫ್ಲಾಟ್‌ ಖರೀದಿಸಿದರೆ ಒಂದು ಫ್ಲಾಟ್‌ ಉಚಿತ

Thursday, November 3rd, 2011
Flats

ಮಂಗಳೂರು: ಮಳೆಗಾಲದಲ್ಲಿ ಏನೆಲ್ಲಾ ಆಫರ್ ಗಳು ಬರುತ್ತವೆ ನೋಡಿ. ಎರಡು ಫ್ಲಾಟ್‌ ಖರೀದಿಸಿದರೆ ಒಂದು ಫ್ಲಾಟ್‌ ಉಚಿತ ಇದು ಮಂಗಳೂರಿಗರಿಗೆ ಹೊಸ ಕೊಡುಗೆ. ಹಾಗೆಂದು ಮೊಬೈಲ್‌ ಫೋನ್‌ನಲ್ಲಿ ಎಸ್‌ಎಂಎಸ್‌ ಕಳುಹಿಸಿ ಜನರನ್ನು ವಂಚಿಸಲು ಯತ್ನಿಸಿದ ಆರೋಪಿ ಬಜಪೆಯ ಮಹಮದ್‌ ಅನ್ಸಾರ್‌ (30) ನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಫ್ಲಾಟ್‌ ವೀಕ್ಷಿಸಲು ಬರುವ ಗ್ರಾಹಕರಿಗೆ ಆರೋಪಿ ಮಹಮದ್‌ ಅನ್ಸಾರ್‌ ನಿರ್ಮಾಣ ಹಂತದಲ್ಲಿರುವ ಎರಡು ಫ್ಲಾಟ್‌ಗಳನ್ನು ತೋರಿಸಿ ನಂಬಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬಿಲ್ಡರ್‌ ಸಂಸ್ಥೆಯೊಂದರ ಮ್ಯಾನೇಜರ್‌ ನೀಡಿದ ದೂರಿನನ್ವಯ ಪೊಲೀಸರು […]

ಸುವರ್ಣ ಗ್ರಾಮೋದಯದಲ್ಲಿ ಸಂಪರ್ಕ ವಲಯಕ್ಕೆ ರಾಜ್ಯ ಸರಕಾರದ ಆದ್ಯತೆ :ಪಾಲೆಮಾರ್‌

Wednesday, November 2nd, 2011
Kannada Rajyotsava Mangalore

ಮಂಗಳೂರು: ನೆಹರೂ ಮೈದಾನದಲ್ಲಿ ಮಂಗಳವಾರ ಜರಗಿದ ಕರ್ನಾಟಕ ರಾಜ್ಯೋತ್ಸವ ದಿನಾಚಣೆಯ ರಾಷ್ಟ್ರಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ನೆರವೇರಿಸಿದರು. ಗೌರವ ವಂದನೆ ಸ್ವೀಕರಿಸಿದ ಅವರು ಪರೇಡ್‌ ವೀಕ್ಷಣೆ ನಡೆಸಿ ರಾಜ್ಯೋತ್ಸವದ ಸಂದೇಶ ನೀಡಿದರು. ಧ್ವಜಾರೋಹಣಕ್ಕೂ ಮೊದಲು ನಗರದ ಡಾ| ಅಂಬೇಡ್ಕರ್‌ ವೃತ್ತದಿಂದ ನೆಹರೂ ಮೈದಾನ ತನಕ ಕನ್ನಡ ಭುನೇಶ್ವರಿಯ ಮೆರವಣಿಗೆ ನಡೆಯಿತು. ಸುವರ್ಣ ಗ್ರಾಮೋದಯದ 3ನೇ ಹಂತದಲ್ಲಿ 31 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. 1,467 ಲಕ್ಷ ರೂ. ವೆಚ್ಚದಡಿ […]

ಭಾರತಕ್ಕೆ ಜಗತ್ತಿನಲ್ಲಿ ಅಗ್ರಸ್ಥಾನ ದೊರಕಲು ಭ್ರಷ್ಟಾಚಾರ ತೊಲಗಬೇಕು : ಆಡ್ವಾಣಿ

Tuesday, November 1st, 2011
LK Advani Janachetana yatra

ಮಂಗಳೂರು: ಭ್ರಷ್ಟಾಚಾರ ವಿರೋಧಿಸಿ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿಯವರು ಕೈಗೊಂಡಿರುವ ರಾಷ್ಟ್ರೀಯ ಜನ ಚೇತನಾ ಯಾತ್ರೆಯು ಸೋಮವಾರ ನಗರವನ್ನು ತಲುಪಿತು .  ಮಂಗಳೂರಿನ  ಕೇಂದ್ರ ಮೈದಾನಿನಲ್ಲಿ ನಡೆದ  ಬೃಹತ್‌ ಸಮಾವೇಶದಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಬಂದ ಅಡ್ವಾಣಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು. ಜನಚೇತನಾ ರಥ ಮಂಗಳೂರು ತಲುಪುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿದರು. ಭ್ರಷ್ಟಾಚಾರವನ್ನು ತೊಲಗಿಸಿ, ವಿದೇಶದಲ್ಲಿರುವ ಕಪ್ಪು ಹಣವನ್ನು ಹಿಂದೆ ತಂದು ಜಗತ್ತಿನ ಅಗ್ರಸ್ಥಾನದ ದೇಶವನ್ನಾಗಿ ಭಾರತವನ್ನು ರೂಪಿಸಲು ದೇಶದ ಜನತೆ ಪಣತೊಡಬೇಕು ಎಂದು ಬಿಜೆಪಿ […]

ಮನೆಯಲ್ಲಿ ನಾಯಿಗಳಿದ್ದರೆ ಭದ್ರತೆ ಇದ್ದಂತೆ : ಪಾಲೆಮಾರ್

Monday, October 31st, 2011
Kennel club dog show

ಮಂಗಳೂರು : ಕರಾವಳಿ ಕೆನೆಲ್‌ ಕ್ಲಬ್‌ ವತಿಯಿಂದ ನಗರದ ಕದ್ರಿಪಾರ್ಕ್‌ನಲ್ಲಿ ಭಾನುವಾರ ಜರಗಿದ ರಾಜ್ಯಮಟ್ಟದ ಶ್ವಾನಗಳ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ ಸುಮಾರು 25 ಕ್ಕೂ ಅಧಿಕ ವಿವಿಧ ತಳಿಗಳ 275ಕ್ಕೂ ಮಿಕ್ಕಿ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದವು. ಉದ್ಘಾಟನೆ ಬಳಿಕ ಮಾತನಾಡಿದ ಪಾಲೆಮಾರ್‌ ಅವರು ಮನೆಯಲ್ಲಿ ನಾಯಿಗಳಿದ್ದರೆ ಭದ್ರತೆ ಇರುತ್ತದೆ. ನಾಯಿ ಪ್ರಮಾಣಿಕತೆಗೆ ಹೆಸರುವಾಸಿಯಾದ ಜೀವಿಯಾದುದರಿಂದ ಮನೆಯ ಯಜಮಾನನಿಗೆ ನಾಯಿ ಒಬ್ಬ ನಂಬಿಗಸ್ಥ ಕೆಲಸದಾಳು ಇದ್ದಂತೆ […]