ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕೆ.ಜಿ.ಗೆ 1 ರೂ.ಗೆ ಅಕ್ಕಿ : ಜನಾರ್ದನ ಪೂಜಾರಿ

Friday, March 15th, 2013
Bantwal Congress victory procession

ಬಂಟ್ವಾಳ : ಪುರಸಭಾ-ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ ೧೪  ಗುರುವಾರ ಸಂಜೆ ಬಿ.ಸಿ. ರೋಡಿನ ಪೂಂಜಾ ಮೈದಾನದಲ್ಲಿ ನೂತನ ಕಾಂಗ್ರೆಸ್ ಸದಸ್ಯರ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆಯನ್ನು ಆಯೋಗಿಸಲಾಗಿತ್ತು. ಸಮಾರಂಭಕ್ಕೂ ಮೊದಲು ನೂತನ ಸದಸ್ಯರನ್ನು ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಸಭೆಯನ್ನು  ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಿದರು. ಸ್ಥಳೀಯ […]

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯ ಮೂಲಕ ಯುವಜನರನ್ನು ಸಜ್ಜನರನ್ನಾಗಿ ಪರಿವರ್ತಿಸಲು ಸಾಧ್ಯ :ಎ.ಎಂ.ಪ್ರಸಾದ್

Friday, March 15th, 2013
National level con St Agnes

ಮಂಗಳೂರು : ನಗರದ ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಹಾಗೂ ಮಂಗಳೂರಿನ ಸಮಗ್ರ ಯೋಗ ಸತ್ಸಂಗದ ಜಂಟಿ ಆಯೋಜಕತ್ವದಲ್ಲಿ ಗುರುವಾರ ಆಗ್ನೆಸ್ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಕ್ರೈಮ್ ಮತ್ತು ಟೆಕ್ನಿಕಲ್ ಸರ್ವಿಸ್‌ನ ಅಡಿಷನಲ್ ಡಿಜಿಪಿ ಅಶಿತ್ ಮೋಹನ್ ಪ್ರಸಾದ್ ನೆರವೇರಿಸಿದರು. ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದರಲ್ಲಿ ಹೆಚ್ಚಾಗಿ ೧೮ ವರ್ಷ ಒಳಗಿನ ಯುವಕರು ಇದ್ದಾರೆ. ಇದಕ್ಕೆ ಪ್ರಮುಖವಾಗಿ […]

ನಿರಂತರ ಕಲಿಕೆಯಿಂದ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ : ಡಾ| ಎಚ್‌.ಎಸ್‌. ಬಲ್ಲಾಳ್‌

Thursday, March 14th, 2013
ನಿರಂತರ ಕಲಿಕೆಯಿಂದ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ : ಡಾ| ಎಚ್‌.ಎಸ್‌. ಬಲ್ಲಾಳ್‌

ಮಂಗಳೂರು : ಭಾರತದಲ್ಲಿ ಶೇಕಡಾ 70 ಜನರು ಹಳ್ಳಿ ಪ್ರದೇಶದಲ್ಲಿ ವಾಸವಿದ್ದು, ಅವರಲ್ಲಿ ಶೇಕಡಾ 20 ಮಂದಿಗೆ ಮಾತ್ರ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರಕುತ್ತಿದೆ,  ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವವರ ಪ್ರಮಾಣ ಬಹಳಳಷ್ಟು ಕಡಿಮೆ ಇದ್ದು, ಪ್ರಸ್ತುತ ಕೇವಲ ಶೇಕಡಾ 14 ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಈ ಪ್ರಮಾಣ 2030ರಲ್ಲಿ ಶೇಕಡಾ 30 ಕ್ಕೇರಬೇಕು ಈ ಪ್ರಮಾಣವನ್ನು ಹೆಚ್ಚಿಸುವ ಗುರುಯನ್ನು ಸರ್ಕಾರ ಹಾಕಿಕೊಂಡಿದ್ದು ಇದಕ್ಕೆ ಖಾಸಗಿಯವರ ಸಹಕಾರವು […]

ಕಾಪು : ಹಿಂದೂ ಯುವಕರ ಮೇಲೆ ಹಲ್ಲೆ , ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆ ಆಗ್ರಹ

Thursday, March 14th, 2013
Kaup

ಉಡುಪಿ : ಮಣಿಪಾಲದಿಂದ ಎಕ್ಷ್ ಪ್ರೆಸ್ ಬಸ್ ವೊಂದರಲ್ಲಿ  ಮಂಗಳೂರಿಗೆ ವಾಪಾಸಾಗುತ್ತಿದ್ದ  ಮಂಗಳೂರು – ಕಾಟಿಪಳ್ಳದ ಯುವಕರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ. ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಮಂಗಳೂರು – ಕಾಟಿಪಳ್ಳದ ಯುವಕರಾದ ಶ್ರೀನಾಥ್‌ (23), ರಾಜೇಶ್‌ (24) ಹಲ್ಲೆಗೊಳಗಾದವರಾಗಿದ್ದಾರೆ. ಯುವಕರು ಅನ್ಯಕೋಮಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿ ಬಸ್‌ ನಲ್ಲಿದ್ದ  ಅನ್ಯ ಮತೀಯ ಯುವಕನೋರ್ವ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದು, ಈ ಮಾಹಿತಿಯಾನ್ನಾಧರಿಸಿ ಅನ್ಯ ಮತೀಯ ಸಂಘಟನೆಗೆ […]

ಕಾಸೀಮ್ ಉಳ್ಳಾಲ್ ರವರ ‘ಬೆಸುಗೆ’ ಕನ್ನಡ ಕಾದಂಬರಿ ಬಿಡುಗಡೆ

Thursday, March 14th, 2013
Kaseem ullal's Besuge Novel released

ಮಂಗಳೂರು : ಪ್ರತಿಭಾ ಪ್ರಿಂಟರ್ಸ್ ಬೆಂಗಳೂರು ಇವರ ಮುದ್ರಣದಲ್ಲಿ ಸಾಹಿತಿ ಯು.ಎ ಕಾಸೀಮ್  ಉಳ್ಳಾಲ್ ರಚಿಸಿರುವ ಕನ್ನಡ ಕಾದಂಬರಿ ‘ಬೆಸುಗೆ’ ಬಿಡುಗಡೆ ಸಮಾರಂಭ ಇಂದು ಸಂಜೆ ನಗರದ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ನಡೆಯಿತು. ಕಾದಂಬರಿ ಬಿಡುಗಡೆಯನ್ನು ಕನ್ನಡ ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಎಂ.ಬಿ.ಅಬ್ದುಲ್ ರಹಿಮಾನ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸಾಹಿತ್ಯ ಎನ್ನುವುದು ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಸಾಹಿತ್ಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ […]

ನಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ

Wednesday, March 13th, 2013
congress convention

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಾರ್ಚ್ 18 ರಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಹಾಗೂ ಇತರ ರಾಜ್ಯ ಮತ್ತು ಜಿಲ್ಲಾ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ  ತಿಳಿಸಿದರು. ಅವರು […]

ಭಟ್ಕಳ ಸಮೀಪದ ಮುಗ್ಳಿಹೊಂಡದಲ್ಲಿ ಭೀಕರ ಅಪಘಾತ ಬೈಕ್ ಸವಾರರಿಬ್ಬರ ಸಾವು

Wednesday, March 13th, 2013
Bhatkal bike accsident

ಕುಂದಾಪುರ : ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಶಿರೂರಿನ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ಭಟ್ಕಳ ಸಮೀಪದ ಮುಗ್ಳಿಹೊಂಡ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬೈಂದೂರು ಸಮೀಪದ ಶಿರೂರಿನ ಮಾರ್ಕೆಟ್ ರಸ್ತೆ ನಿವಾಸಿಗಳಾದ ಹುರೈಸ್(೧೮) ಹಾಗೂ ತನೀರ್ ಅಧಮ್(೧೮) ಮೃತ ಬೈಕ್ ಸವಾರರಾಗಿದ್ದಾರೆ. ಹುರೈಸ್ ಹಾಗೂ ತನೀರ್ ಅಧಮ್ ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮುಗ್ಳಿಹೊಂಡ ಎಂಬಲ್ಲಿ ಎದುರಿನಿಂದ […]

ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ, ಮಾರ್ಚ್ 28ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿ

Wednesday, March 13th, 2013
Second PU examination at DK

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯು ಇಂದಿನಿಂದ 28ರ ವರೆಗೆ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ  ವರ್ಷ 49 ಪರೀಕ್ಷಾ ಕೇಂದ್ರಗಳಲ್ಲಿ  170 ಕಾಲೇಜುಗಳ 32,267 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯು ಸುಸೂತ್ರವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವ ಹಿನ್ನಲೆಯಲ್ಲಿ  ಜಿಲ್ಲೆಯಲ್ಲಿ  ಮಾರ್ಚ್ 28ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ವಿವಿಧ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷಾ ಕೇಂದ್ರದ ಸುತ್ತಲಿನ 200 […]

ಬೆಳ್ತಂಗಡಿ : ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಾಲ್ವರ ಬಂಧನ

Wednesday, March 13th, 2013
Belthangady

ಬೆಳ್ತಂಗಡಿ :14 ವರ್ಷದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಮೇಲೆ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಫಯಾಜ್‌ (19), ನಾಸಿರ್‌ (18), ನೌಶಾದ್‌ (19), ಭಂಡಾರಿಕೋಡಿ ಮನೆ ಶಾಕೀರ್‌ (19)  ಬಂಧಿತ ಆರೋಪಿಗಳು. ಮಾರ್ಚ್ 9ರಂದು ಮನೆಗೆ ಒಂಟಿಯಾಗಿ ಬರುತ್ತಿದ್ದ ಬಂಡಾರಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಪಾದೆಗುತ್ತು ಎಂಬಲ್ಲಿ ಈ ನಾಲ್ವರು ಯುವಕರು ನೇತ್ರಾವತಿ ನದಿ ತಟದಲ್ಲಿ ಅಡ್ಡಗಟ್ಟಿ ತಮ್ಮ ಜತೆ ಬರುವಂತೆ ಒತ್ತಾಯಿಸಿದ್ದು […]

ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳ ಬಂಧನ

Wednesday, March 13th, 2013
Ganja seize at Attavar

ಮಂಗಳೂರು : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳು  ಮೈಸೂರಿನಿಂದ ಉಡುಪಿಗೆ ಮಾರಾಟಕ್ಕಾಗಿ ಅಮಲು ಪದಾರ್ಥ ಗಾಂಜವನ್ನು ಸಾಗಿಸುತ್ತಿದ್ದುದಾಗಿ ತಿಳಿದುಬಂದಿದ್ದು,  ಮಂಗಳೂರಿನ ಅತ್ತಾವರ ದ ಉಪ್ಪಿನ ದಕ್ಕೆಯಲ್ಲಿ ಆರೋಪಿಗಳು ಇರುವ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಮೈಸೂರಿನಸೈಯ್ಯದ್‌ ಅನೀಸ್‌ ಅಹ್ಮದ್‌(53), ಮನ್ಸೂರ್‌ ಅಹ್ಮದ್‌(28) ಹಾಗೂ ಚಿಕ್ಕಮಗಳೂರಿನ ಅನ್ವರ್‌ ಪಾಷಾ (45) ಆರೋಪಿಗಳಾಗಿದ್ದು, ಮೂರು ಟ್ರಾವೆಲ್‌ ಬ್ಯಾಗುಗಳಲ್ಲಿ ಸುಮಾರು 8,65,000 ಬೆಲೆಯ […]