ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೇಮಾರು ಶ್ರೀ ಒತ್ತಾಯ

Tuesday, November 6th, 2012
ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೇಮಾರು ಶ್ರೀ ಒತ್ತಾಯ

ಬೆಳ್ತಂಗಡಿ :ಸೌಜನ್ಯಳ ಮನೆಗೆ ಭೇಟಿ ನೀಡಿದ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಆದ್ದರಿಂದ ಈ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಇನ್ನು15 ದಿನಗಳಲ್ಲಿ ಸೂಕ್ತ ತನಿಖೆ ನಡೆಸದೇ ಇದ್ದಲ್ಲಿ ಸಾರ್ವಜನಿಕರ ಬೆಂಬಲದೊಂದಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದವರು ತಿಳಿಸಿದರು. ಪ್ರಕರಣದ ಹಿಂದೆ ಯಾರೇ ಇದ್ದರು ಅದನ್ನು ಕೂಡಲೇ ಪತ್ತೆಹಚ್ಚಿ ಬಹಿರಂಗಪಡಿಸಬೇಕು, ಹಾಗೂ ಸಾರ್ವಜನಿಕರ ಹಿತಾಸಕ್ತಿ […]

ಕರ್ಣಾಟಕ ಬ್ಯಾಂಕಿನ ನೂತನ 511ನೇ ಶಾಖೆ ಕುಲಶೇಖರದಲ್ಲಿ ಶುಭಾರಂಭ

Tuesday, November 6th, 2012
Karnataka Bank

ಮಂಗಳೂರು :ಖಾಸಗಿ ರಂಗದ ಬ್ಯಾಂಕ್ ಗಳಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ ತನ್ನ ನೂತನ 511ನೇ ಶಾಖೆಯನ್ನು ಕುಲಶೇಖರದಲ್ಲಿ ಆರಂಭಿಸಿತು, ಪ್ಲಾಮಾ ಡೆವಲಪರ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಎ.ರಜಾಕ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಮಾತನಾಡಿ, ಬ್ಯಾಂಕ್ ನಲ್ಲಿ ಲಭ್ಯವಿರುವ 25 ಲಕ್ಷದೊಳಗಿನ ಗೃಹ ಸಾಲದ ಬಡ್ಡಿ ದರವನ್ನು ಶೀಘ್ರವೇ ಶೇ.10.75ಕ್ಕೆ ಇಳಿಸಲಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಶಾಖೆಯ ಸಂಖ್ಯೆಯನ್ನು 550ಕ್ಕೂ, ಎಟಿಎಂಗಳ ಸಂಖ್ಯೆಯನ್ನೂ 450ಕ್ಕೂ […]

ಮಲ್ಪೆ ಬೀಚ್ ಫ್ರೆಂಡ್ಸ್ ಆಶ್ರಯದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ದೀಪಾವಳಿ ಹಬ್ಬ

Monday, November 5th, 2012
Deepavali

ಮಂಗಳೂರು :ಮಲ್ಪೆ ಕಡಲ ಕಿನಾರೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಲ್ಪೆ ಬೀಚ್ ಫ್ರೆಂಡ್ಸ್ ಆಯೋಜಿಸುತ್ತಿರುವ ದೀಪಾವಳಿ ಹಬ್ಬ ಪ್ರತಿವರ್ಷ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದ್ದು, ಈ ವರ್ಷ ಇದೇ ನವೆಂಬರ್ 14ರಂದು ಸಂಜೆ ಗಂಟೆ 5.30ರಿಂದ ಆರಂಭವಾಗಲಿದೆ. ಭೂಮಿಯನ್ನು ಆದರ್ಶಪ್ರಾಯನಾಗಿ ಆಳ್ವಿಕೆ ನಡೆಸಿದ ಬಲಿ ಚಕ್ರವರ್ತಿಯ ನೆನಪಿನ ಹಬ್ಬವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಕರಾವಳಿಯಲ್ಲಿ ನರಕ ಚತುರ್ದಶಿ – ಬಲಿಪಾಡ್ಯಮಿಯ ಸಂಭ್ರಮವನ್ನು ವಿಶಿಷ್ಟ ವಿಧಿ-ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು […]

ಎಸ್‌ಸಿ-ಎಸ್‌ಟಿ ಮಾಸಿಕ ಸಭೆ ಮಡೆಸ್ನಾನ ನಿಷೇಧಕ್ಕೆ ಆಗ್ರಹ

Monday, November 5th, 2012
SC STmeeting

ಮಂಗಳೂರು :ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಎಸ್‌ಸಿ/ಎಸ್‌ಟಿ ಮಾಸಿಕ ಸಭೆಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನ ನಿಷೇಧಕ್ಕೆ ಸಂಬಂಧಿಸಿ ಸರಕಾರದಿಂದ ಯಾವುದೇ ಕ್ರಮವಾಗಿಲ್ಲ ಮುಂದಿನ ತಿಂಗಳು ಮಡೆ ಸ್ನಾನ ನಡೆಯಲಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಯ ಪದಾಧಿಕಾರಿ ಶೇಖರ್ ಬೆಳ್ತಂಗಡಿ ಸಭೆಯಲ್ಲಿ ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಒಂದು ವಾರದೊಳಗೆ ಸ್ಥಳೀಯ ಪೊಲೀಸರಿಂದ ಮಡೆಸ್ನಾನಕ್ಕೆ ಸಂಬಂಧಿಸಿ ಕ್ಷೇತ್ರದ […]

ಬ್ಯಾರಿ ವೆಲ್ಫೇರ್ ಫಾರಂನಿಂದ ನಗರದ ಮಿಲಾಗ್ರಿಸ್ ಚರ್ಚಿನ ಸಭಾಂಗಣದಲ್ಲಿ 16 ಜೋಡಿಗಳ ಸಾಮಾಹಿಕ ವಿವಾಹ

Monday, November 5th, 2012
Baery Welfare Forum

ಮಂಗಳೂರು :ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಭಾನುವಾರ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿದ್ದ 16 ಜೋಡಿ ನಿಕಾಹ್ ಕಾರ್ಯಕ್ರಮವು ನಡೆಯಿತು. ನಿಖಾ ಕಾರ್ಯಕ್ರಮವನ್ನು ಮಂಗಳೂರು ಖಾಜಿ ತಾಕಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಖಾಜಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಿದರು. ಉಡುಪಿ ಖಾಝಿ ಪಿ.ಎಂ.ಇಬ್ರಾಹಿಂ ಮಾತನಾಡಿ ಇಸ್ಲಾಮಿನಲ್ಲಿ ವಿವಾಹ ಸರಳ, ವಿಚ್ಛೇದನ ಕಷ್ಟ. ಆದರೆ, ಜನರು ಲೌಕಿಕ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ, ಇಂದು ಅದು ಉಲ್ಟಾ ಆಗಿ, ಜೀವನ ದುಸ್ತರವಾಗುತ್ತಿದೆ. ಸಾಮೂಹಿಕ ವಿವಾಹ ಮೂಲಕ ಬಡವರ […]

ಮುಡಿಪು: ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಆಭರಣಗಳ ಕಳವು

Monday, November 5th, 2012
Rajadani Jewellers

ಕೊಣಾಜೆ :ಮುಡಿಪು ಜಂಕ್ಷನ್‌ನಲ್ಲಿರುವ ನವಾಝ್ ಎಂಬವರಿಗೆ ಸೇರಿದ ‘ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿರುವ ಕಳ್ಳರು ಸುಮಾರು ಎರಡು ಕೆ.ಜಿ. ಬೆಳ್ಳಿಯ ಆಭರಣಗಳನ್ನು ಕಳವುಗೈದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಪ್ ನ ಕಬ್ಬಿಣದ ಕಿಟಕಿಯ ಸರಳುಗಳನ್ನು ಕಳ್ಳರು ಎಕ್ಸೆಲ್ಬ್ಲೇಡ್ ಮೂಲಕ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಚಿನ್ನಾಭರಣವನ್ನೇ ಗುರಿಯಾಗಿಟ್ಟುಕೊಂಡು ಕಳ್ಳತನಕ್ಕೆ ಯತ್ನಿಸಿದ್ದ ಇವರಿಗೆ ಅಲ್ಲಿ ಯಾವುದೇ ಚಿನ್ನದ ಅಭರಣಗಳು ಸಿಗದೇ ಇದ್ದಾಗ ಅಲ್ಲಿದ್ದ ಸುಮಾರು ಎರಡು ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಕಳವಾದ ಬೆಳ್ಳಿಯ ಆಭರಣಗಳ […]

ಸಾಮಾನ್ಯ ಕಾರ್ಯಕರ್ತರ ಸಂಘಟನೆಯಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ :ಎನ್. ಯೋಗೀಶ್ ಭಟ್

Saturday, November 3rd, 2012
BJP

ಮಂಗಳೂರು: ಇಂದು ನಗರದ ಸಂಘನಿಕೆತನದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಾಮಾನ್ಯ ಸಭೆಯನ್ನುದ್ದೇಶಿಸಿ ರಾಜ್ಯ ವಿದಾನ ಸಭೆಯ ಉಪ ಸಭಾಪತಿ ಎನ್. ಯೋಗೀಶ್ ಭಟ್ ರವರು ಮಾತನಾಡಿದರು. ಬಿ.ಜೆ.ಪಿ ತನ್ನ ಸಾಮಾನ್ಯ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವುದು ಎಂದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ವಿವಿದ ಹಗರಣಗಳಲ್ಲಿ ಮುಳುಗಿದ್ದು ನಮ್ಮ ದೇಶವನ್ನು ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನರು ಖಂಡಿತ ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಾರೆ, ರಾಜ್ಯ ಸರಕಾರವು ಕಳೆದ 50 […]

ಪುತ್ತೂರು :ಕೃಷಿ ಯಂತ್ರಮೇಳ 2012 ರ ಉದ್ಘಾಟನಾ ಸಮಾರಂಭ

Saturday, November 3rd, 2012
Krushi Yantra Mela

ಪುತ್ತೂರು: ಪ್ರತಿಷ್ಠಿತ ಸಹಕಾರ ಸಂಸ್ಥೆ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರದಿಂದ ರವಿವಾರ ತನಕ ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೃಷಿ ಯಂತ್ರಮೇಳ -2012 ಇದರ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಸಾರ್ವಜನಿಕ ರಂಗದಲ್ಲಿ ವಿಶೇಷವಾದ ಸಾಧನೆ ಮಾಡಿದ ಕ್ಷೇತ್ರವಾಗಿದ್ದು ಕೃಷಿ ರಂಗಕ್ಕೆ ಅಗತ್ಯವಾದ ಆಧುನಿಕತೆಯನ್ನು ಪರಿಚಯಿಸುವಲ್ಲಿ ಐಟಿ ಕ್ಷೇತ್ರದ […]

ಮಂಗಳೂರಿನ ನೆಹರೂ ಮೈದಾನದಲ್ಲಿ ಯಾಕಾಗಿ ಪಾಪ್ಯುಲರ್ ಫ್ರಂಟ್’ ರಾಷ್ಟ್ರೀಯ ಅಭಿಯಾನದ ಬೃಹತ್ ಸಾರ್ವಜನಿಕ ಸಮಾವೇಶ

Saturday, November 3rd, 2012
Why Popular Front

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ‘ಯಾಕಾಗಿ ಪಾಪ್ಯುಲರ್ ಫ್ರಂಟ್’ ರಾಷ್ಟ್ರೀಯ ಅಭಿಯಾನದ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್ ರವರು ಜಗತ್ತಿನಲ್ಲೆ ಹೆಮ್ಮೆ ಪಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆ. ಎಲ್ಲ ವರ್ಗದ ನಾಗರಿಕರಿಗೆ ಸಮಾನ ನ್ಯಾಯ ಖಾತರಿಪಡಿಸುವ ಸಂವಿಧಾನ ನಮ್ಮಲ್ಲಿದೆ. ಇದರಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ಆಶಯದಲ್ಲಿ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತೇವೆ. ಆದರೆ 65 ವರ್ಷಗಳಿಂದ ಶೇ.90ರಷ್ಟು ನಾಗರಿಕರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ […]

ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನೀರಿನ ಸಂರಕ್ಷಣೆಯ ಕುರಿತು ಬೀದಿ ನಾಟಕ

Friday, November 2nd, 2012
ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನೀರಿನ ಸಂರಕ್ಷಣೆಯ ಕುರಿತು ಬೀದಿ ನಾಟಕ

ಮಂಗಳೂರು: ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ಇಂದು ನೀರಿನ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವು ನಡೆಯಿತು. ಹಿರಿಯ ಮುಂದಾಳು ಸೆಲೀನಾ ರಾಣಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಸಂಚಾಲಕಾರಾದ ವಿದ್ಯಾದಿನಕರ್ ರವರು ನೇತ್ರಾವತಿ ನದಿಯು ಮಂಗಳೂರು ನಗರಕ್ಕೆ ಪ್ರಮುಖ ನೀರಿನ ಮೂಲವಾಗಿದ್ದು ತುಂಬೆ ಅಣೆಕಟ್ಟಿನ ಮೂಲಕ ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ನೀರಿನ ಪೂರೈಕೆಯಾಗುತಿದೆ. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡುಬರುವುದರಿಂದ ತುಂಬೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಅಗತ್ಯವಿದೆ ಎಂದವರು ಹೇಳಿದರು. […]