ಫರಂಗಿಪೇಟೆ ಕೇಂದ್ರ ಮೈದಾನದಲ್ಲಿ ಫೆಬ್ರವರಿ 2 ರಂದು ಜಾತ್ಯಾತೀತ ಜನತಾದಳದ ಬೃಹತ್ ಸಮಾವೇಶ

Wednesday, January 30th, 2013
JDS massive convention

ಮಂಗಳೂರು :ಫರಂಗಿಪೇಟೆಯಲ್ಲಿಯ ಕೇಂದ್ರ ಮೈದಾನದಲ್ಲಿರುವ ಅಬ್ದುಲ್ ನಜೀರ್ ಸಾಬ್ ವೇದಿಕೆಯಲ್ಲಿ ಫೆಬ್ರವರಿ 2 ಶನಿವಾರದಂದು ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ತಿಳಿಸಿದರು. ಸಮಾವೇಶವನ್ನು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮಾವೇಶ ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ವಹಿಸಲಿದ್ದಾರೆ ಎಂದರು. ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 2 ರಂದು ಬಂಟ್ಸ್ ಹಾಸ್ಟೆಲ್ […]

ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಆಯೋಜಿಸಲಾದ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ

Wednesday, January 30th, 2013
Congress Padayaatra

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಮಂಗಳವಾರ ಆಯೋಜಿಸಿದ ಪಾದಯಾತ್ರೆಗೆ ವೀರ ವನಿತೆ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬೆಳಗ್ಗೆ 9 ಕ್ಕೆ ಆರಂಭಗೊಳ್ಳಬೇಕಾಗಿದ್ದ ಪಾದಯಾತ್ರೆ ಮಧ್ಯಾಹ್ನ 12 ಗಂಟೆ ವೇಳೆಗೆ ಆರಂಭ ಗೊಂಡಿತು. ಉಳ್ಳಾಲದಿಂದ ನಾಸಿಕ್ ಬ್ಯಾಂಡ್, ಕೀಲು ಕುದುರೆ, ಬ್ಯಾಂಡ್ ಸೆಟ್, ಹುಲಿ ವೇಷ […]

ಕಾಸರಗೋಡು : ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಕಾರಿನೊಳಗೆ ಪತ್ತೆಯಾದ ಮೃತದೇಹಗಳು

Wednesday, January 30th, 2013
Koodlu Mysterious death

ಕಾಸರಗೋಡು : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಿಪ್ಪಾಡಿ-ಅನಂತಪುರ ರಸ್ತೆಯ ಕುದ್ರೆಪ್ಪಾಡಿಯ ಗುಡ್ಡಪ್ರದೇಶದಲ್ಲಿ ಆಲ್ಟೋ ಕಾರಿನೊಳಗೆ ಒಂದೇ ಕುಟುಂಬದ ನಾಲ್ವರ ಶವ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರು ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲ್‌ ಬಳಿಯ ನಿವಾಸಿ ಹಾಗೂ ಭೆಲ್‌ ನೌಕರ ಸೋನಿ ಕುಟ್ಟಿ (46), ಪತ್ನಿ ಕಾಸರಗೋಡು ಜನರಲ್‌ ಆಸ್ಪತ್ರೆಯ ದಾದಿ ತ್ರೇಸ್ಯಮ್ಮ (ಜೋಲಿ – 39) ಹಾಗೂ ಅವರ ಮಕ್ಕಳಾದ ಜೆರಿನ್‌ (12) ಮತ್ತು ಜ್ಯುವೆಲ್‌ (10). ಕುದ್ರೆ ಪ್ಪಾಡಿಯ ನಿರ್ಜನ ಗುಡ್ಡಪ್ರದೇಶದಲ್ಲಿ ನಿಂತಿದ್ದ ಆಲ್ಟೋ ಕಾರಿನ […]

ಸಮವಸ್ತ್ರಕ್ಕಾಗಿ ಪರದಾಡುವ ಪೊಲೀಸರು!

