ಕೌಟುಂಬಿಕ ಕಲಹಕ್ಕೆ ಇನ್ಸ್ ಪೆಕ್ಟರ್ ಸುದರ್ಶನ್ ಪತ್ನಿ ಬಲಿ

Sunday, August 28th, 2011
Shobha/ಶುಭಾ

ಬೆಂಗಳೂರು : ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್ ಪೆಕ್ಟರ್ ಸುದರ್ಶನ್ ಎಂಬುವರ ಪತ್ನಿ ಶುಭಾ ತನ್ನ ಪತಿಯ ಸರ್ವಿಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಶನಿವಾರ ಮಧ್ಯ ರಾತ್ರಿ ವೇಳೆ ಪ್ರಾಣ ಬಿಟ್ಟಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳಲಾಗದೆ ಪತಿಯೊಡನೆ ಸದಾ ಜಗಳವಾಡುತ್ತಿದ್ದ ಶುಭಾ ಅವರು ಸಾವಿನಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಹಾಸನ ಮೂಲದ ಶುಭಾ ಅವರು 12 ವರ್ಷದ ಹಿಂದೆ ಸುದರ್ಶನ್ ಪಿಎಸ್ ಎಂಬ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದರು. ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ […]

ಮೂಡಿಗೆರೆಯಲ್ಲಿ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ, ಒಂದು ಸಾವು, ಬಸ್ ಬಸ್ಮ

Thursday, August 11th, 2011
Bus-Accident/ಬೈಕ್‌ ಹಾಗೂ ಬಸ್‌ ಢಿಕ್ಕಿ

ಚಿಕ್ಕಮಗಳೂರು : ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ದಿಣ್ಣೆಕೆರೆ -ಮಾವಿನಹಳ್ಳಿಯ ತಿರುವಿನಲ್ಲಿ ಬುಧವಾರ ಸಂಜೆ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟಿದ್ದು , ಖಾಸಗಿ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 70 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಅನಿತಾ -ಜಗದೀಶ್‌ ಮದುವೆಗೆ ಭದ್ರಾವತಿಯಿಂದ ಖಾಸಗಿ ಬಸ್ಸಿನಲ್ಲಿ 70ಕ್ಕೂ ಅಧಿಕ ಮಂದಿ ಹೋಗಿದ್ದರು. ಇನ್ನೊಂದೆಡೆ ಶಿವಮೊಗ್ಗದ ವೀರಭದ್ರ ಕಾಲನಿಯ ನಂದೀಶ್‌ ಹಾಗು ಭೈರೇಶ್‌ ಬೈಕಿನಲ್ಲಿ ವಿಹಾರಾರ್ಥ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬಸ್ […]

ಕಾಪು ಕಡಲ ಕಿನಾರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

Thursday, August 11th, 2011
Abhijit Singh, Janakish / ಅಭಿಜಿತ್‌ ಸಿಂಗ್‌, ಜಾನಾ ಕಿಶ್‌

ಮಂಗಳೂರು : ಮಣಿಪಾಲ ಎಂ.ಐ.ಟಿಯ ಇಬ್ಬರು ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಮುದ್ರಪಾಲದ ಘಟನೆ ಬುಧವಾರ ಸಂಜೆ ಕಾಪು ಕಡಲ ಕಿನಾರೆಯಲ್ಲಿ ಸಂಭವಿಸಿದೆ. ನಾಲ್ವರು ವಿದೇಶಿಯರು ಮತ್ತು ಓರ್ವ ಭಾರತೀಯ ಸೇರಿದಂತೆ ಐದು ಮಂದಿ ವಿದ್ಯಾರ್ಥಿಗಳೂ ಕಾಪು ಕಡಲ ಕಿನಾರೆಗೆ ಆಗಮಿಸಿದ್ದರು. ಲೈಟ್‌ ಹೌಸ್‌ನ ಮುಂಭಾಗದಲ್ಲಿ ಕಡಲು ಸಂಪೂರ್ಣವಾಗಿ ವಿಸ್ತರಿಸಿಕೊಂಡಿರುವುದರಿಂದ ಐವರು ಕೂಡಾ ಕಡಲಿಗೆ ಇಳಿದಿದ್ದರು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಅಂಜಿದ ಮೂವರು ದಡದಲ್ಲೇ ಕುಳಿತರೆ, ಅಭಿಜಿತ್‌ ಸಿಂಗ್‌ (18)ಮತ್ತು ಜಾನಾ ಕಿಶ್‌ (೨೧ ಈಜುವ ಉದ್ದೇಶದಿಂದ […]

ರಸ್ತೆ ಅಫಘಾತ ಮಂಜೇಶ್ವರ ಆನೆಕಲ್ಲು ನಿವಾಸಿ ಸಾವು

Tuesday, August 9th, 2011
Car Accident/ ರಸ್ತೆ ಅಫಘಾತ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್‌ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್‌ ರಝಾಕ್‌(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್‌ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ಟಿಪ್ಪರ್‌ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ […]

ಕಾಯಿಸಿದ ಮೀನು ತಿಂದು ಪಿಯುಸಿ ವಿದ್ಯಾರ್ಥಿನಿ ಸಾವು

Monday, August 8th, 2011
Fish Fry/ ಕಾಯಿಸಿದ ಮೀನು

ಮಂಗಳೂರು : ಮಂಗಳೂರು ಹೊರವಲಯ ಪಚ್ಚನಾಡಿ ದೇವಿ ನಗರದಲ್ಲಿ ಕಾಯಿಸಿದ ಮೀನು ತಿಂದು ಯುವತಿಯೋರ್ವಳು ಅಸ್ವಸ್ಥಳಾಗಿ ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಸಾವನ್ನಪ್ಪಿದ ಯುವತಿ. ಈಕೆ‌ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್‌ ಆಯಿಲ್‌ನಲ್ಲಿ ಮೀನು ಕಾಯಿಸಿದ್ದರು. ಅದರಲ್ಲಿ ಎರಡು ಮೀನುಗಳನ್ನು ಆಕೆ ತಿಂದಿದ್ದು, ಕೆಲವೇ ಹೊತ್ತಿನಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಕೂಡಲೇ ಆಕೆಯನ್ನು ಸಮೀಪದ […]

ಹಾಸ್ಯನಟ ಕೆ ಎಂ ರತ್ನಾಕರ್ ನಿಧನ

Tuesday, September 21st, 2010
ಹಿರಿಯ ಕಲಾವಿದ ಕೆ ಎಂ ರತ್ನಾಕರ್

ಮೈಸೂರು : ಹಾಸ್ಯನಟನಾಗಿ 350ಕ್ಕೂ ಹೆಚ್ಚು  ಚಿತ್ರಗಳಲ್ಲಿ ಅಭಿನಯಿಸಿದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೆ ಎಂ ರತ್ನಾಕರ್  ಇಂದು ಮಧ್ಯಾಹ್ನ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರು ಮೂತ್ರ ಜನಕಾಂಗದ ವೈಫಲ್ಯದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಇನ್ನು ಅಭಿಮಾನಿಗಳಿಗೆ ಅವರು ಬರಿ ನೆನಪಷ್ಟೆ. ಹಾಸ್ಯನಟನಾಗಿ ಅವರದೇ ಆದ ಪ್ರೇಕ್ಷಕ ವರ್ಗವನ್ನು ನಿರ್ಮಿಸಿದ್ದಾರೆ.  ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ ಸಾಹಸ ಸಿಂಹ ವಿಷ್ಣುವರ್ಧನ್  […]

ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

Friday, September 17th, 2010
ಡಾ| ಪಂಡಿತ್ ಪುಟ್ಟರಾಜ ಗವಾಯಿ ಲಿಂಗೈಕ್ಯ

ಗದಗ : ಪದ್ಮ ಭೂಷಣ ಪುರಷ್ಕ್ರುತ ಡಾ| ಪಂಡಿತ್ ಪುಟ್ಟರಾಜ ಗವಾಯಿ (97) ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾಹ್ನ 12-30ಕ್ಕೆ ಲಿಂಗೈಕ್ಯರಾದರು. ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. 1914 ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನ ಗಲ್‌ನ ದೇವರ ಹೊಸಕೋಟೆ ಯಲ್ಲಿ ಜನಿಸಿದ ಪುಟ್ಟರಾಜ ಗವಾಯಿ  ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು.  ಬಾಲ್ಯ ದಲ್ಲಿಯೇ ಗವಾಯಿ ದೃಷ್ಟಿ ಕಳಕೊಂಡಿದ್ದರು. ಮಾವ ಚಂದ್ರಶೇಖರ್  ಪುಟ್ಟಯ್ಯಜ್ಜನಿಗೆ ಬೆಳಕಾಗಿ ಅವರ […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]

ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

Monday, September 13th, 2010
ರಂಗ ಕಲಾವಿದ ನವೀನ್ ಎಡಮಂಗಲ ವಿಧಿ ವಶ

ಬೆಳ್ತಂಗಡಿ : ವಿಶ್ವತುಳು ಸಮ್ಮೇಳನದ ತುಳುಗ್ರಾಮದಲ್ಲಿ ಗಾಂಧಿ ಪಾತ್ರಧಾರಿ, ಖ್ಯಾತ ರಂಗಕರ್ಮಿ, ನಾಟಕ ನಿರ್ದೇಶಕ ನವೀನ್ ಎಡಮಂಗಲ (27) ಪಂಜ-ಕಡಬ ರಸ್ತೆಯ ನೆಕ್ಕಿಲದಲ್ಲಿ ಸೆ.11ರಂದು ಬೆಳಿಗ್ಗೆ ಹಿಟಾಚಿ ಯಂತ್ರ ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್‌ ಲಾರಿ ಹಾಗೂ ಬೈಕ್  ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಣೇಶೋತ್ಸವ ನಿಮಿತ್ತ ಪಂಜದಲ್ಲಿ ನವೀನ್ ಎಡಮಂಗಲ ನಿರ್ದೇಶನದಲ್ಲಿ ಉಜಿರೆಯ ಎಸ್‌ಡಿ ಎಂ. ಕಾಲೇಜಿನ ರಂಗತರಬೇತಿ ಕೇಂದ್ರದವರಿಂದ ಸೆ.11ರಂದು ರಾತ್ರಿ ನಾಟಕ ನಡೆಯಲಿದ್ದು, ಅವರು ಸೆ.10ರಂದೇ ಪಂಜಕ್ಕೆ ಬಂದು ವೇದಿಕೆ, ರಂಗಸಜ್ಜಿಕೆ ನಿರ್ಮಿಸಿದ್ದರು. ಸೆ.11ರಂದು ಮುಂಜಾನೆ […]

ಚಿತ್ರ ನಟ ಮುರಳಿ ಇನ್ನಿಲ್ಲ

Wednesday, September 8th, 2010
ಚಿತ್ರ ನಟ ಮುರಳಿ ಇನ್ನಿಲ್ಲ

ಚೆನ್ನೈ : ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿಮಿಂಚಿದ ನಟ ಮುರಳಿ (46) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕನ್ನಡದಲ್ಲಿ ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.ಮಂಗಳವಾರ  ಮಗಳ ನಿಶ್ಚಿತಾರ್ಥ ಮುಗಿಸಿ ಮಲಗಿದ್ದ ಮುರಳಿ ಬೆಳಗ್ಗೆ ಏಳದ್ದನ್ನು ನೋಡಿ ಮನೆಯವರು ಎಬ್ಬಿಸಲು ಹೋದಾಗ ಅವರು ತೀರಿಕೊಂಡ ವಿಚಾರ ಬೆಳಕಿಗೆ ಬಂದಿದೆ ಮುರಳಿ ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಕನ್ನಡದಲ್ಲಿ ಹಲವು ಜನಪ್ರಿಯ ಹಾಡುಗಳಲ್ಲಿ […]