ಕೋಮುಸೌಹಾರ್ದ ಹದಗೆಡಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾರಣ : ಕುಮಾರಸ್ವಾಮಿ

Saturday, February 2nd, 2013
jds rally

ಮಂಗಳೂರು : ಜಾತ್ಯಾತೀತ ಜನತಾದಳದ ಮಂಗಳೂರು ಮಹಿಳಾ ಘಟಕದ ಸಮಾವೇಶವು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಫಳ್ನೀರ್ ನ ಜನತಾದಳದ ಕಛೇರಿಯಲ್ಲಿ ಉದ್ಘಾಟನೆಗೊಂಡಿತು. ಅದಕ್ಕೂ ಮುನ್ನ ಆಕರ್ಷಕ ಬೈಕ್ ರ್ಯಾಲಿಯಲ್ಲಿ ಜ್ಯಾತ್ಯಾತೀತ ಜನತಾದಳ ನಾಯಕರು ಪಾಲ್ಗೊಂಡರು. ಬೈಕ್ ರ್ಯಾಲಿಯು ಬಂಟ್ಸ್ ಹಾಸ್ಟೆಲ್ ತಲುಪಿದಾಗ ಕುಮಾರಸ್ವಾಮಿಯವರು ತೆರೆದ ಜೀಪಿನಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡರು. ಬಳಿಕ  ಫಳ್ನೀರ್ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಮಾತನಾಡುತ್ತಾ, ಎರಡೂ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳು ಜನಹಿತ ಕಾರ್ಯಕ್ರಮದಲ್ಲಿ ಸೋತಿದೆಯಲ್ಲದೆ, ಉಳ್ಳವರು ಮತ್ತು ಇಲ್ಲದವರ […]

ಫೂರೆನ್ಸಿಕ್‌ ಮೆಡಿಕಾನ್‌- 2013 ವಾರ್ಷಿಕ ಸಮ್ಮೇಳನ

Saturday, February 2nd, 2013
Forensic Medicon 2013

ಮಂಗಳೂರು : ಇಂಡಿಯನ್‌ ಅಕಾಡೆಮಿ ಆಫ್‌ ಫೂರೆನ್ಸಿಕ್‌ ಮೆಡಿಸಿನ್‌ನ 34ನೇ ವಾರ್ಷಿಕ ಸಮ್ಮೇಳನ ಫೂರೆನ್ಸಿಕ್‌ ಮೆಡಿಕಾನ್‌- 2013 ಶುಕ್ರವಾರ ಡಾ. ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಿತು. ೩ ದಿನಗಳ ನಡೆಯುವ ಈ ಸಮ್ಮೇಳನದ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕದ ಎಡಿಜಿಪಿ ಡಾ. ರಾಜ್‌ವೀರ್‌ ಪಿ. ಶರ್ಮ ನೆರವೇರಿಸಿದರು. ಅತ್ಯಾಚಾರ ಹಾಗೂ ಇತರ ದೈಹಿಕ ಶೋಷಣೆಯಂತಹ ಪ್ರಕರಣಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಪ್ರಕರಣಕ್ಕೆ ಅವಶ್ಯಕವಾದ ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಅತೀ ಶೀಘ್ರದಲ್ಲಿ ಸಲ್ಲಿಸಿದಲ್ಲಿ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುವುದು. ಅಪರಾಧ ಪತ್ತೆ […]

3ನೇ ತ್ತೈಮಾಸಿಕದಲ್ಲಿ 303.17 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಕೆ : ಅಜಯ್‌ ಕುಮಾರ್‌

Saturday, February 2nd, 2013
3ನೇ ತ್ತೈಮಾಸಿಕದಲ್ಲಿ 303.17 ಕೋಟಿ  ರೂಪಾಯಿ ನಿವ್ವಳ ಲಾಭ ಗಳಿಕೆ : ಅಜಯ್‌ ಕುಮಾರ್‌

ಮಂಗಳೂರು : ಡಿಸೆಂಬರ್ 31ಕ್ಕೆ ಕಾರ್ಪೊರೇಶನ್‌ ಬ್ಯಾಂಕ್‌ ನ 3ನೇ ತ್ತೈಮಾಸಿಕ ಅಂತ್ಯಗೊಂಡಿದ್ದು ತ್ತೈಮಾಸಿಕದಲ್ಲಿ 303.17 ಕೋಟಿ  ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಒಟ್ಟು ವ್ಯವಹಾರ 2,44,827 ಕೋಟಿ  ರೂಪಾಯಿಗೆ ತಲುಪಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಜಯ್‌ ಕುಮಾರ್‌ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 3ನೇ ತ್ತೈಮಾಸಿಕ ಹಾಗೂ 9 ತಿಂಗಳಲ್ಲಿ ಬ್ಯಾಂಕ್‌ನ ನಿರ್ವಹಣೆ ಬಗ್ಗೆ ವಿವರಿಸಿದರು. ಅವರು ಬ್ಯಾಂಕ್‌ನ ಠೇವಣಿ 1,40,384 ಕೋ. ರೂ.ಗೆ ಏರಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಶೇಕಡಾ 10.88 […]