Tuesday, January 29th, 2013
Indian police

ಮಂಗಳೂರು : ಪೊಲೀಸರು ಲಾಠಿಚಾರ್ಜ್ ಮಾಡಿದರು… ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದರು… ಪೊಲೀಸರು ಲಂಚ ಕೇಳಿದರು… ಪೊಲೀಸರು ದರ್ಪದಿಂದ ವರ್ತಿಸಿದರು… ಪೊಲೀಸರು ಹಲ್ಲೆ ಮಾಡಿದರು… ಪೊಲೀಸರು ದೌರ್ಜನ್ಯ ಎಸಗಿದರು… ಹೀಗೆ ಸಾಗುತ್ತದೆ, ಪೊಲೀಸರ ಮೇಲಿನ ಆರೋಪ. ಕೆಲವು ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಹೀಗೆಲ್ಲ ವರ್ತಿಸಿದರೆ ಇನ್ನು ಕೆಲವರಿಗೆ ಜಾತಿ, ಧರ್ಮದ ಅಮಲು ತಗಲಿರುವುದು ಸುಳ್ಳಲ್ಲ. ಹಾಗಂತ ಎಲ್ಲ ಪೊಲೀಸರನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಕೂಡ ಸಮಂಜಸವಲ್ಲ. ಸರಕಾರದ ನೂರಾರು ಇಲಾಖೆಗಳ ಪೈಕಿ ಜನರು ಹೆದರುವುದು ಪೊಲೀಸ್ […]

ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ವಲಯಗಳು ಸುರಕ್ಷಿತವೇ?

Tuesday, January 29th, 2013
coastal industrial zones

ಮಂಗಳೂರು : ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಪ್ರೈಮಸಿ ಇಂಡಸ್ಟ್ರೀಸ್ ನಲ್ಲಿ ಜನವರಿ 10ರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತ ಪ್ರಕರಣವನ್ನು ಗಮನಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ, ಎಯ್ಯಾಡಿ, ಮುಡಿಪು ಇತ್ಯಾದಿ ಕೈಗಾರಿಕಾ ವಲಯಗಳು ಅದೆಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರಿಕ ಸಮಾಜಕ್ಕೆ ಕಾಡುತ್ತಿದೆ. ಯಾಕೆಂದರೆ, ಬೈಕಂಪಾಡಿಯ `ಪ್ರೈಮಸಿ’ಯಲ್ಲಿ ಮೊನ್ನೆ ಕಾಣಿಸಿಕೊಂಡದ್ದು ಅಂತಹ ಬೆಂಕಿ ದುರಂತ. ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಪುತ್ತೂರು, ಉಡುಪಿ ಸಹಿತ 14 ಅಗ್ನಿಶಾಮಕ ದಳದ ವಾಹನಗಳು, ಎಂಸಿಎಫ್, ಎಂಆರ್ ಪಿಎಲ್, ಓಎನ್ ಜಿಸಿಯ […]

ಕೊಡವ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ವೀರಸೇನಾನಿ ಜನರಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆ

Tuesday, January 29th, 2013
General Cariappa

ಮಂಗಳೂರು : ಉಡುಪಿ ಮತ್ತು ದ. ಕನ್ನಡ ಕೊಡವ ಸ್ಟೂಡೆಂಟ್‌ ಅಸೋಸಿಯೇಶನ್‌ ಆಶ್ರಯದಲ್ಲಿ ವೀರಸೇನಾನಿ ಜನರಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ನಗರದ ಕದ್ರಿಯಲ್ಲಿರುವ ಯುದ್ಧ ಸ್ಮಾರಕ ಭವನದಲ್ಲಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಕೊಡಗಿನ ವೀರ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರು ದೇಶ ಕಂಡ ಹೆಮ್ಮೆಯ ಪುತ್ರ. ದೇಶಕ್ಕಾಗಿ ಅವರು ಮಾಡಿದ ಸೇವೆ, ಸಾಧನೆಗಳು ಇಂದಿನ ಯುವಕರಿಗೆ ಅನುಕರಣೀಯ. […]

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕನ ಸಾವು

Tuesday, January 29th, 2013
Labourer dies in landslip

ಮಂಗಳೂರು : ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಸಭಾಭವನದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕಾರ್ಮಿಕನೊಬ್ಬನ ಮೇಲೆ ಮಣ್ಣು ಕುಸಿದು ಮೃತಪಟ್ಟ ಘಟನೆ ಜನವರಿ 28 ಸೋಮವಾರ ಸಂಭವಿಸಿದೆ. ಉಳಿ ಗ್ರಾಮ ಮಿತ್ತರಿಪಾದೆ ನಿವಾಸಿ ರಾಮಣ್ಣ ಪೂಜಾರಿಯವರ ಪುತ್ರ ಶರತ್‌ ಪೂಜಾರಿ(23) ಮೃತ ವ್ಯಕ್ತಿ. ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನ ಮುಂಭಾಗ ನಿರ್ಮಾಣ ಹಂತದಲ್ಲಿರುವ ಸಭಾಭವನದ ಪಿಲ್ಲರ್‌ ಗುಂಡಿಯಲ್ಲಿ ಸ್ಟೀಲ್‌ ರಾಡನ್ನು ಬಿಗಿದು ನೇರ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಲ್ಲರ್‌ ನಿರ್ಮಾಣ ಗುಂಡಿಗಳನ್ನು ಜೆಸಿಬಿ ಬಳಸಿ […]

ಜನವರಿ 29 ರಿಂದ ಫೆಬ್ರವರಿ 1 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಕಾಂಗ್ರೆಸ್‌ ಪಾದಯಾತ್ರೆ

Tuesday, January 29th, 2013
Congress Padayaatra

ಮಂಗಳೂರು : ಜನವರಿ 29 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ವೃತ್ತದಿಂದ ಪ್ರಾರಂಭಗೊಂಡು ಉಡುಪಿ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ‘ಕಾಂಗ್ರೆಸ್‌ ನಡಿಗೆ- ಸಾಮರಸ್ಯದ ಕಡೆಗೆ’ ಪಾದಯಾತ್ರೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 9ಕ್ಕೆ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ಆರಂಭವಾಗುವ ಪಾದಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಉದ್ಘಾಟಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಎಂ. ವೀರಪ್ಪ ಮೊಯ್ಲಿ, ಆಸ್ಕರ್‌ ಫೆರ್ನಾಂಡಿಸ್‌, ಸಿದ್ಧರಾಮಯ್ಯ, […]

ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆದ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

Monday, January 28th, 2013
Sandesha Awards

ಮಂಗಳೂರು : ಸಂದೇಶ ಪ್ರತಿಷ್ಠಾನ ನೀಡುವ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭವು ಭಾನುವಾರ ಸಂಜೆ ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 9 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರಾವಳಿ ಅಂದರೆ ಸಾಮರಸ್ಯದ ಕಲಾವಳಿ. ಇಲ್ಲಿ ಮತ, ಧರ್ಮ, ಭಾಷೆ, ಸಂಸ್ಕೃತಿಯ ವೈವಿಧ್ಯ ನಲಿದಾಡುತ್ತಿರುತ್ತದೆ. ಬಹುತ್ವವನ್ನು ಗಟ್ಟಿಗೊಳಿಸುವ ಸಂದೇಶ ಸಾರುವ ಸಾಂಸ್ಕೃತಿಕ ಪ್ರಭಾವಳಿ, ತನ್ನ ವಿವೇಕ ತಂಡದ ಮೊದಲ ನಾಟಕದ ಪಯಣ ಆರಂಭವಾಗಿದ್ದೇ ಕರಾವಳಿಯ […]

ಹತ್ತೂರಿನ ಪುತ್ತೂರಿನಲ್ಲಿ ಡಿವಿಎಸ್ ವಿರುದ್ಧ ಕರಂದ್ಲಾಜೆ

Monday, January 28th, 2013
Sadananda Gowda, Shobha Karandlaje

ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ […]