ಮಂಗಳೂರಿನಲ್ಲಿ ಹೆಲ್ಮೆಟ್ ಗಳಿಗೆ ದಂಡಂ ದಶಗುಣಂ !

Tuesday, February 12th, 2013
sub standard helmets in Mangalore

ಮಂಗಳೂರು : ಕಳಪೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಮಂಗಳೂರು ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ತಲೆಯನ್ನು ಪೂರ್ತಿಯಾಗಿ ಮುಚ್ಚುವಂತಹ ಹಾಗೂ ಗಟ್ಟಿಮುಟ್ಟಾದ ಹೆಲ್ಮೆಟ್ ಧರಿಸಬೇಕು ಎಂಬ ನಿರ್ದೇಶನ ವಿದ್ದರೂ, ದ್ವಿಚಕ್ರವಾಹನ ಸವಾರರು ಧರಿಸಿದ್ದ ಸುರಕ್ಷಿತವಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ಇನ್ನೂ ಮುಂದೆ ಹಿಡಿದು ದಂಡ ಹಾಕುವ ಕೆಲಸಕ್ಕೆ ಕೈ ಹಾಕಲಿದ್ದಾರೆ. ಮಂಗಳೂರು ನಗರ ಸಂಚಾರಿ ಪೊಲೀಸರು ಈ ಸಂಬಂಧ ‘ಸ್ಪೆಷಲ್ ಡ್ರೈವ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದೆ. ಬಹುತೇಕ ದ್ವಿಚಕ್ರ […]

ಕೆಜೆಪಿಯಲ್ಲಿ ಬಿರುಕು ಬಿಟ್ಟ ಶೋಭಾ

Tuesday, February 12th, 2013
Shobha Karandlaje

ಮಂಗಳೂರು : ಕೆಜೆಪಿಯನ್ನು ನಾವು ಎಷ್ಟೇ ಕಷ್ಟ ಪಟ್ಟು ಸಂಘಟಿಸಿದರೂ ಅದರ ಪೂರ್ಣ ಲಾಭ ಪಡೆಯಲಿರುವವರು ಶೋಭಾ ಕರಂದ್ಲಾಜೆ ನಾವು ಶ್ರಮಿಸಿ ಆಕೆಗೆ ಲಾಭ ಮಾಡಿಕೊಡುವುದಕ್ಕಿಂತ ಬಿಜೆಪಿಯಲ್ಲೇ ಇರುವುದು ಲೇಸು ಎಂಬ ನಿರ್ಧಾರಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪರ ಕಟ್ಟಾ ಬೆಂಬಲಿಗರು ಬಂದಿದ್ದಾರೆ. ಯಡಿಯೂರಪ್ಪ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ಬಿಜೆಪಿಯಲ್ಲಿ ಅವರ ನಿಷ್ಠೆ, ಅಭಿಮಾನದ 40 ಶಾಸಕರು ಈಗಲೂ ಇದ್ದಾರೆ. ಯಡಿಯೂರಪ್ಪರ ಪರ ಪ್ರೀತಿ, ವಿಶ್ವಾಸವನ್ನು ಈಗಲೂ ಪ್ರಕಟಿಸುತ್ತಾರೆ. ಆದರೆ ತಮ್ಮ ಭವಿಷ್ಯವನ್ನು ನೆನೆದು ಕೆಜೆಪಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ […]

ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆ, ಆರೋಪಿಯ ಬಂಧನ

Monday, February 11th, 2013
Girish Putran murder case

ಮಂಗಳೂರು : ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆಗೆ ಸಂಬಂಧಪಟ್ಟಂತೆ ಕೋಡಿಕಲ್ ನ ನತಾಶ(28) ಎಂಬ ಯುವತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದು, ಫೆಬ್ರವರಿ 23ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯುವತಿಗೆ ಕಿರುಕುಳ ಹಾಗೂ ಅತಿಯಾದ ಚಿನ್ನಾಭರಣ ಧರಿಸುತ್ತಿದ್ದುದು ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಯುವತಿ ನತಾಶ ಗೆ  ಮದುವೆ ನಿಶ್ಚಿತಾರ್ಥ ನಡೆದಿದ್ದರೂ, ಗಿರೀಶ್ ಪುತ್ರನ್ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಯುವತಿ ಗಿರೀಶ್ […]

ಎರಡು ದಿನಗಳ ಕಾಲ ನಡೆದ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ ಸಮಾರಂಭದ ಸಮಾರೋಪ

Monday, February 11th, 2013
Veerarani Abbakka Dashamanotsav

ಮಂಗಳೂರು : ಉಳ್ಳಾಲ ಭಾರತ್ ಶಾಲೆಯ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ-2013 ಭಾನುವಾರ ಸಂಪನ್ನಗೊಂಡಿತು. ಸಮಾರೋಪದಲ್ಲಿ ಸಾಹಿತಿ, ಪತ್ರಕರ್ತೆ ಜಯಂತಿ ಎಸ್. ಬಂಗೇರ ಹಾಗೂ ಜಾನಪದ ಕಲಾವಿದೆ ಮತ್ತು ನಾಟಿವೆದ್ಯೆ ಕರ್ಗಿ ಶೆಡ್ತಿ ಅವರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ಪ್ರಧಾನ ಮಾಡಲಾಯಿತು. ಮಂಗಳೂರು ಶಾಸಕ, ಉತ್ಸವ ಸಮಿತಿ ಗೌರವಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ […]

ಜಗತ್ತು ಸುಂದರವಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು :ಮಾತಾ ಅಮೃತಾನಂದಮಯಿ

Monday, February 11th, 2013
Matha Amritanandamayi

ಮಂಗಳೂರು : ಇತ್ತೀಚೆಗಿನ ವರ್ಷಗಳಲ್ಲಿ ಬುದ್ಧಿವಂತಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಜಗತ್ತು ಸುಂದರವಾಗಬೇಕಾದರೆ, ತಾಳ್ಮೆ, ಸಹನೆಗಳು ಹೆಚ್ಚಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು. ಬುದ್ಧಿವಂತಿಕೆಯು ಎರಡಲಗಿನ ಕತ್ತಿಯಂತೆ. ಅದು ಕೆಲವೊಮ್ಮೆ ಸಮಾಜವನ್ನು ವಿಘಟನೆಗೊಳಿಸಲೂಬಹುದು. ಆದರೆ ಹೃದಯವಂತಿಕೆ ಎನ್ನುವುದು ಸೂಜಿಯಂತೆ. ಅದು ಪ್ರೀತಿಯಿಂದ ಮನುಷ್ಯರನ್ನು ಜೋಡಿಸಬಲ್ಲುದು ಎಂದು ಮಾತಾ ಅಮೃತಾನಂದಮಯಿ ಹೇಳಿದರು. ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಶನಿವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಗ್ರ ಜಗತ್ತು ಏಕಭಾವದ ವಿನ್ಯಾಸದಿಂದ ರೂಪುಗೊಂಡಿದೆ. ಬಣ್ಣಗಳಲ್ಲಿ ವಿವಿಧ ಬಗೆಗಳಿದ್ದು […]

ಸಿಟಿ ಸೆಂಟರ್ ಮಾಲ್ ನಲ್ಲಿ ಇಂದು ಬಿಡುಗಡೆಗೊಂಡ ಏರ್ ಟೆಲ್ ವೈಫೈ

Saturday, February 9th, 2013
Airtel Wi Fi Hotspot Zone

ಮಂಗಳೂರು ನಗರದಲ್ಲಿ ಇಂದು ಏರ್ ಟೆಲ್ ವೈಫೈ ವ್ಯವಸ್ಥೆಯನ್ನು ಭಾರ್ತಿ ಏರ್ ಟೆಲ್ ಮುಖ್ಯ ಕಾರ್ಯಕಾರಿ ಅಧಿಕಾರಿ ಸೌರಭ್ ಘೋಯೆಲ್ ರವರು ಸಿಟಿ ಸೆಂಟರ್ ಮಾಲ್ ನಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ  ನಮ್ಮ ತಂತ್ರಜ್ಞಾನವು ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಬೇಕೆಂಬುದು ನಮ್ಮ ಉದ್ಧೇಶವಾಗಿದ್ದು, ತಮ್ಮ ಕಂಪನಿಯ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಇತರ ಸ್ಮಾರ್ಟ್ ಸಾಧನಗಳೊಂದಿಗೆ ಸಮಯ ಕಳೆಯುವಂತಹ ಜನಸಂದಣಿ ಇರುವ ತಾಣಗಳು  ಮತ್ತು  ಸಾರ್ವಜನಿಕ ಪ್ರದೇಶಗಳಲ್ಲಿ ಹೈ-ಸ್ಪೀಡ್ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುತ್ತದೆ ಎಂದರು. ಅಲ್ಲದೆ ಇದು ಕೇವಲ […]

ಎಸ್.ಡಿ.ಎಮ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯ ಐಯುರಿಸ್ 2013 ಕ್ಕೆ ಚಾಲನೆ

Saturday, February 9th, 2013
National Law Fest

ಮಂಗಳೂರು : ನಗರದ ಎಸ್.ಡಿ.ಎಮ್ ಕಾಲೇಜಿನಲ್ಲಿ ಫೆಬ್ರವರಿ 8 ರಂದು ನಡೆದ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಕಾನೂನು ಸಂಶೋಧನಾ ಕೇಂದ್ರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯ ಐಯುರಿಸ್ 2013 ನ್ನು ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾದ ಅಶೋಕ್ ಜಿ. ನಿಜಗನ್ನವರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾನೂನು ವಿದ್ಯಾರ್ಥಿಗಳು ನೈತಿಕ ಜವಾಬ್ದಾರಿಯನ್ನು ಹೊಂದಿದ್ದು, ಕೇವಲ ಹಣ ಮಾಡುವ ಉದ್ಧೇಶದಿಂದ ತಮ್ಮ ವೃತ್ತಿ ಬದುಕನ್ನು ಆರಿಸಿಕೊಳ್ಳಬಾರದು, ನ್ಯಾಯವಾದಿಗಳು ಸಂವಿಧಾನದ ಮೂಲ ತತ್ವವನ್ನು ಎತ್ತಿ ಹಿಡಿಯುವಂತಹ […]

ಪಡೀಲ್ : ಬೈಕ್ ಸವಾರರ ಮೇಲೆ ಟೆಂಪೋ ಹರಿದು ಇಬ್ಬರ ಸಾವು

Saturday, February 9th, 2013
mishap at Padil

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರಲ್ಲಿ  ಪಡೀಲು ಸಮೀಪ ಶುಕ್ರವಾರ ಮಧ್ಯಾಹ್ನ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರೆ, ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಕಾರ್ಕಳ ಮೂಲದ ಆನಂದ ದೇವಾಡಿಗ ಹಾಗೂ ಸಂತೋಷ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಸವಾರರು ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಪಡೀಲು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸವಾರರು ಹೆದ್ದಾರಿಗೆ ಉರುಳಿ ಬಿದ್ದಿದ್ದರು. ಈ ಸಂದರ್ಭ […]

ವಿಧ್ಯಾರ್ಥಿಗಳು ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ನಗರದಲ್ಲಿ ಪ್ರಥಮ ಹಂತವಾಗಿ ಏರ್ಪಡಿಸಲಾದ ಮಾದಕ ದ್ರವ್ಯ ವಿರೋಧಿ ಅಭಿಯಾನ

Friday, February 8th, 2013
Anti drug campaign

ಮಂಗಳೂರು :ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಗಳು ಮಾದಕ ವ್ಯಸನಿ ಗಳಾಗುತ್ತಿರುವುದನ್ನು ತಪ್ಪಿಸುವ ಕುರಿತಂತೆ  ನಗರದ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ನಗರ ಪೊಲೀಸ್ ಕಮೀಷನರ್ ಮನೀಷ್ ಎ ಕರ್ಬೀಕರ್ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೆತ್ತವರು ಮಕ್ಕಳ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾರೆ ಆದರೆ ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹಾಗು ಇತರೆಡೆಗಳಲ್ಲಿ ಹೇಗಿರುತ್ತಾರೆ ಎಂಬುದನ್ನು […]

ಮಂಗಳೂರಿಗೆ ಆಗಮಿಸಿದ ವೈಭವೋಪೇತ ಪ್ರವಾಸಿ ಹಡಗು ಎಂ.ವಿ. ರೋಟರ್‌ಡ್ಯಾಮ್

Friday, February 8th, 2013
MV Rotterdam

ಮಂಗಳೂರು : ವಿಶ್ವಾದ್ಯಂತದ ಪ್ರವಾಸಿಗರನ್ನು ಹೊತ್ತ, ವಿಶ್ವದ ಅತ್ಯಂತ ವೈಭವೋಪೇತ ಪ್ರವಾಸಿ ಹಡಗು ಎಂ.ವಿ. ರೋಟರ್‌ಡ್ಯಾಮ್ ಗುರುವಾರ ಮಂಗಳೂರಿಗೆ ಆಗಮಿಸಿತು. 1,288  ಪ್ರವಾಸಿಗರು ಹಾಗೂ 598 ಸಿಬ್ಬಂದಿಗಳನ್ನೂಳಗೊಂಡ ಈ ಹಡಗು ಇಟಲಿಯಿಂದ ಹೊರಟು  ಗೋವಾ ಮೂಲಕ ಮಂಗಳೂರಿಗೆ ಆಗಮಿಸಿತು. ನೆದರ್‌ಲ್ಯಾಂಡ್‌, ಅಮೆರಿಕ,ಇಂಗ್ಲಂಡ್,ಕೆನಡಾ ಹಾಗು ಮೂವರು ಭಾರತೀಯರು ಮತ್ತು ಇತರೆ ಅನ್ಯ ದೇಶದವರು ಹಡಗಿನಲ್ಲಿ ಆಗಮಿಸಿದ್ದರು.  ಪ್ರವಾಸಿಗರು ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳಾದ ಮಂಗಳಾದೇವಿ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಗೇರು ಸಂಸ್ಕರಣ ಘಟಕಗಳು, ಕಾರ್ಕಳದ ಏಕಶಿಲಾ ಬಾಹುಬಲಿ ವಿಗ್ರಹ, ಮೂಡುಬಿದ್ರೆಯ […]