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು ಆಸ್ಪತ್ರೆಯ ವೈಧ್ಯರು, ಸಿಬ್ಬಂಧಿಗಳ ವಿರುದ್ಧ ಪ್ರತಿಭಟನೆ

Saturday, February 2nd, 2013
Ladygoschen hospital

ಮಂಗಳೂರು : ಶುಕ್ರವಾರ ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಮಕ್ಕಳ ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕುಟುಂಬಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ವೈಧ್ಯರು ಹಾಗೂ ಸಿಬ್ಬಂಧಿಗಳ ವಿರುದ್ಧ ಪ್ರತಿಭಟಿಸಿದರು. ಶುಕ್ರವಾರ ಎರಡು ಮಕ್ಕಳು ಸಾವನ್ನಪ್ಪಿದ್ದು, ಶಿಶುವೊಂದು ಬೆಳಗ್ಗೆ  ತಾಯಿ ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದ್ದರೆ, ಇನ್ನೊಂದು ಜನನವಾದ ಬಳಿಕ ಮೃತಪಟ್ಟಿದೆ. ಮೃತಪಟ್ಟ ಮಕ್ಕಳ ಪೋಷಕರು ನಂದಿಗುಡ್ಡೆ ಸ್ಮಶಾನದಲ್ಲಿ ಮಕ್ಕಳ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂದು ಹೋದಾಗ  ಅಲ್ಲಿನ ಸಿಬ್ಬಂದಿಗಳು ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಶುಗಳ ಸಾವಿಗೆ ಸರಿಯಾದ […]

ಉಡುಪಿ : ತೆಂಕ ಎರ್ಮಾಳ್ ನಲ್ಲಿ ಭೀಕರ ರಸ್ತೆ ಅಪಘಾತ ತಾಯಿ ಮಗನ ಸಾವು

Friday, February 1st, 2013
car truck accsident atTenka Ermal

ಉಡುಪಿ  : ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಂ ನ ನಿವಾಸಿಗಳಾದ ಜಾಯ್ ಸೆಬಾಸ್ಟಿಯನ್ ಹಾಗೂ ಅವರ ತಾಯಿ ಇಳಿ ಕುಟ್ಟಿ ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಕೇರಳದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಡುಪಿ ತಾಲುಕಿನ ತೆಂಕ ಎರ್ಮಾಳ್ ನಲ್ಲಿ ಈ ಅಪಘಾತ ಸಂಭವಿಸಿದೆ. ಜಾಯ್ ಸೆಬಾಸ್ಟಿಯನ್ ಅವರು ಕಾರ್ಕಳದ ಹೆಬ್ರಿಯಲ್ಲಿ ವಾಸವಾಗಿದ್ದು ತಮ್ಮ ಊರಿಗೆ ತನ್ನ ಹೆತ್ತವರೊಂದಿಗೆ ತೆರಳಿ ವಾಪಾಸು ಬರುವಾಗ ಉಡುಪಿಯಿಂದ ಬರುತ್ತಿದ್ದ ಲಾರಿ ಅವರು ಪ್ರಯಾಣಿಸುತ್ತಿದ್ದ […]

ಮಂಗಳೂರಿನಲ್ಲಿ ಮತ್ತೆ ನೈತಿಕ ಪೋಲೀಸ್ ಗಿರಿ, ಮಹಿಳೆಯೊಂದಿಗಿದ್ದ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ

Friday, February 1st, 2013
Bhajrangdal activists

ಮಂಗಳೂರು : ನಗರದ ಪಂಪ್ ವೆಲ್ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವತಿ ಹಾಗು ಅದೇ ಅಂಗಡಿಯ ಮಾಲಕನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಿಡಿದು ಥಳಿಸಿ  ಪೊಲೀಸರಿಗೆ ಒಪ್ಪಿಸಿದ  ಘಟನೆ ಗುರುವಾರ ಸಂಜೆ ನಡೆದಿದೆ. ಯುವತಿಗೆ 6 ತಿಂಗಳ ಹಿಂದೆ ಮದುವೆಯಾಗಿದ್ದರು ತನ್ನ ಅಂಗಡಿ ಮಾಲಕನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ನಿನ್ನೆ ಸಂಜೆ ಉದ್ಯೋಗ ಮುಗಿಸಿ ಕಾರಿನಲ್ಲಿ ಜತಯಾಗಿ ಪ್ರಯಾಣಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು  ಇವರಿಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದರು […]

ಎ.ಜೆ. ಆಸ್ಪತ್ರೆ ಆಸ್ಪತ್ರೆ:ರಾಜ್ಯದಲ್ಲೇ ಪ್ರಥಮ ಬೇರ್ಪಟ್ಟ ಕೈಗಳ ಯಶಸ್ವಿ ಮರುಜೋಡನೆ

Friday, February 1st, 2013
AJ Hospital

ಮಂಗಳೂರು : ನಗರದ ಎ.ಜೆ. ಆಸ್ಪತ್ರೆ ಆಸ್ಪತ್ರೆಯ ವೈದ್ಯರ ತಂಡ ವ್ಯಕ್ತಿಯೂಬ್ಬನ ಭುಜದಿಂದ ಸಂಪೂರ್ಣವಾಗಿ ಬೇರ್ಪಟ್ಟ ಎಡಗೈ ಮತ್ತು ಮೊಣಕೈ ಕೆಳಭಾಗದಿಂದ ತುಂಡಾದ ಬಲಗೈಯನ್ನು ಮೈಕ್ರೋವ್ಯಾಸ್ಕಾಲರ್ ಶಸ್ತ್ರ ಚಿಕಿತ್ಸೆಯ ಮೂಲಕ ಕೈಗಳನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ,ಈ ವಿಷಯ ತಿಳಿಸಿ, ರಾಜ್ಯದಲ್ಲೇ ಇದು ಪ್ರಥಮ ವೈದ್ಯಕೀಯ ಸಾಧನೆ ಎಂದು ಅವರು ಹೇಳಿದರು. ಮೂಲ್ಕಿ ಹಳೆಯಂಗಡಿ ನಿವಾಸಿ ಶರಶ್ಚಂದ್ರ ಶೆಣೈ ಎಂಬವರು ಮುಲ್ಕಿ ರೈಲು ನಿಲ್ದಾಣದ ಬಳಿ ನಡೆದುಕೊಂಡು […]

ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತ :ಜಿ. ಪರಮೇಶ್ವರ್‌

Thursday, January 31st, 2013
G Parameshwar

ಮಂಗಳೂರು : ಕರ್ನಾಟಕದಲ್ಲಿ ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಕೊಂಡಿದ್ದು ತಾವು ಆಡಳಿತ ನಡೆಸಲು ಅಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಹೇಳಿದರು. ಅವರು ಕೆಪಿಸಿಸಿ ವತಿಯಿಂದ ಯೋಜನೆಗೊಂಡ “ಕಾಂಗ್ರೆಸ್ ನಡಿಗೆ  ಸಾಮರಸ್ಯದ ಕಡೆಗೆ ” ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಅವರು ಮೂಲ್ಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಿದ್ದು, ಜನತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು […]

ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದ ಎಲ್ಲಾ ೭ ಆರೋಪಿಗಳು ಪೋಲೀಸ್ ಕಸ್ಟಡಿಗೆ

Thursday, January 31st, 2013
Adiga murder accused police custody

ಮಂಗಳೂರು : ವಂಡಾರು ಕೊಕ್ಕನಬೈಲು ನಿವಾಸಿ, ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೭ ಮಂದಿಯಲ್ಲಿ ಪ್ರಕರಣದ ರುವಾರಿ ರಮೇಶ್ ಬಾಯರಿ ಹಾಗೂ ಸುಬ್ರಮಣ್ಯ ಉಡುಪ, ರವಿಚಂದ್ರ ಮತ್ತು ಮೋಹನನಿಗೆ ಹೆಚ್ಚಿನ ತನಿಖೆ ನಿಮಿತ್ತ 2 ದಿನ ಪೋಲೀಸ್ ಕಸ್ಟಡಿ ಹಾಗೂ ಉಳಿದ ನಾಲ್ವರು ಆರೋಪಿಗಳಾದ ಕೆ.ಎಸ್. ರಾಘವೇಂದ್ರ, ಉಮೇಶ, ನವೀನ ಇವರುಗಳಿಗೆ ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಒಂದು ದಿನದ  ವಿಧಿಸಿದೆ. ತನಿಖೆಗೆ ಸಂಬಂಧಿಸಿದಂತೆ ನಾಲ್ಕುದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ […]

ಮಹಿಳಾ ಸಂಘಟನೆ, ಬಜರಂಗದಳ ನೇತೃತ್ವದಲ್ಲಿ ಅತ್ತಾವರದ ಐಸ್‍ಕ್ರೀಂ ಪಾರ್ಲರ್ ಮೇಲೆ ದಾಳಿ

Thursday, January 31st, 2013
ice cream parlour Attavar

ಮಂಗಳೂರು : ಅತ್ತಾವರ ವೃತ್ತದ ಬಳಿಯ ಮುರು ಅಂತಸ್ತಿನ ರಾಕ್ಸ್ ಹೆಸರಿನ ಐಸ್‍ಕ್ರೀಂ ಪಾರ್ಲರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರು ದಾಳಿ ಮಾಡಿ ನಾಲ್ವರು ಯುವಕರು ಮತ್ತು ಮುವರು ಯುವತಿಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ರಾಕ್ಸ್‌ ಕೆಫೆ 3 ಮಾಳಿಗೆಗಳ ವ್ಯಾಪಾರ ಮಳಿಗೆಯಾಗಿದ್ದು, 3 ನೇ ಮಾಳಿಗೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ […]