ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಸರಕಾರದ ಆದೇಶಕ್ಕೆ ವಿರೋದ ವ್ಯಕ್ತಪಡಿಸಿದ ಎಸ್ಎಫ್ಐ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲು

Friday, November 2nd, 2012
Kannada Rajyithsava

ಮಂಗಳೂರು : ಮಂಗಳೂರು ಗುರುವಾರ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚವ ಆದೇಶಕ್ಕೆ ವಿರೋದ ವ್ಯಕ್ತಪಡಿಸಿ, ಗಲಭೆಯನ್ನೆಬ್ಬಿಸಿದ ಎಸ್ಎಫ್ಐ ಕಾರ್ಯಕರ್ತರನ್ನು ಬಂದಿಸಿ, ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ ಎಂದು ರಾಜ್ಯದ 12,740 ಕನ್ನಡ ಶಾಲೆಗಳನ್ನು ಮುಚ್ಚಲು ಶಿಫಾರಸ್ಸು ಮಾಡಿದ್ದು, ಅದರಂತೆ ರಾಜ್ಯ ಸರಕಾರವು ಕೂಡ ಆ ಶಾಲೆಗಳನ್ನು ಮುಚ್ಚುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ನೆಹರೂ […]

ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದಿಂದ ನವೆಂಬರ್ 3 ರಂದು ಜನ ಜಾಗೃತಿ ಸಭೆ

Friday, November 2nd, 2012
SIO Rally in Mangalore

ಮಂಗಳೂರು: ನಿನ್ನೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ .ಐ.ಓ. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ತೌಸೀಫ್ ಅಹಮ್ಮದ್ ರವರು ನವೆಂಬರ್ 3 ರಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದಿಂದ ಮಂಗಳೂರಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿ ಸಮುದಾಯಗಳೊಂದಿಗೆ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿ ಜಾಥಾ ಹಾಗೂ ಜನ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಗುಂಪುಗಾರಿಕೆ, ದ್ವೇಷ ಮನೋಭಾವ, ಕೋಮುವಾದ, […]

ಕನ್ನಡದ ಅಭಿಮಾನ ಇಲ್ಲದವರಿಂದಲೇ ಕನ್ನಡಕ್ಕೆ ಅಪಾಯವಿದೆ : ಸಿ ಟಿ ರವಿ

Thursday, November 1st, 2012
Kannada Rajyothsava Mangalore

ಮಂಗಳೂರು : ದ.ಕ.ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ (ನ.1) ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 7.45 ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಸುರಿಯುವ ತುಂತುರು ಮಳೆಯನ್ನೂ ಲೆಕ್ಕಿಸದೆ ಕನ್ನಡಾಭಿಮಾನದ ಸಂದೇಶವನ್ನು ಸಾರುವ ಅನೇಕ ವಾಹನಗಳ ಜಾಥ ಕನ್ನಡ ರಾಜ್ಯೋತ್ಸವಕ್ಕೆ ಮೆರುಗನ್ನು ನೀಡಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಪಥಸಂಚಲನದ ಕಮಾಂಡರ್ ನಿಂದ ಗೌರವ ಸ್ವೀಕರಿಸಿ, ಪ್ಯಾರೆಡ್ ವೀಕ್ಷಿಸಿದರು. ಬಳಿಕ ಜಿಲ್ಲೆಯ ಜನತೆಗೆ ಸಂದೇಶ ನೀಡಿದರು. ಕನ್ನಡಿಗರಿಗೆ ರಾಜ್ಯೋತ್ಸವ ನಿತ್ಯನೂತನವಾಗಿರಬೇಕು ಅದು ನವೆಂಬರ್ […]

ಮಂಗಳೂರು ರಾಜೋತ್ಸವ ಆಚರಣೆಗೆ ಎಸ್.ಎಫ್.ಐ. ಕಾರ್ಯಕರ್ತರಿಂದ ಅಡ್ಡಿ; ಬಂಧನ

Thursday, November 1st, 2012
Rajyotsava Lathi Charge

ಮಂಗಳೂರು :  ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ರಾಜೋತ್ಸವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರಾಜ್ಯೋತ್ಸವದ ಸಂದೇಶ ನೀಡಲು ಪ್ರಾರಂಬಿಸುತ್ತಿದ್ದಂತೆ ಮೈದಾನದ ಹೊರಗಿನಿಂದ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಒಳ ಪ್ರವೇಶಿಸಿದ ಎಸ್.ಎಫ್.ಐ. ಕಾರ್ಯಕರ್ತರು, ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಿಸುವ ಅರ್ಹತೆಯಿಲ್ಲ ಎಂದು ಘೋಷಣೆ ಕೂಗುತ್ತ ರಾಜೋತ್ಸವ ಆಚರಣೆಗೆ ಅಡ್ಡಿಪಡಿಸಲು ಮುಂದಾದರು. ಕಾರ್ಯಕರ್ತರು ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ […]

ಪ್ಲಾಸ್ಟಿಕ್‌ ನಿಷೇಧ ಜಿಲ್ಲಾಡಳಿತದ ನಿರ್ಧಾರಕ್ಕೆ ಬದ್ಧ : ಡಾ.ಹರೀಶ್ ಕುಮಾರ್

Thursday, November 1st, 2012
MCC Commissioner

ಮಂಗಳೂರು: ಮಂಗಳೂರು ನಗರದಾದ್ಯಂತ ಪ್ಲಾಸ್ಟಿಕ್‌ ನಿಷೇಧಕ್ಕೆ ನ. 1ರಿಂದ ನಿರ್ಧರಿಸಲಾಗಿದೆ. ಈ ಸಂಬಂಧ ಮುಂದಿನ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಹಾಲಿನ ತೊಟ್ಟೆ ಸೇರಿದಂತೆ ಪ್ಲಾಸ್ಟಿಕ್‌ ಎಸೆಯುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮನೆ ಮನೆಯಿಂದ ಇಂತಹ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಈ ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಬದ್ಧ ಬದ್ಧವಾಗಿದೆ ಎಂದು ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ| ಹರೀಶ್‌ […]

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ

Wednesday, October 31st, 2012
Indira Gandhi Death Aniversary

ಮಂಗಳೂರು: ದಿವಂಗತ ಇಂದಿರಾಗಾಂದಿಯವರ ಪುಣ್ಯತಿಥಿಯ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಪುರಭವನದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಸೇವಾದಳ ಉಸ್ತುವಾರಿ ವಿನಯ್ ಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂಧಿರಾಗಾಂಧಿಯವರು ಮಹಾತ್ಮಗಾಂಧಿಯವರ ಬಡತನ ನಿರ್ಮೂಲನೆಯ ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮಿಸಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು ಅವರ ಪುಣ್ಯತಿಥಿಯ ಈ ದಿನವನ್ನು ಜನ ಸೇವೆಗೆ ಮುಡಿಪಾಗಿಡಬೇಕು ಎಂದು ಕರೆನೀಡಿದರು. ಎಐಸಿಸಿ […]

ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಪಿಐಎಂ ಪ್ರತಿಭಟನೆ

Wednesday, October 31st, 2012
CPIM

ಮಂಗಳೂರು: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರ ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ಸಭೆ ನಡೆಯುತ್ತಿದ್ದು ಅದರ ಅಂಗವಾಗಿ ಜಿಲ್ಲಾಧಿಕಾರಿ ಕಛೇರಿ ಬಳಿ ನಿನ್ನೆ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಮಾತನಾಡಿ ವಿಕೃತ ಮನೋಭಾವದ ಜನರಿಂದ ಈ ಸಮಾಜದಲ್ಲಿ ಪೊಲೀಸರು ಮತ್ತು ಸರಕಾರ ಮಹಿಳೆಯರ ಮಾನ ರಕ್ಷಣೆ ಮಾಡುವಲ್ಲಿ ವಿಫಲವಾಗುತ್ತಿದೆ. ಹರ್ಯಾಣದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ […]

ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ : ಭಂಡಾರಿ

Tuesday, October 30th, 2012
Monappa Bhandary

ಮಂಗಳೂರು : ಕಾಂಗ್ರೆಸ್ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರ ಇತ್ತೀಚಿನ ಹೇಳಿಕೆಗೆ ಉತ್ತರವಾಗಿ ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ವಕ್ತಾರ ಹಾಗೂ ವಿದಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರು, ವಿಜಯಕುಮಾರ್ ಶೆಟ್ಟಿ ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು ಮೂಲೆಗುಂಪಾಗಿದ್ದಾರೆ. ಹಾಗಾಗಿ ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ ಆದರೆ ಮುಂದಿನ ಚುನಾವಣೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ […]

ಉದ್ಯಮಿ ಎ.ಸದಾನಂದ ಶೆಟ್ಟಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ

Tuesday, October 30th, 2012
JDS Townhall

ಮಂಗಳೂರು: ಸೋಮವಾರ ಮಂಗಳೂರು ಪುರಭವನದಲ್ಲಿ ನಡೆದ ಜೆಡಿಎಸ್ ನ ಸಮಾನ ಮನಸ್ಕರ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದರು. ಜೆಡಿಎಸ್ ಕರಾವಳಿ ಜಿಲ್ಲೆಗಳಲ್ಲಿ ತನ್ನ ಖಾತೆ ತೆರೆಯಲು ಶ್ರಮಿಸುತಿದ್ದು ಇತ್ತೀಚೆಗಷ್ಟೇ ಬಿಜೆಪಿ ಪಕ್ಷದಲ್ಲಿದ್ದ ನಾಗರಾಜ ಶೆಟ್ಟಿಯವರು ಪಕ್ಷವನ್ನು ತೊರೆದು ಜೆ.ಡಿ.ಎಸ್ ಸೇರಿದ್ದರು. ಇವರ ನೇತೃತ್ವದಲ್ಲಿ ಕರಾವಳಿಯ ಇನ್ನಷ್ಟು ನಾಯಕರು ಈ ಸಮಾರಂಭದಲ್ಲಿ ಜೆ.ಡಿ.ಎಸ್ […]

ಮದುವೆ ದಿನವೇ ಕೈಕೊಟ್ಟ ವರಮಹಾಶಯ ಬಾಳು ಕೊಟ್ಟ ರಿಕ್ಷಾ ಚಾಲಕ

Monday, October 29th, 2012
Marraige

ಮಂಗಳೂರು: ಬಡ ಯುವತಿಗೆ ಬಾಳು ನೀಡುವುದಾಗಿ ನಂಬಿಸಿ ಮದುವೆ ದಿನವೇ ವರ ಕೈಕೊಟ್ಟು ನಾಪತ್ತೆಯಾದ ವಿಲಕ್ಷಣ ಘಟನೆ ನಿನ್ನೆ ನಗರದಲ್ಲಿ ನಡೆದಿದೆ. ಸುರತ್ಕಲ್ ಸಮೀಪದ ಸರಿಪಳ್ಳ ಕಣ್ಣಗುಡ್ಡೆಯ ಬಡ ಯುವತಿಯೋರ್ವಳಿಗೆ ಬೋಂದೆಲ್ ಕೃಷ್ಣನಗರದ ಪ್ರಸಾದ್ ಎಂಬಾತನ ಜೊತೆ ವಿವಾಹ ನಿಶ್ಚಯಿಸಲಾಗಿತ್ತು. ಅದರಂತೆ ನಿನ್ನೆ ಅಕ್ಟೋಬರ್ 28ರಂದು ಮಲ್ಲಿಕಟ್ಟೆಯಲ್ಲಿರುವ ಸುವರ್ಣ ಸಭಾಂಗಣದಲ್ಲಿ ವಿವಾಹ ನಡೆಸುವುದಾಗಿ ತೀರ್ಮಾನಿಸಲಾಗಿದ್ದು ವಿವಾಹಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ವಧು ಮದುವೆಯ ಸೀರೆಯುಟ್ಟು ಮಂಟಪಕ್ಕೆ ಬಂದರೂ ವರನ ಪತ್ತೆಯಿರಲಿಲ್ಲ.ಎಷ್ಟುಹೊತ್ತು ಕಾದರೂ ವರನ ಸುಳಿವಿಲ್ಲದ ಕಾರಣ, […]